ವಿಷಯಕ್ಕೆ ಹೋಗು

ಸದಸ್ಯ:PALLAVI NAGESH/sandbox-4

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇಸರ್

ಮೇಸರ್‍ನ ವಿಸ್ಕ್ರುತ ರೂಪ ಮೈಕ್ರೊವೆವ್ ಆಮ್‍ಪ್ಲಿಫಿಕೇಶನ್ ಬೈ ಸ್ಟಿಮ್ಯುಲೇಟೆಡ್ ಎಮಿಷನ್ ಆಫ್ ರೇಡಿಯೇಷನ್. ಮೊದಲನೆಯ ಮೇಸರನ್ನು ಅಮೆರಿಕದವರಾದ ಜೆ.ಗೊರ್ಡ್ ನ್ , ಹೆಚ್. ಜೈಗರ್ ಮತ್ತು ಸಿ.ಹೆಚ್.ಟಾನ್ಸ್ ರವರು ೧೯೫೫ರಲ್ಲಿ ಕಂಡುಹಿಡಿದರು. ಮೇಸರ್ ಎಂಬುದು ಸೂಕ್ಷ್ಮ ತರಂಗದ ಧ್ವನಿವರ್ಧಕಗಳಾಗಿದ್ದು ಕೇವಲ ಒಂದು ಪುನರಾವರ್ತನೆಯಿಂದ ಸೂಕ್ಷ್ಮ ತರಂಗಗಳನ್ನು ಉತ್ಪಾದಿಸುತ್ತದೆ. ಖಗೋಳ ಶಾಸ್ತ್ರ ಕ್ಷೇತ್ರದಲ್ಲಿ ದೂರದ ನಕ್ಷತ್ರಗಳು ಮತ್ತು ಗ್ರಹಗಳಿಂದ ಬರುವ ರೇಡಿಯೋ ಸಂಕೇತಗಳನ್ನು ಧ್ವನಿ ವರ್ಧನಗೊಳಿಸಲು ಉಪಯೋಗಿಸಲಾಗುತ್ತದೆ.


ಬೆಳವಣಿಗೆಯ ಇತಿಹಾಸ


೧೯೫೩ರಲ್ಲಿ ಟೌನ್ಸನು [] ಮೊದಲನೆಯ ಅನಿಲ ಮೇಸರನ್ನು ತಯಾರಿಸದನು. ನಂತರ ೧೯೬೪ರಲ್ಲಿ ಬಾಸೋವ್ ಮತ್ತು ಪ್ರೊಖೊರೋವ್ ವಿ ಜಂಟಿಯಾಗಿ ಮೇಸರನ್ನು ಕಂಡುಹಿಡಿದರು. ಅವರ ಅನ್ವೇಷಣೆಗೆ ನೊಬೆಲ್ ಪಾರಿತೋಷಕವನ್ನು ಕೊಡಲಾಯಿತು.

ಚಾಲ್ಸ್ ಟೌನ್ಸ್ ಮತ್ತು ಪ್ರಥಮ ಮೇಸರ್


ಘನಸ್ಥಿತಿ ಮೇಸರ್‍ಗಳು

ಘನಸ್ಥಿತಿ ಮೇಸರ್ ಎಂಬುವುದು ಎರಡು ಮಟ್ಟದ ಅರೆ ಅಯಸ್ಕಾಂತ ವಸ್ತು. ಘನಸ್ಥಿತಿ ವಸ್ತುವಿನಲ್ಲಿ ಒಂದು ಬಲವಾದ ಅಯಸ್ಕಾಂತದ ಧ್ರುವಗಳ ನಡುವೆ ಹರಳನ್ನು ಇಟ್ಟು ಧ್ರುವ ಹೀಲಿಯಂನ ಸ್ಥಾನದಲ್ಲಿ ಪೂರ್ಣ ಸೊನ್ನೆ ಉಷ್ಣತೆಗಿಂತ ಕೆಲವು ಡಿಗ್ರಿಗಳಿಗಿಂತ ಹೆಚ್ಚಾಗಿರುವ ಉಷ್ಣತೆಯಲ್ಲಿ ಅದನ್ನು ತಣಿಸಲಾಗುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಾನ್‍ಗಳು ಕೆಳಮಟ್ಟದ ಶಕ್ತಿಯ ಸ್ಥಿತಿಗೆ ಬರುವಂತಾಗುತ್ತದೆ. ನಂತರ ಅದನ್ನು ಹೆಚ್ಚು ಶಕ್ತಿಯ ಸೂಕ್ಷ್ಮ ತರಂಗ ಮಿಡಿತಕ್ಕೆ ಒಳಪಡಿಸಲಾಗುತ್ತದೆ. ಆಗ ಎಲೆಕ್ಟ್ರಾನ್‍ಗಳನ್ನು ಮೇಲ್ಮಟ್ಟಕ್ಕೆ ಏರಿಸುತ್ತದೆ.


ಅಮೋನಿಯಾ ಮೇಸರ್

ಮೊದಲನೆಯ ಮೇಸರ್-ಅಮೋನಿಯಾ ಮೇಸರ್. ಅಮೋನಿಯಾ ಪರಮಾಣುಗಳ ಕಿರಣವನ್ನು ಲೋಹದ ಕಡ್ಡಿಗಳ ಬೋನಿನ ಅಕ್ಷದ ಮೇಲೆ ಹಾಯಿಸಲಾಗುತ್ತದೆ. ಈ ಕಂಬಿಗಳು ಪರ್ಯಾಯವಾಗಿದ್ದು ಧನ ಮತ್ತು ಋಣ ಧ್ರುವ ವಿದ್ಯುತ್ ಪ್ರವಾಹವನ್ನು ಹೊಂದಿರುತ್ತದೆ. ಕಡ್ದಿಗಳಿಂದ ಒಂದೇ ಸಮವಿಲ್ಲದ ವಿದ್ಯುತ್ ಕ್ಷೇತ್ರವನ್ನು ಉತ್ತೇಜಕವಾಗಿಲ್ಲದ ಪರಮಣುಗಳಿಂದ ಉದ್ರೇಕವಾದವುಗಳನ್ನು ಬೇರ್ಪಡಿಸಲಾಗುತ್ತದೆ. ಉದ್ರೇಕಿತವಲ್ಲದ ಪರಮಾಣುಗಳು ಕಂಬಿಯ ಕಡೆಗೆ ಎಳೆಯಲ್ಪಟ್ಟಿದ್ದು ಉದ್ರೇಕಿತ ಪರಮಾಣುಗಳು ಕೊಳವೆಯ ಅಕ್ಷದ ಕಡೆಗೆ ಆಕರ್ಷಿತವಾಗುತ್ತದೆ. ಉದ್ರೇಕಿತವಾದ ಪರಮಾಣುಗಳು ಒಂದು ಸಣ್ಣ ರಂಧ್ರದ ಮೂಲಕ ಅನುನಾದಕದ ರಂಧ್ರದೊಳಕ್ಕೆ ಪ್ರವೇಶಿಸಲು ಅವಕಾಶ ಮಾಡಲಾಗುತ್ತದೆ ಅನುನಾದಕದ ರಂಧ್ರದಲ್ಲಿ ಅವುಗಳನ್ನು ಸೂಕ್ಷ್ಮತರಂಗ ಸಂಕೇತವನ್ನು ವೃದ್ದಿಸಲು ಉಪಯೋಗಿಸಲಾಗುತ್ತದೆ. ಅಮೋನಿಯಾ ಮೇಸರ್ ಎನ್ನುವುದು ಆವರ್ತನಗಳ ಕಿರಿದಾದ ಗುಂಪನ್ನು ಮಾತ್ರ ವೃದ್ದಿಗೊಳಿಸುತ್ತದೆ.

  1. Charles H. Townes – Nobel Lecture