ಸದಸ್ಯ:PALLAVI NAGESH/sandbox-1
ಸಸ್ಯ ಪರಿಚಯ
[ಬದಲಾಯಿಸಿ]ಇದು ಒಂದು ಜಾತಿಯ ಮರ.ಇದು ಅಪೊಸೈನೇಸಿ ಕುಟುಂಬಕ್ಕೆ ಸೇರಿದೆ[೧].ಇದು ಭಾರತದ ಎಲ್ಲ ಅರಣ್ಯಗಳಲ್ಲಿ ಬೆಳೆಯುತ್ತದೆ.ಇದು ಸಾಮಾನ್ಯವಾಗಿ ಮೂರು ಮೀಟರ್‍ಗಳಷ್ಟು ಎತ್ತರಕ್ಕೆ ಬೆಳೆಯಬಲ್ಲದು.ಕಾಂಡವು ತಿಳಿ ಬೂದು ಬಣ್ಣದ ತೊಗಟೆಯಿಂದ ಸೀಳಿರುತ್ತದೆ.ಅಭಿಮುಖ ಜೋಡಣೆಯ ದೊಡ್ಡ ಎಲೆಗಳನ್ನು ಹೊಂದಿದೆ.ಎಲೆಗಳು ಸಾಮನ್ಯವಾಗಿ ೧೦-೨೦ಸೆ.ಮೀ.ಉದ್ದವಾಗಿರುತ್ತದೆ.೫-೧೧.೫ಸೆ.ಮೀ.ನಷ್ಟು ಅಗಲವಾಗಿರುತ್ತದೆ.ಜಾಲಬಂಧ ನಾಳ ವಿನ್ಯಾಸವನ್ನು ಹೊಂದಿದೆ.ಇದರ ತುದಿ ಚೂಪಾಗಿದೆ.ಬಹುಬದಿಗೆ ಮಧ್ಯಾರಂಭಿ ಪುಷ್ಪಮಂಜರಿಯು ಕವಲೊಡೆದಿದೆ.ಇದರ ಹೂವುಗಳು ಬಿಳಿ ಬಣ್ಣದಾಗಿರುತ್ತದೆ.ಬಿಳಿ ಹೂವುಗಳಲ್ಲಿ ಬಾಣದಂತಿರುವ ಕೆಂಪು ಕಲೆಗಳಿವೆ. ಇದು ಮಾರ್ಚ್ -ಮೇ ತಿಂಗಳಲ್ಲಿ ಹೂ ಬಿಡುತ್ತದೆ. ಇದರ ಬೀಜದ ಮೇಲೆ ರೇಷ್ಮೆಯಂತೆ ಕೂದಲುಗಳಿವೆ.ಇದರ ಬೀಜಗಳು ಸಾಮಾನ್ಯವಾಗಿ ೮ಮಿ.ಮೀ ಉದ್ದವಾಗಿದೆ.ಕಂದು ಬಣ್ಣದಿಂದ ಬೀಜಗಳು ರಚಿತವಾಗಿದೆ.ಇದು ಬೀಜದಿಂದ ತನ್ನ ವಂಶವನ್ನು ವೃದ್ದಿಸಿಕೊಳ್ಳುತ್ತದೆ.
ಇತರ ಹೆಸರುಗಳು
[ಬದಲಾಯಿಸಿ]ಕೋಡ ಮರಕ್ಕೆ ಇಂಗ್ಲೀಷ್‍ನಲ್ಲಿ ದಿ ಈಸ್ಟರ್ ಟ್ರೀ,ಕೊನೆಸ್ಸಿ ಬಾರ್ಕ ಎಂಬುದಾಗಿ ಕರೆಯುತ್ತಾರೆ.ಕನ್ನಡದಲ್ಲಿ ಹಲಗತ್ತಿ ಮರ,ತೊಡಚಗ,ಬೆಪ್ಪಲೆ,ಕೊದಸಾಲು,ಕೊರ್ಚಿ,ಹಾಬೆ ಎಂಬುದಾಗಿ ಕರೆಯುತ್ತಾರೆ.ಹಿಂದಿಯಲ್ಲಿ ಕುರ್ಚಿ,ಧುದಿ,ತೆಲುಗಿನಲ್ಲಿ ಕೊಡಗ,ತಮಿಳಿನಲ್ಲಿ ವೆಪಲಿ,ಮರಾಠಿಯಲ್ಲಿ ಕುಡ,ಕೊದಗ,ಘಂಢರಕುಡ ಎಂಬುದಾಗಿ ಕರೆಯುತ್ತಾರೆ.ಮಲಯಾಳಂನಲ್ಲಿ ಕುಟ್ಟು ಕಪ್ಪುಲ ಕುಡಿಜಿ,ಸಂಸ್ಕ್ರತದಲ್ಲಿ ಗಿರಿಮಲ್ಲಿಕಾ, ಇಂದ್ರ ಎಂದು ಕರೆಯುತ್ತಾರೆ.
ಉಪಯೋಗಗಳು
[ಬದಲಾಯಿಸಿ]ಕೋಡ ಮುರುಕವನ್ನು ಉದ್ಯಾನವನಗಳಲ್ಲಿ ಬೆಳೆಸುತ್ತಾರೆ.ಈ ಮರವನ್ನು ಔಷಧಿಗೆ ಬಳಸುತ್ತಾರೆ.ಕುರ್ಚಿ ಎಂದು ಕರೆಯುವ ತೊಗಟೆಯನ್ನು ಟಾನಿಕ್‍ನಂತೆ ಉಪಯೋಗಿಸುತ್ತಾರೆ.ಇದರ ಬೀಜವನ್ನು ಮತ್ತು ತೊಗಟೆಯನ್ನು ಅಸ್ತಮಾ ಮತ್ತು ಕಾಮಾಲೆಗೆ ಉಪಯೋಗಿಸುತ್ತಾರೆ.ಇದರ ತೊಗಟೆ ಹಾಗು ಬೇರನ್ನು ಭೇಧಿಗೆ ಉಪಯೋಗಿಸುತ್ತಾರೆ.ಅಲ್ಲದೆಜ್ವರ,ಪೈಲ್ಸ್,ಹುಳುನಾಶಕದಂತೆ ಬೀಜಗಳನ್ನು ಉಪಯೋಗಿಸುತ್ತಾರೆ.
ಉಲ್ಲೇಖ
[ಬದಲಾಯಿಸಿ]- ↑ ಮರಗಳ ಪರಿಚಯ-ಪ್ರೊ.ಸಿ.ಡಿ.ಪಾಟೀಲ್. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು. ೨೦೧೧. ಪುಟ ಸಂಖ್ಯೆ, ೫೬-೫೭