ಸದಸ್ಯ:Nithya568

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಬಗ್ಗೆ[ಬದಲಾಯಿಸಿ]

ನನ್ನ ಹೆಸರು ನಿತ್ಯ. ಮನೆಯಲ್ಲಿ ನನ್ನನ್ನು ನೀತು ಎಂದು ಕರೆಯುತ್ತಾರೆ. ನಾನು ಈಗ ಕ್ರೈಸ್ತ ಕಾಲೇಜಿನ ಬಿಎಸ್.ಸ್ಸಿ ಪದವಿಯಲ್ಲಿ ಓದುತ್ತಿದ್ದು, ವಿಜ್ಞಾನದ ವಿಷಯವನ್ನು ಆರಿಸಿಕೊಂಡಿದ್ದೇನೆ. ನಮ್ಮ ಮನೆಯಲ್ಲಿ ನಾನು, ನನ್ನ ತಂದೆ ತಾಯಿ, ನನ್ನ ತಮ್ಮ ಹಾಗು ನನ್ನ ಚಿಕ್ಕಮ್ಮ ವಾಸವಾಗಿದ್ದೇವೆ. ನಮ್ಮ ತಂದೆ ಆಸ್ಪತ್ರೆಯಲ್ಲಿ ಪ್ರಯೋಗಾಲಯದ ತಜ್ಞರಾಗಿದ್ದಾರೆ. ನಮ್ಮ ತಾಯಿ ಗೃಹಿಣಿ. ನನ್ನ ತಮ್ಮ ಏಳನೆ ತರಗತಿಯಲ್ಲಿ ಓದುತ್ತಿದ್ದಾನೆ. ನಮ್ಮ ಚಿಕ್ಕಮ್ಮ ಫ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕೆಲಸಮಾಡುತ್ತಿದ್ದಾರೆ. ನನಗೆ ಹಾಡು ಮತ್ತು ಚಿತ್ರಕಲೆ ಎಂದರೆ ಬಹಳ ಇಷ್ಟ. ನಾನು ಶಾಸ್ತ್ರೀಯ ಸಂಗೀತದಲ್ಲಿ ಜ್ಯೂನಿಯರನ್ನು ಮುಗಿಸಿದ್ದೇನೆ. ನನಗೆ ಚಿತ್ರಕಲೆಯಲ್ಲೂ ಪ್ರಶಸ್ತಿಗಳು ಬಂದಿವೆ.

ಜೋಗ ಜಲಪಾತ

ನನ್ನ ಊರು[ಬದಲಾಯಿಸಿ]

ಆಗುಂಬೆ

ನನ್ನ ಹುಟ್ಟೂರು ಶಿವಮೊಗ್ಗ.ಶಿವಮೊಗ್ಗವನ್ನು ಸಿಹಿಮೊಗೆಯೆಂದು ಕರೆಯುತ್ತಾರೆ.ಶಿವಮೊಗ್ಗವನ್ನು ಗಂಧದ ನಾಡು ಎಂದು ಸಹ ಕರೆಯುತ್ತಾರೆ.ಶಿವಪ್ಪನಾಯಕ ಆಳಿದ ಊರು. ಈ ನಗರದಲ್ಲಿ ಶಿವಪ್ಪನಾಯಕನ ಅರಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾರ್ಪಡಿಸಿದ್ದಾರೆ. ಶರಾವತಿ ನದಿಗೆ ಅಣೆಕಟ್ಟು ಕಟ್ಟಿ, ಇಡೀ ಭಾರತಕ್ಕೆ ಪ್ರಸಿದ್ಧತೆಯನ್ನು ಪಡೆದು ವಿದ್ಯುತ್ ಶಕ್ತಿಯ ಕೊಡುಗೆಯನ್ನು ಕೊಟ್ಟ ಸ‍್ಎಂ. ವಿಶ್ವೇಶ್ವರಯ್ಯನವರ "ಜೋಗ ಜಲಪಾತದ" ನಿದರ್ಶನ ಶಿವಮೊಗ್ಗ ಜಿಲ್ಲೆಯಲ್ಲಿದೆ. ಸಹ್ಯಾದ್ರಿ ಪರ್ವತಗಳು ಇಲ್ಲಿವೆ; ಅತೀ ಹೆಚ್ಚು ಮಳೆ ಬೀಳುತ್ತದೆ.ಆದ್ದರಿಂದ ಈ ಪ್ರದೇಶವನ್ನು "ಮಲೆನಾಡು" ಎಂದು ಕರೆಯುತ್ತಾರೆ.

ಭೇಟಿ ನೀಡಿರುವ ಸ್ಥಳಗಳು[ಬದಲಾಯಿಸಿ]

ತೀರ್ಥಹಳ್ಳಿಗೆ ಹೋಗುವ ದಾರಿಯಲ್ಲಿ ಮಂಡಗದ್ದೆ ಪಕ್ಷಿಧಾಮವಿದೆ.ಇದೇ ದಾರಿಯಲ್ಲಿ ಸಕ್ಕರೆ ಬೈಲು ಆನೆಗಳ ಪಳಗಿಸುವ ಹಾಗು ಅದರ ತಂಗುದಾಣವಿದೆ.ಅಲ್ಲೇ ಕೆಲವು ಕಿಲೋಮೀಟ‍್ ಗಳ ಅಂತರದಲ್ಲಿ ಕವಲೆ ದುರ್ಗವಿದೆ.ಹಾಗೆ ಮುಂದೆ ಸಾಗಿದರೆ ಕರ್ನಾಟಕದ ಅತೀ ಹೆಚ್ಚು ಮಳೆ ಬೀಳುವ ಸ್ಥಳ ಆಗುಂಬೆ; ಇಲ್ಲಿ ಸೂರ್ಯನ ಉದಯ ಹಾಗು ಮುಳುಗುವ ದೃಶ್ಯ ಮನಮೋಹಕ. ರಾಷ್ಟ್ರಕವಿ ಕುವೆಂಪು ಹುಟ್ಟಿದ ಸ್ಥಳ ಕುಪ್ಪಳ್ಳಿಯಲ್ಲಿ ಕವಿ ಮನೆಯನ್ನು ಕಾಣಬಹುದಾಗಿದೆ. ಮತ್ತೂರಿನಲ್ಲಿ ವಾಸಿಸುವ ಜನರು ಜಾತಿ-ಭೇದವಿಲ್ಲದೆ ಎಲ್ಲರೂ ಸಂಸ್ಕೃತದಲ್ಲೇ ಸಂಭಾಷಿಸುತ್ತಾರೆ ಹಾಗು ವ್ಯವಹರಿಸುತ್ತಾರೆ.

ಅಕ್ಕಮಹಾದೇವಿ

ತುಂಗಾ ನದಿ ಮತ್ತು ಭದ್ರಾ ನದಿಗಳ ಸಂಗಮವನ್ನು ಕೂಡಲಿಯಲ್ಲಿ ಕಾಣಬಹುದು. ಹೊಯ್ಸಳರು ಕಟ್ಟಿಸಿದ ದೇವಾಲಯಗಳು ಈ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಕೂಡಲಿಯಲ್ಲಿ ಶಂಕರಾಚಾರ್ಯರಿಗೆ ಶಾರದಾಂಬೆಯು ದರ್ಶನ ನೀಡಿದ ಸ್ಥಳ. ಈ ಜಿಲ್ಲೆಯಲ್ಲಿರುವ ಸಾಗರದಿಂದ ೬ ಕಿ.ಮಿ ದೂರದಲ್ಲಿ, ವರದಮೂಲವಿದೆ. ಇದು ವರದಾಚಾರ್ಯರು ನೆಲಸಿದ ಸ್ಥಳವಾಗಿದೆ.ಇಲ್ಲಿ ವರದಾನದಿಯು ಹರಿಯುತ್ತದೆ. ಅಕ್ಕಮಹಾದೇವಿ ಹುಟ್ಟಿದ್ದು ಈ ಜಿಲ್ಲೆಯ ಸಾಗರದ ಉಡುತಡಿ. ಕಿತ್ತೂರು ರಾಣಿ ಚೆನ್ನಮ್ಮ ಆಡಳಿತ ಮಾಡಿದ, ಕೆಳದಿ, ಇಕ್ಕೇರಿ, ಬನವಾಸಿಯಲ್ಲಿ ಶಾಸನಗಳನ್ನು ಕಾಣಬಹುದಾಗಿದೆ. ಇದು ಕೆಳದಿ ಅರಸರು ಆಳಿದ ನಾಡು. ಹತ್ತಿರದಲ್ಲೇ ಇರುವ ಭದ್ರಾವತಿಯಲ್ಲಿ, ಹಳೇಬೀಡು ಹಾಗು ಬೇಲೂರ ದೇವಾಲಯಗಳನ್ನು ಹೋಲುವ ನರಸಿಂಹ ದೇವಸ್ಥಾನ ಬಹಳ ಸುಂದರವಾಗಿದೆ. ಶಿವಮೊಗ್ಗದ ತುಂಗಾ ನದಿಗೆ ಗಾಜನೂರು ಅಣೆಕಟ್ಟು, ಭದ್ರಾನದಿಗೆ ಭದ್ರಾ ಅಣೆಕಟ್ಟು ಕಟ್ಟಿದ್ದಾರೆ. ಆದ್ದರಿಂದ ಇಲ್ಲಿ ವ್ಯವಸಾಯವೇ ಪ್ರಧಾನ ಕಸುಬು. ಕಾಡುಗಳು ಹೆಚ್ಚಾಗಿರುವುದರಿಂದ ಭದ್ರಾ ಹುಲಿ-ಸಿಂಹ ಧಾಮವಿದೆ.ಶಿವಮೊಗ್ಗವನ್ನು ಪ್ರಾಕೃತಿಕ ಸೌಂದರ್ಯವನ್ನು ನೋಡಲು ಮತ್ತು ವರ್ಣಿಸಲು ಮಾತುಗಳೇ ಸಾಲದು. ಇನ್ನೂ ಅನೇಕ ಪ್ರೇಕ್ಷಣೀಯ ಸ್ಥಳಗಳು, ಕವಿಗಳು ನೆಲಸಿದ ಸ್ಥಳ ಒಮ್ಮೆ ಇಲ್ಲಿಗೆ ಜೀವನದಲ್ಲಿ ಭೇಟಿ ನೀಡಲೇಬೇಕು.

"ಮಾನವನಾಗಿ ಹುಟ್ಟಿದಮೇಲೆ ಏನೇನ್ ಕಂಡಿ, ಸಾಯೋದ್ರೊಳಗ ಒಮ್ಮೆ ನೋಡು ಜೋಗಾದ್ ಗುಂಡಿ"