ಸದಸ್ಯ:Nayana Rajashekar Katteppanavar/WEP 2018-19

ವಿಕಿಪೀಡಿಯ ಇಂದ
Jump to navigation Jump to search

ಕಿರು ಪರಿಚಯ[ಬದಲಾಯಿಸಿ]

ಭಾರತ
ಭಾರತ

ನಾನು ವಿ.ಜೆ . ಫಿಲ್ಫಿಸ್ ರವರ್ ಕುರಿತು ಪರಿಚಯಿಸುತ್ತಿದ್ದೆನೆ . ಅವರ ಪೂಣ೯ ಹೆಸರು ವಡಿವೇಲು ಜೆ ಫಿಲ್ಫಿಸ್ . ಅವರು ಸೆಪ್ಟ೦ಬರ್-೧-೧೯೫೦ ರ೦ದು ಮದರಾಸಿನಲ್ಲಿ ಜನಿಸಿದರು . ಇವರು ಹಾಕಿ ಆಟಗಾರರು . ಇವರ ಸಹೋದರ ಸಹಾ ಹಾಕಿ ಆಟಗಾರರು . ಇವರು ಭಾರತ ದೇಶದ ಹಾಕಿ ತ೦ಡದಲ್ಲಿ ತಮ್ಮನ್ನು ತಾವು ಗುರುತಿಸಿಕೊ೦ಡಿದಾರೆ . ಇವರಿಗೆ , ದೇಶದಲ್ಲಿ ಕ್ರೀಡಾ ಪಟುಗಳಿಗೆ ಕೊಡುವ ಉನ್ನತ ಪ್ರಶಸ್ತಿಯಾದ ಅರ್ಜುನ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಲಾಗಿದೆ. ಇವರಿಗೆ ಅರ್ಜುನ ಪ್ರಶಸ್ತಿ ೧೯೯೯ ರಲ್ಲಿ ಕೊಟ್ಟು ಸನ್ಮಾನಿಸಲಾಗಿದೆ. [೧]

ವಿ ಜೆ ಫಿಲಿಪ್ಸ್ರರವರು ವರ್ಡ್ ಕಪ್ಪ ಗೆದ್ದಿದರ ಕುರಿತು[ಬದಲಾಯಿಸಿ]

ವಿ ಜೆ ಫಿಲಿಪ್ಸ್ ೧೯೭೮ರಲ್ಲಿ ಬುಇನ೦ಸ್ ಅರಿಸ್ ವರ್ಡ್ ಕಪ್ಪಅನ್ನು ತಂಡದ ನಾಯಕರಾಗಿ ತ೦ಡವನ್ನು ಮುನ್ನಡೆಸಿದರು. ೧೯೭೫ ರಲ್ಲಿ ನಡೆದ ಅತಿ ಕಠಿಣವಾದ ವರ್ಲ್ಡ್ ಕಪ್ ಮ್ಯಾಚಿನಲ್ಲಿ ಇವರು ಪಾಲ್ಗೊಂಡಿದ್ದಾರೆ ಆ ಪಂದ್ಯದಲ್ಲಿ ಇವರು ಉತ್ತಮ ಪ್ರದರ್ಶನವನ್ನು ನೀಡಿ ಗೆದ್ದರು. ಇವರು ಭಾರತ ತಂಡವನ್ನು ಎರಡು ಬಾರಿ ಒಲಂಪಿಕ್ ಆಟಗಳಲ್ಲಿ ಪ್ರತಿನಿಧಿಸಿದ್ದಾರೆ . ಮಂಚ್ಚಿನ ದೇಶದಲ್ಲಿ ೧೯೭೨ ರಲ್ಲಿ ನಡೆದ ಒಲಂಪಿಕ್ ಪಂದ್ಯದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ . ಮೋನ್ಟ್ರಿಯಲ್ ಲ್ಲಿಯೂ ಸಹಾ ೧೯೭೮ರಲ್ಲಿ ಗೆದ್ದಿದ್ದಾರೆ. ಅರ್ಜುನ ಪ್ರಶಸ್ತಿಯನ್ನು ಭಾರತ ಸರ್ಕಾರವು ಉನ್ನತವಾಗಿ ಆಡುವ ಯುವ ಆಟಗಾರರಿಗೆ ನೀಡಿ ಗೌರವಿಸುತ್ತದೆ .

ಪ್ರಶಸ್ತಿಗಳು[ಬದಲಾಯಿಸಿ]

[[ಚಿತ್|alt=ಅರ್ಜುನ ಪ್ರಶಸ್ತಿ|thumb|ಅರ್ಜುನ ಪ್ರಶಸ್ತಿ]] ಅರ್ಜುನ ಪ್ರಶಸ್ತಿ ಗೆದ್ದವರಿಗೆ ೫ ಲಕ್ಷ ರೂಪಾಯಿಗಳು ,ಕಂಚಿನ ಅರ್ಜುನನ ಮೂರ್ತಿ ಮತ್ತು ಸುತ್ತೋಲೆಯನ್ನು ನೀಡುತ್ತಾರೆ .ಇವರನ್ನು ಒಮ್ಮೆ ತಮ್ಮ ವೃತ್ತಿ ಜೀವನದ ಬಗ್ಗೆ ಪ್ರಶ್ನಿಸಿದಾಗ ಅವರು, ವರ್ಲ್ಡ್ ಕಪ್ ಗೆದ್ದ ದಿನ ಎ೦ದಿಗೂ ಜೀವನದಲ್ಲಿ ಮರೆಯಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ವರ್ಲ್ಡ್ ಕಪ್ ಗೆದ್ದು ೩೯ ವರ್ಷಗಳಾದ ನಂತರ ೧ ಲಕ್ಷ ೭೫ ಸಾವಿರ ರೂಗಳನ್ನು ಕೊಟ್ಟು ಅಂದು ಆಡಿದ ಪ್ರತಿಯೊಬ್ಬರಿಗೂ ಗೌರವಿಸಲಾಗಿದೆ .ಫಿಲಿಪ್ಸ್ ರವರಿಗೆ ಜೀವನಾವಧಿ ಸಾಧನೆಗಾಗಿ ತಮಿಳುನಾಡು ಸ್ಪೋರ್ಟ್ಸ್ ಜನ೯ಲ್ಲಿಸ್ಟ್ ಅಸೋಸಿಯೇಷನ್ ರವರು ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದ್ದಾರೆ . ಅದು 42 ವರ್ಷಗಳ ನಂತರ ಪ್ರಶಸ್ತಿ ನ್ನು ಕೊಟ್ಟು ಗೌರವಿಸಿದ್ದಾರೆ. ಅವರಿಗೆ ಅಂದಿನ ತಮಿಳುನಾಡು ಸರ್ಕಾರವು ವರ್ಡ್ ಕಪ್ಪಅನ್ನು ಗೆದ್ದಾಗ ಒಂದು ಸಾವಿರ ರೂಪಾಯಿಗಳನ್ನು ನೀಡಿ ಗೌರವಿಸಿತ್ತು. ಅವರ ಸಾಧನೆಗೆ ಇದು ಸಣ್ಣ ಮೊತ್ತವಾಗಿದ್ದರು ಅವರ ಪರವಾಗಿ ನಿಂತು ಮಾತನಾಡಲು ಅಂದು ಅವರಿಗಾಗಿ ಯಾರು ಇರಲಿಲ್ಲ. ಪಾಕಿಸ್ತಾನದ ವಿರುದ್ಧ ಆಡಿದ ಪಂದ್ಯಗಳಲ್ಲಿ ಇವರು ಮುಂಚೂಣಿಯಲ್ಲಿದ್ದರು .[೨]

ವಿ ಜೆ ಫಿಲಿಪ್ ಬಗ್ಗೆ ಸ್ನೇಹಿತರು ಮಾತು[ಬದಲಾಯಿಸಿ]

ಮೈದಾನದ ಹೊರಗೆ ಇವರು ಸ್ನೇಹಿತರಾಗಿದ್ದರು ಮೈದಾನದಲ್ಲಿ ಇವರು ಪರ ಪರಿ ವೈರಿಗಳಾಗಿ ಆಡುತ್ತಿದ್ದರು. ಪಾಕಿಸ್ತಾನದ ಆಟಗಾರರಲ್ಲಿ, ಇವರು ಬಲಗೈ ಆಟಗಾರನಾದ ಇಸ್ಲಾ ಉದ್ದೀನ್ ರವರನ್ನು ಬಹಳ ಗೌರವಿಸುತ್ತಿದ್ದರು. ಪಾಕಿಸ್ತಾನಿ ಎಡಗೈ ಆಟಗಾರನಾದ ಇಷ್ಟಕಾರ್ ಅಹಮದ್ ರವರು ಫಿಲ್ಫಿಸರವರನ್ನು ಬಹಳ ಪರೀಕ್ಷಿಸಿದ್ದರು. ಇವರು ಸ್ನೇಹಜೀವಿ ಪ್ರಾಮಾಣಿಕರು ಹಾಗೂ ತಮ್ಮನ್ನು ತಾವು ಸದಾ ಕ್ರೀಡೆಯಲ್ಲಿ ತೊಡಗಿಸಿಕೊಂಡವರು. ಅವರ ಮಗ ಪಿ ಮಾರ್ಟಿನ್ ಫುಟ್ಟಬಾಲ ಆಡಬೇಕೆಂದು ಹೇಳಿದಾಗ ಅವರು ಮಗನನ್ನು ತಡೆಯದೆ ಪ್ರೋತ್ಸಾಹಿಸಿದ್ದರು .[೩]

ಹಾಕಿ ಕಡೆಗೆ ಪ್ರೀತಿ[ಬದಲಾಯಿಸಿ]

ಇವರು ದೇಶದ ಹಾಕಿ ತಂಡವನ್ನು ಉನ್ನತ ಮಟ್ಟದಲ್ಲಿ ತೆಗೆದುಕೊಂಡು ಹೋಗಲು ತಮಗೆ ಜೂನಿಯರ್ ಹಾಗೂ ಸಬ್ ಜೂನಿಯರ್ ಆಟಗಾರರಿಗೆ ತರಬೇತಿ ನೀಡಲು ಅವಕಾಶ ಕೊಡಬೇಕೆಂದು ಹೇಳುತ್ತಾರೆ. ಜೂನಿಯರ್ ಹಾಗೂ ಸಬ್ ಜೂನಿಯರ್ ಆಟಗಾರರು ದೇಶದ ಭವಿಷ್ಯವಾದುದರಿಂದ ಅವರಿಗೆ ತರಬೇತಿ ನೀಡುವುದು ಅರ್ಥಪೂರ್ಣವೆನಿಸುತ್ತದೆ ಎಂದು ಹೇಳುತ್ತಾರೆ. ಅವರು ಆಡುತ್ತಿದ್ದ ಸ೦ಧಬ೯ದಲ್ಲಿ ಆಟಗಾರರು ಅವರ ನಿರ್ಧಾರಗಳನ್ನು ಗೌರವಿಸುತ್ತಿದ್ದರು ಹಾಗೂ ಅವರಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದರು, ಅದು ಒಂದು ತೀರ ಅಪರೂಪದ ಸಂಬಂಧ ಎಂದು ಹೇಳುತ್ತಾರೆ. ಫಿಲಿಪ್ಸ್, ಮೈದಾನದಲ್ಲಿ ಸಣ್ಣ ಹುಡುಗರ ಜೊತೆ ಕಾಲ ಕಳೆಯಲು ಇಷ್ಟ ಪಡುತ್ತಿದ್ದರು ಅವರಿಗೆ ಕ್ರೀಡೆ ಹೇಳಿಕೊಡುತ್ತಾ ತಾವು ಹೆಚ್ಚು ಕಲೆತದ್ದು ಎನ್ನುತ್ತಾರೆ .ಇವರ ಅಣ್ಣ ವಿ ಜೆ ಪೀಟರ್ ಸಹ ಹಾಕಿ ಆಟಗಾರರಾಗಿದ್ದರು ಅವರ ಮಾರ್ಗವನ್ನೆ ಹಿಡಿಯಲು ಇಚ್ಚಿಸಿದ್ದರು. ಪೀಟರ್ ಅವರು ಸಹ ಒಲಂಪಿಕ್ ಚಾಂಪಿಯನ್ ಆಗಿದ್ದರು.

ಅಭ್ಯಾಸ ಮತ್ತು ಆಡುವ ವಿಧಾನ[ಬದಲಾಯಿಸಿ]

ವಿ ಜೆ ಫಿಲ್ಫಿಸ್ ರವರು, ಉಧಾಮ್ ಸಿಂಗ್ ರವರ ಕಣ್ಣು ಕೆಳಗೆ ವರ್ಲ್ಡ್ ಕಪ್ ಮ್ಯಾಚ್ ಗಾಗಿ ಸತತ ಅಭ್ಯಾಸ ಮಾಡುತ್ತಿದ್ದರು. ೧೯೭೫ರ ವರ್ಲ್ಡ್ ಕಪ್ ಗೆದ್ದದ್ದು ಅವರ ಕ್ರೀಡಾ ವೃತ್ತಿಗೆ ಒಂದು ಮುಕುಟ ವಾಗಿ ಉಳಿದಿದೆ. ಅಂದು ಭಾರತ ಹಾಗು ಪಾಕಿಸ್ತಾನದ ನಡುವಿನ ನಡೆದಿದ್ದ ಪಂದ್ಯದಲ್ಲಿ ಇವರು ಉತ್ತಮ ಪ್ರದರ್ಶನ ತೋರಿದ್ದರಿಂದ ಭಾರತವು ಗೆಲ್ಲಲು ಸಾಧ್ಯವಾಗಿತ್ತು. ಫಿಲಿಪ್ಸ್ ರವರು ಚೆನ್ನೈಯಲ್ಲಿ ನಡೆಯುತ್ತಿದ್ದ ಹಾಕಿ ಮ್ಯಾಚುಗಳಲ್ಲಿ ಅಂಪೈರ್ ಆಗಿರುತ್ತಿದ್ದರು. ಅಂಪೈರಿಂಗ್ ಮಾಡುವುದರಲ್ಲಿ ಹೆಚ್ಚು ಖುಷಿಯನ್ನು ಹೊಂದಿರುತ್ತಾರೆ ಏಕೆಂದರೆ ಅದು ಅವರನ್ನು ಆಟದ ಸಮೀಪವೆ ಇರಿಸುತ್ತದ್ದೆ ಎನ್ನುತ್ತಾರೆ. ಅವರ ಹುಡುಗರ ಜೊತೆ ಮೈದಾನದಲ್ಲಿ ಇರುವುದನ್ನು ಇಷ್ಟಪಡುತ್ತಾರೆ. ಇವರು ಕ್ರೀಡಾ ಅಧಿಕಾರಿಯಾಗಿ ರೇಲ್ವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹಣಕ್ಕಾಗಿ ಆಟವನ್ನು ಎಂದು ಆಡಿದವರಲ್ಲ ಇವರು ಆಟವನ್ನು ಆಟವಾಗಿಯೇ ಪರಿಗಣಿಸಿ ಆಡುತ್ತಿದ್ದರು. ಇವರ ಕ್ರೀಡಾ ಶೈಲಿಯನ್ನು ಕಂಡು ಎದುರಾಳಿಗಳು ಬೆರಗುತ್ತಿದ್ದರು.[೪]

ಉಲ್ಲೇಖ[ಬದಲಾಯಿಸಿ]

  1. https://www.thehindu.com/thehindu/2000/05/20/stories/0720051g.htm. Retrieved 6 ಸೆಪ್ಟೆಂಬರ್ 2018. Check date values in: |accessdate= (help); Missing or empty |title= (help)
  2. [hockeyindia.org/hall-of-fame-arjuna-award-2 hockeyindia.org/hall-of-fame-arjuna-award-2] Check |url= value (help). Retrieved 6 ಸೆಪ್ಟೆಂಬರ್ 2018. Check date values in: |accessdate= (help); Missing or empty |title= (help)
  3. [hockeyindia.org/hall-of-fame-arjuna-award-2 hockeyindia.org/hall-of-fame-arjuna-award-2] Check |url= value (help). Retrieved 6 ಸೆಪ್ಟೆಂಬರ್ 2018. Check date values in: |accessdate= (help); Missing or empty |title= (help)
  4. › OLY Home › Athletes https://www.sports-reference.com › OLY Home › Athletes Check |url= value (help). Retrieved 6 ಸೆಪ್ಟೆಂಬರ್ 2018. Check date values in: |accessdate= (help); Missing or empty |title= (help)