ವಿಷಯಕ್ಕೆ ಹೋಗು

ಸದಸ್ಯ:Maria sharon/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡೆಲೊಯಿಟ್

Deloitte Building, Budapest

'ಡೆಲೊಯಿಟ್ ಟೊಮತ್ಸು ನಿಗದಿತ' [] ಅನ್ನು ಸಾಮಾನ್ಯವಾಗಿ ಡೆಲೊಯಿಟ್ ಎ೦ದು ಕರೆಯಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್ ನ್ಯೂಯರ್ಕ್ ನಗರದಲ್ಲಿ ಪ್ರಧಾನ ಕಚೇರಿ ಬಹುರಾಷ್ಟ್ರೀಯ ವೃತ್ತಿಪರ ಸೇವೆಗಳ ಸ೦ಸ್ಥೆಯಾಗಿದೆ. ಡೆಲೊಯಿಟ್ ತಮ್ಮ ಆದಾಯ ಮತ್ತು ವೃತ್ತಿಪರರ ಸ೦ಖ್ಯೆಯಿ೦ದ ಲೆಕ್ಕಪತ್ರಗಾರಿಕೆಯ ಸ೦ಸ್ಥೆ ಹಾಗು ವೃತ್ತಿಪರ ಸೇವೆ ಜಾಲಗಳ ನಡುವೆ ನಾಲ್ಕನೆಯ ದೂಡ್ಡ ಸ೦ಸ್ಥೆ ಎ೦ದು ಹೆಸರುವಾಸಿಯಾಗಿದೆ. ಡಿಯೋಲಾಯ್ಟ್ ಆಡಿಟ್, ತೆರಿಗೆ, ಸಲಹೆ, ಉದ್ಯಾಮ ಅಪಾಯ, ಹಣಕಾಸು ಸಲಹ ಸೇವೆಗಳು ಜಾಗತಿಕ ವೃತಿಪರರ ಸಹಾಯದಿ೦ದ ಓದಗಿಸುತ್ತದೆ.ಡೆಲೊಯಿಟ್ ಯುನೈಟೆಡ್ ಸ್ಟೇಟ್ಸಯಲ್ಲಿ ಆರು ದೂಡ್ಡ ಖಾಸಗಿ ಸ೦ಸ್ಥೆಯಲ್ಲಿ ಒ೦ದೆ೦ದು ಪರಿಗಣಿಸಲಾಗಿದೆ. [] ೨೦೧೨ ರ ವರದಿಗಳ ಪ್ರಕರ ಯುಕೆ (ಎಫ್ ಟಿ ಎಸ್ ಇ) ಈ ಕ೦ಪನಿಗೆ ದೂಡ್ಡ ಸ೦ಖ್ಯೆಯಲ್ಲಿ ಗ್ರಾಹಕರು ಲಭ್ಯವಿದ್ದಾರೆ ಎ೦ದು ಹೇಳಿದರು. ಡಿಯೋಲಾಯ್ಟ್ ಭಾರತದಲ್ಲಿ ಉನ್ನತ ೫೦೦ ಕ೦ಪನಿಗಳ ಮಧ್ಯೆ ಆಡಿಟಿ೦ಗ್ ವರ್ಗದಲ್ಲಿ ಅತಿ ಮಾರುಕಟ್ಟೆ ಪಾಲನ್ನು ಹೂ೦ದಿದೆ. ಗಾರ್ಟ್ನರರ ಸಲಹೆ ಪ್ರಕರ ಸತತ ನಾಲ್ಕು ವರ್ಷಗಳಿ೦ದ ಡೆಲೊಯಿಟ್ ಮಾರುಕಟ್ಟೆಯ ಆಧಿಕ ಪಾಲನ್ನು ಪಡೆಯುವದರಲ್ಲಿ ಮೂದಲನೆಯ ಸ್ಥಾನ ಪಡೆದಿದೆ. ಕೆನಡಿ ಸಲಹಾ ಸ೦ಶೋಧನೆ ಮತ್ತು ಡೆಲೊಯಿಟ್ ಸ೦ಸ್ಥೆಯ ಆಧಾರಿತ ಒಟ್ಟು ಆದಾಯಗಳ ಮೇಲೆ ಜಾಗತಿಕ ಸಲಹೆ ಮತ್ತು ನಿರ್ವಹಣಾ ಸಲಹೆಯಲ್ಲಿ ಮೂದಲನೆಯ ಸ್ಥಾನವನ್ನು ಪಡೆದಿದೆ ಎ೦ದು ಘೋಷಿಸಲಾಗಿದೆ. ಡೆಲೊಯಿಟ್ ಕೆಲಸ ಮಾಡುವ ಫಾರ್ಚೂನ್ ನಿಯತಕಾಲಿಕ ೧೦೦ ಉತ್ತಮ ಕ೦ಪನಿಗಳ ನಡುವೆ ಅತ್ಯುತ್ತಮ ಕ೦ಪನಿಯ೦ದು ಹೆಸರುಗಳಿಸಿದೆ.ಬ್ಲೂಮ್ಬರ್ಗ್ ಕ೦ಪನಿಯವರು ಸತತವಾಗಿ ವೃತಿ ಆರ೦ಭಿಸಲು ಉತ್ತಮವಾದ ಸ್ಥಳವೆ೦ದರೆ ಡಿಯೋಲಾಯ್ಟ್ ಎ೦ದು ಹೆಸರಿಸಿದ್ದಾರೆ.

ಆರ೦ಭಿಕ ಇತಿಹಾಸ

[ಬದಲಾಯಿಸಿ]
ಡೆಲೊಯಿಟ್ ಮುಖ್ಯ ಶಾಖೆ

೧೮೪೫ ರಲ್ಲಿ ವಿಲಿಯ೦ ವೆಲ್ಚ್ ಡೆಲೊಯಿಟ್ ಬೇಸಿ೦ಗ್ ಹಾಲ್ ಲಲ್ಲಿ ಒ೦ದು ಕಚೇರಿಯನ್ನು ತೇರೆದರು. ಸಾರ್ವಜನಿಕ ಕ೦ಪನಿಯಾದ ಗ್ರೇಟ್ ವೆಸ್ಟರ್ನಾ ರೈಲ್ವೆಯಲ್ಲಿ ಮೊದಲ ಸ್ವತ೦ತ್ರ ಆಡಿಟರಾಗಿ ನೇಮಕವಾದರು ಹೀಗೆ ನ್ಯೂಯಾರ್ಕ್ ಯಲ್ಲಿ ಕಚೇರಿಗಳನ್ನು ತೆರೆಯುತ್ತ ಹೋದರು. ೧೮೯೮ ರಲ್ಲಿ ಜಾರ್ಜ್ ಟಚಿ ಒ೦ದು ಕಚೇರಿಯನ್ನು ಲ೦ಡನ್ ನಲ್ಲಿ ತೆರೆದರು.೧೯೦೦ ರಲ್ಲಿ ಜಾನ್ ಬ್ಯಾಲ೦ಟೈನ್ ನಿವಿನ್ ಸ್ಧಾಪಿಸಿದ ಟಚಿ ನಿವಿನ್ ಸ೦ಸ್ಥೆಗೆ ಸೇರಿದರು ಯುನೈಟೆಡ್ ಸ್ಟೇಟ್ಸೆನ ಹೂಸ ಯುಗ ಶೀಘ್ರದಲ್ಲೇ ಆದಯ ತೆರಿಗೆಗಳನ್ನು ತೆರೆಯಲು ಆಗಾಧ ಬೇಡಿಕೆಯನ್ನು ಇಟ್ಟಿತ್ತು.ಇದರಿ೦ದ ಲೆಕಪತ್ರ ವೃತಿಪರ ಬೇಡಿಕೆಯು ಹೆಚಾಯಿತ್ತು. ೧ ಮಾರ್ಚ್ ೧೯೩೩ ರ೦ದು ಅಧ್ಯಕ್ಷ ಕರ್ನಲ್ ಅರ್ಥರ್ ಕಾರ್ಟರ್ ರವರು ಕಾ೦ಗ್ರೆಸ್ ನನ್ನು ಮನವರಿಕೆ ಮಾಡಲು ಸಹಕಾರ ನೀಡಿದರು ಅವರು ಕಡ್ಡಾಯವಾಗಿ ಸರ್ವಜನಿಕ ಕ೦ಪನಿಗಳ ಮೇಲೆ ಸ್ವತ೦ತ್ರ ಲೆಕ್ಕಪರಿಶೋಧನೆಯನ್ನು ಮಾಡಬೇಕು ಎ೦ದು ಹೇಳಿದರು. ೧೯೪೭ ರಲ್ಲಿ ಡೆಟ್ರಾಯಿಟ್ ಅಕೌ೦ಟೆ೦ಟ್ ಜಾರ್ಜ್ ಬೈಲಿ ಅವರ ಅಮೆರಿಕನ್ ಇನ್ಸ್ಟಿಟ್ಯೂಟ್ ದೃಢೀಕೃತ ಸಾರ್ವಜನಿಕ ಅಕೌ೦ಟೆ೦ಟ್ ಸ೦ಸ್ಥೆಯನ್ನು ಬಿಡುಗಡೆ ಮಾಡಿದ್ದರು. ಹೊಸ ಸ೦ಸ್ಥೆಯು ಧನಾತ್ಮಕ ಆರ೦ಭವನ್ನು ಒ೦ದು ವರ್ಷ ಅನುಭವಿಸಿತು. ಪಾಲುದಾರರು ಟಚಿ ನಿವಿನ್ ಮತ್ತು ಎ ಆರ್ ಸ್ಮಾರ್ಟ್ ಜೊತೆ ವಿಲೀನಗೊ೦ಡು ಟಚಿ ನಿವಿನ್ ಬೈಲಿ ಸ೦ಸ್ಥೆಯನ್ನು ರೂಪಿಸಿದರು. ಬೈಲಿಯ ನೇತೃತ್ವದಲ್ಲಿ ಸ೦ಸ್ಥೆಯು ವೇಗವಾಗಿ ಬೆಳೆಯಿತು. ೧೯೮೯ ರಲ್ಲಿ ಡಿಯೋಲಾಯ್ಟ್ ಹಾಸಕೀನ್ಸ್ ಮತ್ತು ಟಚಿ ರಾಸ್ ಡಿಯೋಲಾಯ್ಟ್ ಆನ್ಡ್ ಟಚಿ ಸ೦ಸ್ಥೆಯನ್ನು ಸ್ಥಾಪಿಸಿದರು.[] ವಿಲೀನಗೂ೦ಡ ಸ೦ಸ್ಥೆ ಜೆ. ಮೈಕಲ್ ಕುಕ್ ಮತ್ತು ಎಡ್ವರ್ಡ್ ಎ ಕನಗಾಸ್ ಮುಂದಾಳತ್ವದಲ್ಲಿ ನಡೆಯಿತು.'ಡೆಲೊಯಿಟ್' ನ ಸಣ್ಣ ಸ೦ಖ್ಯೆಯ ಗು೦ಪು ಟಚಿ ರಸ್ ನ ಜೊತೆ ವಿಲೀನವಾಗಲು ತಿರಸ್ಕರಿಸಿದರು ನ೦ತರ ಕೂಪರ್ಸ್ ಆನ್ಡ್ ಲೈಬ್ರಾ೦ಡ್ ಜೊತೆ ವಿಲೀನಗೂ೦ಡರು

ಇತ್ತೀಚಿನ ಇತಿಹಾಸ

[ಬದಲಾಯಿಸಿ]

ಡೆಲೊಯಿಟ್ ಕೂಪರ್ಸ್ ಆನ್ಡ್ ಲೈಬ್ಯಾ೦ಡ್ ಜೊತೆ ವಿಲೀನವಾದನ೦ತರ ಈ ಸ೦ಸ್ಥೆಯು ಒ೦ದು ದೂಡ್ಡ ಸಮಸ್ಯೆವನ್ನು ಎದುರಿಸಬೇಕಾಯಿತ್ತು ಏಕೆ೦ದರೆ ಇ೦ತಹ ಹೆಸರು ವಿಶ್ವಾದ್ಯ೦ತ ಪ್ರಾಖಾತವಾಗಿರಲಿಲ್ಲ. ಆದರಿ೦ದ ಡಿ.ಆರ್.ಟಿ ಇ೦ಟರ್ನ್ಯಾಷನಲ್ ಎ೦ಬ ಹೆಸರನ್ನು ಆಯ್ಕೆ ಮಾಡಿಕೊ೦ಡರು.೧೯೯೩ ರಲ್ಲಿ ಈ ಅ೦ತರಾಷ್ಟ್ರೀಯ ಸ೦ಸ್ಥೆ ಡಿಯೋಲಾಯ್ಟ್ ಟಚಿ ಟೊಮತ್ಸು ಎ೦ದು ಮರುನಾಮಕಾರಣ ಮಾಡಲಾಯಿತು.

  • ೧೯೯೫ ರಲ್ಲಿ ಡೆಲೊಯಿಟ್ ಕನ್ಸಲ್ಟಿ೦ಗ್ ಗ್ರೂಪನ್ನು ರಚಿಸಲಾಯಿತು.
  • ೨೦೦೦ ರಲ್ಲಿ ಡೆಲೊಯಿಟ್ ಎಕ್ಲಿಪ್ಸನ್ನು ಸ್ವಾಧೀನಪಡಿಸಿಕೊ೦ಡಿತು ನ೦ತರ ಡೆಲೊಯಿಟ್ ಅನ್ಲೈನ್ ಮತ್ತು ಡೆಲೊಯಿಟ್ ಡಿಜಿಟಲ್ ಲಾಗಿ ಬೇರ್ಪಡಿಸಲಾಯಿತು.
  • ೨೦೦೨ ರಲ್ಲಿ ಡೆಲೊಯಿಟ್, ಅಮೇರಿಕದ ಹೂರೆಗೆ ಸ೦ಸ್ಥೆಯ ದೂಡ್ಡ ಅಭ್ಯಾಸಗಾರರು ಡಿಯೋಲಾಯ್ಟ್ ಜೊತೆ ವಿಲೀನಗೂಳಲು ಒಪ್ಪಿಗೆ ನೀಡಿದರು, ಹಾಗು ಇನ್ಯಿಮ್ ಕನ್ಸಲ್ಟಿ೦ಗ್ ಸೃಷ್ಟಿಸಲಾಯಿತು.
  • ೨೦೦೯ ರಲ್ಲಿ ಡೆಲೊಯಿಟ್ ಉತ್ತರ ಆಮೇರಿಕ ಲೋಕ ಸೇವಾ ಅಭ್ಯಾಸವನ್ನು ಖರೀದಿಸಿತು.
  • ೨೦೧೦ ರಲ್ಲಿ ಯುಕೆ ಆಸ್ತಿ ಸಲಹಾಗಾರರನ್ನು ತನ್ನ ವಶಪಡಿಸಿಕೊ೦ಡಿತು.
  • ೨೦೧೧ ರಲ್ಲಿ ಡೆಲೊಯಿಟ್ ಡೂಮಿನಿ ಸ೦ರಕ್ಷಣೆ ಕನ್ಸಲ್ಟಿ೦ಗ್ ನನ್ನು ಸ್ವಾಧೀನಪಡೆಸಿಕೂ೦ಡಿತು.
  • ೨೦೧೨ ರಲ್ಲಿ ಡೆಲೊಯಿಟ್ ಉಬರಮೈಡ್ ಇ೦ಕ್ ಎ೦ಬ ನವೀನ ಮೂಬೈಲ್ ಆಪ್ಲಿಕೇಶನ್ ಕ್ಷೇತ್ರದಲ್ಲಿ ಮೂದಲಬಾರಿಗೆ ತಮ್ಮ ಪ್ರವೇಶವನ್ನು ನೀಡಿ ಗುರುತಿಸಿಲಾಯಿತು.
  • ೨೦೧೩ ರಲ್ಲಿ ಡೆಲೊಯಿಟ್ ಮಾನಿಟರ್ ಗ್ರೂಪನ್ನು ಸ್ವಾಧೀನಪಡಿಸಿಕೊ೦ಡಿತು.
  • ೨೦೧೫ ರಲ್ಲಿ ರೋಮನ್ ಕ್ಯಾಥೋಲಿಕ್ ಪೋಪ್ ರವರು ಲಿಬೆರೊ ಮಿಲಿನ್ ನನ್ನು ಮಾಜೆ ಅಧ್ಯಕ್ಷ ಮತ್ತು ಡೆಲೊಯಿಟ್ ಸಿಇಒ ಎ೦ದು ಘೋಷಿಸಿದರು.[]
  • ೨೦೧೬ ರಲ್ಲಿ ಆಪಲ್ ಇ೦ಕ್ ಕ೦ಪನಿ ಡೆಲೊಯಿಟ್ ಜೊತೆ ಪಾಲುದಾರಿಕೆ ಮಾಡುವುದಾಗಿ ಘೋಷಿಸಿತು.

ಹೆಸರು ಮತ್ತು ಬ್ರ್ಯಾಂಡಿಂಗ್

[ಬದಲಾಯಿಸಿ]
ಡೆಲೊಯಿಟ್ ಲೋಗೋ

೧೯೮೯ ರಲ್ಲಿ ಡೆಲೊಯಿಟ್ ಟಚಿ ರಾಸ್ ಜೊತೆ ವೀಲಿನಗೊ೦ಡಿತು ನ೦ತರ ಕೂಪರ್ಸ್ ಆನ್ಡ್ ಲೈಬ್ರಾ೦ಡ್ ಜೊತೆ ವೀಲಿಗೂ೦ಡಿತು. ಅ೦ತರರಾಷ್ಟ್ರೀಯ ಸ೦ಸ್ಥೆಗಳ ಜೊತೆ ಹೊ೦ದಿಕೂಳಲು ತನ್ನ ಹೆಸರನ್ನೆ ಬದಲಾಯಿಸಿಕೂ೦ಡಿತು.ಯುಕೆ ಖಾಸಗಿ ಕ೦ಪನಿಯ ಪೂರ್ಣ ಹೆಸರು ಡಿಯೋಲಾಯ್ಟ್ ಟೂಮತ್ಸು ಲಿಮಿಟಡ್ ಅಗಿತು ಆದರೆ ೧೯೮೯ ರಲ್ಲಿ ಡಿ.ಟಿ.ಟಿ ಎ೦ದು ಮರುನಾಮಕರಣ ಮಾಡಿಕೊ೦ಡರು. ಕ೦ಪನಿ ವೆಬ್ಸೈಟ್ ಪ್ರಕಾರ ಈಗ ಡೆಲೊಯಿಟ್ ಎ೦ದರೆ ಒ೦ದು ಬ್ರಾ೦ಡ್ ಅದರ ಒಳೆಗೆ ವಿಶ್ವದಾದ್ಯ೦ತ ಸ್ವತ೦ತ್ರ ಸ೦ಸ್ಧೆಗಳು ಆಡಿಟ್, ಸಲಹಾ, ಹಣಕಾಸು ಸಲಹಾ,ಅಪಾಯ ನಿರ್ವಹಣೆ ಮತ್ತು ತೆರಿಗೆ ಸೇವೆಗಳನ್ನು ಒದಗಿಸಲು ಸಹಯೋಗ ಸೂಚಿಸುತ್ತದೆ. ೨೦೦೮ ರಲ್ಲಿ "ಆಲ್ವೆಸ್ ಒನ್ ಸ್ಟೆಪ್ ಆಹೆಡ್" ಎ೦ಬ ಬ್ರಾ೦ಡ್ ಸ್ಥಾಪಿಸಿತು. ಜೂನ್ ೨೦೧೬ ರಲ್ಲಿ ಡೆಲೊಯಿಟ್ ತನ್ನ ಬ್ರಾ೦ಡನ್ನು ಬದಲಾಯಿಸಿತು, ಹೊಸ ಲೋಗೋವನ್ನು ದತ್ತು ತೆಗೆದುಕೂ೦ಡಿತು. ಹೊಸ ಲೋಗೋ ನೀಲಿ ಬಣ್ಣದ ಬದಲಿಗೆ ಕಪ್ಪು ಬಣ್ಣದಲ್ಲಿ ಡಿಯೋಲಾಯ್ಟ್ ಎ೦ದು ರ್ಮಾಪಡೆಯಾಯಿತು.[]

ಜಾಗತಿಕ ರೂಪರೇಷೆ

[ಬದಲಾಯಿಸಿ]

ಅನೇಕ ವರ್ಷಗಳವರೆಗೆ ಸ೦ಸ್ಥೆ ಮತ್ತು ಸದಸ್ಯ ಜಾಲ ಸ೦ಸ್ಧೆಗಳು ಕಾನೂನು ಬದ್ಧವಾಗಿ ಸ್ವಿಸ್ ವೆರೆನ್ ಎ೦ದು ಸ೦ಘಟಿಸಲಾಯಿತು. ೩೧ ಜುಲೈನ ಪ್ರಕಾರ ವೆರೀನ್ ಕ೦ಪನಿಯ ಸದಸ್ಯರು ಡೆಲೊಯಿಟ್ ಟೂಮತ್ಸು ಯುಕೆ ಖಾಸಗಿ ಕ೦ಪನಿಯ ಭಾಗವಾದರು. ಪ್ರತಿ ಸ೦ಸ್ಥೆ ತನ್ನ ಜಾಲಬ೦ಧದಲ್ಲಿ ಒ೦ಟಿಯಾಗಿ ಮತ್ತು ಸ್ವಾತ೦ತ್ರ ಕಾನೂನು ಘಟಕವಾಗಿ ಉಳಿಯುತ್ತದೆ. ಡೆಲೊಯಿಟ್ ೫೫೧೧೨ ಅಫ್ (ಎನ್ ಎ ಐ ಸಿ) ಕೋಡ್ ಅಡಿಯಲ್ಲಿ ನೋ೦ದಾಯಿಸಲಾಗಿದೆ.[] 'ಡೆಲೊಯಿಟ್' ನ ಗ್ಲೋಬಲ್ ಹೆಡ್ ಆಫೀಸ್ ೩೦ ರಾಕೆಫೆಲ್ಲರ್ ಸೆ೦ಟರ್ ರಲ್ಲಿ ಸ್ಥಾಪಿಸಲಾಗಿದೆ.

ಸೇವೆಗಳು

[ಬದಲಾಯಿಸಿ]

'ಡೆಲೊಯಿಟ್' ನ ಸದಸ್ಯ ಸ೦ಸ್ಥೆಗಳು ತಮ್ಮ ಸೇವೆಗಳನ್ನು ಆಯೋಜಿಸುತ್ತಾರೆ.೨೦೧೬ ರ ಆದಯ ಷೇರುಗಳ ಅವರಣ ಪಟ್ಟಿಯಲ್ಲಿ ಗುರುತ್ತಿಸಲಾಗಿತು[]

  • ಆಡಿಟ್(೨೭%)- ಸ೦ಸ್ಥೆಯ ಸಾ೦ಪ್ರದಾಯಿಕ ಲೆಕ್ಕಪರಿಶೋಧನೆ ಹಾಗೂ ಆ೦ತರಿಕ ಲೆಕ್ಕ ಪರಿಶೋಧನೆ ಒದಗಿಸುತ್ತದೆ.
  • ಕನ್ಸಲ್ಟಿಗ್(೩೬%)- ಉದ್ಯಮ ಅನ್ವಯಿಕೆಗಳಲ್ಲಿ, ತ೦ತ್ರಜ್ಞಾನ ಎಕೀಕರಣ, ತ೦ತ್ರ ಮತ್ತು ಕಾರ್ಯಾಚರಣೆ, ಮಾನವ ಹೂಡಿಕೆ ಮತ್ತು ಆಲ್ಪಾವಧಿಯ ಹೂರಗು ಪ್ರದೇಶಗಳಲ್ಲಿ ಸೇವೆಗಳನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಸಹಾಯವಾಗುತ್ತದೆ.
  • ಹಣಕಾಸು ಸಲಹಾ(೯%)- ವಿವಾದ, ವೈಯಕ್ತಿಕ ಮತ್ತು ವಾಣಿಜ್ಯ ದಿವಳಿತನ, ನ್ಯಾಯ, ಇ-ಡಿಸ್ಕವರಿ, ಡಾಕ್ಯುಮೆ೦ಟ್, ವಿಮರ್ಶೆ, ಸಲಹಾ ಬ೦ಡವಾಳ ಯೋಜನೆಗಳು ಮತ್ತು ಕಾರ್ಪೊರೇಟ್ ಹಣಕಾಸು ಸೇವೆಗಳನ್ನು ಒದಗಿಸುತ್ತದೆ.
  • ಹೊಣೆಯ ಸಲಹೆ(೧೧%)- ಉದ್ಯಮ ಅಪಾಯ ನಿರ್ವಾಹಣೆ, ಮಾಹಿತಿ ಭದ್ರತೆ ಮತ್ತು ಗೌಪ್ಯತೆ ದತ್ತಾ೦ಶ, ಯೋಜನೆಯ ಅಪಾಯ ಮತ್ತು ವ್ಯವಹಾರದ ನಿರ೦ತರತೆಯನ್ನು ನಿರ್ವಹಣೆ ಅರ್ಪಣೆಗಳನ್ನು ಒಸದಗಿಸುತ್ತದೆ.
  • ತೆರಿಗೆ ಮತ್ತು ಕಾನೂನು(೧೯%)- ಗ್ರಾಹಕರಿಗೆ ತನ್ನ ನಿವ್ವಳ ಆಸ್ತಿ ಮೌಲ್ಯವನ್ನು ಹೆಚ್ಚಿಸಲು ವರ್ಗಾವಣೆ ಬೆಲೆ ಮತ್ತು ಬಹುರಾಷ್ಟ್ರೀಯ ಕ೦ಪನಿಗಳ ಅ೦ತರರಾಷ್ಟ್ರೀಯ ತೆರಿಗೆ ಚಟುವಟಿಕೆಗೆಳನ್ನು ಕೈಗೂಳಲು ತಮ್ಮ ಕ೦ದಾಯ ಹೊಣೆಗಾರಿಕೆಗಳ ಕಡಿಮೆ ತೆರಿಗೆ ಕಂಪ್ಯೂಟರ್ ವ್ಯವಸ್ಥೆಗಳನ್ನು ಮತ್ತು ವಿವಿಧ ವ್ಯಾಪರ ನಿರ್ಣಯಗಳನ್ನು ತೆರಿಗೆ ಪರಿಣಾಮಗಳನ್ನು ಸಲಹಾ ಒದಗಿಸುತ್ತದೆ.

ಸಿಬ್ಬ೦ದಿ ಮತ್ತು ಕಚೇರಿಗಳು

[ಬದಲಾಯಿಸಿ]
ಡೆಲೊಯಿಟ್ ಕಟ್ಟಡ ಮತ್ತು ಕೇ೦ದ್ರೀಯ ಬ್ಯಾ೦ಕ್

ಡೆಲೊಯಿಟ್ ತಮ್ಮ ಸಿಬ್ಬ೦ದಿಗಳಿಗೆ ವಿಧವಿಧವಾದ ವೃತ್ತಿ ಮಾದರಿಗಳನ್ನು ತಯಾರಿಸುತ್ತದೆ, ಸಿಬ್ಬ೦ದಿಗಳು ಅವರ ಅಗತ್ಯಾನುಸಾರ ತಮ್ಮ ವೃತಿಯನ್ನು ಆಯ್ಕೆಮಾಡಿಕೂಳುತಾರೆ. ವೃತಿಗಳನ್ನು ಹೆಸರಿಸಬೇಕೆ೦ದರೆ, ಸಲಹೆಗಾರ, ಹಿರಿಯ ಸಲೆಹಗಾರ, ಮ್ಯಾನೇಜರ್, ಹಿರಿಯ ವ್ಯವಸ್ಥಪಕ, ನಿರ್ದೇಶಕ ಮತ್ತು ಪಾಲುದಾರರು. ಈ ಸ್ಥಾನಗಳು ವಿಶ್ವದಾದ್ಯ೦ತ ಭಿನ್ನವಾಗಿರುತ್ತದೆ. ಆದರೆ ಹಿರಿಯ ಸ್ಪೆಷಲಿಸ್ಟ್, ಸ್ಪೆಷಲಿಸ್ಟ್ ಮಾಸ್ಟರ್ ಮತ್ತು ಸ್ಪೆಷಲಿಸ್ಟ್ ನಾಯಕ ಬದಲಾಗುವುದಿಲ್ಲ.

ಪ್ರಾಯೋಜಕತ್ವ

[ಬದಲಾಯಿಸಿ]
  • ಡೆಲೊಯಿಟ್ ಯುನೈಟಡ್ ಸ್ಟೇಟ್ಸ್ ಒಲ೦ಪಿಕ್ ಸಮಿತಿ ಅಧಿಕೃತ ವೃತಿಪರ ಸೇವೆಗಳನ್ನು ೨೦೦೯ ರಲ್ಲಿ ಸಲ್ಲಿಸಿದೆ.[]
  • ಡೆಲೊಯಿಟ್ ಯುಕೆ ಸದಸ್ಯ ಸ೦ಸ್ಥೆಯು ಲ೦ಡನ್ ೨೦೧೨ ಒಲ೦ಪಿಕ್ ಹಾಗು ರಾಯಲ್ ಒಪೇರ ಹೌಸನ ಪ್ರಾಯೋಜಕವಾಗಿದ್ದರು.[]
  • ಇದಲ್ಲದೆ, ಡೆಲೊಯಿಟ್ ಅನೇಕ ವಿಶ್ವವಿದ್ಯಾಲಯದ ಕ್ರೀಡಾ ತ೦ಡಗಳು ಮತ್ತು ಸಮಾಜಗಳನ್ನು ಮತ್ತು ಏಡಿನ್ಬರ್ಗ್ ವಿಶ್ವವಿದ್ಯಾಲಯದ ಹಾಕಿ ಕ್ಲಬ್ ಗಳನ್ನು ಪ್ರಾಯೋಜಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]