ವಿಷಯಕ್ಕೆ ಹೋಗು

ಸದಸ್ಯ:Einstina Sneha/ಕೂಡಿಯಾಟ್ಟಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೂಡಿಯಾಟ್ಟಂ ಅಥವ ಕುಟ್ಟಿಯಾಟಂ ಕೇರಳ ರಾಜ್ಯದ ಪ್ರದರ್ಶನ ಸಂಸ್ಕೃತ ರಂಗಭೂಮಿಯ ಒಂದು ರೂಪ. ಇದು ಅಧಿಕೃತವಾಗಿ ಮಾನವೀಯತೆಯ ಮೌಖಿಕ ಮತ್ತು ಅಮೂರ್ತ ಪರಂಪರೆಯ ಮಾಸ್ಟರ್ಪೀಸ್ ಎಂದು ಯುನೆಸ್ಕೋ ಗುರುತಿಸಿದೆ. ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಕೂತು ಎಂಬುವುದರ ಅರ್ಥ, ನೃತ್ಯ ಅಥವ ಪ್ರದರ್ಶನ.

ಕೂಡಿಯಾಟ್ಟಂ: ೨೦೦೦ ವರ್ಷಗಳಷ್ಟು ಹಳೆಯ ಕಲಾ ಪ್ರಕಾರ

ಕೂಡಿಯಾಟ್ಟಂ ಎಂದರೆ ''ಸಂಯೋಜಿತ ನಟನೆ''. ಕೇರಳ ದೇವಾಲಯದ ಚಿತ್ರಮಂದಿರಗಳಲ್ಲಿ ಸಾಂಪ್ರದಾಯಿಕ ಶೈಲಿಯ ಸಾಂಸ್ಕೃತ ನಾಟಕ, ಕೂಡಿಯಾಟ್ಟಂ. ಈ ನಟನೆ ಪ್ರಾಚೀನ ಸಂಸ್ಕೃತ ರಂಗಭೂಮಿಯಲ್ಲಿ ಬದುಕುಳಿದಿರುವ ಮಾದರಿ. ಇದು ಕೇರಳದಲ್ಲಿ ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ ಎಂದು ದೃಢೀಕರಿಸಲ್ಪಟ್ಟಿದೆ, ಆದರೆ ಅದರ ಮೂಲ ಮತ್ತು ವಿಕಸನ ರಹಸ್ಯವಾಗಿ ಉಳಿದಿದೆ. ಕೂಡಿಯಾಟ್ಟಂ ಮತ್ತು ಚಾಕ್ಯಾರ್ ಕೂತು, ಭಾರತದ, ವಿಶೇಷವಾಗಿ ಕೇರಳದ ದೇವಾಲಯಗಳಲ್ಲಿ ಮುಖ್ಯವಾದ ನೃತ್ಯ ಆರಾಧನೆಯಲ್ಲಿ ಒಂದಾಗಿವೆ. ದಕ್ಷಿಣ ಪ್ರಾಚೀನ ಸಂಗಮ ಸಾಹಿತ್ಯದಲ್ಲಿ ಮತ್ತು ನಂತರದ ಅವಧಿಗಳಿಗೆ ಸೇರಿದ ಪಲ್ಲವ, ಚೇರ, ಚೋಳ ಶಾಸನಗಳಲ್ಲಿ ಸಹ ಕೂಡಿಯಾಟ್ಟಂ ಬಗ್ಗೆ ಹಲವಾರು ಸಾರಿ ಉಲ್ಲೇಖಿಸಲಾಗಿದೆ. ನಾಟಕೀಯವಾದ ನೃತ್ಯ ಪೂಜೆ ಕೂಡಿಯಾಟ್ಟಂ ಸಂಬಂಧಿಸಿದ ಶಾಸನಗಳು ತಿರುವಿದೈಮರುತುರ್, ವೇದರಾಣ್ಯಂ, ತಿರುವಾರೂರ್, ಓಮಂಪುಲಿಯೂರ್ ದೀವಾಲಯಗಳಲ್ಲಿ ಇವತ್ತಿಗೂ ಇವೆ. ಈ ಸೇವೆಯಲ್ಲಿ ರಚಿಸಿರುವವರ ಪಟ್ಟಿಯಲ್ಲಿ ಹಲವಾರು ಪ್ರಾಚೀನ ರಜರ ಹೆಸರುಗಳಿವೆ.

ಸಂಗೀತ ಉಪಕರಣಗಳು:

[ಬದಲಾಯಿಸಿ]

ಸಾಂಪ್ರದಾಯಿಕವಾಗಿ, ಸಂಗೀತ ಉಪಕರಣಗಳಾದ ಮಿಳವು, ಕುಳಿಟಲಂ, ಕುರುಂಕುಳಲ್ ಮತ್ತು ಸಂಕು, ಇವುಗಳನ್ನು ಕೂಡಿಯಾಟ್ಟಂನಲ್ಲಿ ಪ್ರಮುಖವಾಗಿ ಉಪಯೋಗಿಸಲಾಗುವುದು. ಇವೆಲ್ಲದರಲ್ಲಿ ಅತ್ಯಂತ ಪ್ರಮುಖವಾದದ್ದು ಮಿಳವು. ಈ ತಾಳವಾದ್ಯವನ್ನು ಅಂಬಲವಾಸ್ ನಂಬಿಯಾರ್ ಜಾತಿಗೆ ಸೀರಲ್ಪಟ್ಟಿರುವ ವ್ಯಕ್ತಿ ಬಾರಿಸಬಹುದು.

ಪ್ರದರ್ಶನ ಶೈಲಿ:

[ಬದಲಾಯಿಸಿ]

ಸಾಂಪ್ರದಾಯಕವಾಗಿ, ಕೂಡಿಯಾಟ್ಟಂ ಪ್ರದರ್ಶನೆಯನ್ನು ಚಕ್ಯಾರ್ ಮತ್ತು ನಂಗ್ಯರಮ್ಮಕ್ಕೆ (ಅಂಬಲವಾಸಿ ನಂಬಿಯಾರ್ ಜಾತಿಗೆ ಸೇರಿದ ಮಹಿಳೆಯರು) ಸೇರಿದ ವ್ಯಕ್ತಿಗಳು ನಡೆಸುವರು. ಕೂಡಿಯಾಟ್ಟಂ ಎಂದರೆ ಒಟ್ಟಿಗೆ ಪ್ರದರ್ಶಿಸುವುದು ಅಥವ ಒಟ್ಟಿಗೆ ಆಡುವುದು, ಇದರ ಅರ್ಥಕ್ಕೆ ತಕ್ಕ ಹಾಗೆ, ಒಂದು ಅಥವ ಹೆಚ್ಚು ನಟರು ವೀದಿಕೆಯ ಮೇಲೆ ರಾಗಕ್ಕೆ ತಕ್ಕ ಹಾಗೆ ನೃತ್ಯ ಪ್ರದರ್ಶಿಸುತ್ತಾರೆ. ಪ್ರಮುಖ ನಟನಾದ ಚಾಕ್ಯಾರ್, ಕೂತಂಬರಂ ಎಂದರೆ ದೇವಾಲಯದ ಒಳಗೆ ಸಂಪ್ರದಾಯಕವಾದ ಕೂಡಿಯಾಟ್ಟಂ ಪ್ರದರ್ಶಿಸುತ್ತಾನೆ. ಚಾಕ್ಯಾರ್ ಮಹಿಳೆಯರು ಭಾಗವಹಿಸಲು ಅನುಮತಿಸಲಾಗುವುದಿಲ್ಲ. ಬದಲಿಗೆ ಸ್ತ್ರೀ ಪಾತ್ರಗಳನ್ನು ನಂಗ್ಯರಮ್ಮ ನಿರ್ವಹಿಸುವರು. ಕೂಡಿಯಾಟ್ಟಂ ಪ್ರದರ್ಶನ ಸುಧೀರ್ಗವಾಗಿರುವುದರಿಂದ, ಇದು ಹಲವು ರಾತ್ರಿಗಳ ಕಾಲ ಹರಡಿಸಿ ನಡಿಸಲಾಗಿದ್ದು, ೧೨ರಿಂದ ೧೫೦ ಗಂಟೆಗಲ ಕಾಲ ಪ್ರದರ್ಶಿಸಲ್ಪಡುವುದು. ಸಂಪೂರ್ಣ ಕೂಡಿಯಾಟ್ಟಂ ಪ್ರದರ್ಶನ ಮೂರು ಭಾಗಗಳನ್ನು ಒಳಗೊಂಡಿರುತ್ತವೆ. ಮೊದಲನೆಯ ಭಾಗ ಪರಪ್ಪಡು. ಈ ಭಾಗದಲ್ಲಿ ನಟ ಒಂದು ಪದ್ಯವನ್ನು ನೃತ್ಯವಾಗು ಪ್ರದರ್ಶಿಸಿ, ನೃತ್ಯದಲ್ಲಿ, ನೃತ್ಥ ಎಂಬ ಅಂಶವನ್ನು ಉಪಯೋಗಿಸುತ್ತಾನೆ. ಎರಡನೆ ಭಾಗದಲ್ಲಿ ಈ ನಟ ಅಭಿನಯ ಭಳಿಸಿ, ನಾಟಕದ ಮುಖ್ಯ ಪಾತ್ರದ ಮನಸ್ಥಿತಿಯನ್ನು ಪ್ರೇಕ್ಷಕರಿಗೆ ತೆರೆದಿಡುತ್ತಾನೆ. ನಂತರ ನಿರ್ವಾಹಣಂ, ಇದರಲ್ಲಿ ನಾಟಕದ ನಿಜವಾದ ಪ್ರಾರಂಭದ ಹಂತಕ್ಕೆ ಪ್ರೇಕ್ಷಕರನ್ನು ತೆಗೆದುಕೊಂಡುಹೋಗಲಾಗುವುದು. ಪ್ರದರ್ಶನದ ಕೊನೆಯ ಭಾಗ ಕೂಡಿಯಾಟ್ಟಂ, ಎದು ಸ್ವತಃ ನಾಟಕವೇ. ಮೊದಲ ಎರಡು ಭಾಗಗಳಲ್ಲಿ ಐಕ್ಯ ವ್ಯಕ್ತಿ ಕೃತಿಗಳಿರುವುದು, ಆದರೆ, ಕೂಡಿಯಾಟ್ಟಂ ಅನೇಖ ನಟರು ಸೇರಿ ಪ್ರದರ್ಶಿಸಬಹುದು. ೧೯೫೫ರಲ್ಲಿ ಗುರು ಮಾಣಿ ಮಾಧವ ಚಾಕ್ಯಾರ್ ಮೊಟ್ಟ ಮೊದಲ ಬಾರಿಗೆ ದೇವಾಲಯದ ಹೊರಗೆ ಕುಟ್ಟಿಯಾಟಂ ಪ್ರದರ್ಶಿಸಿದರು. ಇವರು, ಈ ಕಾರಣದಿಂದಾಗಿಯೇ ಅನೀಖ ಸಮಸ್ಯಗಳನ್ನು ಎದುರಿಸಿದರು.

ಖ್ಯಾತ ಕಲಾವಿದರು:

[ಬದಲಾಯಿಸಿ]

ಶ್ನಾಟ್ಯಚಾರ ವಿಧುಶಕರತ್ನಂ ಪದ್ಮಶ್ರೀ ಗುರು ಮಾಣಿ, ರಸ ಅಭಿನಯವನ್ನು ಉನ್ನತವಾಗಿ ಕಲಿತು, ಕೂಡಿಯಾಟ್ಟಂ ಒಂದು ಜನಪ್ರೀಯ ಶೈಲಿಯಾಗುವಹಾಗೆ ಮಾಡಿದರು. ಈ ಶೈಲಿಯನ್ನು, ಹಿಂದು ದೀವಾಲಯಗಳಿಂದ ಹೊರ ತರುವುದು ಮಾತ್ರವಲ್ಲದೆ, ಚಕ್ಯಾರ್ ಜಾತಿ ಸಮುದಾಯಕ್ಕೆ ಸೇರದೆ ಎರುವ ಜನರಿಗೂ ಕೂಡ ಬೋಧಿಸಿದರು. ಅವರ ತಂಡದೊಂದಿಗೆ ಭಾರತದಾದ್ಯಂತ ಪ್ರದರ್ಶನೆ ನೀಡಿದರು. ಅವರು ಕಾಲಿದಾಸರ ಶಕುಂತಲ, ವಿಕ್ರಮೂರ್ವಶಿಯ ಸ್ವಪ್ನವಾಸದತ್ತ ಮುಂತಾದ ಉನ್ನತ ನಾಟಕಗಳನ್ನು ಕೂಡಿಯಟ್ಟಂ ಶೈಲಿಯಲ್ಲಿ ನಿರ್ದೇಶಿಸಿ, ಸಂಯೋಜಿಸಿದ್ದಾರೆ.

ಕೂಡಿಯಾಟ್ಟಂ ಶೈಲಿಯ ಎತರ ಪ್ರಮುಖ ನಿರೂಪಕರು ಪದ್ಮ ಭೂಶಣ ಅಮ್ಮಣ್ಣೂರ್ ಮಾಧವ ಚಕ್ಯಾರ್ ಎಂಬುವವರು. ೧೯೮೦ರಲ್ಲಿ, ಇವರು ಅಂತಾರಾಶ್ಟ್ರೀಯ ಪ್ರೇಕ್ಷಕರಿಗೆ ಈ ಕಲೆಯನ್ನು ಪ್ರಸ್ತುತ ಪಡಿಸಿದ ಮೋದಲನೆಯ ಪ್ರದರ್ಶಕರು ಇವರು. ಇವರು ಭೀಟಿ ನೀಡಿರಿವ ಸ್ಥಳಗಳು, ಇಂಗ್ಲಂಡ್, ಫ಼್ರಾನ್ಸ್, ನೆದರ್ಲ್ಯಾಂಡ್ಸ್ ಮತ್ತು ಜಪಾನ್. ತಮ್ಮ ಜೀವನ ಪೂರ್ತಿ ಬೋಧನೆಯನ್ನು ಮುಂದುವರಿಸಿದರು.