ಸದಸ್ಯ:Deepikachrist/WEP 2018-19
Deepikachrist/WEP 2018-19 | |
---|---|
ಜನನ | ಅಕ್ಟೋಬರ್ ೧೮, ೧೯೪೬ ಪಟಿಯಾಲ |
ವೃತ್ತಿ | ಟ್ರ್ಯಾಪ್ ಹಾಗೂ ಸ್ಕೀಟ್ ಶೂಟರ್ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಸಂತ ಸ್ಟೆಫೆನ್ಸ್ ಕಾಲೇಜು |
ಪ್ರಮುಖ ಪ್ರಶಸ್ತಿ(ಗಳು) | ಅರ್ಜುನ ಪ್ರಶಸ್ತಿ |
ಬಾಳ ಸಂಗಾತಿ | ರಾಣಿ ಉಮಾ ಕುಮಾರಿ |
ಸಂಬಂಧಿಗಳು | ಮಹಾರಾಜಾ ಭುಪಿಂದ್ರ ಸಿಂಗ್, ಮಹಾರಾಜಾ ಯದವಿಂದ್ರ ಸಿಂಗ್ |
ರಣಧೀರ್ ಸಿಂಗ್ (ಕ್ರೀಡಾ ಶೂಟರ್)
[ಬದಲಾಯಿಸಿ]ರಣಧೀರ್ ಸಿಂಗ್ ಓರ್ವ ಮಾಜಿ(ಜನನ ೧೮ ಅಕ್ಟೋಬರ್ ೧೯೪೬) ಒಲಿಂಪಿಕ್ ಮಟ್ಟದ ಟ್ರ್ಯಾಪ್ ಹಾಗು ಸ್ಕೀಟ್ ಶೂಟರ್ ಆಗಿದ್ದರು.ಪ್ರಸ್ತುತ ಅವರು ಅಂತರಾಷ್ಟ್ರೀಯ ಒಲಿಂಪಿಕ್ ಕಮಿಟಿಯಲ್ಲಿ ನೀತಾ ಅಂಬಾನಿಯವರೊಂದಿಗೆ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.ಇವರಿಗೆ ೧೯೭೯ ನಲ್ಲಿ ಅರ್ಜುನ ಅವಾರ್ಡ್ ದೊರೆಯಿತು.
ಕೌಟುಂಬಿಕ ಹಿನ್ನಲೆ
[ಬದಲಾಯಿಸಿ]ಇವರು ಮಹಾರಾಜಾ ಭುಪಿಂದ್ರ್ ಸಿಂಗ್ ಅವರ ಪುತ್ರ ರಾಜ ಭಲಿಂದ್ರ ಸಿಂಗ್ ರವರಿಗೆ ಜನಿಸಿದರು.ರಣಧೀರ್ ಸಿಂಗ್ ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಕರ್ನಲ್ ಬ್ರೌನ್ಸ್ ಕೇಂಬ್ರಿಜ್ ಸ್ಕೂಲಿನಲ್ಲಿ ಪಡೆದು , ದೆಹೆಲಿಯ ಸಂತ ಸ್ಟೆಫೆನ್ಸ್ ಕಾಲೇಜಿನಿಂದ ಇತಿಹಾಸದಲ್ಲಿ ಬಿ.ಎ ಪದವಿಯನ್ನು ಪಡೆದಿದ್ದಾರೆ. ಸಿರಿಮುರಿನವರಾದ ರಾಣಿ ಉಮಾ ಕುಮಾರಿಯವರನ್ನು ಇವರು ವರಿಸಿದ್ದಾರೆ.
ಇವರು ಪ್ರಭಾವಶಾಲಿ ಕ್ರೀಡಾ ಆಡಳಿತದ ಕುಟುಂಬದಿಂದ ಬಂದವರು.೧೯೫೧ರಲ್ಲಿ ದೆಹಲಿಯಲ್ಲಿ ನಡೆದ ಮೊದಲ ಏಷ್ಯನ್ ಕ್ರೀಡಾಕೂಟವನ್ನು ಲಾಬಿ ಮಾಡಿ ಸಂಘಟಿಸುವುದರಲ್ಲಿ ಇವರ ಚಿಕ್ಕಪ್ಪ, ಟೆಸ್ಟ್ ಕ್ರಿಕೆಟರ್ ಮಹಾರಾಜಾ ಯದವಿಂದ್ರ ಸಿಂಗ್ರವರದ್ದು ಬಹು ದೊಡ್ಡ ಪಾತ್ರ. ೧೯೪೧ರಿಂದ ೧೯೯೨ ರವರೆಗೆ ಭಾರತೀಯ ಒಲಿಂಪಿಕ್ ಸಮಿತಿಯ ಸದಸ್ಯರಾಗಿದ್ದ ಇವರ ತಂದೆ ರಾಜ ಭಲಿಂದ್ರ್ ಸಿಂಗ್, ಒಂಬತ್ತನೇ ಏಶಿಯನ್ ಕ್ರೀಡಾ ಕೂಟವನ್ನು ದೆಹೆಲಿಗೆ ಮರಳಿ ತರುವಲ್ಲಿ ಸಹಕರಿಸಿದರು
ವೃತ್ತಿಜೀವನ
[ಬದಲಾಯಿಸಿ]ಅವರು ಸ್ಪರ್ಧಾತ್ಮಕ ಹಿರಿಯ ಶೂಟಿಂಗ್ ನ ಚೊಚ್ಚಲ ಪಂದ್ಯವನ್ನು ಆಡಿದ್ದು ೧೯೬೪ರಲ್ಲಿ, ಹದಿನೆಂಟು ವರ್ಷದವರಾಗಿದ್ದ ರಣಧೀರ್ ಸಿಂಗ್ ಭಾರತೀಯ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ವಿಜೇತ ಟ್ರ್ಯಾಪ್ ಶೂಟಿಂಗ್ ತಂಡದ ಭಾಗವಾಗಿದ್ದರು .ಇವರ ತಂಡ ಮುಂದಿನ ವರ್ಷ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು .೧೯೬೪ರಲ್ಲಿ ಸ್ಕೀಟ್ ನ ಮೊದಲ ರಾಷ್ಟೀಯ ವಯಕ್ತಿಕ ಪ್ರಶಸ್ತಿಯನ್ನು ಗೆದ್ದರು.ಆನಂತರ ಅವರು ಸ್ಕೀಟ್ ಹಾಗು ಟ್ರ್ಯಾಪ್ ಶೂಟಿಂಗ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದರು.
ಬ್ಯಾಂಕಾಕ್ ನಲ್ಲಿ ನಡೆದ ೧೯೭೮ನ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ , ಈ ಸಾಧನೆ ಮಾಡಿದ ಮೊದಲ ಭಾರತೀಯ ಶೂಟರ್ ಎಂಬ ಗೌರವಕ್ಕೆ ಪಾತ್ರರಾದರು. ನಾಲ್ಕು ವರ್ಷಗಳ ನಂತರ ಮನೆಯಂಗಳದಲ್ಲಿ ನಡೆದ ೧೯೮೨ನ ಏಶಿಯನ್ ಗೇಮ್ಸ್ನಲ್ಲಿ ಚಿನ್ನ ಗೆಲ್ಲುವ ಸಾಧನೆ ಮಾಡಿದರು.[೧] ಅವರು ೧೯೬೮ ರಿಂದ ೧೯೮೪ ರವರೆಗೆ ನಡೆದ ಐದು ಒಲಿಂಪಿಕ್ ಕ್ರೀಡಾಕೂಟಗಳ ಮಿಶ್ರ ಟ್ರ್ಯಾಪ್ ಶೂಟಿಂಗಿನಲ್ಲಿ ಭಾಗವಹಿಸಿದರು..ಕರ್ನಿ ಸಿಂಗ್ ನಂತರ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಶ್ರೇಯ ಇವರಿಗೆ ಸಲ್ಲುತ್ತದೆ.ಅವರು ನಾಲ್ಕು ಏಶಿಯನ್ ಗೇಮ್ಸ್ ನಲ್ಲಿ ಸ್ಪರ್ಧಿಸಿ ಪ್ರತಿ ಬಣ್ಣದ ಪದಕವನ್ನು ಗೆದ್ದರು.[೨]
ಕ್ರೀಡಾ ಆಡಳಿತಗಾರ
[ಬದಲಾಯಿಸಿ]ಅವರು ಆಫ್ರೋ ಏಶಿಯನ್ ಗೇಮ್ಸ್ ಕೌನ್ಸಿಲ್(೧೯೯೮-೨೦೦೭)ನ ಸ್ಥಾಪಕ ಕಾರ್ಯದರ್ಶಿಯಾಗಿದ್ದರು ಮತ್ತು ೨೦೦೩ರಲ್ಲಿ ಹೈದೆರಾಬಾದನಲ್ಲಿ ನಡೆದ ಆಫ್ರೋ ಏಶಿಯನ್ ಗೇಮ್ಸ್ನ ಸಂಘಟನೆಯನ್ನು ಮುನ್ನೆಡೆಸಲು ಸಹಾಯ ಮಾಡಿದರು.ಅವರು ೨೦೧೦ರ ಕಾಮನ್ವೆಲ್ತ್ ಕೂಟವನ್ನು ಭಾರತಕ್ಕೆ ತರುವಲ್ಲಿ ತೊಡಗಿದ್ದರು ಮತ್ತು ಸಂಘಟನಾ ಸಮಿತಿಯ ಉಪಾಧ್ಯಕ್ಷರಾಗಿದ್ದರು.ವಿವಾದಾತ್ಮಕ ಸಂಘಟನಾ ಸಮಿತಿಯ ಏಕೈಕ ಹಿರಿಯ ಅಧಿಕಾರಿಯಾಗಿದ್ದ ಅವರು,ಇನ್ನುಳಿದವರಂತೆ ಭ್ರಷ್ಟ ಚಿತ್ರಣವನ್ನು ಹೊಂದಿರಲಿಲ್ಲ.ಅವರು ೧೯೮೭ರಿಂದ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ನ ಕಾರ್ಯದರ್ಶಿ,೧೯೮೧ರಿಂದ ಸೆಕ್ರೆಟರಿ ಜನರಲ್ ಆಫ್ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ,ಮತ್ತು ೨೦೦೧ರಿಂದ ೨೦೧೪ರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾಗಿದ್ದರು ಮತ್ತು ೨೦೦೨ರಿಂದ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಅವರು ಒಸಿಎನ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾದರು.ಅವರು ವಿಶ್ವ ಡೋಪಿಂಗ್ ವಿರೋಧಿ ಫೌಂಡೇಶನ್ ಬೋರ್ಡ್ ಮತ್ತು ಕೆಳಗಿನ ಆಯೋಗಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ:ಒಲಿಂಪಿಕ್ ಗೇಮ್ಸ್ ಸ್ಟಡಿ (೨೦೦೨-೨೦೦೩) ,ಸ್ಪೋರ್ಟ್ ಫಾರ್ ಆಲ್ (೨೦೦೪-),ವಿಮೆನ್ ಅಂಡ್ ಸ್ಪೋರ್ಟ್ (೨೦೦೬-),೨೦೧೦ರಲ್ಲಿ ಸಿಂಗಪುರದ ಮೊದಲ ಬೇಸಿಗೆ ಯೂಥ್ ಒಲಿಂಪಿಕ್ ಗೇಮ್ಸ್ ನ ಸಂಯೋಜನೆ(೨೦೦೮-) ,ಒಲಿಂಪಿಕ್ ಟ್ರಸ್ ಫೌಂಡೇಶನ್ (೨೦೦೭-).ಭಾರತಾದ ಗ್ವಾಲಿಯರ್ ನ ಲಕ್ಷ್ಮೀಬಾಯಿ ರಾಷ್ಟ್ರೀಯ ಶಾರೀರಿಕ ಶಿಕ್ಷಣ ಸಂಸ್ಥೆಯು ೨೦೦೨ರಲ್ಲಿ ಇವರಿಗೆ ಕ್ರೀಡಾ ವಿಜ್ಞಾನದಲ್ಲಿ ಗೌರವ ಡಿ.ಲಿಟ್ ನೀಡಿ ಗೌರವಿಸಿತು. [೩]
ಉಲ್ಲೇಖಗಳು
[ಬದಲಾಯಿಸಿ]