ಸದಸ್ಯ:Bharath.H.M.1910243/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿ.ಆರ್.ಎಲ್ ಸಂಸ್ಥೆಯ ಸಂಸ್ಥಾಪಕರು
ವಿಜಯ್ ಸಂಕೇಶ್ವರ್

ವಿಜಯ್ ಸಂಕೇಶ್ವರ[ಬದಲಾಯಿಸಿ]

ಪರಿಚಯ[ಬದಲಾಯಿಸಿ]

ವಿಜಯ್ ಸಂಕೇಶ್ವರ್ ಅವರು ಭಾರತೀಯ ವ್ಯಪಾರಿಗಳಲ್ಲಿ ಪ್ರಮುಖರು. ಇವರು ತಮ್ಮ ಪುತ್ರ ಆನಂದ್ ಸಂಕೇಶ್ವರ್ ಅವರೊಂದಿಗೆ ವಿ.ಆರ್.ಎಲ್ ಗ್ರೂಪಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇವರು ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ಮಾಲೀಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಆಗಸ್ಟ್ ೨, ೧೯೫೦ರಂದು ಗದಗದಲ್ಲಿ ಜನಿಸಿದರು. ಇವರ ತಂದೆ ಶ್ರೀ ಬಸವನಪ್ಪ ಹಾಗೂ ತಾಯಿ ಶ್ರೀ ಮತಿ ಚಂದ್ರವ್ವ. ಇವರು ೧೩ ದಿಸೆಂಬರ್, ೧೯೭೨ರಂದು ವಿವಾಹವಾಗಿದ್ದು ಇವರ ಪತ್ನಿ ಶ್ರೀ ಮತಿ ಲಲಿತ. ಇವರಿಗೆ ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.

ಇವರು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾಗಿದ್ದಾರೆ. ಇವರು ಭಾರತ ಸಂಸತ್ತಿನ ಸದಸ್ಯರಾಗಿ ಉತ್ತರ ಧಾರವಾಡದಿಂದ ಆಯ್ಕೆಯಾಗಿದ್ದರು.

ವಿದ್ಯಾಭ್ಯಾಸ[ಬದಲಾಯಿಸಿ]

ಇವರು ವಾಣಿಜ್ಯ ಶಾಸ್ತ್ರದಲ್ಲಿ ಪದವಿದರಾಗಿದ್ದು ತಮ್ಮ ಪದವಿಯನ್ನು ಆದರ್ಶ್ ಶಿಕ್ಷಣ ಸಮಿತಿ, ವಾಣಿಜ್ಯ ಕಾಲೇಜು, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ, ಕರ್ನಾಟಕದಲ್ಲಿ ಮುಗಿಸಿದ್ದಾರೆ.

ಪತ್ರಿಕೊದ್ಯಮ ಕ್ಶೇತ್ರಕ್ಕೆ ಕೊಡುಗೆ[ಬದಲಾಯಿಸಿ]

ಇವರು ಕರ್ನಾಟಕದ ಅತಿ ಹೆಚ್ಚು ಮಾರಾಟವಾಗುತ್ತಿದ್ದ ವಿಜಯ ಕರ್ನಾಟಕ ಪತ್ರಿಕೆಯ ಸಂಸ್ಥಾಪಕರಾಗಿದ್ದಾರೆ. ನಂತರ ೨೦೦೭ರಲ್ಲಿ ಈ ಪತ್ರಿಕೆಯನ್ನು ಬೆನ್ನೆಟ್, ಕೋಲ್ಮ್ಯಾನ್ ಮತ್ತು ಕಂಪನಿಗೆ (ಟೈಮ್ಸ್ ಆಫ್ ಇಂಡಿಯಾ ಗ್ರೂಪ್) ಮಾರಾಟ ಮಾಡಿದರು. ಐದಾರು ವರ್ಷಹಗಳ ನಂತರ ೨೦೧೨ರಲ್ಲಿ ವಿಜಯ ವಾಣಿ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯು ಪ್ರಸ್ತುತ ಕರ್ನಾಟಕದ ಉತ್ತಮ ದಿನಪತ್ರಿಕೆ ಎಂಬ ಖ್ಯಾತಿ ಪಡೆದಿದ್ದು ದಿನಕ್ಕೆ ಸುಮಾರು ಎಂಟು ಲಕ್ಷಕ್ಕೂ ಅದಿಕ ಪತ್ರಿಕೆಗಳನ್ನು ಮಾರಟ ಮಾಡುತ್ತಿದೆ.

ಏಪ್ರಿಲ್ ೨೪, ೨೦೧೭ರಲ್ಲಿ, ಇವರು ತಮ್ಮ ವಿ.ಆರ್.ಎಲ್ ಮೀಡಿಯಾ ಲಿಮಿಟೆಡ್ ಕಂಪನಿಯಿಂದ ದಿಗ್ವಿಜಯ ೨೪X೭ ಎಂಬ ದೂರದರ್ಶನ ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದರು

ವಿ.ಆರ್.ಎಲ್ ಗ್ರೂಪ್[ಬದಲಾಯಿಸಿ]

ಸಂಕೇಶ್ಚವರ್ ಸಾವರು ವಿ.ಆರ್.ಎಲ್ ಗ್ರೂಪನ್ನು ೧೯೭೬ರಲ್ಲಿ ಕರ್ನಾಟಕದ ಚಿಕ್ಕ ಪಟ್ಟಣವಾದ ಗದಗದಲ್ಲಿ, ಸಾಲ ಪಡೆದು ಖರೀದಿಸಿದ ಲಾರಿಯಿಂದ ಪ್ರಾರಂಭಿಸಿದರು. ಅವರು ತಮ್ಮ ವ್ಯಾಪಾರವನ್ನು ಬೆಂಗಳೂರು, ಹುಬ್ಬಳ್ಳಿ ಹಾಗೂ ಬೆಳಗಾವಿಗೆ ವಿಸ್ತರಿಸಿದರು. ಇವರ ವ್ಯಾಪಾರ ವಿನಮ್ರ ಆರಂಭದಿಂದ ವಿ.ಆರ್.ಎಲ್ ಗ್ರೂಪ್ ರಾಷ್ಟದಲ್ಲೇ ಹೆಸರಾಂತ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ಕಂಪನಿಯಾಗಿ ಬೆಳೆದಿದೆ, ಅದು ಪ್ರಸ್ತುತ ಭಾರತದ ಅತಿದೊಡ್ಡ ಫ್ಲೀಟ್ ಮಾಲೀಕರಾಗಿದೆ. ೨೮ ಫೆಬ್ರವರಿಯ ವರದಿಯ ಪ್ರಕಾರ ಇವರ ಕಂಪನಿಯಾಲ್ಲಿ ೪೮೩೫ ವಾಹನಗಳು ಇದ್ದು, ಅದರಲ್ಲಿ; ೩೬೨ ಪ್ರವಾಸಿ ಬಸ್ಸುಗಳು, ೪೪೭೩ ಸರಕು ಸಾಗಣೆ ವಾಹನಗಳಿವೆ. ವಿ.ಆರ್.ಎಲ್ ಕಂಪನಿಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಭಾರತ ವಾಣಿಜ್ಯ ವಾಹನಗಳ ಏಕೈಕ ಅತಿದೊಡ್ಡ ಫ್ಲೀಟ್ ಮಾಲೀಕ ಎಂದು ಉಲ್ಲೇಖಿಸಲಾಗಿದೆ. ಅದು ಖಾಸಗಿ ವಲಯದಲ್ಲಿ.

ಆರಂಭದಲ್ಲಿ ಕೆಲವು ತೊಂದರೆಗಳನ್ನು ಅನುಭವಿಸಿದರು ಸಹ, ಮುಂದಿನ ದಿನಗಳಲ್ಲಿ ವಿ.ಆರ್.ಎಲ್ ಪಾರ್ಸೆಲ್ ಸೇವಾ ಕ್ಷೇತ್ರದಲ್ಲಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಿತರಣಾ ಜಾಲವನ್ನು ಒದಗಿಸಲು ಮುಂದಾಗಿದೆ. ಬೆಳೆಯುತ್ತಿರುವ ಗ್ರಾಹಕರ ಬೇಡಿಕೆಗಳನ್ನು ತಲುಪಲು ಇದು ತನ್ನ ಕಾರ್ಯಾಚರಣೆಯನ್ನು ಕೊರಿಯರ್ ಸೇವೆ, ಎಕ್ಸ್‌ಪ್ರೆಸ್ ಸರಕು ಮತ್ತು ಏರ್ ಚಾರ್ಟರಿಂಗ್‌ ಮುಂತಾದ ಸಾಗಣೆ ಕ್ಷೇತ್ರಗಳಿಗೆ ಹರಡಿದೆ. ತನ್ನ ದೊಡ್ಡ ನೆಟ್ವರ್ಕನ್ನು ಬಳಸುತ್ತ ವಿ.ಆರ್.ಎಲ್ ತನ್ನ ಗ್ರಾಹಕರಿಗೆ ಅವರವರ ಅಗತ್ಯಗಳಿಗೆ ತಕ್ಕಂತೆ ೩ಪಿಎಲ್ ಹಾಗೂ ಗೋದಾಮಿನ ಪರಿಹಾರಗಳನ್ನು ತಯಾರಿಸಿ ಉದ್ಯಮಗಲಳಿಗೆ ಪೂರೈಸುತ್ತಿದೆ. ಅನೇಕ ಕಾರ್ಪೊರೇಟ್ ಸಂಸ್ಥೆಗಳಿಗೆ ವಿ.ಆರ್.ಎಲ್ ಪಾರ್ಸೆಲ್ ಸೇವೆ ಅನಿವಾರ್ಯವಾಗಿದೆ. ಈ ನೆಟ್‌ವರ್ಕ್ ದೇಶದ ಉದ್ದ ಮತ್ತು ಅಗಲವನ್ನು ವ್ಯಾಪಿಸಿದೆ ಹಾಗೂ ಹೆಚ್ಚಿನ ಸಂಖ್ಯೆಯ ಟ್ರಾನ್ಸ್‌ಶಿಪ್ಮೆಂಟ್ ಹಬ್‌ಗಳಿಂದ ಬೆಂಬಲಿತವಾಗಿದೆ. ದೇಶದಲ್ಲಿ ವಿ.ಆರ್.ಎಲ್ 859 ಶಾಖೆಗಳು ಮತ್ತು ಫ್ರಾಂಚೈಸಿಗಳ ಜಾಲದ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ತನ್ನ ಸೇವೆಯನ್ನು ದೇಶದ ದೂರದ ಸ್ಥಳಗಳಿಗೆ ತಲುಪಲು ವಿಸ್ತರಿಸುತ್ತಿದೆ.

ಪ್ರಶಸ್ತಿಗಳು[ಬದಲಾಯಿಸಿ]

೨೦೨೦ರಲ್ಲಿ ಭಾರತ ಸರ್ಕಾರ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಪದ್ಮ ಶ್ರೀ" ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರಿಗೆ ೨೦೦೨ರಲ್ಲಿ "ಆರ್ಯಭಟ್ಟ ಪ್ರಶಸ್ತಿ", ೧೯೯೪ರಲ್ಲಿ ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ ಅಫ಼ೇರ್ಸ್ ನ "ಉದ್ಯೋಗ ರತ್ನ", ೨೦೦೭ರಲ್ಲಿ ಸರ್ ಎಂ. ವಿಶ್ವೇಶ್ವರಯ ಸ್ಮಾರಕ ಪ್ರಶಸ್ತಿ ಮತ್ತು ೨೦೦೮ರಲ್ಲಿ "ಸಾರಿಗೆ ಸಾಮ್ರಾಟ(ಟ್ರಾನ್ಸ್ ಪೋರ್ಟ್ ಸಾಮ್ರಾಟ್)" ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ೨೦೧೪ರಲ್ಲಿ ಧಾರವಾಡ ವಿಶ್ವವಿದ್ಯಾನಿಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇವರನ್ನು "ಟ್ರಾನ್ಸ್ ಪೋರ್ಟ್ ಪರ್ಸನಾಲಿಟಿ ಆಫ಼್ ದಿ ಇಯರ್" ಎಂದು ಇತ್ತೀಚೆಗೆ ಆಯೋಜಿಸಿದ್ದ 'ಭಾರತದ ರಸ್ತೆ ಹಾಗೂ ಸಾರಿಗೆ ಪ್ರಶಸ್ತಿಗಳು ೨೦೧೨'ರಂದು ಗುರುತಿಸಿದೆ.

ರಾಜಕೀಯ ಜೀವನ[ಬದಲಾಯಿಸಿ]

ದೇಶದ ೧೧, ೧೨ ಮತ್ತು ೧೩ನೇ ಲೋಕಸಭಾ ಚುಣಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಪ್ರತಿನಿದಿಸಿ ಭಾರತದ ಲೋಕಸಭಾ ಸದಸ್ಯರಗಿ ಸೇವೆ ಸಲ್ಲಿಸಿದರು. ನಂತರ ಕರ್ನಾಟಕ ರಾಜ್ಯದ ಶಾಸಕಾಂಗ ಸದಸ್ಯರಾಗಿ ಸೇವೆ ಸಲ್ಲಿಸಿದರು. ಇವರು ಅನೇಕ ಕೇಂದ್ರ ಸರ್ಕಾರದ ಸಮಿತಿಗಳ ಸದಸ್ಯರಾಗಿದ್ದರು. ಅವುಗಳೆಂದರೆ; ಹಣಕಾಸು ಸಮಿತಿ ೧೯೯೬ ರಿಂದ ೧೯೯೭ರವರೆದಗೆ: ಸಲಹಾ ಸಮಿತಿ, ಮೇಲ್ಮೈ ಸಾರಿಗೆ ಸಚಿವಾಲಯ ೧೯೯೬ ರಿಂದ ೨೦೦೦ದವರೆಗೆ: ಸಾರಿಗೆ ಮತ್ತು ಪ್ರವಾಸೋದ್ಯಮ ಸಮಿತಿ ೧೯೯೮ ರಿಂದ ೨೦೦೦ದವರೆಗೆ.

ಉಲ್ಲೇಖಹಗಳು[ಬದಲಾಯಿಸಿ]