ಸದಸ್ಯ:Apoorva S Devadiga

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ]

ಅಪೂರ್ವ.ಎಸ್.ದೇವಾಡಿಗ
ಜನನ`ನವೆ೦ಬರ್ ೧೩,೧೯೯೭
ಮೂಡಬಿದ್ರೆ
ರಾಷ್ಟ್ರೀಯತೆಭಾರತೀಯ

ನಾನು ಅಪೂರ್ವ.ಮೂಡುಬಿದಿರೆಯ ಪಾಡ್ಯಾರು ಬನ್ನಡ್ಕ ಎಂಬ ಊರಿನ "ಶುಭಶ್ರೀ" ಎಂಬ ನಿವಾಸದಲ್ಲಿ ನನ್ನ ಜನನವಾಯಿತು. ನನ್ನ ತಂದೆ ಶ್ರೀನಿವಾಸ್.ಬಿ.ಕೆ. ಇವರು ಮಂಗಳೂರಿನ ಕುಂಜತ್ತಬೈಲ್ ನಲ್ಲಿರುವ ಎಂ.ಸಿ.ಎಫ್. ವಸತಿನಿಲಯದಲ್ಲಿನ ಗ್ರಾಹಕರ- ನೌಕರರ ಸಹಕಾರಿ ಸಂಘದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.ನನ್ನ ತಾಯಿ ಸುಜಾತ. ಇವರು ಗೃಹಿಣಿ.

ನನ್ನ ತಂದೆಯ ಊರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬಸವಾನಿ.ನನ್ನ ಹುಟ್ಟೂರು ಹಾಗೂ ನನ್ನ ತಾಯಿಯ ಊರು ಮೂಡಬಿದ್ರೆ.ಪ್ರಸ್ತುತ ನಾನು ನನ್ನ ತಂದೆಯ ನೌಕರಿಯ ನಿಮಿತ್ತ ಮಂಗಳೂರಿನ ಮರಕಡ ಎಂಬಲ್ಲಿ ವಾಸಿಸುತ್ತಿದ್ದೇನೆ.

ನಾನು ೧-೧೦ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತಿರುವೆನು. ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು "ವಿದ್ಯಾಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ - ಜ್ಯೋತಿ ನಗರ " ಹಾಗೂ "ಸಂತ ಲಾರೆನ್ಸರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ-ಬೋ೦ದೇಲ್"ಇಲ್ಲಿ ಮುಗಿಸಿದೆ. ಅನಂತರ ಪ್ರೌಢ ಹಾಗೂ ಪದವಿಪೂರ್ವ ವಿದ್ಯಾಭ್ಯಾಸವನ್ನು "ಮಹಾತ್ಮಾಗಾಂಧಿ ಸೆಂಟಿನರಿ ಪ್ರೌಢ ಹಾಗೂ ಪದವಿಪೂರ್ವ ಕಾಲೇಜು-ಬೋ೦ದೇಲ್" ಎಂಬಲ್ಲಿ ಮುಗಿಸಿದೆ. ಸಂತ ಅಲೋಶಿಯಸ್ ಕಾಲೇಜಿನಲ್ಲಿನಲ್ಲಿ ಬಿಎಸ್ಸಿಯ ಪಿ.ಸಿ.ಎಂ ವಿಭಾಗದಲ್ಲಿ ಪದವಿ ಮುಗಿಸಿರುವ ನಾನು, ಈಗ ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದೇನೆ.

ನೃತ್ಯ, ಸಂಗೀತ, ಚಿತ್ರಕಲೆ, ಕಥೆ-ಕಾದ೦ಬರಿಗಳನ್ನು ಓದುವುದು- ನನ್ನ ಹವ್ಯಾಸಗಳು.ನನಗೆ ಇಷ್ಟವಾದ ಕವಿ "ಬಿ ಎಂ ಶ್ರೀ"(ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ).ಏಕೆಂದರೆ ಇವರು ಕನ್ನಡಕ್ಕೆ ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ,ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು. ಇವರು ಕನ್ನಡಕ್ಕೆ ಅನುವಾದ ಮಾಡಿದ "ಕರುಣಾಳು ಬಾ ಬೆಳಕೆ" ಎಂಬ ಕವನವು ನನಗೆ ತುಂಬಾ ಪ್ರಿಯವಾದುದು.

ಮುಂದೆ ಸ್ನಾತಕೋತ್ತರ ಪದವಿಯನ್ನು ಯಶಸ್ವಿಯಾಗಿ ಮುಗಿಸಿ, ಒಳ್ಳೆಯ ನೌಕರಿಯನ್ನು ಪಡೆದು ಭದ್ರ ಅಡಿಪಾಯವನ್ನು ಪಡೆಯುವುದು ನನ್ನ ಮಹತ್ವಾಕಾಂಕ್ಷೆ.


ಈ ಸದಸ್ಯರ ಊರು ಮಂಗಳೂರು.