ವಿಷಯಕ್ಕೆ ಹೋಗು

ಸದಸ್ಯ:Anivaasi/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಸ್. ರಾಮಚಂದ್ರ
ಹುಟ್ಟು(೧೯೪೮-೧೧-೧೬)೧೬ ನವೆಂಬರ್ ೧೯೪೮
ಸಾವು(2011-01-10)ಜನವರಿ 10, 2011ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"".
ಉದ್ಯೋಗಛಾಯಾಗ್ರಾಹಕ

ಎಸ್. ರಾಮಚಂದ್ರ ಎಂದೇ ಖ್ಯಾತರಾದ ಶಿವರಾಮಯ್ಯ ರಾಮಚಂದ್ರ ಐತಾಳ ಕನ್ನಡ ಚಿತ್ರರಂಗದ ಹೊಸ ಅಲೆಯ ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಪ್ರತಿಭಾನ್ವಿತ ಹಾಗು ಪ್ರಸಿದ್ಧ ಹಿರಿಯ ಛಾಯಾಗ್ರಾಹಕ.

ಪರಿಚಯ

[ಬದಲಾಯಿಸಿ]

ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಎಸ್. ರಾಮಚಂದ್ರ 75ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ವೀಕ್ಷಕರು ಅಚ್ಚರಿ ಪಡುವಂಥ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಕಲಾತ್ಮಕ ಛಾಯಾಗ್ರಾಹಕ ಎಂದೇ ಪ್ರಸಿದ್ಧರಾಗಿದ್ದರು. ರಾಮಚಂದ್ರ ಅವರ ಛಾಯಾಗ್ರಹಣಕ್ಕೆ ಅಂಥದೊಂದು ಶಕ್ತಿ ಇತ್ತು. ಸಹಜವಾಗಿ ಚಿತ್ರೀಕರಿಸಬೇಕಿದ್ದ ದೃಶ್ಯವೊಂದನ್ನು ವಿಶೇಷವಾದ ರೀತಿಯಲ್ಲಿ, ಇದನ್ನು ಹೀಗೂ ಸೆರೆಹಿಡಿಯಬಹುದೇ ಎಂದು ಬೆರಗಾಗುವ ರೀತಿಯಲ್ಲಿ ಚಿತ್ರಿಸಿಕೊಡುವ ಮಾಂತ್ರಿಕತೆ ಅವರಿಗಿತ್ತು. ಕಲಾತ್ಮಕ ಚಿತ್ರಗಳ ಪರಂಪರೆ ಕನ್ನಡದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಅವರ ಅಮೂಲ್ಯ ಕೊಡುಗೆ ಇತ್ತು.

ವೃತ್ತಿ

[ಬದಲಾಯಿಸಿ]

ರಾಮಚಂದ್ರರವರು ಪೂನಾ ಫಿಲ್ಮ್ ಇನ್‌ಸಿrಟ್ಯೂಟ್‌ನ ಕೊಡುಗೆ. ಅವರು ೧೯೬೭-೧೯೭೦ರಲ್ಲಿ ಛಾಯಾಗ್ರಹಣದ ವ್ಯಾಸಂಗ ಮಾಡಿದ ಮೊದಲ ತಲೆಮಾರಿನ ಗುಂಪಿಗೆ ಸೇರಿದವರು . ಅಲ್ಲಿಂದ ಬಂದ ನಂತರ ಅವರು ಗಿರೀಶ್‌ ಕಾರ್ನಾಡರ 'ವಂಶವೃಕ್ಷ' ಚಿತ್ರಕ್ಕೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. 1972 ರಲ್ಲಿ ತೆರೆಕಂಡ 'ಸಂಕಲ್ಪ' ಚಿತ್ರ ರಾಮಚಂದ್ರರನ್ನು ನಾಡಿಗೆ ಪರಿಚಯಿಸಿತು. ಆ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಅವರು ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಂಡರು. ನಂತರ ಅವರು ಛಾಯಾಗ್ರಹಣ ಮಾಡಿದ ಬಹುತೇಕ ಚಿತ್ರಗಳು ಕಲಾತ್ಮಕ ಚಿತ್ರಗಳಾಗಿದ್ದವು. ಅದು ಅವರಿಗಿರುವ ಹೆಗ್ಗಳಿಕೆಯೂ ಹೌದು. ಕಲಾತ್ಮಕ ಚಿತ್ರಗಳೆಂದರೆ ಅಲ್ಲಿ ಎಸ್.ರಾಮಚಂದ್ರ ಇರಲೇಬೇಕು ಎಂಬಷ್ಟು ಅವರು ಆ ಚಿತ್ರಗಳ ಪಾಲಾಗಿದ್ದರು. ಗಿರೀಶ್ ಕಾಸರವಳ್ಳಿಯವರ ಮೊದಲ ಚಿತ್ರ ಘಟಶ್ರಾದ್ಧವಲ್ಲದೆ, ನಂತರ ಅವರ ಹಲವಾರು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸಮಾಡಿದ್ದಾರೆ. ಸದಾಶಿವ ಶೆಣೈ ನಿರ್ದೇಶನದ 'ಪ್ರಾರ್ಥನಾ' ಅವರ 75ನೆ ಚಿತ್ರ. ಶಂಕರ್ ನಾಗ್ ನಿರ್ದೇಶನದ ಹಿಂದಿಯ 'ಮಾಲ್ಗುಡಿ ಡೇಸ್‌' ಧಾರಾವಾಹಿಗೂ ರಾಮಚಂದ್ರ ಕ್ಯಾಮರಾ ಹಿಡಿದಿದ್ದರು. ನಿರ್ದೇಶಕ ರಾಮದಾಸ್‌ ನಾಯ್ಡು ನಿರ್ದೇಶನದ 'ಹೆಜ್ಜೆಗಳು' ರಾಮಚಂದ್ರ ಅವರು ಕ್ಯಾಮರಾ ಹಿಡಿದ ಕೊನೆಯ ಚಿತ್ರ. ಚಿಕ್ಕ ವಯಸ್ಸಿನಿಂದಲೇ ಪೋಲಿಯೋದ ಕಾರಣ ತುಸು ಕುಂಟುನಡಿಗೆಯಿದ್ದರೂ ಅದನ್ನು ಮೆಟ್ಟಿ ನಿಂತು ಅವರು ಸಾಧನೆಯ ಶಿಖರವೇರಿದರು.

ಪ್ರಶಸ್ತಿ

[ಬದಲಾಯಿಸಿ]

೧೯೭೭ರಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಛಾಯಾಗ್ರಾಹಕ (ಚಂದ್ರಶೇಖರ ಕಂಬಾರ ಕಥೆಯಾಧಾರಿತ ‘ಋಷ್ಯಶೃಂಗ’) ಪ್ರಶಸ್ತಿ, ಹಲವು ಬಾರಿ ರಾಜ್ಯಪ್ರಶಸ್ತಿ, ೨೦೦೬ರಲ್ಲಿ ಜೀವಮಾನ ಸಾಧನೆಗಾಗಿ ಸಂದ ಗೌರವಗಳು ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ರಾಮಚಂದ್ರ ಅವರು ಪಾತ್ರರಾಗಿದ್ದಾರೆ.

ಇವರು ಕ್ಯಾನ್ಸರಿನಿಂದ ಬಳಲುತ್ತಿದ್ದು ಜನವರಿ 10, 2011ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"".ರಂದು ನಿಧನರಾದರು. ಇವರ ಪತ್ಮಿಯ ಹೆಸರು ಮೀನಾಕ್ಷಿ ಹಾಗು ಪುತ್ರಿಯರು ಚೈತ್ರಾ ಮತ್ತು ವರ್ಷಾ.

ಚಿತ್ರಪಟ್ಟಿ

[ಬದಲಾಯಿಸಿ]

ಚಲನಚಿತ್ರಗಳು

[ಬದಲಾಯಿಸಿ]
ವರ್ಷಚಿತ್ರಭಾಷೆಇತರ ಸಂಗತಿ
1972ವಂಶವೃಕ್ಷಕನ್ನಡಸಹಾಯಕ ಛಾಯಾಗ್ರಾಹಕ
1972ಸಂಕಲ್ಪಕನ್ನಡವಿಜೇತರು : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ[]
1974ಕಂಕಣಕನ್ನಡ
1975ಚೋಮನ ದುಡಿಕನ್ನಡ
1976ಪಲ್ಲವಿಕನ್ನಡ
1976ಋಷ್ಯಶೃಂಗಕನ್ನಡವಿಜೇತರು : ಅತ್ಯುತ್ತಮ ಛಾಯಾಗ್ರಾಹಕ ರಾಷ್ಟ್ರ ಪ್ರಶಸ್ತಿ
1977ಘಟಶ್ರಾದ್ಧಕನ್ನಡ
1978ಗ್ರಹಣಕನ್ನಡWinner : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ (ಕಪ್ಪು ಬಿಳುಪು)
1978ಗೀಜಗನ ಗೂಡುಕನ್ನಡ
1978ಹೊಂಬಿಸಿಲುಕನ್ನಡ
1978ಮಲಯ ಮಕ್ಕಳುಕನ್ನಡ
1978ಪರಸಂಗದ ಗೆಂಡೆತಿಮ್ಮಕನ್ನಡ
1979ಆಕ್ರಮಣಕನ್ನಡ
1979ದಂಗೆ ಎದ್ದ ಮಕ್ಕಳುಕನ್ನಡ
1979ನಮ್ಮಮ್ಮನ ಸೊಸೆಕನ್ನಡ
1980ಬಂಗಾರದ ಜಿಂಕೆಕನ್ನಡ
1980ವಾತ್ಸಲ್ಯ ಪಥಕನ್ನಡ
1980ಸಂಗೀತಾಕನ್ನಡ
1981ಜಾಲಕನ್ನಡ
1981ಚದುರಿದ ಚಿತ್ರಗಳುಕನ್ನಡ
1983ಬ್ಯಾಂಕರ್ ಮಾರ್ಗಯ್ಯಕನ್ನಡ
1983ಅನ್ವೇಷಣೆಕನ್ನಡ
1983ಗಂಧರ್ವಗಿರಿಕನ್ನಡ
1983ಮುದುಡಿದ ತಾವರೆ ಅರಳಿತುಕನ್ನಡ
1983ನ್ಯಾಯ ಗೆದ್ದಿತುಕನ್ನಡ
1983ಪ್ರೇಮಯುದ್ಧಕನ್ನಡ
1983ಸಿಂಹಾಸನಕನ್ನಡ
1984ಒಲವೆ ಬದುಕುಕನ್ನಡ
1986ಪ್ರೇಮ ಜಾಲಕನ್ನಡ
1987ಹುಲಿ ಹೆಬ್ಬುಲಿಕನ್ನಡ
1987ಅವಸ್ಥೆಕನ್ನಡ
1987ನ್ಯಾಯ ಶಿಕ್ಷೆಕನ್ನಡ
1987ರೋಮಾಂಚನಕನ್ನಡ
1987ಸಂಪ್ರದಾಯಕನ್ನಡ
1988ಭುಜಂಗಯ್ಯನ ದಶಾವತಾರಕನ್ನಡ
1988ಆಸ್ಪೋಟಕನ್ನಡ
1988ಮಾತೃದೇವೋಭವಕನ್ನಡ
1989ಹಾಂಕಾಂಗಿನಲ್ಲಿ ಏಜಂಟ್ ಅಮರ್ಕನ್ನಡ
1989ಸಿಂಗಾರಿ ಬಂಗಾರಿಕನ್ನಡ
1990ಸಂತ ಶಿಶುನಾಳ ಶರೀಫಕನ್ನಡ
1991ಮನೆಕನ್ನಡವಿಜೇತರು : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ
1991ಎಕ್ ಘರ್ಹಿಂದಿ
1992ಉಂಡು ಹೋದ ಕೊಂಡು ಹೋದಕನ್ನಡ
1993ಕಾದಂಬರಿಕನ್ನಡ
1994ಯಾರಿಗು ಹೇಳ್ಬೇಡಿಕನ್ನಡ
1995ನಿಲುಕದ ನಕ್ಷತ್ರಕನ್ನಡ
1996ಜನನಿಕನ್ನಡ
1996ಪೂಜಕನ್ನಡ
1999ದೇವೀರಿಕನ್ನಡ
1999ಕಾನೂರು ಹೆಗ್ಗಡತಿಕನ್ನಡ
2003ಅರ್ಥಕನ್ನಡ
2004ಹಸೀನಾಕನ್ನಡ
2004ಬೇರುಕನ್ನಡ
2004ಪ್ರವಾಹಕನ್ನಡ
2005ನಾಯಿ ನೆರಳುಕನ್ನಡ
2005ಮುಖಾಮುಖಿಕನ್ನಡ
2006ಬನದ ನೆರಳುಕನ್ನಡ
2007ಗುಲಾಬಿ ಟಾಕೀಸುಕನ್ನಡ
2008ವಿಮುಕ್ತಿಕನ್ನಡ
2008ಮೊಗ್ಗಿನ ಜಡೆಕನ್ನಡ
2008ಹಾರು ಹಕ್ಕಿಯನೇರಿಕನ್ನಡ
2009ದಾಟುಕನ್ನಡ
2009ಮುಖಪುಟಕನ್ನಡ
2010ಗಾಂಧಿ ಸ್ಮೈಲ್ಸ್ಕನ್ನಡ
2010ಬೇಲಿ ಮತ್ತು ಹೊಲಕನ್ನಡ
2010ಹೆಜ್ಜೆಗಳುಕನ್ನಡ
2010ಪ್ರಾರ್ಥನೆಕನ್ನಡ

ಟಿವಿ ಚಿತ್ರ

[ಬದಲಾಯಿಸಿ]
ವರ್ಷಚಿತ್ರಭಾಷೆಇತರ ಸಂಗತಿ
1987ಮಾಲ್ಗುಡಿ ಡೇಸ್ (ಟಿವಿ ಸರಣಿ)ಹಿಂದಿಛಾಯಾಗ್ರಹಣ
1988ಸ್ಟೋನ್ ಬಾಯ್ (ಟಿವಿ ಸರಣಿ)ಹಿಂದಿಛಾಯಾಗ್ರಹಣ
2002ಒಂದು ಸಾವಿನ ಸುತ್ತ (ಟೆಲಿ ಚಿತ್ರ)ಕನ್ನಡಛಾಯಾಗ್ರಹಣ
2002ಸಾಕ್ಷಿ (ಟೆಲಿ ಚಿತ್ರ)ಕನ್ನಡಚಿತ್ರಕತೆ, ನಿರ್ದೇಶನ, ಛಾಯಾಗ್ರಹಣ
2003ಗೃಹಭಂಗ (ಟಿವಿ ಸರಣಿ)ಕನ್ನಡಛಾಯಾಗ್ರಹಣ

[]

  1. 1 2 Award winning cameraman S.Ramachandra dead
  2. http://www.thehindu.com/todays-paper/tp-features/tp-fridayreview/hero-behind-the-frame/article1131752.ece