ಸದಸ್ಯ:Amogh prakash248/WEP 2018-19 dec

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Amogh prakash248/WEP 2018-19 dec
ಜನನಚಿಕ್ಕಮಗಳೂರು ಜಿಲ್ಲೆ
ವೃತ್ತಿವ್ಯಾಪಾರಿ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮಂಗಳೂರು ವಿಶ್ವವಿದ್ಯಾಲಯ
ಬಾಳ ಸಂಗಾತಿಮಾಳವಿಕ
ಸಂಬಂಧಿಗಳುಎಸ್.ಎಂ.ಕೃಷ್ಣ

ವೈಯಕ್ತಿಕ ಜೀವನ[ಬದಲಾಯಿಸಿ]

ವಿ.ಜಿ.ಸಿದ್ದಾರ್ಥ ಅವರು ಕರ್ನಾಟಕದ ಹಸಿರು ಮಲೆನಾಡು ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿದರು. ಕರ್ನಾಟಕದ ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರ ಮಗಳಾದ ಮಾಳವಿಕರನ್ನು ವಿವಾಹವಾದರು.

ಚಿಕ್ಕಮಗಳೂರು ಬೆಟ್ಟಗಳು

ಆರಂಭಿಕ ವೃತ್ತಿಜೀವನ[ಬದಲಾಯಿಸಿ]

ಸಿದ್ದಾರ್ಥ ಅವರು ತಮ್ಮ ಮಾಸ್ಟರ್ಸ್ ಮಾಡಿದ ನಂತರ ೧೯೮೩-೧೯೮೪ ರಲ್ಲಿ ಮುಂಬೈಯಲ್ಲಿ ಪೋರ್ಟ್ ಪೋಲಿಯೋ ಲಿಮಿಟೆಡ್ ಗೆ ವೈಸ್ ಚೇರ್ಮನ್ ಮಹೇಂದ್ರ ಕಂಪನಿ ಅವರ ಅಡಿಯಲ್ಲಿ ಇಂಡಿಯನ್ ಸ್ಟಾಕ್ ಮಾರ್ಕೆಟ್ ನಲ್ಲಿ ಸೆಕ್ಯೂರಿಟಿಗಳ ವಹಿವಾಟಿಗೆ ಸೇರಿದರು. ಇವರು ಎರಡು ವರ್ಷಗಳ ಕಾಲ ಜೆ.ಎಂ.ಫೈನಾನ್ಷಿಯಲ್ ಲಿಮಿಟೆಡ್ ನಲ್ಲಿ ಕೆಲಸ ಮಾಡಿದರು. ಆಗ ಅವರಿಗೆ ೨೪ ವರ್ಷ ವಯಸ್ಸು. ಸಿದ್ದಾರ್ಥ ಅವರು ಬೆಂಗಳೂರಿಗೆ ಹಿಂದಿರುಗಿದರು ಆಗ ಅವರ ತಂದೆಯವರು ಅವರ ಆಯ್ಕೆಯ ವ್ಯವಹಾರವನ್ನು ಪ್ರಾರಂಭಿಸಲು ಹಣವನ್ನು ನೀಡಿದರು. ಸಿದ್ದಾರ್ಥ ರವರು ರೂ.೩೦,೦೦೦ಕ್ಕೆ ಸ್ಟಾಕ್ ಮಾರ್ಕೆಟ್ ಕಾರ್ಡನ್ನು ಖರೀದಿಸಿದರು. ಜೊತೆಗೆ ಸಿವನ್ ಸೆಕ್ಯುರಿಟೀಸ್ ಎಂಬ ಕಂಪನಿಯನ್ನು ೨೦೦೦ರಲ್ಲಿ ವೇ ೨ ವೆಲ್ತ್ ಸೆಕ್ಯುರಿಟೀಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಿದರು. ಇದರ ಸಾಹಸೋದ್ಯಮ ಬಂಡವಾಳ ವಿಭಾಗವು ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಎಂದು ಕರೆಯಲ್ಪಟ್ಟಿತು. ೧೯೮೪ ರಲ್ಲಿ ಇದು ನಗರದ ಅತ್ಯಂತ ಯಶಸ್ವಿ ಹೂಡಿಕೆ ಬ್ಯಾಂಕಿಂಗ್ ಮತ್ತು ಸ್ಟಾಕ್ ಬ್ರೋಕಿಂಗ್ ಕಂಪನಿಯಾಗಿ ಮಾರ್ಪಟ್ಟಿತು.

ಕಾಫಿ ವ್ಯವಹಾರ[ಬದಲಾಯಿಸಿ]

ಸುಮಾರು ೧೫ ವರ್ಷಗಳ ನಂತರ ಸಿದ್ದಾರ್ಥ ರವರು ಕರ್ನಾಟಕದಲ್ಲಿ ಯಶಸ್ವಿ ಕಾಫಿ ವ್ಯವಹಾರವನ್ನು ಸ್ಥಾಪಿಸಿದರು. ಅವರು ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆದು ವರ್ಷಕ್ಕೆ ೨೮೦೦೦ ಟನ್ ನಷ್ಟು ಕಾಫಿ ರಫ್ತು ಮಾಡುತ್ತಿದ್ದರು ಮತ್ತು ೨೦೦೦ ಟನ್ ನಷ್ಟು ಕಾಫಿಯನ್ನು ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದರು. ಅವರು ಕಾಫಿಯನ್ನು ಬೆಳೆದು ವ್ಯವಹಾರ ಮಾಡುತ್ತಿದ್ದ ಕಂಪನಿಯ ಹೆಸರು ಅಮಲ್ಗಮೇಟೆಡ್ ಬೀನ್ ಕಂಪೆನಿಯನ್ನು ೧೯೯೩ ರಲ್ಲಿ ಆರಂಭಿಸಿದರು (ಎ.ಬಿ. ಸಿ.) ಇದರ ವಾರ್ಷಿಕ ವಹಿವಾಟು ೨೫ ಬಿಲಿಯನ್ ಡಾಲರ್ ಆಗಿದೆ. ಸಿದ್ದಾರ್ಥ ರವರು ಈಗ ದಕ್ಷಿಣ ಭಾರತದಾದ್ಯಂತ ತನ್ನ ಬ್ರಾಂಡ್ ಕಾಫಿ ಡೇ ಪುಡಿಯನ್ನು ೨೦೦ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಎ.ಬಿ.ಸಿ. ಭಾರತದಲ್ಲಿನ ಅತಿ ದೊಡ್ಡ ಹಸಿರು ಕಾಫಿ ರಫ್ತುದಾರ.

ಕಾಫಿ ಬೀಜ

ಇವರು ೧೨೦೦೦ ಎಕರೆ ಕಾಫಿ ತೋಟಗಳನ್ನು ಹೊಂದಿರುತ್ತಾರೆ. ಅವರ ಕಂಪನಿಯು ಕ್ರಮೇಣವಾಗಿ ಬೆಳೆಯಿತು. ಅವರು ಹಾಸನದಲ್ಲಿ ೫೦ ದಶಲಕ್ಷ ರೂ ಗಳಿಗೆ ಕಾಫಿ ಕ್ಯೂರಿಂಗ್ ಘಟಕವನ್ನು ಖರೀದಿಸಿದರು. ಅದನ್ನು ಇನ್ನೂ ಅಭಿವೃದ್ದಿಗೊಳಿಸಿದರು. ಈಗ ಅವರ ಕಂಪನಿಯು ೭೫೦೦೦ ಟನ್ನುಗಳಷ್ಟು ಕ್ಯೂರಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇದು ದೇಶದಲ್ಲಿಯೇ ಅತಿ ದೊಡ್ಡ ಕ್ಯೂರಿಂಗ್ ಘಟಕವಾಗಿದೆ.

ಅವರು ೧೯೯೬ ರಲ್ಲಿ ಕೆಫೆ ಕಾಫೀ ಡೇ "ಯುವ ಹ್ಯಾಂಗ್ ‍ಔಟ್" ಕಾಫೀ ಪಾರ್ಲರ್ ಗಳ ಸರಪಳಿಯನ್ನು ಸ್ಥಾಪಿಸಿದ ಕರ್ನಾಟಕದ ಮೊದಲ ವಾಣಿಜ್ಯೋದ್ಯಮಿಯಾಗಿದ್ದರು. ಈಗ ಅವರು ಭಾರತದಲ್ಲಿ ೧೫೫೦ ಕಾಫೀ ಡೇ ಕೆಫೆಗಳನ್ನು ಸ್ಥಾಪಿಸಿದ್ದಾರೆ. ಅವರ ಸೈಬರ್ ಕೆಫೆಗಳು ವಾರಕ್ಕೆ ಕನಿಷ್ಠ ೪೦,೦೦೦ ರಿಂದ ೫೦,೦೦೦ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಎ.ಬಿ.ಸಿ. ಟ್ರೇಡಿಂಗ್ ಕಂಪನಿ ಲಿಮಿಟೆಡ್ ಇಂದು ಭಾರತದಿಂದ ಹಸಿರು ಕಾಫಿಯ ಅತಿದೊಡ್ಡ ರಫ್ತುದಾರ ಮತ್ತು ಏಷ್ಯಾದ ಎರಡು ಸಂಪೂರ್ಣ ಸಂಯೋಜಿತ ಕಾಫಿ ಕಂಫೆನಿಗಳಲ್ಲಿ ಒಂದಾಗಿದೆ. ಕೆಫೆ ಕಾಫಿ ಡೇ ಭಾರತದ ಅತಿ ದೊಡ್ಡ ಮತ್ತು ಪ್ರಧಾನ ಚಿಲ್ಲರೆ ಸರಪಳಿ ಕೆಫೆಗಳಾಗಿದ್ದು ೨೦೯ ನಗರ ಮತ್ತು ಪಟ್ಟಣಗಳಲ್ಲಿ ೧೪೨೩ ಕೆಫೆಗಳನ್ನು ಹೊಂದಿದೆ.

ಕೆಫೆ ಕಾಫಿ ಡೇ, ದೇವರಾಜ್ ಉರ್ಸ್ ರಸ್ತೆ

ಇತರ ವ್ಯವಹಾರಗಳು[ಬದಲಾಯಿಸಿ]

ಸಿದ್ದಾರ್ಥ ರವರು ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಲಿಮಿಟೆಡನ್ನು ೨೦೦೦ರಲ್ಲಿ ಸ್ಥಾಪಿಸಿದರು. ಇದು ತಂತ್ರಜ್ಞಾನಗಳಲ್ಲಿ ತೊಡಗಿರುವ ಭಾರತೀಯ ಕಂಪೆನಿಗಳನ್ನು ಗುರುತಿಸುವ ಹೂಡಿಕೆ ಮಾಡುವ ಮತ್ತು ಮಾರ್ಗ ದರ್ಶನ ನೀಡುವ ಕಂಪೆನಿಯಾಗಿದೆ. ಇವರು ಜಿಟಿವಿ,ಮೈಂಡ್ ಟ್ರೀ, ಲಿಕ್ವಿಡ್ ಕ್ರಿಸ್ಟಲ್, ವೇ ೨ ವೆಲ್ತ್ ಮತ್ತು ಇಟಿಯಮ್ ಗಳಲ್ಲಿ ಬೋರ್ಡ್ ನ್ನ ಸ್ಥಾನವನ್ನು ಹೊಂದಿದ್ದಾರೆ.ಜಿಟಿವಿ ಈಗ ಬೆಂಗಳೂರಿನ ೫೯ ಎಕರೆ ತಂತ್ರಜ್ಞಾನ ಅಕ್ಯುಬೇಟರ್ ಪಾರ್ಕ್ ನಲ್ಲಿ ಜಾಗತಿಕ ತಂತ್ರಜ್ಞಾನ ಗ್ರಾಮವನ್ನು ಸ್ಥಾಪಿಸಿದೆ. ಅದು ಕಛೇರಿ ಸ್ಥಳ, ಸಂವಹನ ಸಂಪರ್ಕಗಳು, ಮನರಂಜನಾ ಸೌಲಭ್ಯಗಳು ಮತ್ತು ವಾಣಿಜ್ಯ ಕೇಂದ್ರವನ್ನು ಒದಗಿಸುತ್ತದೆ.ಸಿದ್ದಾರ್ಥ ರವರು ೩೦೦೦ ಎಕರೆ ಜಾಗದಲ್ಲಿ ಬಾಳೆಮರಗಳನ್ನು ಬೆಳೆಸಿ ಬಾಳೆ ಹಣ್ಣುಗಳನ್ನು ರಫ್ತು ಮಾಡಲು ಯೋಜಿಸಿದ್ದಾರೆ.

ವೇ ೨ ವೆಲ್ತ್[ಬದಲಾಯಿಸಿ]

ವೇ ೨ ವೆಲ್ತ್ ಬ್ರೋಕರ್ಸ್ ಪ್ರೈ ಲಿಮಿಟೆಡ್ ಹೂಡಿಕೆ ಸಲಹಾ ಸಂಸ್ಥೆಯಾಗಿದ್ದು ಇದು ಚಿಲ್ಲರೆ ಮತ್ತು ಸಾಂಸ್ಥಿಕ ಗ್ರಾಹಕರ ಆರ್ಥಿಕ ಅಗತ್ಯಗಳನ್ನು ಪೂರೈಸುತ್ತದೆ. ಇದು ಭಾರತದ ಎಲ್ಲಾ ಪ್ರಮುಖ ರಾಷ್ಟ್ರೀಯ ವಿನಿಮಯ ಕೇಂದ್ರಗಳಾದ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್, ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನ್ಯಾಷನಲ್ ಕಮೊಡಿಟಿ ಮತ್ತು ಡೆರಿವೆಟಿವ್ಸ್ ಎಕ್ಸ್ ಚೇಂಜ್ ಲಿಮಿಟೆಡ್, ಮಲ್ಟಿ ಕಮೊಡಿಟಿ ಎಕ್ಸ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಎಂ ಸಿ ಎಕ್ಸ್ ಸ್ಟಾಕ್ ಎಕ್ಸ್ ಚೇಂಜ್ ಲಿಮಿಟೆಡ್ ಕಂಪೆನಿಯ ವ್ಯಾಪಕ ಶ್ರೇಣಿಯ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ ಅವುಗಳೆಂದರೆ ಟ್ರೇಡಿಂಗ್, ಮ್ಯೂಚುಯಲ್ ಫಂಡ್ ಗಳು, ಇನ್ಶುರೆನ್ಸ್, ಫೈನಾನ್ಷಿಯಲ್ ಪ್ಲಾನ್ನಿಂಗ್, ಸಾಲಗಳು ಮತ್ತು ರಿಯಲ್ ಎಸ್ಟೇಟ್ ಸಲಹಾ ಹೂಡಿಕೆ ಉತ್ಪನ್ನಗಳ ವಿಭಾಗದಲ್ಲಿ ಕಂಪನಿಯು ಮ್ಯೂಚುಯಲ್ ಫಂಡ್ ವಿತರಣೆಗಳನ್ನು ಪೂರೈಸುತ್ತದೆ. ಖಾತೆ ತೆರೆಯುವ ಕಾರ್ಯ ವಿಧಾನಗಳು, ಪರಿಣಿತ ಸಲಹೆ ಮತ್ತು ಸಂಶೋಧನೆಯೊಂದಿಗೆ ಗ್ರಾಹಕರಿಗೆ ಸಹಾಯ ಮಾಡಲು ಅದರದೇ ಆದ ವಿಶೇಷವಾದ ಕಾರ್ಪೊರೇಟ್ ಸಲಹಾ ಮೇಜಿದೆ. ರಾಜೀವ್ ಗಾಂಧಿ ಇಕ್ವಿಟಿ ಸೇವಿಂಗ್ ಸ್ಕೀಮ್, ಪೈನಾನ್ಷಿಯಲ್ ಅಡ್ವೈಸರಿ ಸರ್ವೀಸಸ್, ಎನ್ ಆರ್ ಐ ಸೇವೆಗಳು, ನ್ಯಾಷನಲ್ ಪೆನ್ಷನ್ ಸಿಸ್ಟಮ್ ಸೇರಿದಂತೆ ಇತರ ಹೂಡಿಕೆ ಉತ್ಪನ್ನಗಳು ಮತ್ತು ಸೇವೆಗಳು ಸೇರಿವೆ.

ವೇ ೨ ವೆಲ್ತ್ ತನ್ನ ಸಮೂಹ ಕಂಪೆನಿಯ ವೇ ೨ ವೆಲ್ತ್ ವಿಮಾ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ವಿಮೆ ಒದಗಿಸುತ್ತದೆ ಇದು ಜೀವ ವಿಮೆ ಮತ್ತು ಸಾಮಾನ್ಯ ವಿಮೆ ಎರಡರಲ್ಲೂ ಕಾರ್ಯ ನಿರ್ವಹಿಸುತ್ತದೆ. ಇದರ ಸಮೂಹ ಕಂಪೆನಿ ವೇ ೨ ವೆಲ್ತ್ ಕ್ಯಾಪಿಟಲ್ ಪ್ರೈ ಲಿಮಿಟೆಡ್ ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ನೊಂದಾಯಿಸಲ್ಪಟ್ಟಿರುವ ನಾನ್ ಬ್ಯಾಂಕಿಂಗ್ ಫೈನಾನ್ಶಿಯಲ್ ಕಂಪೆನಿಯನ್ನು ತೆಗೆದುಕೊಳ್ಳುವ ನಾನ್ ಡಿಪಾಸಿಟ್ ಆಗಿದೆ.ಇದು ಮಾರ್ಜಿನ್ ಟ್ರೇಡ್ ಫೈನಾನ್ಸಿಂಗ್ ಸಾಲಗಳ ವಿರುದ್ಡ ಸಾಲ ಮತ್ತು ಮ್ಯೂಚುಯಲ್ ಫಂಡ್ ಘಟಕಗಳು ಮತ್ತು ಐ.ಪಿ.ಒ. ಹಣಕಾಸು ಒದಗಿಸುತ್ತದೆ. ವೇ ೨ ವೆಲ್ತ್ ೨೦೧೦ ರಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಂದಿತು.

ಇದು ಕರ್ನಾಟಕದ ಚಿಕ್ಕಮಗಳೂರಿನಲ್ಲಿ ೬,೦೦,೦೦೦ ಚದರ ಅಡಿ ಕಾರ್ಖಾನೆಯನ್ನು ನಿರ್ಮಿಸುವ ಮೂಲಕ ಪೀಠೋಪಕರಣಗಳಿಗೆ ಪ್ರವೇಶಿಸುತ್ತಿದೆ. ಇದು ಡಾರ್ಕ್ ಫಾರೆಸ್ಟ್ ಪೀಠೋಪಕರಣಗಳ ಕಂಪನಿ ಎಂಬ ಹೆಸರಿನ ಪೀಠೋಪಕರಣ ಕಂಪನಿಯಾಗಿದೆ. ಇದು ಭಾರತದಲ್ಲಿನ ಕಾಫೀ ತೋಟಗಳಿಂದ ಮತ್ತು ಗಯಾನಾದಲ್ಲಿ ಮಳೆಕಾಡುಗಳಿಂದ ಮರಗಳನ್ನು ಬಳಸುತ್ತದೆ. ಇದು ಆರಂಭದಲ್ಲಿ ಕೆಫೆ ಕಾಫೀ ಡೇ ಮಳಿಗೆಗಳಿಗೆ ಪೀಠೋಪಕರಣಗಳನ್ನು ಪೂರೈಸಲು ಯೋಜಿಸಿದೆ.

ಉಲ್ಲೇಖಗಳು[ಬದಲಾಯಿಸಿ]

[೧] [೨] [೩] [೪]

  1. <https://en.wikipedia.org/wiki/V._G._Siddhartha
  2. https://www.bloomberg.com/research/stocks/private/person.asp?personId=3574072&privcapId=51521359
  3. https://www.forbes.com/profile/vg-siddhartha/#5755bac5343c
  4. https://www.rediff.com/business/report/for-ccds-vg-siddhartha-brewing-fortunes-is-second-nature/20190210.htm