ಸದಸ್ಯ:Acharya Manasa/Metalampra italica
Acharya Manasa/Metalampra italica | |
---|---|
Metalampra italica | |
Dorsal view | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | M. italica
|
Binomial name | |
Metalampra italica Baldizzone, 1977
|
ಮೆಟಾಲಂಪ್ರಾ ಇಟಾಲಿಕಾ ಓಕೋಫೊರಿಡೆ ಕುಟುಂಬದ ಪತಂಗವಾಗಿದ್ದು ಇಟಲಿಯಲ್ಲಿ ಸ್ಥಳೀಯವೆಂದು ಪರಿಗಣಿಸಲಾಗಿತ್ತು, ಇದನ್ನು ಮೂಲತಃ ೧೯೭೭ ರಲ್ಲಿ ಬಾಲ್ಡಿಜೋನ್ ವಿವರಿಸಿದರು. ಆದರೆ ಇದು ಈಗ ಇತರ ಯುರೋಪಿಯನ್ ದೇಶಗಳಲ್ಲಿ ಕೂಡ ಕಂಡುಬರುತ್ತದೆ.
ವಿತರಣೆ
[ಬದಲಾಯಿಸಿ]ಫೌನಾ ಯುರೋಪಿಯಾವು ೨೦೧೩ ರಲ್ಲಿ ಇಟಲಿಯಿಂದ ಮಾತ್ರ ಜಾತಿಗಳನ್ನು ಉಲ್ಲೇಖಿಸಿದ್ದರೂ [೧] ಈ ಪ್ರಭೇದವು ಉತ್ತರದಲ್ಲಿ ಅದಕ್ಕಿಂತ ಹಿಂದೆಯೇ ಇತ್ತು ಎಂಬುದು ಸ್ಪಷ್ಟವಾಗಿದೆ.
೨೦೦೩ ರಲ್ಲಿ ಡೆವೊನ್‌ನಲ್ಲಿ ಈ ಪ್ರಭೇದವನ್ನು ಕಂಡುಹಿಡಿಯಲಾಯಿತು ನಂತರ ಈ ಪ್ರಭೇದವು ಇಂಗ್ಲೆಂಡ್ ಮತ್ತು ವೇಲ್ಸ್‌ನ ದಕ್ಷಿಣದಲ್ಲಿರುವ ಅನೇಕ ಇತರ ದೇಶಗಳಲ್ಲಿ ಸಹ ಎದುರಾಗಿದೆ. ಈ ಪ್ರಭೇದವು ಇತ್ತೀಚೆಗೆ ಕ್ರೊಯೇಷಿಯಾ, ಜರ್ಮನಿ, ಫ್ರಾನ್ಸ್, ನೆದರ್‌ಲ್ಯಾಂಡ್ಸ್‌ನಲ್ಲಿ ದಾಖಲಾಗಿದೆ. ಅಲ್ಲಿ ಇದನ್ನು ಮೊದಲು ೧೯೮೫ರಲ್ಲಿ ಕಂಡುಹಿಡಿಯಲಾಯಿತು. ಆದರೆ ಎಮ್. ಸಿನ್ನಮೋಮಿಯಾ ಎಂದು ತಪ್ಪಾಗಿ ಗುರುತಿಸಲಾಗಿದೆ. ಸ್ವಿಟ್ಜರ್ಲೆಂಡ್ ಮತ್ತು ಬೆಲ್ಜಿಯಂ ಮತ್ತು ಅದರ ವ್ಯಾಪ್ತಿಯನ್ನು ಹರಡುತ್ತಿದೆ.
ಎಮ್. ಇಟಾಲಿಕಾದ ಮಾದರಿಯನ್ನು ಕೆಲವೊಮ್ಮೆ ಹೆಚ್ಚು ವ್ಯಾಪಕವಾದ ಮೆಟಾಲಂಪ್ರಾ ಸಿನ್ನಮೋಮಿಯಾ ಎಂದು ತಪ್ಪಾಗಿ ಹೆಸರಿಸಲಾಗುತ್ತದೆ. ಎಮ್. ಇಟಾಲಿಕಾ ಮುಂಭಾಗದ ರೆಕ್ಕೆಯು ಮೂಲ ಬಣ್ಣದಲ್ಲಿ ಭಿನ್ನವಾಗಿರುತ್ತದೆ. ಎಮ್. ಇಟಾಲಿಕಾ ಇತ್ತೀಚೆಗೆ ಮಧ್ಯ ಯುರೋಪ್‌ನಲ್ಲಿ ಕಂಡುಬಂದಿದೆಯೇ ಅಥವಾ ಅದರ ಉಪಸ್ಥಿತಿಯು ಇಲ್ಲಿಯವರೆಗೆ ಗಮನಿಸದೇ ಉಳಿದಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಕನಿಷ್ಠ ಪಕ್ಷ ಎಮ್. ಸಿನ್ನಮೋಮಿಯಾ ಎಂದು ಮಾದರಿಗಳನ್ನು ತಪ್ಪಾಗಿ ಗುರುತಿಸುವ ಕಾರಣದಿಂದಾಗಿ ಸಂಗ್ರಹಣೆಗಳಲ್ಲಿ ಇಂತಹ ತಪ್ಪು ಗುರುತಿಸುವಿಕೆಯ ಬಹು ಘಟನೆಗಳು ಸಂಭವಿಸಿದೆ.
ಆವಾಸಸ್ಥಾನ
[ಬದಲಾಯಿಸಿ]ಈ ಜಾತಿಯ ಚಿಟ್ಟೆಗಳು ಹೆಚ್ಚಾಗಿ ಎಲೆ ಉದುರುವ ಕಾಡಿನಲ್ಲಿ ಕಂಡುಬರುತ್ತವೆ.
ಗೋಚರತೆ
[ಬದಲಾಯಿಸಿ]ಮೆಟಾಲಂಪ್ರಾ ಇಟಾಲಿಕಾದ ರೆಕ್ಕೆಗಳು ೧೦-೧೪ಮಿಮೀ ವರೆಗೂ ಬೆಳೆಯುತ್ತದೆ. ಈ ಪತಂಗಗಳು ಪ್ರಕಾಶಮಾನವಾದ ಕೆಂಪು ಕಂದು ಬಣ್ಣದ ಮುಂಭಾಗದ ರೆಕ್ಕೆಗಳನ್ನು ಹೊಂದಿದ್ದು ಬದಿಗಳಲ್ಲಿ ಮತ್ತು ಎದೆಯ ಮೇಲೆ ವ್ಯತಿರಿಕ್ತವಾದ ತೆಳು ಹಳದಿ ಉದ್ದನೆಯ ಪಟ್ಟೆಗಳನ್ನು ಹೊಂದಿರುತ್ತವೆ. ಆಂಟೆನಾಗಳು ತಿಳಿ ಉಂಗುರಗಳೊಂದಿಗೆ ಗಾಢ ಕಂದು ಬಣ್ಣದಲ್ಲಿರುತ್ತವೆ ಮತ್ತು ಹಿಂಭಾಗದ ರೆಕ್ಕೆಗಳು ಬೂದು ಬಣ್ಣದಲ್ಲಿರುತ್ತವೆ. [೨]
ಈ ಪ್ರಭೇದವು ಮೆಟಾಲಂಪ್ರಾ ಸಿನ್ನಮೋಮಿಯಾಗೆ ಸ್ವಲ್ಪಮಟ್ಟಿಗೆ ಹೋಲುತ್ತದೆ ಆದರೆ ತಾಜಾ ಮಾದರಿಗಳನ್ನು ಮುಂಭಾಗದ ರೆಕ್ಕೆಯ ಮೂಲ ಬಣ್ಣದಿಂದ ಪ್ರತ್ಯೇಕಿಸಬಹುದು. ಎರಡೂ ಪ್ರಭೇದಗಳು ಮೂಲ ಬಣ್ಣವಾಗಿ ಕಂದು ಬಣ್ಣದ ಛಾಯೆಯನ್ನು ಹೊಂದಿರುತ್ತವೆ ಆದರೆ ಎಮ್. ಇಟಾಲಿಕಾವು ಹೆಚ್ಚು ಕೆಂಪು ಕಂದು ಬಣ್ಣವನ್ನು ಹೊಂದಿರುತ್ತದೆ. ಎಮ್. ಸಿನಮೋಮಿಯಾವು ಬೂದು ಮಿಶ್ರಿತ ಕಂದು ಬಣ್ಣವನ್ನು ಹೊಂದಿರುತ್ತದೆ. ಎಮ್. ಇಟಾಲಿಕಾದ ಮೂಲ ಬಣ್ಣವು ಎಮ್. ಸಿನ್ನಮೋಮಿಯ ಬಣ್ಣಕ್ಕಿಂತ ತಿಳಿಯಾಗಿರುತ್ತದೆ. ಪರಿಣಾಮವಾಗಿ ಮುಂಭಾಗದ ರೆಕ್ಕೆಗಳ ಮೇಲಿನ ಹಳದಿ ಗುರುತುಗಳು ಎಮ್. ಸಿನಮೋಮಿಯಾದಲ್ಲಿ ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತವೆ. ಇವುಗಳ ಜಾತಿಗಳನ್ನು ಅವುಗಳ ಜನನಾಂಗಗಳಿಂದಲೂ ಪ್ರತ್ಯೇಕಿಸಬಹುದು.
ನಡವಳಿಕೆ ಮತ್ತು ಹೋಸ್ಟ್ ಸಸ್ಯಗಳು
[ಬದಲಾಯಿಸಿ]ಲಾರ್ವಾಗಳು ಕೊಳೆಯುತ್ತಿರುವ ಮರವನ್ನು ತಿನ್ನುತ್ತವೆ ಸಾಮಾನ್ಯವಾಗಿ ಕ್ವೆರ್ಕಸ್ ಎಸ್ಪಿಪಿ., ತೊಗಟೆಯ ಕೆಳಗೆ ಮತ್ತು ಹಲವಾರು ಜಾತಿಯ ಶಿಲೀಂಧ್ರಗಳ ಬಳಿ ಅವುಗಳು ಸಡಿಲವಾದ ಬಲೆಯನ್ನು ನೇಯ್ಗೆ ಮಾಡುತ್ತವೆ. ಲಾರ್ವಾಗಳ ಆಹಾರದ ಮೂಲವು ಮರ, ತೊಗಟೆ, ಶಿಲೀಂಧ್ರಗಳು ಅಥವಾ ಅದರ ಮಿಶ್ರಣವೇ ಎಂಬುದು ಅಸ್ಪಷ್ಟವಾಗಿದೆ. ಲಾರ್ವಾಗಳು ಶರತ್ಕಾಲದಿಂದ ಮೇ ವರೆಗೆ ಹಾಗೆಯೇ ಜುಲೈನಲ್ಲಿ ಕಂಡುಬರುತ್ತವೆ. ವಯಸ್ಕರು ಮೇ ಅಂತ್ಯದಿಂದ ಜುಲೈ ವರೆಗೆ ಮತ್ತು ಮತ್ತೆ ಆಗಸ್ಟ್ನಲ್ಲಿ ಕಂಡುಬರುತ್ತವೆ. ಹಗಲು ರಾತ್ರಿ ಎರಡು ಹೊತ್ತಿನಲ್ಲೂ ಹಾರಾಟ ನಡೆಸುತ್ತವೆ. [೨]
ಉಲ್ಲೇಖಗಳು
[ಬದಲಾಯಿಸಿ]- ↑ Fauna europaea
- ↑ ೨.೦ ೨.೧ ಉಲ್ಲೇಖ ದೋಷ: Invalid
<ref>
tag; no text was provided for refs namedNRM
ಉಲ್ಲೇಖ ದೋಷ: <ref>
tag with name "UKMoths" defined in <references>
is not used in prior text.
ಉಲ್ಲೇಖ ದೋಷ: <ref>
tag with name "Baldizzone" defined in <references>
is not used in prior text.
ಉಲ್ಲೇಖ ದೋಷ: <ref>
tag with name "Phegea" defined in <references>
is not used in prior text.
<ref>
tag with name "Melanargia" defined in <references>
is not used in prior text.ಬಾಹ್ಯ ಕೊಂಡಿಗಳು
[ಬದಲಾಯಿಸಿ]- Lepiforum.de (in German)