ಸದಸ್ಯ:ASHOKA P T

ವಿಕಿಪೀಡಿಯ ಇಂದ
Jump to navigation Jump to searchಬಾಲ್ಯ[ಬದಲಾಯಿಸಿ]

ಕರ್ನಾಟಕ, ತಾಯಿನಾಡು

ನನ್ನ ಹೆಸರು ಅಶೋಕ ಪಿ ಟಿ. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ,ಬಾಗೇಪಲ್ಲಿ ತಾಲ್ಲೂಕಿನ,ಪಾತಕೋಟೆ ಎಂಬ ಗ್ರಾಮದಲ್ಲಿ ಚಿನ್ನತಿಪ್ಪಣ್ಣ ಮತ್ತು ಲಕ್ಷ್ಮೀದೇವಮ್ಮ ದಂಪತಿಗಳಿಗೆ ೨೦೦೦ನೇ ಇಸವಿಯ ಏಪ್ರಿಲ್ ೫ನೇ ತಾರೀಖಿನಂದು ಜನನವಾಯಿತು.ಬಾಲ್ಯದಲ್ಲಿಯೇ ದೈವಭಕ್ತಿ ಮನಸ್ಸಿನಲ್ಲಿ ಅಚ್ಚೊಚ್ಚಿತು.ತಂದೆ-ತಾಯಿಗಳೇ ಜೀವನ ಎಂದು ತಿಳಿದು ಬೆಳೆದವ ನಾನು.ಅಕ್ಕ ಶಿವಮ್ಮ.ಅಕ್ಕ ಎಂದರೆ ಅಪಾರವಾದ ಪ್ರೀತಿ. ಚಿಕ್ಕಂದಿನಲ್ಲೇ ಈಜು,ಸೈಕಲ್ ಸವಾರಿ ಕಲಿತೆ.ಜೀವನದಲ್ಲಿ ಮೊದಲ ಬಾರಿಗೆ ಶಾಲೆಗೆ ಸೇರಿಸಿದರು.ಶ್ರೀರಾಮನ್ ಮಾಸ್ತರರು ಅಕ್ಷರ ಕಳುಹಿಸಿದರು.೧ನೇ ತರಗತಿಯಿಂದಲೇ ಎಲ್ಲ ವಿಷಯಗಳಲ್ಲಿ ಮುಂದಿರುತ್ತಿದ್ದೆ.೨ನೆ ತರಗತಿ ಮಗಿಸಿಕೊಂಡು,ಕುಟುಂಬದೊಂದಿಗೆ ಬೆಂಗಳೂರಿಗೆ ವಲಸೆ ಬರಲಾಯಿತು.

ಪ್ರೈಮರಿ ಶಾಲೆ [ಬದಲಾಯಿಸಿ]

ಪಂಚಲಿಂಗ ದೇವಸ್ತಾನ, ತಲಕಾಡು

ಹೊಂಗಸಂದ್ರ ಸರ್ಕಾರಿ ಶಾಲೆಗೆ ೩ನೇ ತರಗತಿಗೆ ಸೇರಿಕೊಂಡೆ.ಆ ಶಾಲೆಯಲ್ಲಿ ನನ್ನ ಜೀವನ ಮೊಗ್ಗು ಅರಳಿ ಹೂವಾಗುವಂತೆ ಅರಳಿತು.ರೇಣುಕಮ್ಮ ಎಂಬ ಶಿಕ್ಷಕಿ ಜೀವನಕ್ಕೆ 'ಐಎಎಸ್' ಗುರಿಯನ್ನು ಕೊಟ್ಟರು.ಎಲ್ಲಾ ಶಿಕ್ಷಕರ ಮುದ್ದು ವಿದ್ಯಾರ್ಥಿಯಾಗಿ ಅನೇಕ ಕನಸುಗಳನ್ನು ನನಸಾಗಿಸಿಕೊಳ್ಳಬೇಕೆಂದು ಯೋಚಿಸುತ್ತಿದ್ದೆ.೮ನೇ ತರಗತಿಯವರೆಗೆ ಆ ಶಿಕ್ಷಕರು ನನ್ನನ್ನು ಬುದ್ಧಿವಂತನನ್ನಾಗಿ ಮಾಡಿದರು

ಪ್ರೌಢ ಶಾಲೆ[ಬದಲಾಯಿಸಿ]

ನನ್ನ ಶಾಲೆ

೯ನೇ ತರಗತಿಗೆ ವಾಸವಿರುವ ಊರಿನಿಂದ ೫ ಕಿ.ಮೀ. ದೂರದ ಮಡಿವಾಳ ಸರ್ಕಾರಿ ಪ್ರೌಢಶಾಲೆಗೆ ಸ್ನೇಹಿತರೊಂದಿಗೆ ಸೇರಿಕೊಂಡೆ.೯ನೇ ತರಗತಿಯಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಅನೇಕ ಬಹುಮಾನಗಳನ್ನು ಪಡೆದುಕೊಂಡೆ.ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಿದರು.ಶಾಲಾ ಪಾರ್ಲಿಮೆಂಟಿನಲ್ಲಿ ೨ ವರ್ಷ ಮುಖ್ಯಮಂತ್ರಿಯಾಗಿದ್ದೆ.ಶಾಲೆಯಿಂದ ನಂದಿ ಬೆಟ್ಟಕ್ಕೆ ಪ್ರವಾಸ ಹೋಗಿದ್ದೆವು. ೯ನೇ ತರಗತಿ ಮುಗಿಸಿ ೧೦ನೇ ತರಗತಿಗೆ ‌ನವ ಉತ್ಸಾಹದೊಂದಿಗೆ ಕಾಲಿಟ್ಟೆವು.ಅಲ್ಲಿ ಡಿಎಸ್ಎಸ್,ಸಿಎನ್ಎನ್,ಎಎಸ್ಬಿ ಶಿಕ್ಷಕರು ಜೀವನದ ನಿಜವಾದ ಅರ್ಥ ತಿಳಿಸಿದರು.ಉತ್ತಮ ವಿದ್ಯಾಭ್ಯಾಸ ಮಾಡುವುದರ ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿದೆವು.ಈ ಬಾರಿ ತಲಕಾಡು, ಶ್ರೀರಂಗಪಟ್ಟಣ,ನಂಜನಗೂಡಿಗೆ ಪ್ರವಾಸ ಕೈಗೊಂಡಿದ್ದೆವು. ಶಾಲಾ ಜೀವನದ ಪ್ರತಿಯೊಂದು ಹಂತದಲ್ಲೂ ಅನೇಕ ಉತ್ತಮ ಗೆಳೆಯರನ್ನು ಪಡೆದುಕೊಂಡೆ.ಕಿರಣ್,ಪವನ್,ಮೋಹನ್,ನಿಖಿಲ್,ವಿಕ್ರಮ್ ಮತ್ತು ನಾನು ಆಪ್ತ ಮಿತ್ರರು.ಇವರೊಂದಿಗಿನ ಶಾಲಾ ಜೀವನ ಮರೆಯಲಾಗದು.ಶಾಲಾ ಕ್ರಿಕೆಟ್ ತಂಡವನ್ನು ಕಟ್ಟಿ,ಪಿ.ಟಿ.ಸರ್ ನೆರವಿನಿಂದ ಕೆ.ಎಸ್.ಸಿ.ಎ.ಪಂದ್ಯಗಳನ್ನು ಆಡಿದೆವು.ಆ ತಂಡದ ನಾಯಕತ್ವ ಜವಾಬ್ದಾರಿ ನಾನೆ ವಹಿಸಿಕೊಂಡಿದ್ದೆ. ಎಲ್ಲಾ ಶಿಕ್ಷಕರು ನಮ್ಮ ಜೀವನ ಸುಂದರವಾಗಿರಬೇಕೆಂದು ವಿಶೇಷ ತರಗತಿಗಳನ್ನು ಪ್ರಾರಂಭಿಸಿ, ನಮಗೆ ಒಳ್ಳೆಯ ವಿದ್ಯೆಯನ್ನು ಕಳುಹಿಸಿದರು.ಪರೀಕ್ಷೆಗಳು ಹತ್ತಿರವಾದಂತೆ ಎಲ್ಲರ ಗಮನ ಓದುವ ಕಡೆಗೆ ಹೋಯಿತು.ಕಾಲ ಹೊರಳಿದ್ದೆ ತಿಳಿಯದಂತೆ ಪರೀಕ್ಷೆಗಳು ಬಂದೇ ಬಿಟ್ಟವು,ಎಲ್ಲರೂ ಪರೀಕ್ಷೆ ಬರೆದು ಮುಗಿಸೇಬಿಟ್ಟೆವು.೫೩೯ ಅಂಕಗಳನ್ನು ಪಡೆಯುವುದರೊಂದಿಗೆ ಶಾಲೆಯಲ್ಲೇ ಅತಿ ಹೆಚ್ಚು ಅಂಕಗಳನ್ನು ಪಡೆದವನಾಗಿ ಉತ್ತೀರ್ಣನಾದೆನು.

ಪದವಿ ಪೂರ್ವ ಕಾಲೇಜು[ಬದಲಾಯಿಸಿ]

ನನ್ನ ಕಾಲೇಜು , ಶೇಶಾದ್ರಿಪುರಂ ಕಾಲೇಜು
ಜಲಧಾರೆ, ಗಗನ ಚುಕ್ಕಿ

ನನ್ನ ಎಲ್ಲಾ ಸ್ನೇಹಿತರು ಕಡಿಮೆ ಅಂಕಗಳನ್ನು ಗಳಿಸಿದರು. ಇದರಿಂದಾಗಿ ಎಲ್ಲರೂ ಒಂದೇ ಕಾಲೇಜಿಗೆ ಸೇರಲು ಸಾಧ್ಯವಾಗಲಿಲ್ಲ. ಆದರೂ ಅವರನ್ನು ಮರೆಯಲಿಲ್ಲ.ಮುಂದಿನ ವಿಧ್ಯಾಭ್ಯಾಸಕ್ಕಾಗಿ ಶೇಶಾದ್ರಿಪುರಂ ಪದವಿ ಪೂರ್ವ ಕಾಲೇಜು ಸೇರಿಕೊಂಡೆ.ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಿಂದ ಹೋದ ಏಕೈಕ ವಿದ್ಯಾರ್ಥಿ, ಆ ಆಂಗ್ಲ ವಿದ್ಯಾರ್ಥಿಗಳೊಂದಿಗೆ ಬೆರೆಯಲು ಬಹಳ ಸಮಯ ಹಿಡಿಯಲ್ಲಿಲ್ಲ.ಅಲ್ಲಿನ ಅಧ್ಯಾಪಕರ ನೆರವಿನಿಂದ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದೆ.ಕಾಲೇಜಿನಲ್ಲಿದ್ದಾಗ ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ,ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿದ್ದೆ.ಕಾಲೇಜಿನಂದ ಕಬ್ಬಾಳಮ್ಮ ಬೆಟ್ಟ,ಗಗನ ಚುಕ್ಕಿ, ಭರಚುಕ್ಕಿ,ಶಿವನಸಮುದ್ರಕ್ಕೆ ಪ್ರವಾಸ ಹೋಗಿದ್ದೆವು.ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ೯೩% ಅಂಕಗಳೊಂದಿಗೆ ಉತ್ತೀರ್ಣನಾದೆ.


ಡಿಗ್ರಿ ಕಾಲೇಜು[ಬದಲಾಯಿಸಿ]

ಕರ್ನಾಟಕದ ಪುಣ್ಯಸ್ಥಳ, ಧರ್ಮಸ್ಥಳ
ಜಗತ್ಪ್ರಸಿದ್ಧ ಜೋಗ ಜಲಪಾತ

ನನ್ನ ಶಾಲಾ ಗೆಳೆಯರೇ ನನ್ನ ಉತ್ತಮ ಗೆಳೆಯರಾಗಿದ್ದರು,ಅವರೊಂದಿಗೆ ಅನೇಕ ಸ್ಥಳಗಳಿಗೆ ಪ್ರವಾಸ ಹೋಗುತ್ತಿದ್ದೆ.ಅನೇಕ ಬೆಟ್ಟಗಳ ಚಾರಣ ಹೋಗಿದ್ದೆವು. ಪರೀಕ್ಷೆ ನಂತರ ಗೆಳೆಯರ ಜೊತೆ ಸಕಲೇಶಪುರ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮತ್ತು ಜಗತ್ಪ್ರಸಿದ್ಧ ಜೋಗ ಜಲಪಾತಕ್ಕೆ ಪ್ರವಾಸ ಹೋಗಿದ್ದೆವು. ರಜೆಯಲ್ಲಿ "ವಿಂಗ್ಸ್ ಆಫ್ ಫೈರ್",ಮೂಕಜ್ಜಿಯ ಕನಸುಗಳು,ಮಲೆಗಳಲ್ಲಿ ಮದುಮಗಳು,ಆವರಣ ಎಂಬ ಪುಸ್ತಕಗಳನ್ನು ಓದಿದೆ.ಜೀವನದ ಪ್ರತಿಯೊಂದು ಹಂತದಲ್ಲೂ, ಒಂದೊಂದು ಪಾಠವನ್ನು ಕಲಿಯುತ್ತಾ ಹೋಗುತ್ತಿದ್ದೇನೆ.ಇಂದಿಗೂ ಅಮ್ಮ ಎಂದರೆ ಪ್ರಾಣ.ಅಪ್ಪ ನನ್ನ ಬೆನ್ನ ಹಿಂದೆ ನನಗಾಗಿ ತನ್ನ ಜೀವನವನ್ನು ಸವೆಯುತ್ತಿದ್ದಾರೆ. ಪರೀಕ್ಷೆಯ ಫಲಿತಾಂಶ ಬಂದ ನಂತರ ಕ್ರೈಸ್ಟ್ ಯೂನಿವರ್ಸಿಟಿ ಗೆ ಸೇರಬೇಕೆಂದು ನಿಶ್ಚಯ ಮಾಡಿ,ಸೇರಿಕೊಂಡೆ.ಕಾಲೇಜಿನಂತೆ ಅದರ ಒಳಗಿನ ಪ್ರಪಂಚವೂ ದೊಡ್ಡದು.ಅನೇಕ ದೇಶಗಳ ವಿದ್ಯಾರ್ಥಿಗಳು ಇರುವ ಕಾಲೇಜು. ಇಲ್ಲಿನ ಅಧ್ಯಾಪಕರು ತಮ್ಮ ವಿಷಯಗಳಲ್ಲಿ ಪಾಂಡಿತ್ಯವನ್ನು ಗಳಿಸಿಕೊಂಡಿದ್ದಾರೆ.ಜೀವನದಲ್ಲಿ ಏನಾದರು ಸಾಧನೆ ಮಾಡಬೇಕೆಂದು ಜೀವನದ ಬಂಡಿಯನ್ನು ವೇಗವಾಗಿ ನಡೆಸುತ್ತಿದ್ದೇನೆ.

ಅಕ್ಕ[ಬದಲಾಯಿಸಿ]

ನನ್ನ ಜೀವನದ ಅತ್ಯಂತ ಪ್ರೀತಿಯ ವ್ಯಕ್ತಿ ನನ್ನ ಅಕ್ಕ. ಅವಳು ಎಂದರೆ ನನಗೆ ಪ್ರಾಣ. ಚಿಕ್ಕಂದಿನಲ್ಲಿ ಅವಳ ಜೊತೆಗೆ ಜಗಳವಾಡುತ್ತಿದ್ದೆ , ಆದ್ರೆ ಅವಳ ಮದುವೆ ನಂತ್ರ ಅವಳ ನೆನಪು ಸದಾ ನನ್ನನ್ನು ಕಾಡುತಿರುತ್ತದೆ. ಈಗಲೂ ಅಕ್ಕ ಅಂದರೆ ಅಮ್ಮನಿಗಿಂತ ಪ್ರೀತಿ ಹೆಚ್ಚು. ಅವಳಿಗಾಗಿ ನಾನು ಅನೇಕ ವಸ್ತುಗಳನ್ನು ಖರೀದಿಸುತ್ತೇನೆ.