ಸದಸ್ಯ:ANUSHA NAYAK/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

ಇದು ಲುಮಾಸಿಯಾ ಕುಟುಂಬಕ್ಕೆ ಸೇರಿದ ಜಾತಿಯಾಗಿದೆ. ಈ ಸಸ್ಯವು ಆಯಾ ಪ್ರದೇಶಗಳಿಗನುಗುಣವಾಗಿ ಅನೇಕ ಹೆಸರುಗಳನ್ನು ಹೊಂದಿದೆ. ಸಾಮಾನ್ಯವಾಗಿ ತುಂಬೆ ಎಂದು ಕರೆಯಲಾಗುತ್ತದೆ. ಈ ಸಸ್ಯವನ್ನು ಸಾಮಾನ್ಯವಾಗಿ ಕೀಟನಾಶಕವಾಗಿ ಬಳಸಲಾಗುತ್ತದೆ. ಇದು ಸಾಮಾನ್ಯವಾಗಿ ಭಾರತ, ಫಿಲೀಪೈನ್ಸ್, ಮಾರಿಷಸ್, ಮತ್ತು ಜಾವಾ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದು ಶುಷ್ಕ, ತರೆದ ಮರಳಿನ ಮಣ್ಣಿನಲ್ಲಿ ಹಾಗೂ ತ್ಯಾಜ್ಯದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು 15-16 ಸೆಂ.ಮೀ ಎತ್ತರವನ್ನು ತಲುಪುತ್ತದೆ. ಇದರ ಹೂವುಗಳೂ ಕೂಡ ಔಷಧೀಯ ಗುಣಗಳನ್ನು ಹೊಂದಿದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಹಾಗೂ ಕೀಟನಾಶಕವಾಗಿ ಇದು ಪರಿಹಾರ ಒದಗಿಸುತ್ತದೆ. ಇದರ ಎಲೆಗಳು ದೀರ್ಘ ಕಾಲದ ಸಂಧಿವಾತ ಹಾಗೂ ದೀರ್ಘಕಾಲದ ಚರ್ಮರೋಗಗಳಿಗೆ ಉಪಯುಕ್ತವಾಗಿದೆ. ಇದರ ಎಲೆಗಳನ್ನು ಹಾವಿನ ಕಡಿತಕ್ಕೊಳಗಾದ ಜಾಗಕ್ಕೆ ಮದ್ದಾಗಿ ಬಳಸಲಾಗುತ್ತದೆ.

ಇತರ ಹೆಸರುಗಳು[ಬದಲಾಯಿಸಿ]

ಸಂಸ್ಕೃತ- ದ್ರೋಣಪುಷ್ಪ, ಚಿತ್ರಪತ್ರಿಕಾ ಪಂಜಾಬಿ- ಗುಲ್ಡೋರಾ ಬೆಂಗಾಲಿ- ಡರುನಾಫುಲಾ, ಹುಲ್ಕಶಾ ಗುಜರಾತಿ- ಕುಲ್ಟುಲ್ ಹಿಂದಿ- ಮಧುಮತಿ ಸಿಂಧಿ- ಕುಬೋ ಮಹಾರಾಷ್ಟ್ರ- ಬಾಹುಫುಲ್ ಬಾಂಬೆ- ತುಂಬಾ ತೆಲುಗು- ತುನ್ನಿ

ಲಕ್ಷಣಗಳು[ಬದಲಾಯಿಸಿ]

ಎಲೆ[ಬದಲಾಯಿಸಿ]

ಈ ಸಸ್ಯದ ಎಲೆಗಳು ಅಭಿಮುಖ, ರೇಖಾತ್ಮಕ ಹಾಗೂ ಚೂಪು ತುದಿಯನ್ನು ಹೊಂದಿದೆ. ಹಾಗೂ ತಳಭಾಗದಲ್ಲಿ ಕಿರಿದಾಗಿದೆ. ಇದು ಸಾಮಾನ್ಯವಾಗಿ 8 ಸೆಂ.ಮೀ ಉದ್ದ ಹಾಗೂ 1.25ಸೆಂ.ಮೀ ಅಗಲವಾಗಿರಬಹುದು. ತೊಟ್ಟುಗಳ ಉದ್ದವು ಸಾಮಾನ್ಯವಾಗಿ 2.5 ಮಿ.ಮೀ ಉದ್ದವನ್ನು ಹೊಂದಿರುತ್ತದೆ. ಎಲೆಗಳು ದಪ್ಪ ಮೇಣದ ಕೋಶಗಳಿಂದ ಮುಚ್ಚಲ್ಪಟ್ಟಿರುತ್ತವೆ.

ಕಾಂಡ[ಬದಲಾಯಿಸಿ]

ಕಾಂಡವು ಚತುರ್ಭುಜ, ಹೆಚ್ಚು ಕವಲೊಡೆದ ರೀತಿಯಲ್ಲಿ ಇರುತ್ತದೆ. ಎಪಿಡರ್ಮಿಸ್ ಮೇಣದ ಕೋಶಗಳಿಂದ ಮುಚ್ಚಲ್ಪಟ್ಟಿರುತ್ತದೆ. ಹಾಗು ಕೆಲವು ಅಡ್ಡ ಹಾಯುವ ಸ್ಟೊಮಾಟಾಗಳನ್ನು ಹೊಂದಿರುತ್ತದೆ. ಕಿರಿಯ ಕಾಂಡಗಳಲ್ಲಿ ವಿಶಿಷ್ಟವಾದ ಕ್ಸೈಲಂಗಳು ಸಂಘಟಿತವಾಗಿರುತ್ತದೆ. ಕಾಂಡ ಬಹಳ ಕಿರಿದಾಗಿದೆ. ಕಾಂಡದ ವಯಸ್ಸು ಹೆಚ್ಚಿದಂತೆ, ಅಂಗಾಂಶವು ವಿಸ್ತಾರಗೊಳ್ಳುತ್ತ ಹೋಗುತ್ತದೆ.

ಬೇರು[ಬದಲಾಯಿಸಿ]

ಈ ಗಿಡದ ಬೇರುಗಳು ಎಪಿಡರ್ಮಲ್ ಕೋಶಗಳನ್ನು ಹೊಂದಿದ್ದು, ಅವು ಅತ್ಯಂತ ಕಿರಿದಾದ ಮತ್ತು ಒಟ್ಟಿಗೆ ಜೋಡಿಸಲ್ಪಟ್ಟಿರುತ್ತವೆ. ಇದರ ಜೀವಕೋಶದ ಗೋಡೆಗಳು ತುಂಬಾ ತೆಳು, ಚಪ್ಪಟೆ ಹಾಗೂ ನೇರವಾಗಿರುತ್ತದೆ.

ಹೂ ಮತ್ತು ಹಣ್ಣುಗಳು[ಬದಲಾಯಿಸಿ]

ಹೂಗಳು ಬಿಳಿ ಬಣ್ಣದ್ದಾಗಿದ್ದು ನೇರವಾಗಿರುತ್ತವೆ. ಇವು ಕಂದು ಬಣ್ಣದ ಕಣಗಳನ್ನು ಹೊಂದಿರುತ್ತವೆ. ಇವು ಸಂಪೂರ್ಣವಾಗಿ ಉಭಯಲಿಂಗಿಗಳಾಗಿರುತ್ತವೆ. ಈ ಸಸ್ಯದ ಹಣ್ಣುಗಳು 2.5 ಮಿ.ಮೀ ಉದ್ದವಾಗಿವೆ. ಕಂದು ಬಣ್ಣವನ್ನು ಹೊಂದಿದ್ದು ನಯವಾಗಿರುತ್ತದೆ. ಆಕಾರದಲ್ಲಿ ಚಪ್ಪಟೆಯಾಗಿರುತ್ತವೆ. ಆಂತರಿಕ ಭಾಗ ಕೋನೀಯವಾಗಿದ್ದು ಹಣ್ಣಿನ ಹೊರಭಾಗವು ದುಂಡಾಗಿರುತ್ತದೆ.

ಪ್ರಯೋಜನಗಳು[ಬದಲಾಯಿಸಿ]

ಆಹಾರದಲ್ಲಿ ಸುವಾಸನೆಯನ್ನು ಒದಗಿಸಲು ಬಳಸಲಾಗುತ್ತದೆ. ಇದನ್ನು ಉತ್ಕರ್ಷಣ ನಿರೋಧಕವಾಗಿಯೂ ಬಳಸಲಾಗುತ್ತದೆ. ಚೇಳಿನ ಕಡಿತಕ್ಕೆ ಚಿಕಿತ್ಸೆಯಾಗಿ ಸಾಂಪ್ರದಾಯಿಕ ಔಷಧಿಯಾಗಿ ಇದು ಉಪಯುಕ್ತವಾಗಿದೆ. ಜ್ವರ ಕಡಿಮೆ ಮಾಡಲೂ ಕೂಡ ಇದು ಸಹಾಯಕವಾಗಿದೆ. ಮಕ್ಕಳಲ್ಲುಂಟಾಗುವ ಕರುಳಿನ ಹುಳುಕು, ಹಾಗೂ ಸೋಂಕುಗಳಿಗೆ ಈ ಸಸ್ಯದ ಹೂವಿನ ರಸವನ್ನು ಬಳಸಬಹುದು. ಇದನ್ನು ಸಾಮಾನ್ಯವಾಗಿ ಕೀಟನಾಶಕವಾಗಿ ಬಳಸಲಾಗುತ್ತದೆ.