ಸದಸ್ಯ:2240562hasumitha/ನನ್ನ ಪ್ರಯೋಗಪುಟ
ಗೋಚರ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೋರ್ನ ಅಣು ಆಕೃತಿ
ವಿಜ್ಞಾನವು ಬ್ರಹ್ಮಾಂಡದ ಬಗ್ಗೆ ಪರೀಕ್ಷಣೀಯ ವಿವರಣೆಗಳು ಮತ್ತು ಭವಿಷ್ಯವಾಣಿಗಳ ರೂಪದಲ್ಲಿ ಜ್ಞಾನವನ್ನು ನಿರ್ಮಿಸುವ ಮತ್ತು ಸಂಘಟಿಸುವ ಒಂದು ವ್ಯವಸ್ಥಿತ ಯೋಜನೆ.. ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಒಂದು ಹಳೆಯ ಮತ್ತು ನಿಕಟವಾಗಿ ಸಂಬಂಧಿತ ಅರ್ಥದಲ್ಲಿ, "ವಿಜ್ಞಾನ"ವು, ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ, ಜ್ಞಾನದ ಮಂಡಲವನ್ನೇ ನಿರ್ದೇಶಿಸುತ್ತದೆ. ಈ ಜ್ಞಾನವು ಮಾನವ ತನ್ನ ಇಂದ್ರಿಯಗಳಿಂದ ತಿಳಿಯುವಂತಿರಬೇಕು, ತರ್ಕಕ್ಕೆ ಬದ್ಧವಾಗಿರಬೇಕು ಮತ್ತು ಪರಿಶೋಧನೆಗೆ ವಿಧೇಯವಾಗಿರಬೇಕು. ಈ ಜ್ಞಾನ ಸಂಪಾದನೆಯ ವಿಧಿಯನ್ನು ವೈಜ್ಞಾನಿಕ ವಿಧಿ ಯೆಂದು ಪರಿಗಣಿಸಲಾಗುತ್ತದೆ. ವಿಜ್ಞಾನದ ವೃತ್ತಿ ನಡೆಸುವವನನ್ನು ಒಬ್ಬ ವಿಜ್ಞಾನಿಯೆಂದು ಕರೆಯಲಾಗುತ್ತದೆ.