ಸದಸ್ಯ:1840476swathi.k

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
personal

ಪರಿಚಯ[ಬದಲಾಯಿಸಿ]

ನನ್ನ ಹೆಸರು ಸ್ವಾತಿ.ಕೆ. ನಾನು ಫೆಬ್ರವರಿ ೨೩ , ೨೦೦೧ ರಂದು ಹುಟ್ಟಿದೆ . ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ ಇರುವ ಬೊಮ್ಮನಹಳ್ಳಿಯಲ್ಲಿ. ನಾನು ಬಿ.ಎಸ್.ಸಿ ವಿದ್ಯೆಯನ್ನು ಕ್ರೈಸ್ಟ ಯೂನಿವಸಿ೯ಟಿಯಲ್ಲಿ ಪಡೆದುಕೊಳ್ಳುತ್ತಿದ್ದೇನೆ. ನಾನು ಭೌತಶಾಸ್ತ್ರ , ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರವನ್ನು ಆಯ್ಕೆಮಾಡಿಕೊಂಡೆ . ನಾನು ಕನ್ನಡ ಭಾಷೆಯನ್ನು ಸಂಪೂಣ೯ವಾಗಿ ಅಥ೯ಮಾಡಿಕೊಳ್ಳಲು , ಕನ್ನಡವನ್ನು ಆಯ್ಕೆಮಾಡಿಕೊಂಡೆ.

ಶಿಕ್ಷಣ[ಬದಲಾಯಿಸಿ]

ನಾನು ಕೋರಮಂಗಲದಲ್ಲಿರುವ ಬಿ.ಮೋನ.ಪ್ರೌಢ ಶಾಲೆಯಲ್ಲಿ ನನ್ನ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸವನ್ನು ಮುಗಿಸಿದೆ.ಶಾಲೆಯಲ್ಲಿ ನಾನು ಭಾಷಾ ಚರ್ಚೆ ,ಖೊಖೊ,ಸಂಶೋಧನೆಯಲ್ಲಿ ಭಾಗವಹಿಸಿದೆ. ನಾನು ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದೆ,ಏಕೆಂದರೆ ನನಗೆ ಸಂಶೋಧನೆಯಲ್ಲಿ ಬಹಳ ಆಸಕ್ತಿ ಇತ್ತು. ನಾನು ಕಾಲೇಜಿನಲ್ಲಿ ಹಲವಾರು ಸೆಮಿನಾರ್,ಯೋಜನೆ ಮತ್ತು ಚರ್ಚೆಯಲ್ಲಿ ಭಾಗವಹಿಸಿದ್ದೆ ಮತ್ತು ಚರ್ಚೆಯಲ್ಲಿ ನಾನು ದ್ವಿತೀಯ ಬಹುಮಾನವನ್ನು ಗಳಿಸಿದ್ದೇನೆ.

ಕುಟುಂಬ[ಬದಲಾಯಿಸಿ]

ನನ್ನ ಅಮ್ಮನ ಹೆಸರು ವಳ್ಳಿ ಮತ್ತು ತಂದೆಯ ಹೆಸರು ಕಧಿರ್ ವೇಲು.ನಾನು ಎಂದೂ ಸ್ವಾತಿ ನಕ್ಷತ್ರದಂತೆ ಹೊಳೆಯಲು ,ಇವರು ನನಗೆ ಸ್ವಾತಿ ಎಂದು ಹೆಸರನ್ನು ನೇಮಿಸಿದ್ದರು. ನನ್ನ ತಂದೆ ವ್ಯಾಪಾರ ಕೆಲಸವನ್ನು ಮಾಡುತ್ತಿದ್ದಾರೆ . ನನ್ನ ತಾಯಿ ಕುಟುಂಬವನ್ನು ನೋಡಿಕೊಳ್ಲುತ್ತಾ ನನ್ನ ತಂದೆಗೆ ವ್ಯಾಪಾರದಲ್ಲಿ ಸಹಾಯ ಮಾಡುತ್ತಾರೆ. ನನ್ನ ತಂಗಿಯ ಹೆಸರು ಹಷಿ೯ಥ . ಇವರು ಹತ್ತನೆ ತರಗತಿಯಲ್ಲಿ ಓದುತಿದ್ದಾರೆ. ನನ್ನ ತಮ್ಮನ ಹೆಸರು ನವೀನ್. ಇವರು ಆರನೆಯ ತರಗತಿಯಲ್ಲಿ ಓದುತ್ತಿದ್ದಾರೆ .

ಆಸಕ್ತಿಗಳು[ಬದಲಾಯಿಸಿ]

ಚಿತ್ರ ಬಿಡಿಸುವುದು,ಕಾದಂಬರಿಗಳನ್ನು ಓದುವುದು, ಸಂಗೀತವನ್ನು ಕೇಳುವುದು, ಇವುಗಳು ನನ್ನ ಹವ್ಯಾಸಗಳಾಗಿವೆ.ನನಗೆ ತುಂಬಾ ಇಷ್ಟವಾದ ಕ್ರೀಡೆ ಎಂದರೆ, ಅದು ಬ್ಯಾಡ್ಮಿಂಟನ್.ಬ್ಯಾಡ್ಮಿಂಟನನ್ನು ಆಡುವಾಗ ಮನಸ್ಸಿಗೆ ಶಾಂತಿ ಮತ್ತು ದೇಹಕ್ಕೆ ಶಕ್ತಿ ಸಿಗುತ್ತದೆ.ನನ್ನಲ್ಲಿ ನನಗೆ ತುಂಬಾ ಇಷ್ಟವಾದ ಗುಣವೆಂದರೆ,ಅದು ಅನ್ಯರಿಗೆ ಸಹಾಯ ಮಾಡುವುದು. ನನ್ನಲ್ಲಿ ಚರ್ಚಾ ಕೌಶಲ್ಯ,ನಾಯಕತ್ವ, ಸಮಸ್ಯೆ ಪರಿಹಾರಿಸುವ ಗುಣಗಳು ಹೆಚ್ಚು ಇವೆ.ನಾನು ಪರಿಸರವನ್ನು ಬಹಳ ಪ್ರೀತಿಸುತ್ತೇನೆ.ಮರವನ್ನು ಅನುಪಯುಕ್ತವಾಗಿ ಕಡಿಯುವುದನ್ನು,ನಾನು ವಿರೋಧಿಸುತ್ತೇನೆ.ನನಗೆ ಪರಿಸರ ಒಬ್ಬ ಆದರ್ಶ ಗುರುವಾಗಿ ವರ್ತಿಸುತ್ತಿದೆ, ಉದಾಹರಣೆಗೆ ಪ್ರಾಣಿ,ಪಕ್ಷಿ,ಮರಗಳು ಒಂದು ಗೂಡಿ ಇರುತ್ತವೆಯೋ ಹಾಗೆಯೇ ನಾವು ಇರಬೇಕು ಎಂದು ಕಲಿತು ಕೊಂಡೆನು.ಹಾಗೆಯೇ ನನಗೆ ತುಂಬಾ ಇಷ್ಟವಾದ ಪ್ರಾಣಿ ನಾಯಿ, ನಾನು ಈ ಪ್ರಾಣಿಯಿಂದ ಹಲವಾರು ಒಳ್ಳೆಯ ಗುಣಗಳನ್ನು ಕಲಿತು ಕೊಂಡಿದ್ದೇನೆ.ಅವುಗಳು,ಮೊದಲಿಗೆ ಈ ಪ್ರಾಣಿಯಂತೆ ನಿಷ್ಠಾವಂತ ಆಗಿರಬೇಕು ಮತ್ತು ಅದರಂತೆ ಧೈರ್ಯವಾಗಿ ಇರಬೇಕೆಂದು ಕಲಿತ್ತಿದ್ದೇನೆ.ನನಗೆ ತುಂಬಾ ಇಷ್ಟವಾದ ವಿಷಯ ಭೌತಶಾಸ್ತ್ರ, ಏಕೆಂದರೆ ಭೌತಶಾಸ್ತ್ರದ ಒಂದೊಂದು ಅಂಗವುಕೂಡ ನಮ್ಮ ದಿನನಿತ್ಯ ಜೀವನಕ್ಕೆ ಸಂಬಂಧ ಪಟ್ಟಿರುತ್ತದೆ.ನಾನು ನನ್ನ ಶಾಲೆಯಲ್ಲಿ ರಂಗೋಲಿ,ಸಾಮಾಜಿಕ ಚರ್ಚೆ, ಚಿತ್ರಣವನ್ನು ಬಿಡಿಸುವುದು,ಹಾಡುವ ಸ್ಪರ್ಧೆ,ಕಥೆ ಹೇಳುವುದು,ನೃತ್ಯ ಮುಂತಾದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ.ಒಂದೊಂದು ಸ್ಪರ್ಧೆಯಲ್ಲಿ ನಾನು ಧೈರ್ಯ,ಚುರುಕುತನ,ತಾಳ್ಮೆ,ಏಕಾಗ್ರತೆ ಎಂಬ ಮೌಲ್ಯಗಳನ್ನು ಅಳವಡಿಸಿಕೊಂಡೆ.

ಗುರಿ[ಬದಲಾಯಿಸಿ]

ಐ.ಎ.ಎಸ್ ಅಧಿಕಾರಿ ಆಗುವುದು ನನ್ನ ಜೀವನದ ಗುರಿ ಆಗಿದೆ. ಅಧಿಕಾರಿ ಆದಮೇಲೆ ಹಲವಾರು ಬಡವರಿಗೆ ನಾನು ಸಹಾಯ ಮಾಡಬೇಕೆನ್ನುವ ಗುರಿಯನ್ನು ಪೂರ್ಣಗೊಳಿಸಲು ಇಷ್ಟಪಟ್ಟು ಕಷ್ಟಪಡುತ್ತಿದ್ದೇನೆ. ಬಡ ಮಕ್ಕಳಿಗೆ ಉಚಿತ ವಿದ್ಯೆಯನ್ನು ನೀಡುವುದು ನನ್ನ ಇಷ್ಟವಾದ ಗುರಿಯಾಗಿದೆ.ನಾನು ಪರಿಸರದ ಪ್ರೇಮಿ ಆಗಿರುವುದರಿಂದ ನಾನು ಬೀದಿ ಬೀದಿಗಳಲ್ಲೂ ಮರಗಳನ್ನು ಸಾಕುವಂತೆ ಮಾಡುತ್ತೇನೆ.ರೈತರನ್ನು ನಾನು ಬಹಳ ಪ್ರೋತ್ಸಾಹಿಸುತ್ತೇನೆ,ಅವರಿಗೆ ಬೇಕಾಗಿರುವ ಹಣ,ನೀರು ಮತ್ತು ಊಟದ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆ.ಭ್ರಷ್ಟಾಚಾರವನ್ನು ನಮ್ಮ ದೇಶದಿಂದ ಕಿತ್ತು ಹಾಕಲು ಪ್ರಯತ್ನಿಸುತ್ತೇನೆ . ನಾವು ಎಂದೂ ಧೈರ್ಯವಾಗಿ ಇರಬೇಕು, ತಪ್ಪು ಮಾಡುವವರೇ ಧೈರ್ಯದಿಂದ ಇರುವಾಗ,ಆ ತಪ್ಪನ್ನು ತಿದ್ದುವವರು ನಾವು ಆದ್ದರಿಂದ ನಮಗೆ ಅತಿ ಹೆಚ್ಚು ಧೈರ್ಯ ಇರಬೇಕು.

ನನಗೆ ತುಂಬಾ ಆದರ್ಶ ವ್ಯಕ್ತಿ ಎಂದರೆ, ಅವರು ನನ್ನ ಅಮ್ಮ ಮತ್ತು ಅಪ್ಪ.ನಾನು ನನ್ನಲ್ಲಿ ಆದ ಸಹಾಯವನ್ನು ಮಾಡುತ್ತೇನೆ.

"ಅಮ್ಮ ,ಅಪ್ಪ ,ಗುರು,ದೇವರು,ಶಿಷ್ಯ" ಇವರಿಗೆ ನಾವು ಎಂದೂ ಸೇವೆಯನ್ನು ಮಾಡಬೇಕು,ಇದು ನನ್ನ ಜೀವನದ ಕರ್ತವ್ಯವಾಗಿದೆ.ನನ್ನ ಪ್ರಕಾರ, ನಾವು ಎಂದೂ ನಮ್ಮ ಕಷ್ಟಗಳನ್ನು ಕಂಡು ಬೇಸರ ಪಡಬಾರದು,ಅವುಗಳನ್ನು ನಾವು ಧೈರ್ಯದಿಂದ ಹೊರಹೋಗಿಸಬೇಕು.

        "ಜೈ ಹಿಂದ್"

ಧನ್ಯವಾದಗಳು, ಇಂತಿ ನಿಮ್ಮ ವಿಶ್ವಾಸಿ, ಸ್ವಾತಿ.ಕೆ.