ಸತಿ ಸುಲೋಚನ
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಸತಿ ಸುಲೋಚನ | |
---|---|
ಸತಿ ಸುಲೋಚನ | |
ನಿರ್ದೇಶನ | ವೈ.ವಿ.ರಾವ್ (ಯರಗುಡಿಪಟಿ ವರದಾ ರಾವ್) |
ನಿರ್ಮಾಪಕ | ಎಸ್.ಚಮನ್‍ಲಾಲ್ ದುಂಗಾಜಿ |
ಕಥೆ | ಬೆಳ್ಳಾವೆ ನರಹರಿಶಾಸ್ತ್ರಿ |
ಸಂಭಾಷಣೆ | ಬೆಳ್ಳಾವೆ ನರಹರಿ ಶಾಸ್ತ್ರಿ |
ಪಾತ್ರವರ್ಗ | ಆರ್.ನಾಗೇಂದ್ರರಾಯ ಲಕ್ಷ್ಮೀಬಾಯಿ ಸುಬ್ಬಯ್ಯನಾಯ್ಡು, ತ್ರಿಪುರಾಂಭ, ಸಿ.ಟಿ.ಶೇಷಾಚಲಮ್, ಇಂದುಬಾಲಾ |
ಸಂಗೀತ | ಆರ್.ನಾಗೇಂದ್ರರಾಯ, ನರಹರಿ ಶಾಸ್ತ್ರಿ |
ಛಾಯಾಗ್ರಹಣ | ಸ್ಟೂಡಿಯೊ |
ಬಿಡುಗಡೆಯಾಗಿದ್ದು | ೧೯೩೪ |
ಚಿತ್ರ ನಿರ್ಮಾಣ ಸಂಸ್ಥೆ | ಸೌತ್ ಇಂಡಿಯಾ ಮೂವಿಟೋನ್ |
ಇತರೆ ಮಾಹಿತಿ | ಕನ್ನಡ ಚಿತ್ರರಂಗದ ಪ್ರಪ್ರಥಮ ಧ್ವನಿಮುದ್ರಿತ(ಟಾಕಿ) ಚಲನಚಿತ್ರ |
ಸತಿ ಸುಲೋಚನ - ವರ್ಷ ೧೯೩೪ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಮೊದಲ ವಾಕ್ಚಿತ್ರ (ಮಾತುಗಳು ಇದ್ದ ಚಿತ್ರ) ಆರ್.ನಾಗೇಂದ್ರರಾಯರು ನಾಯಕನ ಪಾತ್ರದಲ್ಲಿ ನಟಿಸಿ, ಸಂಗೀತ ನಿರ್ದೇಶಿಸಿದ್ದ ಈ ಚಿತ್ರವನ್ನು ನಿರ್ದೇಶಿಸಿದವರು ವೈ.ವಿ.ರಾವ್.
ಈ ಚಲನಚಿತ್ರವು ೧೯೩೪ರ ಮಾರ್ಚ್ ೩ರಂದು ಬಿಡುಗಡೆಯಾಗಿ ೬ ವಾರಗಳ ಯಶಸ್ವಿ ಪ್ರದರ್ಶನ ಕಂಡಿತೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ೧೯೦೫ ರಲ್ಲಿ ಆರಂಭವಾದ ಬೆಂಗಳೂರಿನ ಮೊದಲ ಚಿತ್ರಮಂದಿರ ದೊಡ್ಡಣ್ಣಹಾಲ್ (ಪ್ಯಾರಾಮೌಂಟ್) ಚಿತ್ರಮಂದಿರದಲ್ಲೇ ಕನ್ನಡದ ಪ್ರಥಮ ವಾಕ್ಚಿತ್ರ ಸತಿ ಸುಲೋಚನಾ ಬಿಡುಗಡೆಗೊಂಡಿದ್ದು. ಇದು ೧೭೦ ನಿಮಿಷದ ಚಿತ್ರವಾಗಿದ್ದು, ೪೦ ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಾದ ಚಿತ್ರ.
ಅದರೊಳಗಿನ ಸಿಂಹ ಬರುವ ದೃಶ್ಯ ಕಂಡು ಹಲವು ಮಂದಿ ಚಿತ್ರ ಮಂದಿರದಲ್ಲೇ ಮೂರ್ಛೆ ಹೋಗಿದ್ದರಂತೆ. ಇನ್ನು ಕೆಲವರು ಸಿಂಹ ಬಂದೇ ಬಿಟ್ಟಿತೆಂದು ಹೆದರಿ ಸಿನಿಮಾ ಮಂದಿರದಿಂದ ಕಾಲ್ಕಿತ್ತಿದ್ದರಂತೆ.