ವಿಷಯಕ್ಕೆ ಹೋಗು

ಸಣ್ಣ ಕೊಕ್ಕರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಳ್ಳಕ್ಕಿ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
Ciconiiformes (disputed)
ಕುಟುಂಬ:
Ardeidae
ಕುಲ:
ಎಗ್ರೆಟ್ಟ
ಪ್ರಜಾತಿ:
E. garzetta
Binomial name
Egretta garzetta

ಕೊಕ್ಕರೆ ಅಥವಾ ಬೆಳ್ಳಕ್ಕಿ ಕಾಗೆಯಷ್ಟು ದೊಡ್ಡದಾದ ಆದರೆ ದೇಹದಷ್ಟೇ ಉದ್ದ ಕಾಲುಗಳೂ, ಕುತ್ತಿಗೆಯೂ ಇರುವ ಉದ್ದ ಕಾಲಿನ ನೀರು ಹಕ್ಕಿ (ಕ್ರೌಂಚ, ಸಾರಸ).

ಉಪವರ್ಗ

[ಬದಲಾಯಿಸಿ]

ಕೊಕ್ಕರೆಯಲ್ಲಿ ಎರಡು ಉಪವರ್ಗಗಳಿವೆ. ಭಾರತವನ್ನೊಳಗೊಂಡಂತೆ ಏಷಿಯಾ, ಯುರೋಪು, ಆಫ್ರಿಕಾಗಳಲ್ಲಿ ಕಂಡು ಬರುವ E. g. garzetta ಹಾಗೂ ಇಂಡೋನೇಷಿಯಾ, ಆಸ್ಟ್ರೇಲಿಯಾಗಳಲ್ಲಿ ಕಂಡು ಬರುವ E. g. nigripes.

ಪಶ್ಚಿಮ ಆಫ್ರಿಕಾ ಮತ್ತು ಕೆಂಪು ಸಮುದ್ರರಿಂದ ಭಾರದದ ಕರಾವಳಿಯಲ್ಲಿ ಕಂಡು ಬರುವ Western Reef-Egret, Egretta gularis ಹಾಗೂ ಪೂರ್ವ ಆಫ್ರಿಕಾ, ಮಡಗಾಸ್ಕರ್, ಕೊಮೊರೋಸ್, ಆಲ್ಡಬ್ರ ದ್ವೀಪಗಳಲ್ಲಿ ಕಂಡು ಬರುವ Dimorphic Egret, Egretta (garzetta/gularis) ಉದ್ದಕಾಲಿನ ನೀರು ಹಕ್ಕಿಯನ್ನು ಬೇರೆಯೇ ವರ್ಗಕ್ಕೆ ಸೇರಿಸಲಾಗಿದೆ.

ವಿವರಣೆ

[ಬದಲಾಯಿಸಿ]
ಕೊಕ್ಕರೆ - ಮರಿ ಮಾಡುವ ಕಾಲದ ಗರಿಗಳು ಹೈದರಾಬಾದ್, ಭಾರತ.
ಬೆಳ್ಳಕ್ಕಿಯ ಹಾರಾಟದ ಭಂಗಿ ಕಲ್ಕತ್ತ, ಪಶ್ಛಿಮ ಬಂಗಾಳ, ಭಾರತ.
Little Egret stands on a leaf in an aviary
ಬೆಳ್ಳಕ್ಕಿಯ ಪುಕ್ಕ

೩೫೦-೫೫೦ ಗ್ರಾಂಗಳವರೆಗೆ ತೂಗುವ ವಯಸ್ಕ ಕೊಕ್ಕರೆಯ ಉದ್ದ ಸುಮಾರು ೫೫-೬೫ ಸೆ.ಮೀ. ಇದ್ದು, ರೆಕ್ಕೆ ಬಿಡಿಸಿದಾಗ ೮೮-೧೦೬ ಸೆ.ಮೀ. ನಷ್ಟು ಅಗಲ ಇರುತ್ತದೆ. ಅಚ್ಚ ಬಿಳಿ ಬಣ್ಣದ ಪುಕ್ಕ, ಕಪ್ಪಗಿನ ಉದ್ದನೆಯ ಕಾಲು, ಹಳದಿ ಬಣ್ಣದ ಪಾದ ಮತ್ತು ಕಪ್ಪಗಿನ ನೀಳವಾದ ಕೊಕ್ಕು ಇದರ ದೈಹಿಕ ಲಕ್ಷಣ. ಮರಿ ಮಾಡುವ ಕಾಲದಲ್ಲಿ ಕತ್ತಿನ ಹಿಂಭಾಗ ಎರಡು ಉದ್ದನೆಯ ಪುಕ್ಕ ಹಾಗೂ ಎದೆ ಮತ್ತು ಬೆನ್ನಿನಲ್ಲಿ ಚಾಮರದಂತಹ ನವಿರಾದ ಪಾರದರ್ಶಕ ಪುಕ್ಕಗಳು ಕಾಣಿಸಿಕೊಳ್ಳುತ್ತವೆ. ಕಣ್ಣು ಮತ್ತು ಕೊಕ್ಕಿನ ಮಧ್ಯದ ಪುಕ್ಕವಿಲ್ಲದ ಚರ್ಮ ಭಾಗ ಕೆಂಪು ಅಥವಾ ನೀಲಿ ಬಣ್ಣ ತಳೆಯುತ್ತದೆ. ಮರಿ ಹಕ್ಕಿಗಳು ಸಾಮಾನ್ಯ ವಯಸ್ಕ ಹಕ್ಕಿಗಳಂತೆಯೇ ಇರುತ್ತವೆ. garzetta ಉಪವರ್ಗದ ಹಕ್ಕಿಗಳಿಗೆ ಹಳದಿ ಪಾದ ಇದ್ದು, ಕಣ್ಣಿನ ಹಾಗೂ ಕೊಕ್ಕಿನ ನಡುವಿನ ಚರ್ಮ ಭಾಗ ಬೂದು-ಹಸಿರು ಬಣ್ಣ ತಳೆದಿರುತ್ತದೆ. nigripes ಉಪವರ್ಗದ ಹಕ್ಕಿಗಳ ಪಾದ ಕಪ್ಪಿದ್ದು, ಕಣ್ಣಿನ ಹಾಗೂ ಕೊಕ್ಕಿನ ನಡುವಿನ ಚರ್ಮ ಭಾಗ ಹಳದಿ ಬಣ್ಣವಿರುತ್ತದೆ.

ಕೊಕ್ಕರೆಗಳು ಶಾಂತ ಸ್ವಭಾವದ ಹಕ್ಕಿಗಳಾದರೂ ಗೊಂದಲಗೊಂಡಾಗ ತಮ್ಮ ಹಿಂಡಿನಲ್ಲಿ ಕರ್ಕಶವಾಗಿ ಗದ್ದಲವೆಬ್ಬಿಸುತ್ತದೆ.

ಯುರೋಪು, ಏಷಿಯಾ, ಆಸ್ಟೇಲಿಯಾದ ಉಷ್ಣವಲಯದ ಒಳನಾಡಿನ ಹಾಗೂ ಕರಾವಳಿಯ ಜವುಗು ಪ್ರದೇಶ ಇವುಗಳ ಬೀಡು. ಯುರೋಪಿನಲ್ಲಿ ನೆಲೆ ಬಿಟ್ಟಿರುವ ಕೊಕ್ಕರೆಗಳು ಚಳಿಗಾಲದಲ್ಲಿ ಆಫ್ರಿಕಾ ಅಥವಾ ಪಶ್ಚಿಮ ಏಶಿಯಾದ ಖಂಡಗಳಿಗೆ ವಲಸೆ ಹೋಗುತ್ತವೆ. ಮರಿ ಮಾಡಿದ ಕಾಲದ ನಂತರ ಉತ್ತರದೆಡೆಗೆ ಪ್ರಯಾಣ ಬೆಳೆಸುವುದು ಇವುಗಳ ಹರವು ಹೆಚ್ಚಲು ಕಾರಣ.

ಇತ್ತೀಚಿನ ದಿನಗಳಲ್ಲಿ ಕೊಕ್ಕರೆ "ಹೊಸ ಪ್ರಪಂಚ"ದವರೆಗೂ (ಏಷಿಯಾ, ಯುರೋಪು, ಆಫ್ರಿಕಾ ಖಂಡಗಳನ್ನು ಹೊರತು ಪಡಿಸಿ ಉಳಿದ ಖಂಡಗಳು. ಸಾಮಾನ್ಯವಾಗಿ ಆಸ್ಟೇಲಿಯಾ, ಅಮೇರಿಕಾವನ್ನು ನ್ಯು ವಲ್ಡ್ ಎಂದು ಕರೆಯಲಾಗುತ್ತದೆ) ತನ್ನ ವ್ಯಾಪ್ತಿ ವಿಸ್ತರಿಸಿದೆ. ಇದರ ಬಗ್ಗೆ ಸಿಗುವ ಮೊದಲ ದಾಖಲೆ ಏಪ್ರಿಲ್ ೧೯೫೪ರಲ್ಲಿ Barbadosನಲ್ಲಿ ಕಾಣಿಸಿದ್ದು. ಅಲ್ಲಿಯ ದ್ವೀಪಗಳಲ್ಲಿ ೧೯೯೪ರಿಂದ ಮರಿ ಮಾಡಲು ಆರಂಭಿಸಿದೆ. ದಕ್ಷಿಣದಲ್ಲಿ Surinam ಮತ್ತು Brazil ನಿಂದ ಹಿಡಿದು ಉತ್ತರದ Newfoundland ಮತ್ತು Quebecವರೆಗೂ ಇವುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಉತ್ತರ ಅಮೇರಿಕಾದ ಪೂರ್ವ ಕರಾವಳಿಯಿಂದ ಉತ್ತರದೆಡೆಗೆ Snowy Egretsಗಳೊಡನೆ ಪ್ರಯಾಣಿಸಿರಬಹುದೆಂದು ಊಹಿಸಲಾಗಿದೆ.

ಸರಿ ಸುಮಾರು ೧೯೫೦ರವರೆಗೆ ಪಶ್ಚಿಮ ಯುರೋಪಿನವರೆಗೆ ಮಾತ್ರ ವಿಸ್ತರಿಸಿದ್ದ ಕೊಕ್ಕರೆಗಳು ಮುಂದಿನ ಕೆಲವು ದಶಕಗಳಲ್ಲಿ ಪಶ್ಚಿಮ ಫ್ರಾನ್ಸ್ ಮತ್ತು ಉತ್ತರದ ಕರಾವಳಿಯವರೆಗೂ ವಿಸ್ತರಿಸಿದೆ. ೧೯೭೯ ಮತ್ತು ೧೯೯೦ರಲ್ಲಿ ನೆದರ್ಲ್ಯಾಂಡಿನಲ್ಲಿ ಕೂಡ ಮರಿ ಮಾಡಿದ ವರದಿಯಿದೆ.

೨೦ನೆಯ ಶತಮಾನದ ಅಂತ್ಯದವರೆಗೂ ಬ್ರಿಟನ್ನಿನಲ್ಲಿ ಕೊಕ್ಕರೆಗಳು ಮರಿ ಮಾಡಿದ ದಾಖಲೆಗಳಿಲ್ಲವಾದರೂ ಇತ್ತೀಚಿನ ಕೆಲವು ದಶಕಗಳಲ್ಲಿ ಅವುಗಳ ವಿಸ್ತಾರ ಅಲ್ಲಿಯ ಕರಾವಳಿಯಲ್ಲೂ ವ್ಯಾಪಿಸಿದೆ. ೧೯೭೦ರಲ್ಲಿ Sussex ಎಂಬಲ್ಲಿ ಮೊದಲು ಮರಿ ಮಾಡಿದ್ದೆಂಬ ವಾದವಿದ್ದರೂ Brownsea Island ದ Dorset ನಲ್ಲಿ ೧೯೯೬ರಲ್ಲಿ ಮರಿ ಮಾಡಿದ್ದು ಅಧಿಕೃತವಾಗಿ ಸ್ವೀಕಾರಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಇವುಗಳ ವ್ಯಾಪ್ತಿ ಪಶ್ಚಿಮ ಇಂಗ್ಲೆಂಡಿನವರೆಗೆ ವೃದ್ಧಿಸಿದ್ದು ೨೦೦೨ರಲ್ಲಿ ವೇಲ್ಸ್ನಲ್ಲಿ ಕೂಡ ಮರಿ ಮಾಡಿದೆ.

೧೯೯೭ರಲ್ಲಿ ಇರ್ಲೆಂಡಿನ County Corkಎಂಬಲ್ಲಿ ಮೊದಲ ಬಾರಿಗೆ ಮರಿ ಮಾಡಿದೆ.

ಸಂತಾನೋತ್ಪತ್ತಿ

[ಬದಲಾಯಿಸಿ]

ಮರದ ಕೊಂಬೆ, ಪೊದೆಗಳಲ್ಲಿ ಕಸ ಕಡ್ಡಿಗಳಿಂದ ಗೂಡು ಕಟ್ಟಿಕೊಳ್ಳುವ ಕೊಕ್ಕರೆಗಳು ಇತರ ಉದ್ದ ಕಾಲಿನ ನೀರು ಹಕ್ಕಿಗಳ ಜೊತೆ ಗುಂಪು ಗುಂಪಾಗಿ ನೆಲೆಸುತ್ತವೆ. Cape Verde ದ್ವೀಪಗಳಂತಹ ಪ್ರದೇಶದಲ್ಲಿ ಕೋಡುಗಲ್ಲಿನ ಇಳಿಜಾರುಭಾಗಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ. ಗೂಡಿನ ಸುತ್ತಲಿನ ೩-೪ ಮೀಟರ್ ವ್ಯಾಪ್ತಿ ಪ್ರದೇಶವನ್ನು ಗಡಿಯಾಗಿ ಪರಿಗಣಿಸಿ ಶತ್ರುಗಳಿಂದ ರಕ್ಷಿಸಿಕೊಳ್ಳುತ್ತದೆ. ಹೆಣ್ಣು ಕೊಕ್ಕರೆ ಒಮ್ಮೆ ೩-೫ ಮೊಟ್ಟೆ ಇಟ್ಟು, ೨೧-೨೫ದಿನಗಳವರೆಗೆ ಸರದಿಯಲ್ಲಿ ಗಂಡು ಹೆಣ್ಣು ಎರಡೂ ಹಕ್ಕಿಗಳು ಕಾವು ಕೊಟ್ಟು ಮರಿ ಮಾಡುತ್ತವೆ. ಅಂಡಾಕೃತಿಯ ಮೊಟ್ಟೆಗಳು ಮಂದವಾದ ಹಸಿರು-ನೀಲಿ ಬಣ್ಣದಿಂದ ಕೂಡಿರುತ್ತದೆ. ೪೦-೪೫ ದಿನಗಳವರೆಗೆ ಗುಟುಕು ಪಡೆವ ಮರಿ ಹಕ್ಕಿ, ನಂತರ ಸ್ವತಂತ್ರವಾಗುತ್ತದೆ.

ಆಹಾರಾಭ್ಯಾಸ

[ಬದಲಾಯಿಸಿ]
ಭೇಟೆಯಲ್ಲಿ ನಿರತ ಬೆಳ್ಳಕ್ಕಿ ಕಲ್ಕತ್ತ, ಪಶ್ಛಿಮ ಬಂಗಾಳ, ಭಾರತ.

ನಾಲೆಯ ಜೌಗುಗಳಲ್ಲಿ, ಕೆಸರು ಗದ್ದೆಗಳಲ್ಲಿ, ಕೆರೆಗಳ ತೆಳು ನೀರಿನಲ್ಲಿ, ಗುಂಪುಗಳಲ್ಲಿ ಕಪ್ಪೆ, ಏಡಿ, ಮೀನುಗಳು, ಸೀಗಡಿ ಮೊದಲಾದವುಗಳನ್ನು ಭೇಟೆಯಾಡುತ್ತವೆ.

ಸಂರಕ್ಷಣೆ

[ಬದಲಾಯಿಸಿ]

ಒಂದು ಕಾಲದಲ್ಲಿ ಯೂರೋಪಿನ ಶ್ರೀಮಂತರು ಕೊಕ್ಕರೆಯ ಪುಕ್ಕಗಳನ್ನು ಟೋಪಿಗಳಿಗೆ ಅಲಂಕಾರವಾಗಿ ಸಿಕ್ಕಿಸಿಕೊಳ್ಳುತ್ತಿದ್ದರು. ೧೯ನೇ ಶತಮಾನದಲ್ಲಿ ಇದರ ಗೀಳು ಹೆಚ್ಚಿಸಿಕೊಂಡು ಮಿಲಿಯಗಟ್ಟಲೆ ಸಂಖ್ಯೆಯಲ್ಲಿ ಇವುಗಳ ಹತ್ಯೆಗಯ್ಯಲಾಯಿತು. ಪುಕ್ಕಗಳಿಗಾಗಿ ಇವುಗಳನ್ನು ಸಾಕಲಾಯಿತಾದರೂ ಇವುಗಳ ಭೇಟೆ ಅವ್ಯಾಹತವಾಗಿ ಸಾಗಿ, ೧೮೮೯ರಲ್ಲಿ ಬಿಟನ್ನಿನ Royal Society for the Protection of Birds ಸಂಸ್ಥೆಯ ಉಗಮಕ್ಕೆ ಪ್ರಚೋದನೆಯನ್ನು ನೀಡಿತು. ಇದರ ಭೇಟೆಗೆ ಕಾನೂನಿನ ಪ್ರತಿಬಂಧ ಇರುವುದರಿಂದ ಇದರ ಸಂಖ್ಯೆ ಈಗ ವೃದ್ಧಿಸಿದೆ.

ಬೆಳ್ಳಕ್ಕಿಯ ಇನ್ನಷ್ಟು ಚಿತ್ರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. BirdLife International (2008). ಬೆಳ್ಳಕ್ಕಿ. In: IUCN 2008. IUCN Red List of Threatened Species. Retrieved 9 February 2009.

ಮೂಲ ಆಧಾರ

[ಬದಲಾಯಿಸಿ]
  1. ^ BirdLife International (2008). Egretta garzetta. 2008 IUCN Red List of Threatened Species. IUCN 2008. Retrieved on 9 February 2009. Database entry includes justification for why this species is of least concern.
  2. ^ Edward Marriott (1 April 2007). ""The Ministry of Silly Walks"". The Observer. http://travel.guardian.co.uk/article/2007/apr/01/uk.walkingholidays.escape[ಶಾಶ್ವತವಾಗಿ ಮಡಿದ ಕೊಂಡಿ]. Retrieved on 1 April 2007.
  3. ^ Royal Society for the Protection of Birds UK RSPB information on the Little Egret spread into Britain. Accessed January 2008. Includes sound and video recordings.
  4. ^ [ http://www.dse.vic.gov.au/DSE/nrenpa.nsf/LinkView/EADA0F1874AF9CF24A2567C1001020A388BBA5581CF9D859CA256BB300271BDB Department of Sustainability and Environment, Victoria]
  5. ^ Department of Sustainability and Environment, Victoria
  6. ^ Victorian Department of Sustainability and Environment (2007). Advisory List of Threatened Vertebrate Fauna in Victoria - 2007. East Melbourne, Victoria: Department of Sustainability and Environment. pp. 15. ISBN 978-1-74208-039-0.


ಹೊರಗಿನ ಸಂಪರ್ಕಗಳು

[ಬದಲಾಯಿಸಿ]