ವಿಷಯಕ್ಕೆ ಹೋಗು

ಸಂತೈಸುವಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂತೈಸುವಿಕೆ (ಸಾಂತ್ವನ) ಪದವು ತೀವ್ರ, ನಿರಾಶಾದಾಯಕ ನಷ್ಟದಿಂದ (ಉದಾಹರಣೆಗೆ ಪ್ರೀತಿಪಾತ್ರರ ಸಾವು) ಬಾಧಿತರಾದವರಿಗೆ ನೀಡಲಾದ ಮಾನಸಿಕ ನೆಮ್ಮದಿಯನ್ನು ಸೂಚಿಸುತ್ತದೆ. ಇದನ್ನು ಸಾಮಾನ್ಯವಾಗಿ ಆ ನಷ್ಟಕ್ಕಾಗಿ ಹಂಚಿಕೊಂಡ ವಿಷಾದವನ್ನು ವ್ಯಕ್ತಪಡಿಸುವ ಮತ್ತು ಭವಿಷ್ಯದಲ್ಲಿ ಧನಾತ್ಮಕ ಘಟನೆಗಳ ಭರವಸೆಯ ಮೇಲೆ ಒತ್ತುಕೊಡುವ ಮೂಲಕ ನೀಡಲಾಗುತ್ತದೆ. ಸಂತೈಸುವಿಕೆಯು ಇತಿಹಾಸ, ಕಲೆಗಳು, ತತ್ತ್ವಶಾಸ್ತ್ರ ಮತ್ತು ಮನಶ್ಶಾಸ್ತ್ರದಲ್ಲಿ ಉದ್ಭವಿಸುವ ಮುಖ್ಯವಾದ ವಿಷಯವಾಗಿದೆ.

ಬೇರೆಯವರನ್ನು ಸಂತೈಸುವ ಬಯಕೆಯು ಅನುಭೂತಿಯ ಅಭಿವ್ಯಕ್ತಿಯಾಗಿದೆ, ಮತ್ತು ಪ್ರೈಮೇಟ್‍ಗಳಲ್ಲಿ ಸಹಜ ಪ್ರವೃತ್ತಿಯಾಗಿದೆಯೆಂದು ತೋರುತ್ತದೆ. ಡಚ್ ಪ್ರೈಮೇಟ್ ತಜ್ಞ ಫ಼್ರಾನ್ಸ್ ಡ ವಾಲ್ ಚಿಂಪಾಜ಼ಿಗಳಂತಹ ಮಾನವರಲ್ಲದ ಪ್ರೈಮೇಟ್‍ಗಳಲ್ಲಿ ನಡೆದ ಸಂತೈಸುವಿಕೆಯ ಕ್ರಿಯೆಗಳನ್ನು ಗಮನಿಸಿದ್ದಾರೆ.[] ಸಾಮಾಜಿಕ ಅಭ್ಯಾಸವಾಗಿ ಸಂತೈಸುವಿಕೆಯ ವಿಧ್ಯುಕ್ತ ಪರಿಕಲ್ಪನೆಯು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Frans de Waal, The Age of Empathy: Nature's Lessons for a Kinder Society (2009), p. 194.