ನೆಮ್ಮದಿ
ಗೋಚರ
ನೆಮ್ಮದಿ (ಅಥವಾ ನೆಮ್ಮದಿಯಿಂದ ಇರುವುದು) ಎಂದರೆ ದೈಹಿಕ ಅಥವಾ ಮಾನಸಿಕ ಆರಾಮದ ಅನಿಸಿಕೆ. ಯಾತನೆ ಇಲ್ಲದಿರುವುದು ಹಲವುವೇಳೆ ಇದರ ಲಕ್ಷಣವಾಗಿರುತ್ತದೆ. ನೆಮ್ಮದಿಯಿಲ್ಲದಿರುವ ವ್ಯಕ್ತಿಗಳು ಅಸೌಖ್ಯವಾಗಿರುತ್ತಾರೆ, ಅಥವಾ ಅಸೌಖ್ಯವನ್ನು ಅನುಭವಿಸುತ್ತಿರುತ್ತಾರೆ. ಪರಿಚಿತವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು,[೧] ಪರಿಚಿತವಾದ ವಸ್ತುಗಳ ಇರುವಿಕೆಯನ್ನು ಕಾಪಾಡಿಕೊಳ್ಳುವುದು, ಮತ್ತು ಸಮಾಧಾನಕರ ಆಹಾರಗಳ ಸೇವನೆಯಂತಹ ಹಿತಕರ ನೆನಪುಗಳೊಂದಿಗೆ ಸಂಬಂಧಿಸಲಾದ ಅನುಭವಗಳನ್ನು ಪುನಸ್ಸೃಷ್ಟಿಸಿ ಸ್ವಲ್ಪ ಪ್ರಮಾಣದ ಮಾನಸಿಕ ನೆಮ್ಮದಿಯನ್ನು ಸಾಧಿಸಬಹುದು. ಆರೋಗ್ಯ ಆರೈಕೆಯಲ್ಲಿ ನೆಮ್ಮದಿ/ಸಮಾಧಾನವು ವಿಶೇಷ ಕಳವಳದ ವಿಷಯವಾಗಿರುತ್ತದೆ, ಏಕೆಂದರೆ ರೋಗಪೀಡಿತರು ಮತ್ತು ಗಾಯಗೊಂಡವರಿಗೆ ಸಮಾಧಾನ ನೀಡುವುದು ಆರೋಗ್ಯ ಆರೈಕೆಯ ಒಂದು ಗುರಿಯಾಗಿರುತ್ತದೆ, ಮತ್ತು ಚೇತರಿಕೆಯನ್ನು ಸುಗಮವಾಗಿಸಬಲ್ಲದು. ಮಾನಸಿಕ ನೆಮ್ಮದಿಯನ್ನು ನೀಡುವಂತಹ ವಸ್ತುಗಳಿಂದ ಸುತ್ತುವರಿಯಲ್ಪಟ್ಟ ವ್ಯಕ್ತಿಗಳು "ಸುಖದ ವಲಯದಲ್ಲಿ" ಇರುವರು ಎಂದು ವಿವರಿಸಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ Daniel Miller, The Comfort of Things (2009).