ವಿಷಯಕ್ಕೆ ಹೋಗು

ಶ್ರೀ ಶ್ರೀ ರವಿ ಶಂಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lua error in package.lua at line 80: module 'Module:Pagetype/setindex' not found.

Sri Sri Ravi Shankar
ಜನನ (1956-05-13) ೧೩ ಮೇ ೧೯೫೬ (ವಯಸ್ಸು ೬೮)
ರಾಷ್ಟ್ರೀಯತೆIndian
ಜಾಲತಾಣwww.srisri.org

ರವಿ ಶಂಕರ್' (ತಮಿಳು: ஸ்ரீ ஸ்ரீ ரவி ஷங்கர்),[೧] ಸಾಮಾನ್ಯವಾಗಿ ಶ್ರೀ ಶ್ರೀ ರವಿ ಶಂಕರ್' ಎಂದು ಹೆಸರಾಗಿದ್ದು, ಭಾರತದ ತಮಿಳುನಾಡಿನಲ್ಲಿ 1956ಮೇ 13ರಂದು ಜನಿಸಿದರು. ಅವರಿಗೆ ಮೂಲದಲ್ಲಿ ರವಿಶಂಕರ್ ರತ್ನಂ ಎಂದು ಹೆಸರಿಡಲಾಗಿತ್ತು. ಅವರು ಆಧ್ಯಾತ್ಮಿಕ ನಾಯಕರಾಗಿದ್ದು, ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಸಂಸ್ಥಾಪಕರು (ಸ್ಥಾಪನೆ 1982), ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನವು ವೈಯಕ್ತಿಕ ಒತ್ತಡ, ಸಾಮಾಜಿಕ ಸಮಸ್ಯೆಗಳು ಎರಡನ್ನೂ ಮತ್ತು ಹಿಂಸಾಚಾರವನ್ನು ಶಮನಗೊಳಿಸುವ ಗುರಿಯನ್ನು ಹೊಂದಿದೆ. ಇದೊಂದು UNESCO ಸಲಹಾ ಸ್ಥಾನಮಾನದೊಂದಿಗೆ NGO (ಸರ್ಕಾರೇತರ ಸಂಸ್ಥೆ) ಆಗಿದೆ. ಸರಳವಾಗಿ "ಶ್ರೀ, ಶ್ರೀ" ಎಂದು(ಗೌರವಸೂಚಕ) ಅಥವಾ ಗುರೂಜಿ ಅಥವಾ ಗುರುದೇವ್ ಎಂದು ಸಾಮಾನ್ಯವಾಗಿ ಅವರನ್ನು ಕರೆಯಲಾಗುತ್ತಿದೆ.[೨] ಅವರು 1997ರಲ್ಲಿ ಜಿನೀವಾ ಮೂಲದ ಧರ್ಮದತ್ತಿ ಸಂಸ್ಥೆ ಇಂಟರ್‌ನ್ಯಾಷನಲ್ ಅಸೋಸಿಯೇಶನ್ ಫಾರ್ ಹ್ಯೂಮನ್ ವ್ಯಾಲ್ಯೂಸ್ ಸ್ಥಾಪಿಸಿದರು. ಇದು NGOಆಗಿದ್ದು, ಪರಿಹಾರ ಕಾರ್ಯ ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ತೊಡಗಿದೆ ಹಾಗೂ ಹಂಚಿಕೊಂಡ ಜಾಗತಿಕ ಮೌಲ್ಯಗಳಿಗೆ ಉತ್ತೇಜನ ನೀಡುವ ಗುರಿ ಹೊಂದಿದೆ.

ಜೀವನ ವೃತ್ತಾಂತ[ಬದಲಾಯಿಸಿ]

1956ರಲ್ಲಿ ಜನಿಸಿದ ಶ್ರೀ ಶ್ರೀ ರವಿಶಂಕರ್ ಅವರ ತಂದೆ ಆರ್. ಎಸ್. ವೆಂಕಟರತ್ನಂ ವಾಹನೋದ್ಯಮದಲ್ಲಿ ತೊಡಗಿ ಕೊಂಡಿದ್ದರು [೩] ಹಾಗೂ ಗ್ರಾಮೀಣ ಮಹಿಳೆಯರ ಸಬಲೀಕರಣ NGOನ ನಿರ್ದೇಶಕರು ಹಾಗು ಭಾರತೀಯ ಭಾಷೆಗಳ ವಿದ್ವಾಂಸರು ಆಗಿದ್ದರು. ಅವರ ತಾಯಿಯ ಹೆಸರು ವಿಶಾಲಾಕ್ಷಿ ರತ್ನಂ. ಅವರಿಗೆ ರವಿಎಂಬ ಹೆಸರಿಡಲಾಯಿತು.(ಸಾಮಾನ್ಯ ಭಾರತೀಯ ಹೆಸರು,"ಸೂರ್ಯ" ಎಂದರ್ಥ)ಏಕೆಂದರೆ ಅವರು ಭಾನುವಾರ ಜನ್ಮ ತಾಳಿದ್ದರು. 8ನೇ ಶತಮಾನದ ಹಿಂದೂ ಸಂತ ಆದಿ ಶಂಕರ ಅವರ ಜನ್ಮ ದಿನವನ್ನು ಹಂಚಿ ಕೊಂಡಿದ್ದರಿಂದ ಶಂಕರ್ಎಂದು ಕೂಡ ಅವರ ಹೆಸರಿನಲ್ಲಿ ಸೇರಿಸಲಾಯಿತು.[೨][೪] ಬೆಂಗಳೂರು ವಿಶ್ವವಿದ್ಯಾನಿಲಯದ ಸೇಂಟ್ ಜೋಸೆಫ್ ಕಾಲೇಜಿನಿಂದ ತಮ್ಮ 21ನೇ ವಯಸ್ಸಿ ನಲ್ಲಿ ಅವರು ವಿಜ್ಞಾನದಲ್ಲಿ ಪದವಿಯನ್ನು ಗಳಿಸಿದರು.

ಪದವಿ ಪೂರೈಸಿದ ನಂತರ ಮಹರ್ಷಿ ಮಹೇಶ್ ಯೋಗಿ ರವಿ ಶಂಕರ್ ಅವರನ್ನು ವೇದ ವಿಜ್ಞಾನದ ಬಗ್ಗೆ ಉಪನ್ಯಾಸ ನೀಡಲು, ವೇದಗಳು ಮತ್ತು ವಿಜ್ಞಾನದ ಬಗ್ಗೆ ಸಮ್ಮೇಳನಗಳನ್ನು ವ್ಯವಸ್ಥೆ ಮಾಡಲು ಹಾಗೂ ಆಯುರ್ವೇದ ಕೇಂದ್ರಗಳನ್ನು ಸ್ಥಾಪಿಸಲು ಆಹ್ವಾನವಿತ್ತ ಹಿನ್ನೆಲೆಯಲ್ಲಿ ಅವರ ಜತೆ ಪ್ರವಾಸ ಕೈಗೊಂಡರು.[೫] ಅವರನ್ನು ಮುಂಚೆ "ಪಂಡಿತ್ ರವಿ ಶಂಕರ್ "(ಅಥವಾ "ಪಂಡಿತ್‌ಜಿ ") ಎಂದು ಕರೆಯಲಾಗುತ್ತಿತ್ತು. ಆದರೆ 1990ರ ದಶಕದ ಆರಂಭದಲ್ಲಿ ಅವರು ತಮ್ಮ ಹೆಸರನ್ನು ಶ್ರೀ ಶ್ರೀ ರವಿ ಶಂಕರ್ ಎಂದು ಬದಲಾಯಿಸಿ ಕೊಂಡರು.(ವಾಚ್ಯಾರ್ಥದಲ್ಲಿ "ಮಿಸ್ಟರ್ ಮಿಸ್ಟರ್ ರವಿಶಂಕರ್‌"). ತಾವು ಪ್ರಖ್ಯಾತಗೊಳಿಸಿದ ಹೆಸರನ್ನು ಗುರು ಬಳಸುತ್ತಿದ್ದಾರೆಂದು ಹೆಸರಾಂತ ಸಿತಾರ್ ವಾದಕ ರವಿ ಶಂಕರ್ ಆಕ್ಷೇಪಿಸಿದ ನಂತರ ಈ ಬದಲಾವಣೆ ಮಾಡಿದರು.[೨]

1980ರ ದಶಕದಲ್ಲಿ ಶಂಕರ್ ವಿಶ್ವಾದಾದ್ಯಂತ ಆಧ್ಯಾತ್ಮಿಕತೆಯಲ್ಲಿ ಕಾರ್ಯತಃ ಮತ್ತು ಪ್ರಾಯೋಗಿಕ ಕೋರ್ಸ್‌ಗಳ ಸರಣಿಯನ್ನು ಆರಂಭಿಸಿದರು. ತಮ್ಮ ಕ್ರಮಬದ್ಧ ಗತಿಯ ಉಸಿರಾಟದ ಅಭ್ಯಾಸ ಸುದರ್ಶನ-ಕ್ರಿಯಾ ಹಿಂದಿ:सुदर्शन क्रिया 1982ರಲ್ಲಿ ತಾವು ಶಿವಮೊಗ್ಗದ(ಕರ್ನಾಟಕ ರಾಜ್ಯ)ದ ಭದ್ರಾ ನದಿ ದಂಡೆಯಲ್ಲಿ ಹತ್ತು ದಿನಗಳ ಕಾಲ ಮೌನಾಚರಣೆ ವಹಿಸಿದ ಬಳಿಕ "ಕಾವ್ಯದ ರೀತಿಯಲ್ಲಿ ಅವರಿಗೆ ಸ್ಫೂರ್ತಿ" ಒದಗಿಸಿತು. ತಾವು ಅದನ್ನು ಕಲಿತು ಬೋಧನೆ ನೀಡಲಾರಂಭಿಸಿದೆ[೩] ಎಂದು ಹೇಳಿದ್ದಾರೆ.

ಪ್ರತಿಯೊಂದು ಭಾವನೆಯು ಉಸಿರಾಟದಲ್ಲಿ ಸಂಬಂಧಿತ ಗತಿಯನ್ನು ಹೊಂದಿರುತ್ತದೆ ಹಾಗೂ ಉಸಿರಾಟವನ್ನು ನಿಯಂತ್ರಿಸುವುದರಿಂದ ವೈಯಕ್ತಿಕ ಸಂಕಷ್ಟ ಶಮನಕ್ಕೆ ನೆರವಾಗುತ್ತ ದೆಂದು ಶಂಕರ್ ಹೇಳುತ್ತಾರೆ.[೬] ಸುದರ್ಶನ ಕ್ರಿಯೆಯನ್ನು ಪೂರ್ಣವಾಗಿ ಅರಿತ ನಂತರ, ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ನಡೆದ ಶಂಕರ್ ಆರ್ಟ್ ಆಫ್ ಲಿವಿಂಗ್ ಕೋರ್ಸ್ ಮೂಲಕ ಇತರರ ಜತೆ ಅದನ್ನು ಹಂಚಿಕೊಂಡರು.

ಶಂಕರ್ ತಮ್ಮ ತಂದೆ ಮತ್ತು ಇನ್ನೂ ಅನೇಕ ಬೆಂಗಳೂರಿನ ಇತರೆ ಪ್ರಮುಖ ಪೌರರಿಗೆ 1981ರಲ್ಲಿ ಶಿಕ್ಷಣ ಮತ್ತು ಧರ್ಮದತ್ತಿ ಟ್ರಸ್ಟ್ ವೇದ ವಿಜ್ಞಾನ ಮಹಾ ವಿದ್ಯಾ ಪೀಠ ದ ಸ್ಥಾಪನೆಗೆ ಸ್ಫೂರ್ತಿ ನೀಡಿದರು. ಈ ಟ್ರಸ್ಟ್ ಆಶ್ರಯದಲ್ಲಿ ಅವರು ಸ್ಥಳೀಯ ಗ್ರಾಮೀಣ ಭಾಗದ ಮಕ್ಕಳಿಗಾಗಿ ಬೆಂಗಳೂರಿನ ದಕ್ಷಿಣದಲ್ಲಿ ಶಾಲೆಯೊಂದನ್ನು ತೆರೆದರು. ಇದು ಈಗ ಸುಮಾರು 2000 ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸುತ್ತದೆ.[೭]

1983ರಲ್ಲಿ ಶಂಕರ್ ಯುರೋಪ್‌ನ ಸ್ವಿಜರ್‌ಲ್ಯಾಂಡ್‌ನಲ್ಲಿ ಪ್ರಥಮ ಆರ್ಟ್ ಆಫ್ ಲಿವಿಂಗ್ ಕೋರ್ಸ್ ನಡೆಸಿದರು. 1986ರಲ್ಲಿ ಅವರು ಅಮೆರಿಕದ ಕ್ಯಾಲಿಫೋರ್ನಿಯ ಆಪಲ್ ವ್ಯಾಲಿಗೆ ಪ್ರವಾಸ ಕೈಗೊಂಡು, ಉತ್ತರ ಅಮೆರಿಕದಲ್ಲಿ ಪ್ರಥಮ ಕೋರ್ಸ್‌ ನಿರ್ವಹಿಸಿದರು.[೮]

ಬೋಧನೆ[ಬದಲಾಯಿಸಿ]

ರವಿ ಶಂಕರ್ (ಚಿತ್ರದ ಮಧ್ಯದಲ್ಲಿರುವವರು)

ಆಧ್ಯಾತ್ಮಿಕತೆ[ಬದಲಾಯಿಸಿ]

ಆಧ್ಯಾತ್ಮಿಕತೆಯು ಪ್ರೀತಿ, ಕರುಣೆ ಮತ್ತು ಉತ್ಸಾಹದ ಜೀವನ ಮೌಲ್ಯಗಳನ್ನು ವರ್ಧಿಸುತ್ತದೆ ಎಂದು ರವಿಶಂಕರ್ ಬೋಧಿಸುತ್ತಾರೆ. ಇದು ಯಾವುದೇ ಒಂದು ಧರ್ಮ ಅಥವಾ ಸಂಸ್ಕೃತಿಗೆ ಸೀಮಿತವಲ್ಲ. ಆದರೆ ವಿಶ್ವದ ಧರ್ಮಗಳ ಹೃದಯಭಾಗವಾಗಿದೆ. ಆದ್ದರಿಂದ ಇದು ಎಲ್ಲ ಜನರಿಗೆ ಮುಕ್ತವಾಗಿದೆ.[೯]

ಉಸಿರು ನಮ್ಮ ದೇಹ ಮತ್ತು ಮನಸ್ಸಿನ ನಡುವೆ ಕೊಂಡಿಯಾಗಿದೆ ಎಂದು ಶಂಕರ್ ಪ್ರತಿಪಾದಿಸುತ್ತಾರೆ, ಆದ್ದರಿಂದ ಮನಸ್ಸಿನ ನಿರಾಳತೆಗೆ ಸಾಧನವಾಗಿ, ಧ್ಯಾನ ಮತ್ತು ಪರರ ಸೇವೆಯನ್ನು ಅವರು ಪ್ರತಿಪಾದಿಸುತ್ತಾರೆ. ಅವರ ಪ್ರಕಾರ,ವಿಜ್ಞಾನ ಮತ್ತು ಆಧ್ಮಾತ್ಮಿಕತೆಯು ಒಂದಕ್ಕೊಂದು ಕೊಂಡಿ ಕಲ್ಪಿಸಿದ್ದು, ಹೊಂದಿಕೆಯಾಗುತ್ತದೆ. ಸಂತೋಷವು ಈ ಕ್ಷಣದಲ್ಲಿ ಮಾತ್ರ ಲಭ್ಯವಿರುತ್ತ ದೆಂದು ಅವರು ಪ್ರತಿಪಾದಿಸುತ್ತಾರೆ. ಒತ್ತಡ ಮತ್ತು ಹಿಂಸಾಚಾರ ಮುಕ್ತ ಜಗತ್ತನ್ನು ಸೃಷ್ಟಿಸುವುದು ಅವರ ಮುನ್ನೋಟವಾಗಿದೆ. ಇದನ್ನು ಸಾಧಿಸಲು ತಮ್ಮ ಕಾರ್ಯಕ್ರಮಗಳು ಪ್ರಾಯೋಗಿಕ ಸಾಧನಗಳನ್ನು ಒದಗಿಸುತ್ತದೆಂದು ಹೇಳಲಾಗಿದೆ. ಅವರ ದೃಷ್ಟಿಕೋನದಲ್ಲಿ "ಸತ್ಯವು ವೃತ್ತಾಕಾರವಾಗಿದ್ದು, ರೇಖೀಯವಲ್ಲ. ಆದ್ದರಿಂದ ಇದು ಪರಸ್ಪರ ವಿರುದ್ಧವಾಗಿವೆ."[೧೦]

ಶಾಂತಿ ಮತ್ತು ಮಾನವಹಿತಕಾರಿ ಕೆಲಸ[ಬದಲಾಯಿಸಿ]

ತೊಂಭತ್ತರ ದಶಕದಲ್ಲಿ ಶಂಕರ್ ಆರ್ಟ್ ಆಫ್ ಲಿವಿಂಗ್ ಮತ್ತು ಅದರ ಅಸಂಖ್ಯಾತ ರಾಷ್ಟ್ರೀಯ ಸಂಸ್ಥೆಗಳ ಆಶ್ರಯದಲ್ಲಿ ಅನೇಕ ಮಾನವಹಿತಕಾರಿ ಯೋಜನೆಗಳನ್ನು ಆರಂಭಿಸಿದ್ದು, ಅದು ಇಂದಿಗೂ ಮುಂದುವರಿಯುತ್ತಿದೆ. 1992ರಲ್ಲಿ, ಬಂದೀಖಾನೆ ಖೈದಿಗಳನ್ನು ಪುನಶ್ಚೇತನಗೊಳಿಸಿ, ಮುಖ್ಯವಾಹಿನಿಗೆ ತಂದು ಸಮಾಜದ ಅಂಗವಾಗಿಸಲು ನೆರವು ನೀಡುವುದಕ್ಕಾಗಿ ಅವರು ಬಂದೀಖಾನೆ ಕಾರ್ಯಕ್ರಮಗಳನ್ನು ಆರಂಭಿಸಿದರು.[೧೧] 1997ರಲ್ಲಿ ಮಾನವಹಿತ ಸಂಸ್ಥೆಯಾದ ಮಾನವ ಮೌಲ್ಯಗಳ ಅಂತಾರಾಷ್ಟ್ರೀಯ ಸಂಸ್ಥೆಯನ್ನು(ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಆಫ್ ಹ್ಯುಮನ್ ವ್ಯಾಲ್ಯೂಸ್) ಆರಂಭಿಸಲಾಯಿತು. ಅದರ 5Hಕಾರ್ಯಕ್ರಮವು ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಮಾನವ ಮೌಲ್ಯಗಳ ಪುನಶ್ಚೇತನದ ಗುರಿಯನ್ನು ಹೊಂದಿತ್ತು.[೧೨] ನ್ಯೂಯಾರ್ಕ್ ನಗರದ ವಿಶ್ವ ವಾಣಿಜ್ಯ ಕೇಂದ್ರದ ಗೋಪುರಗಳ ಮೇಲೆ 2001ರಲ್ಲಿ ನಡೆದ ದಾಳಿ ಯ ನಂತರ,ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನವು ನ್ಯೂಯಾರ್ಕ್ ನಗರ ನಿವಾಸಿಗಳಿಗೆ ಒತ್ತಡ ಶಮನಕ್ಕೆ ಉಚಿತ ಕೋರ್ಸ್‌ಗಳನ್ನು ಒದಗಿಸಿತು.[೬] ಈ ಪ್ರತಿಷ್ಠಾನವು ಕೊಸೊವೊದ ಯುದ್ಧಪೀಡಿತ ಜನಸಂಖ್ಯೆ ಮತ್ತು ಸಾರ್ವಜನಿಕ ಆರೋಗ್ಯ,ವಿಶ್ವವಿದ್ಯಾನಿಲಯ ಹಾಗು UN ಸಿಬ್ಬಂದಿಗಾಗಿ ಪರಿಹಾರ ಕಾರ್ಯಕ್ರಮವನ್ನು ಕೈಗೊಂಡಿತು. ಈ ಸಂಸ್ಥೆಯು 2003ರಂದು ಆಕ್ರಮಿತ ಇರಾಕ್‌ನಲ್ಲಿ ಕಾರ್ಯನಿರತವಾಗಿ, ಇರಾಕಿನ ಜನರ ಒತ್ತಡವನ್ನು ಶಮನ ಮಾಡುವ ಗುರಿ ಹೊಂದಲಾಗಿತ್ತು. ವಿಶೇಷವಾಗಿ ಯುದ್ಧದಿಂದ ವಿಧವೆಯರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಘಾತಕ್ಕೆ ಒಳಗಾದ ಮಹಿಳೆಯರ ಮಾನಸಿಕ ಒತ್ತಡ ತಗ್ಗಿಸುವ ಗುರಿ ಹೊಂದಲಾಗಿತ್ತು..[೧೩] ಆಫ್ಘಾನಿಸ್ತಾನದಲ್ಲಿ 2003ರಿಂದ 2006ರವರೆಗೆ ಇದೇ ರೀತಿಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿ, ಯುದ್ಧ ಸಂತ್ರಸ್ತರಿಗೆ ಹಾಗು UN ಮತ್ತು NGOಸಿಬ್ಬಂದಿಗೆ ಉಪನ್ಯಾಸ ನೀಡಿತು. 2007ರಲ್ಲಿ ಶ್ರೀ ಶ್ರೀ ರವಿ ಶಂಕರ್ ಪ್ರಧಾನ ಮಂತ್ರಿ ನೌರಿ ಅಲ್ ಮಾಲಿಕಿ ಅವರ ಆಹ್ವಾನದ ಮೇಲೆ ಇರಾಕ್‌ಗೆ ಪ್ರವಾಸ ಕೈಗೊಂಡರು ಹಾಗೂ ಸುನ್ನಿ, ಷಿಯಾ ಮತ್ತು ಕುರ್ದಿ ನಾಯಕರನ್ನು ಕೂಡ ಅಲ್ಲಿ ಭೇಟಿ ಮಾಡಿದರು.[೧೪] ಅವರು 2004ರಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡು ಜಾಗತಿಕ ಶಾಂತಿಗೆ ಉತ್ತೇಜನ ನೀಡುವ ಪ್ರಯತ್ನಗಳ ಭಾಗವಾಗಿ ಕೆಲವು ರಾಜಕೀಯ ಮತ್ತು ಧಾರ್ಮಿಕ ನಾಯಕರನ್ನು ಭೇಟಿ ಮಾಡಿದರು.[೧೫] ಅನೇಕ ಕಾರ್ಯಕರ್ತರು 2004ರ ಸುನಾಮಿ ಸಂತ್ರಸ್ತರಿಗೆ ಮತ್ತು ಚಂಡಮಾರುತ ಕತ್ರಿನಾ ಸಂತ್ರಸ್ತರಿಗೆ ನೆರವಾದರು. SMARTಎಂದು ಪರಿಚಿತವಾದ ಬಂದೀಖಾನೆ ಒತ್ತಡ ನಿರ್ವಹಣೆ ಮತ್ತು ಪುನಶ್ಚೇತನ ತಂತ್ರಗಳ ಕಾರ್ಯಕ್ರಮವು ಅನೇಕ ಕೈದಿಗಳಿಗೆ ಮತ್ತು ಬಂದೀಖಾನೆ ಸಿಬ್ಬಂದಿಗೆ ವಿಶ್ವಾದ್ಯಂತ ನೆರವಾಯಿತು. ರವಿಶಂಕರ್ ಅಂತರಧರ್ಮೀಯ ಮಾತುಕತೆಯಲ್ಲಿ ಕೂಡ ಆಸಕ್ತರಾಗಿದ್ದರು ಮತ್ತು ಪ್ರಸಕ್ತ ಎಲಿಜಾ ಅಂತರಧರ್ಮೀಯ ಸಂಸ್ಥೆಯ ವಿಶ್ವ ಧಾರ್ಮಿಕ ನಾಯಕರ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ.[೧೬]

ಸುದರ್ಶನ ಕ್ರಿಯಾ[ಬದಲಾಯಿಸಿ]

ಸುದರ್ಶನ ಕ್ರಿಯಾ "ಉಸಿರಾಟ ಆಧಾರಿತ ತಂತ್ರ"ವಾಗಿದ್ದು,[೧೭] ಆರ್ಟ್ ಆಫ್ ಲಿವಿಂಗ್ ಕೋರ್ಸ್‌ನ ಮುಖ್ಯ ಭಾಗವಾಗಿದೆ ಮತ್ತು [ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನ] ಆಘಾತ ಪರಿಹಾರ ಕಾರ್ಯಕ್ರಮಗಳ ತಳಹದಿಯಾಗಿದೆ.[೧೭] ಅವರ ಕೆಲವು ಉಪನ್ಯಾಸಗಳಲ್ಲಿ ಸುದರ್ಶನ ಕ್ರಿಯೆಯನ್ನು ಲಯಬದ್ಧ ಉಸಿರಾಟದ ಕ್ರಿಯೆಯಾಗಿದ್ದು, ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಮಟ್ಟಗಳನ್ನು ಶುದ್ಧಿಗೊಳಿಸುತ್ತದೆ ಮತ್ತು ಸಮರಸಗೊಳಿಸುತ್ತದೆ ಎಂದು ಶ್ರೀ ಶ್ರೀ ರವಿ ಶಂಕರ್ ಬಣ್ಣಿಸಿದ್ದಾರೆ.[೧೮] ಈ ತಂತ್ರದ ಬಗ್ಗೆ ಅನೇಕ ವೈದ್ಯಕೀಯ ಅಧ್ಯಯನಗಳು ಮತ್ತು ಅದರ ಪೂರ್ವಭಾವಿ ಅಭ್ಯಾಸಗಳನ್ನು ತಜ್ಞರ ವಿಮರ್ಶೆಗೊಳಗಾದ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನಗಳಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಅನೇಕ ಅನುಕೂಲಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಒತ್ತಡದ ಮಟ್ಟಗಳಲ್ಲಿ ಶಮನ(“ಒತ್ತಡ“ದ ಹಾರ್ಮೋನ್ ಕಾರ್ಟಿಸಾಲ್ ಪ್ರಮಾಣ ಕುಂಠಿತ), ಸುಧಾರಿತ ರೋಗ ರಕ್ಷಣೆ ವ್ಯವಸ್ಥೆ, ಆತಂಕ ಮತ್ತು ಖಿನ್ನತೆಯಿಂದ ಪರಿಹಾರ(ಕಡಿಮೆ, ಸಾಧಾರಣ ಮತ್ತು ತೀವ್ರ),[೧೯] ಹೆಚ್ಚಿದ ಉತ್ಕರ್ಷರೋಧಕ ರಕ್ಷಣೆ, ಮೆದುಳಿನ ಚಟುವಟಿಕೆ ಹೆಚ್ಚಳ(ಹೆಚ್ಚಿದ ಮಾನಸಿಕ ಗಮನ, ಶಾಂತಚಿತ್ತತೆ ಮತ್ತು ಒತ್ತಡದ ಪ್ರಚೋದನೆಯಿಂದ ಚೇತರಿಕೆ) ಹಾಗು ಇತರೆ ಪರಿಹಾರಗಳನ್ನು ನೀಡಲಾಗಿದೆ.[೨೦][೨೧] ಈ ಕೋರ್ಸ್‌ಗಳಿಗೆ ದಾಖಲಾಗುವ ವ್ಯಕ್ತಿಗಳು ಗೋಪ್ಯ(ಬಹಿರಂಗಮಾಡದ)ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ. ಕಲಿತ ತಂತ್ರಗಳನ್ನು(ಸುದರ್ಶನ ಕ್ರಿಯಾ ಸೇರಿದಂತೆ) ಶ್ರೀ ಶ್ರೀ ರವಿ ಶಂಕರ್ ಮತ್ತು ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ವೈಯಕ್ತಿಕ ತರಬೇತಿಯಿಲ್ಲದೇ ಇತರೆ ಜನರಿಗೆ ಬೋಧಿಸುವುದಿಲ್ಲ ಎಂದು ಮುಚ್ಚಳಿಕೆ ಕೊಡಬೇಕು.[೨೨]

ಟೀಕೆ[ಬದಲಾಯಿಸಿ]

ಶಂಕರ್ ತಂತ್ರಗಳನ್ನು ಕುರಿತು ಅನೇಕ ತಜ್ಞರ ವಿಮರ್ಶೆಗಳು ಪ್ರಕಟವಾಗಿದ್ದು, ಆರ್ಟ್ ಆಫ್ ಲಿವಿಂಗ್ ಕಾರ್ಯಕರ್ತರು ಪ್ರಾತ್ಯಕ್ಷಿಕೆಗಳಲ್ಲಿ ಅವೈಜ್ಞಾನಿಕ ಭಾಷೆಯನ್ನು ಬಳಸಿದ್ದಕ್ಕಾಗಿ ಟೀಕಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು] ಉದಾಹರಣೆಗೆ ಸುದರ್ಶನ ಕ್ರಿಯಾ ಉತ್ಪಾದಿಸಿದ ಆಮ್ಲಜನಕ ಸಮೃದ್ಧ ವಾತಾವರಣದಲ್ಲಿ HIVಗೆ ಉಳಿಗಾಲವಿಲ್ಲ ಎಂಬ ಹೇಳಿಕೆಗಳು.[೨೩] ಇಂತಹ ವಿವರಣೆಗಳು ಸಹಭಾಗಿಗಳನ್ನು ದಾರಿತಪ್ಪಿಸಬಹುದು. ಸುದರ್ಶನ ಕ್ರಿಯಾವು ಆಳವಾದ ಉಸಿರಾಟವನ್ನು ಒಳಗೊಂಡಿದ್ದು,[೨೪] ಹೈಪೋಕಾಪ್ನಿಯ(ರಕ್ತದಲ್ಲಿ ಇಂಗಾಲ ಡೈಆಕ್ಸೈಡ್ ಕೊರತೆ)ಮತ್ತು ಉಸಿರಾಟದ ಕ್ಷಾರತೆ ಉಂಟುಮಾಡಬಹುದು.

ರೀಡರ್ಸ್ ಡೈಜೆಸ್ಟ್‌ನಲ್ಲಿನ ಲೇಖನವೂಂದರ ಪ್ರಕಾರ, "ಇದರ ಕೆಲವು ಹೇಳಿಕೆಗಳು ಉತ್ಪ್ರೇಕ್ಷೆಯಿಂದ ಕೂಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ.ಉದಾಹರಣೆಗೆ, AOLಕಿರುಹೊತ್ತಿಗೆ ಪ್ರಕಾರ, “ಯುವಸಬಲೀಕರಣ ವಿಚಾರಗೋಷ್ಠಿ”ಯು10 ಜರ್ಮನ್ ವಿಶ್ವವಿದ್ಯಾನಿಲಯಗಳಲ್ಲಿ ಕಡ್ಡಾಯವಾಗಿದೆ ಎನ್ನುವುದು. ಐದು ವಿಶ್ವವಿದ್ಯಾಲಯಗಳಲ್ಲಿ ರೀಡರ್ಸ್ ಡೈಜೆಸ್ಟ್ ಮಾಡಿದ ಯಾದೃಚ್ಛಿಕ ಪರೀಕ್ಷೆಯಲ್ಲಿ ವಿಚಾರಗೋಷ್ಠಿ ಕಡ್ಡಾಯವ ಲ್ಲ ಹಾಗೂ ಇದು ಶೈಕ್ಷಣಿಕ ಪಠ್ಯಕ್ರಮದ ಭಾಗ ಕೂಡ ಅಲ್ಲ ಎನ್ನುವುದು ಬಹಿರಂಗವಾಯಿತು. ಇದನ್ನು ಟೆನ್ನಿಸ್ ಮತ್ತು ಏರೋಬಿಕ್ಸ್ ಜತೆಗೆ ವಿರಾಮವೇಳೆಯ ಚಟುವಟಿಕೆಯಾಗಿ ಒದಗಿಸಲಾಗುತ್ತದೆ." [೨೫]

ಎಡ್ವಾರ್ಡ್ ಲೂಸ್ ತಮ್ಮ ಪುಸ್ತಕ ಇನ್ ಸ್ಪೈಟ್ ಆಫ್ ದಿ ಗಾಡ್ಸ್: ದಿ ಸ್ಟ್ರೇಂಜ್ ರೈಸ್ ಆಫ್ ಮಾಡರ್ನ್ ಇಂಡಿಯ( 2006 )ದಲ್ಲಿ ಶ್ರೀ ಶ್ರೀಗಳು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದು ಪರಿಷದ್ ಜತೆ ಹೊಂದಿರುವ ಸಂಬಂಧದ ಬಗ್ಗೆ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾರೆ.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಶಂಕರ್ ಉಪನ್ಯಾಸಗಳು ಮತ್ತು ಬೋಧನೆಗಳನ್ನು ಅಸಂಖ್ಯಾತ ಪುಸ್ತಕಗಳು ಆಧರಿಸಿವೆ ಮತ್ತು ಅನೇಕ ಭಾಷೆಗಳಲ್ಲಿ ಇದು ಲಭ್ಯವಿದೆ.

ISBNs: Vol 1: 1885289294,V2: 1885289308,V3: 1885289332,V4: 1885289367,V5: 1885289383,V6: 1885289405,V7: 1885289413
 • ಬುದ್ಧ: ಮ್ಯಾನಿಫಿಸ್ಟೇಷನ್ ಆಫ್ ಸೈಲೆನ್ಸ್ ISBN 81-89291-91-2
 • 1999 - ಬಿ ಎ ವಿಟ್ನೆಸ್: ದಿ ವಿಸ್‌ಡಂ ಆಫ್ ದಿ ಉಪನಿಷದ್ಸ್, 106 pp. ISBN 81-7621-063-3
 • 2000 - ಗಾಡ್ ಲವ್ಸ್ ಫನ್ 138 pp. ISBN 1-885289-05-7
 • 2001 - ಸೆಲಿಬ್ರೇಟಿಂಗ್ ಸೈಲೆನ್ಸ್: ಎಕ್ಸ್‌ಸರ್‌ಪ್ಟ್ಸ್ ಫ್ರಂ ಪೈವ್ ಇಯರ್ಸ್ ಆಫ್ ವೀಕ್ಲಿ ನಾಲೇಜ್ 1995-2000, 206 pp. ISBN 1-885289-39-1
 • ಸೆಲಿಬ್ರೇಟಿಂಗ್ ಲವ್ ISBN 1-885289-42-1
 • 2005 - ನಾರದ ಭಕ್ತಿ ಸೂತ್ರ, 129 pp. ISBN 81-7811-029-6

ಟಿಪ್ಪಣಿಗಳು[ಬದಲಾಯಿಸಿ]

 1. ರವಿಶಂಕರ್ ಬಯೋಗ್ರಫಿ
 2. ೨.೦ ೨.೧ ೨.೨ A. ಸಾಲ್ಕಿನ್, [http:// www. yogajournal.com/views/738_3.cfm ಎಂಪರರ್ ಆಫ್ ಏರ್], ಯೋಗ ಜರ್ನಲ್ , 2002.
 3. ೩.೦ ೩.೧ Mahadevan, Ashok (February 2007). "Face to face". Reader's Digest. Archived from the original on 2007-09-29. Retrieved 2009-06-05.
 4. webindia123. com/personal/religious/sriravi.htm ವೆಬ್‌ಇಂಡಿಯ ಬಯೋಗ್ರಫಿ
 5. ಗೌಟಿಯರ್, ಫ್ರಾಂಕಾಯ್ಸ್. ದಿ ಗುರು ಆಫ್ ಜಾಯ್. ನ್ಯೂಯಾರ್ಕ್: ಹೇ ಹೌಸ್, 2008. p. 36.
 6. ೬.೦ ೬.೧ MacGregor, Hillary E (2004-10-31). "Breathe deeply to relieve stress, depression". The Seattle Times. Archived from nwsource.com/html/health/ 2002075460_ healthbreathing 31.html the original on 2013-08-25. Retrieved 2009-06-05. {{cite news}}: Check |url= value (help)
 7. http://expressbuzz.com/Cities/Bangalore/dutch-honour-for-sri-sri-ravi-shankar/64181[ಶಾಶ್ವತವಾಗಿ ಮಡಿದ ಕೊಂಡಿ]. html
 8. http://artofliving.eu/index.php?id=205& amp;L=17
 9. ಶಂಕರ್, ಶ್ರೀ ಶ್ರೀ ರವಿ. ಬ್ಯಾಂಗ್ ಆನ್ ದಿ ಡೋರ್ ಸಾಂಟಾ ಬಾರ್ಬರಾ, CA: ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ 1995. ISBN 1-885289-31-6
 10. ವಾಷಿಂಗ್ಟನ್ ಪೋಸ್ಟ್ ಇಂಟರ್‌ವ್ಯೂ
 11. "ಇನ್ ಪ್ರಿಸನ್ , ಪ್ರವೀಣ್ ಮಹಾಜನ್ & ದಾವೂದ್`ಸ್ ಬ್ರದರ್ ಜಾಯಿನ್ 1,500 ಅದರ್ಸ್ ಇನ್ ಯೋಗ ಎಂಡ್ ಭಜನ್ಸ್", MUMBAI ನ್ಯೂಸ್‌ಲೈನ್ , ಮುಂಬಯಿ, 30 ಏಪ್ರಿಲ್ 2007. 2010-09-12ರಂದು ಮರು ಸಂಪಾದಿಸಲಾಗಿದೆ.
 12. "ಶ್ರೀ ಶ್ರೀ ರವಿ ಶಂಕರ್", ದಿ ಹಫಿಂಗ್‌ಟನ್ ಪೋಸ್ಟ್ , 12 ಆಗಸ್ಟ್ 2010. 2010-08-12ರಂದು ಮರುಸಂಪಾದಿಸಲಾಗಿದೆ.
 13. uk/ 1/hi/world/south_asia/3393327.stm BBC ನ್ಯೂಸ್ | ಇಂಡಿಯನ್ ಸ್ಟ್ರೇಸ್-ಬಸ್ಟರ್ಸ್ ಟಾರ್ಗೆಟ್ ಇರಾಕ್
 14. ಆರ್ಟ್ ಆಫ್ ಲಿವಿಂಗ್ ಗುರು ಇನ್ ಇರಾಕ್ ಟು ಟಾಕ್ ಪೀಸ್
 15. 'ದೇರ್ ಈಸ್ ಡಿಗ್ನಿಟಿ ಆಫ್ ರಿಲಿಜಿಯನ್ ಇನ್ ಪಾಕಿಸ್ತಾನ್', ದಿ ಟೈಮ್ಸ್ ಆಫ್ ಇಂಡಿಯ
 16. /programs/ board-of-world-religious-leaders/leaders-of-religions-of-india.html ದಿ ಎಲಿಜಾ ಇಂಟರ್‌ಫೇತ್ ಇನ್‌ಸ್ಟಿಟ್ಯೂಟ್ - ಹಿಂದು ಮೆಂಬರ್ಸ್ ಆಫ್ ದಿ ಬೋರ್ಡ್ ಆಫ್ ವರ್ಲ್ಡ್ ರಿಲಿಜಿಯಸ್ ಲೀಡರ್ಸ್
 17. ೧೭.೦ ೧೭.೧ "ಸುದರ್ಶನ್ ಕ್ರಿಯಾ ಪೇಜ್ ಆನ್ ಆರ್ಟ್ ಆಫ್ ಲಿವಿಂಗ್". Archived from the original on 2010-12-01. Retrieved 2011-01-04.
 18. "ಪೆರ್ಮಾಲಿಂಕ್ ಟು ಆರ್ಟಿಕಲ್ ಎಬೌಟ್ ಫೆಯಿಲ್ಡ್ ಅಸ್ಸಾಸಿನೇಷನ್ ಅಟೆಂಪ್ಟ್ ಆನ್ ರವಿ ಶಂಕರ್ •ನ್ಯೂಸ್ ಸ್ಟೋರಿ ಫ್ರಂ 31 ಮೇ 2010". Archived from the original on 2011-01-01. Retrieved 2011-01-04.
 19. ಆಂಟಿಡಿಪ್ರಸೆಂಟ್ ಅಫಿಕಸಿ ಆಫ್ ಸುದರ್ಶನ್ ಕ್ರಿಯಾ ಯೋಗ (SKY) ಇನ್ ಮೆಲಾಂಕೋಲಿಯ: ಎ ರಾಂಡಮೈಸ್ಡ್ ಕಂಪ್ಯಾರಿಷನ್ ವಿತ್ ಎಲೆಕ್ಟ್ರೋಕನ್ವಲ್ಸಿವ್ ಥೆರಪಿ (ECT) ಎಂಡ್ ಇಮಿಪ್ರಮೈನ್ ಜಾನಕಿರಾಮಯ್ಯ N; ಗಂಗಾಧರ್ B.N; ನಾಗ ವೆಂಕಟೇಶ ಮೂರ್ತಿ P.J; ಹರೀಶ್ M.G; ಸುಬ್ಬಕೃಷ್ಣ D.K; ವೇದಮೂರ್ತಾಚಾರ್ ಎ ಜರ್ನಲ್ ಆಫ್ ಎಫೆಕ್ಟಿವ್ ಡಿಸಾರ್ಡರ್ಸ್, ಸಂಪುಟ 57, ಸಂಖ್ಯೆ 1, ಜನವರಿ 2000 , pp. 255-259(5) http://www.ncbi.nlm.nih.gov/pubmed/10708840
 20. ಗೌಟಿಯರ್, ಫ್ರಾಂಕಾಯಿಸ್ ದಿ ಗುರು ಆಫ್ ಜಾಯ್ ನ್ಯೂ ಯಾರ್ಕ್: ಹೇ ಹೌಸ್, 2008. p. 155-164.
 21. ಸೈಂಟಿಫಿಕ್ ರಿಸರ್ಚ್ ಆನ್ ಆರ್ಟ್ ಆಫ್ ಲಿವಿಂಗ್ ಪ್ರಾಕ್ಟೀಸಸ್ http://www. aolresearch. org/ published_research.html
 22. artofliving.org/course_details.aspx?course_id=922 ಆರ್ಟ್ ಆಫ್ ಲಿವಿಂಗ್ ಕೋರ್ಸ್ ಡೀಟೇಲ್ಸ್
 23. https://web.archive.org/web/20050509053759/http://www.bawandinesh.net/AIMSPresentation.ppt
 24. "ಆರ್ಕೈವ್ ನಕಲು". Archived from the original on 2007-09-29. Retrieved 2011-01-04.
 25. A. ಮಹಾದೇವನ್. ಫೇಸ್ ಟು ಫೇಸ್ ರೀಡರ್ಸ್ ಡೈಜೆಸ್ಟ್. 2007-06-21ರಂದು ಮರುಸಂಪಾದಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

 • ಗೌಟಿಯರ್, ಫ್ರಾಂಕಾಯಿಸ್, ದಿ ಗುರು ಆಫ್ ಜಾಯ್. ಶ್ರೀ ಶ್ರೀ ರವಿ ಶಂಕರ್ & ದಿ ಆರ್ಟ್ ಆಫ್ ಲಿವಿಂಗ್ , ಕಾರ್ಲ್ಸ್‌ಬಾಡ್, ಕ್ಯಾಲಿಫೋರ್ನಿಯ ಹೇ ಹೌಸ್, Inc., 2008. ISBN 978-1-4019-1761-6 (ಪ್ರಥಮ ಆವೃತ್ತಿ ಇಂಡಿಯ, ಬುಕ್ಸ್ ಟುಡೆ, 2002. ISBN 81-87478-42-X)

ಬಾಹ್ಯ ಕೊಂಡಿಗಳು[ಬದಲಾಯಿಸಿ]