ಶ್ರೀ ರಾಮಚಂದ್ರಾಪುರ ಮಠ

ವಿಕಿಪೀಡಿಯ ಇಂದ
Jump to navigation Jump to search
ರಾಮಚಂದ್ರಾಪುರ ಮಠ, ಹೊಸನಗರ

ಶ್ರೀ ರಾಮಚಂದ್ರಾಪುರ ಮಠ ಅಥವಾ ರಘೋತ್ತಮ ಮಠವು ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠ. ಇದು ಹೊಸನಗರ ತಾಲೂಕಿನ ಕಾರಣಗಿರಿಯ ಸನಿಹದ ರಾಮಚಂದ್ರಾಪುರದಲ್ಲಿದೆ. ಈಗ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಪೀಠಾರೂಢರಾಗಿದ್ದಾರೆ. ಜಗತ್ತಿನ ಏಕೈಕ ಹಸ್ತಿದಂತ ಸಿಂಹಾಸನವು ಇಲ್ಲಿದೆ.


ಇತಿಹಾಸ[ಬದಲಾಯಿಸಿ]

ಒಮ್ಮೆ ಆದಿ ಶಂಕರಾಚಾರ್ಯರು ತಮ್ಮ ಯಾತ್ರೆಯ ಸಮಯದಲ್ಲಿ ಭಾರತದ ಪಶ್ಚಿಮದ ಸಮುದ್ರ ತೀರದಲ್ಲಿರುವ ಗೋಕರ್ಣವನ್ನು ತಲುಪಿದರು. ಅಲ್ಲಿನ ಸ್ಥಳದೇವತೆಯಾದ ಮಹಾಬಲೇಶ್ವರನನ್ನು ಪೂಜಿಸಿದರು. ನಂತರ ಶ್ರೀ ವರದೇಶನನ್ನು ಪೂಜಿಸಲು ತಮ್ಮ ಶಿಷ್ಯರೊಂದಿಗೆ ಶತಶೃಂಗಕ್ಕೆ ತೆರಳಿದರು. ಈ ಸ್ಥಳವು ಶಾಂತಿ-ನೆಮ್ಮದಿಯ ಬೀಡಾಗಿದ್ದಿತು. ವನ್ಯ ಮೃಗಗಳಾದ ಹುಲಿ, ಹಾವುಗಳು ಸಾಧು ಪ್ರಾಣಿಗಳಾದ ಹಸು, ಜಿಂಕೆಗಳೊಂದಿಗೆ ಸಖ್ಯದಿಂದಿದ್ದವು. ವರದ ಮುನಿಗಳು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದ ಅಲ್ಲಿನ ಅಶೋಕ ವನದಲ್ಲಿ ಒಂದು ಹೆಣ್ಣು ಹುಲಿಯು ಅನಾಥವಾಗಿದ್ದ ಜಿಂಕೆಯೊಂದಕ್ಕೆ ತಾಯಿಯ ಮಮತೆಯನ್ನು ತೋರಿಸುತ್ತಿದ್ದಿದ್ದನ್ನು ನೋಡಿ ಶಂಕರಾಚಾರ್ಯರು ವಿಸ್ಮಿತರಾದರು. ವರದ ಮುನಿಗಳು ಶಂಕರಾಚಾರ್ಯರನ್ನು ಸ್ವಾಗತಿಸಿ ಮಹಾತ್ಮರು ಸದಾ ಪೂಜಿಸಲು ಅನುಕೂಲವಾಗುವಂತೆ ತಮಗೆ ತಮ ಗುರುಗಳಾದ ಅಗಸ್ತ್ಯ ಮುನಿಗಳು ಕೊಟ್ಟಿದ್ದ ಪವಿತ್ರವಾದ ರಾಮ, ಲಕ್ಷ್ಮಣ, ಸೀತೆ ಮತ್ತು ಚಂದ್ರಮೌಳೀಶ್ವರ ಲಿಂಗಗಳನ್ನು ಕೊಟ್ಟರು. ಆಗ ಶಂಕರಾಚಾರ್ಯರು ಸಮಾಜದ ಉದ್ಧಾರಕ್ಕಾಗಿ ಮತ್ತು ಆ ಪವಿತ್ರ ವಿಗ್ರಹಗಳ ಪೂಜೆಗಾಗಿ ಅಲ್ಲಿ ರಘೂತ್ತಮ ಮಠವನ್ನು ಸ್ಥಾಪಿಸಿದರು.[೧]

ಶಂಕರಾಚಾರ್ಯರು ತಮ್ಮ ಶಿಷ್ಯರಾದ ಸುರೇಶ್ವರಾಚಾರ್ಯರಿಂದ ದೀಕ್ಷೆ ಪಡೆದಿದ್ದ ಶ್ರೀ ವಿದ್ಯಾನಂದರನ್ನು ಅಲ್ಲಿನ ಪ್ರಥಮ ಪೀಠಾಧಿಪತಿಯಾಗಿ ನೇಮಿಸಿದರು. ಹೀಗೆ ಶ್ರೀ ರಾಮಚಂದ್ರಾಪುರ ಮಠ ಎಂದು ಹೆಸರಾಗಿರುವ ರಘೂತ್ತಮ ಮಠದ ಅವಿಚ್ಛಿನ್ನ ಪರಂಪರೆಯು ಆರಂಭವಾಯಿತು.

ಮಠದ ಪೀಠಾಧಿಪತಿಗಳು[ಬದಲಾಯಿಸಿ]

೧. ಶ್ರೀಮಜ್ಜಗದ್ಗುರು ಶಂಕರಾಚಾರ್ಯ
೨. ಶ್ರೀ ಸುರೇಶ್ವರಾಚಾರ್ಯ
೩. ಶ್ರೀ ವಿದ್ಯಾನಂದಾಚಾರ್ಯ
೪. ಶ್ರೀ ಚಿದ್ಬೋಧ ಭಾರತೀ - ೧
೫. ಶ್ರೀ ನಿತ್ಯಾನಂದ ಭಾರತೀ
೬. ಶ್ರೀ ನಿತ್ಯಬೋಧಘನೇಂದ್ರ ಭಾರತೀ
೭. ಶ್ರೀ ಸಚ್ಚಿದಾನಂದ ಭಾರತೀ
೮. ಶ್ರೀ ಚಿದ್ಘನೇಂದ್ರ ಭಾರತೀ
೯. ಶ್ರೀ ಸೀತಾರಾಮಚಂದ್ರ ಭಾರತೀ
೧೦. ಶ್ರೀ ಚಿದ್ಬೋಧ ಭಾರತೀ - ೨
೧೧. ಶ್ರೀ ರಾಘವೇಶ್ವರ ಭಾರತೀ - ೧
೧೨. ಶ್ರೀ ರಾಮಚಂದ್ರ ಭಾರತೀ - ೧
೧೩. ಶ್ರೀ ಅಭಿನವರಾಘವೇಶ್ವರ ಭಾರತೀ - ೨
೧೪. ಶ್ರೀ ರಾಮಯೋಗೀಂದ್ರ ಭಾರತೀ
೧೫. ಶ್ರೀ ನೃಸಿಂಹ ಭಾರತೀ
೧೬. ಶ್ರೀ ಅನಂತೇಂದ್ರ ಭಾರತೀ
೧೭. ಶ್ರೀ ರಾಮಭದ್ರ ಭಾರತೀ
೧೮. ಶ್ರೀ ರಾಘವೇಶ್ವರ ಭಾರತೀ - ೩
೧೯. ಶ್ರೀ ವಿದ್ಯಾಧನೇಂದ್ರ ಭಾರತೀ
೨೦. ಶ್ರೀ ರಘುನಾಥ ಭಾರತೀ
೨೧. ಶ್ರೀ ರಾಮಚಂದ್ ಭಾರತೀ - ೨
೨೨. ಶ್ರೀ ರಘೂತ್ತಮ ಭಾರತೀ - ೧
೨೩. ಶ್ರೀ ಪರಮೇಶ್ವರ ಭಾರತೀ
೨೪. ಶ್ರೀ ರಾಘವೇಶ್ವರ ಭಾರತೀ - ೪
೨೫. ಶ್ರೀ ರಘೂತ್ತಮ ಭಾರತೀ - ೨
೨೬. ಶ್ರೀ ರಾಘವೇಶ್ವರ ಭಾರತೀ - ೫
೨೭. ಶ್ರೀ ರಘೂತ್ತಮ ಭಾರತೀ - ೩
೨೮. ಶ್ರೀ ರಾಘವೇಶ್ವರ ಭಾರತೀ - ೬
೨೯. ಶ್ರೀ ರಘೂತ್ತಮ ಭಾರತೀ - ೪
೩೦. ಶ್ರೀ ರಾಘವೇಶ್ವರ ಭಾರತೀ - ೭
೩೧. ಶ್ರೀ ರಾಮಚಂದ್ರ ಭಾರತೀ - ೩
೩೨. ಶ್ರೀ ರಾಘವೇಂದ್ರ ಭಾರತೀ - ೧
೩೩. ಶ್ರೀ ರಾಘವೇಶ್ವರ ಭಾರತೀ - ೮
೩೪. ಶ್ರೀ ರಾಮಚಂದ್ರ ಭಾರತೀ - ೪
೩೫. ಶ್ರೀ ರಾಘವೇಂದ್ರ ಭಾರತೀ - ೨
೩೬. ಶ್ರೀ ರಾಘವೇಶ್ವರ ಭಾರತೀ - ೯ (೧೫/೪/೧೯೯೪ ರಿಂದ)

ಉಲ್ಲೇಖಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

ಹವ್ಯಕ