ಶೇಡಬಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೇಡಬಾಳ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಳಗಾವಿ
ತಾಲೂಕುಕಾಗವಾಡ
Population
 (2011)
 • Total೧೫,೨೭೮
Languages
ಸಮಯ ವಲಯಯುಟಿಸಿ+5:30 (IST)
Telephone code08339
ವಾಹನ ನೋಂದಣಿKA-23
Lok Sabha constituencyChikkodi
ClimateSunny (Köppen)
ಜಾಲತಾಣwww.shedbaltown.mrc.gov.in

ಶೇಡಬಾಳ ಭಾರತದ ದಕ್ಷಿಣ ರಾಜ್ಯವಾದ ಕರ್ನಾಟಕದ ಒಂದು ಪಟ್ಟಣ . [೧] [೨] ಇದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನಲ್ಲಿದೆ . ಶೇಡಬಾಳ ಸಾಂಗ್ಲಿ ಮಿರಜ್ ಅವಳಿ ನಗರಗಳಿಗೆ ಬಹಳ ಹತ್ತಿರದಲ್ಲಿದೆ.

ಕರ್ನಾಟಕ ಸರ್ಕಾರವು ಶೇಡಬಾಳ ಗ್ರಾಮ ಪಂಚಾಯಿತಿಯನ್ನು ಶೇಡಬಾಳ ಪಟ್ಟಣ ಪಂಚಾಯತ್ ಎಂದು ಘೋಷಿಸಿತು.

ವಿವರಣೆ[ಬದಲಾಯಿಸಿ]

2011ರ ಜನಸಂಖ್ಯೆಯ ಪ್ರಕಾರ, ಶೇಡಬಾಳದಲ್ಲಿ 7752 ಪುರುಷರು ಮತ್ತು 7526 ಸ್ತ್ರೀಯರು, ಒಟ್ಟು 15,278 ಜನ ವಾಸಿಸುತ್ತಾರೆ.

ಶೇಡಬಾಳದಲ್ಲಿ ಪ್ರಸಿದ್ಧ ಜೈನ ಆಶ್ರಮವಿದೆ .ಶೇಡಬಾಳದ ಶಾಂತಿನಾಥ ಜೈನ ದೇವಾಲಯವನ್ನು ಕ್ರಿ.ಶ 1292 ರಲ್ಲಿ ನಿರ್ಮಿಸಲಾಯಿತು. ಇಐದು ಪ್ರಸಿದ್ಧ ಜೈನ ತಪಸ್ವಿ ಎಲಾಚಾರ್ಯ ಪರಮಪೂಜ್ಯ ಮುನಿ ಶ್ರೀ 108 ವಿದ್ಯಾನಂದ ಮಹಾರಾಜರ ಜನ್ಮಸ್ಥಳವಾಗಿದೆ. ಪರಮಪೂಜ್ಯ ಶ್ರೀ ಶಾಂತಿಸಾಗರ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ಶ್ರೀ ಶಾಂತಿಸಾಗರ ಛತ್ರ ಆಶ್ರಮವನ್ನು ನಿರ್ಮಿಸಲಾಯಿತು. 24 ತೀರ್ಥಂಕರರೊಂದಿಗಿನ ಚತುರ್ವಿಂಶತಿ ತೀರ್ಥಂಕರ ಮಂದಿರವನ್ನು 1952 ರಲ್ಲಿ ನಿರ್ಮಿಸಲಾಯಿತು. ನಾವು ಇಲ್ಲಿ ಕಂಡುಕೊಂಡ ಇತರ ದೇವಾಲಯಗಳೆಂದರೆ, ಭಗವಾನ್ ಆದಿನಾಥ ಮತ್ತು ಭಗವಾನ್ ಮಹಾವೀರ (ಕ್ರಿ.ಶ. 1942 ರಲ್ಲಿ ನಿರ್ಮಿಸಲಾಗಿದೆ), ಶ್ರೀ ಬಾಹುಬಲಿ ಮಂದಿರ (ಕ್ರಿ.ಶ. 1960 ರಲ್ಲಿ ನಿರ್ಮಿಸಲಾಗಿದೆ), ಸಮವಶರಣ ಮಂದಿರ (ಕ್ರಿ.ಶ. 1989 ರಲ್ಲಿ ನಿರ್ಮಿಸಲಾಗಿದೆ)

ಶೇಡಬಾಳ 13,600 ಎಕರೆಗಿಂತ ಹೆಚ್ಚು ಕೃಷಿ ಭೂಮಿಯನ್ನು ಹೊಂದಿದೆ ಮತ್ತು ಅದರಲ್ಲಿ 12,000 ಎಕರೆಗೂ ಹೆಚ್ಚು ಪ್ರದೇಶ ನೀರಾವರಿಯನ್ನು ಹೊಂದಿದೆ ಮತ್ತು 1600 ಎಕರೆ ಭೂಮಿ ಮಳೆಯ ಮೇಲೆ ಅವಲಂಬಿತವಾಗಿದೆ. ಪ್ರಮುಖವಾಗಿ ಕಬ್ಬು, ಬಾಳೆಹಣ್ಣು, ಬದನೆಕಾಯಿ, ಅರಿಶಿಣ, ಸೂರ್ಯಕಾಂತಿ, ಗೋಧಿ ಮತ್ತು ಇತರ ವಾಣಿಜ್ಯ ಬೆಳೆಗಳು ಶೇಡಬಾಳದ ಮುಖ್ಯ ಬೆಳೆಗಳು.

ಶೇಡಬಾಳದ ಜನಸಂಖ್ಯೆಯಲ್ಲಿ ಜೈನರು ಅತಿ ಹೆಚ್ಚು ಪಾಲನ್ನು ಹೊಂದಿದ್ದಾರೆ.

ಸಾರಿಗೆ[ಬದಲಾಯಿಸಿ]

ಶೇಡಬಾಳ ಪಟ್ಟಣ ಬೆಳಗಾವಿ, ಅಥಣಿ, ವಿಜಯಪುರ , ಮೀರಜ್, ಸಾಂಗ್ಲಿ, ಗೋಕಾಕ, ಚಿಕ್ಕೋಡಿ, ಉಗಾರ, ರಾಯಬಾಗ ಮುಂತಾದ ಊರುಗಳೊಂದಿಗೆ ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಶೇಡಬಾಳದಲ್ಲಿ ಮೀರಜ್ ಬೆಳಗಾವಿ ಲೋಂಡಾ ರೈಲು ಮಾರ್ಗದ ರೈಲು ನಿಲ್ದಾಣವಿದೆ. ಈ ನಿಲ್ದಾಣದಲ್ಲಿ ಪ್ರತಿದಿನ ಐದು ಜೋಡಿ ಪ್ಯಾಸೆಂಜರ್ ರೈಲುಗಳು ನಿಲ್ಲುತ್ತವೆ, ಇದು ಬೆಳಗಾವಿ ಮತ್ತು ಮಿರಜ್‌ನೊಂದಿಗೆ ಸಂಪರ್ಕ ಹೊಂದಿದೆ

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Village code= 17200 "Census of India : Villages with population 5000 & above". Registrar General & Census Commissioner, India. Retrieved 2008-12-18.
  2. "Yahoomaps India : Shedbal, Belgaum, Karnataka". Retrieved 2008-12-18.
"https://kn.wikipedia.org/w/index.php?title=ಶೇಡಬಾಳ&oldid=1161128" ಇಂದ ಪಡೆಯಲ್ಪಟ್ಟಿದೆ