ವಿಷಯಕ್ಕೆ ಹೋಗು

ಪಟ್ಟಣ ಪಂಚಾಯಿತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಂಚಾಯಿತಿ ಎಂಬುದು ಬಹಳ ಹಿಂದಿನಿಂದಲೂ ಬೆಳೆದು ಬಂದಿರುವ ಒಂದು ಪದ್ಧತಿ. ಬಹಳ ಹಿಂದೆ “ಪಂಚರು” ಪಂಚಾಯಿತಿಯ ಮುಖ್ಯಸ್ಥರಾಗಿರುತ್ತಿದ್ದರು. ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಬಲರಾಗಿದ್ದವರು ಮಾತ್ರ ವಂಶಪಾರಂಪರ್ಯವಾಗಿ ಪಂಚರಾಗಿ ಅಧಿಕಾರ ನಡೆಸಲು ಅವಕಾಶವಿತ್ತು. ಈ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಸಿಗುತ್ತಿರಲಿಲ್ಲ ಎಂಬ ಆರೋಪಗಳಿವೆ. ಸಿರಿವಂತರು, ಶಕ್ತಿವಂತರ ಹೇಳಿಕೆಗಳು ನ್ಯಾಯವಾಗಿ ಬಿಡುತ್ತಿತ್ತು. ಅವರ ಅಭಿಪ್ರಾಯಗಳನ್ನು, ತೀರ್ಮಾನಗಳನ್ನು ಜನಸಾಮಾನ್ಯರು ವಿರೋಧಿಸುವ ಹಾಗಿರಲಿಲ್ಲ. ನಂತರ, ಕರ್ನಾಟಕದಲ್ಲಿ 1903ರಲ್ಲಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್ ಕಾಯಿದೆಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ, 3 ಹಂತಗಳ ಸ್ಥಳೀಯ ಆಡಳಿತ ವ್ಯವಸ್ಥೆ ಜಾರಿಗೆ ಬಂದಿತು. ಎ) ಜಿಲ್ಲಾ ಮಂಡಳಿ ಬಿ) ತಾಲ್ಲೂಕು ಬೋರ್ಡ್ ಸಿ) ಪಂಚಾಯಿತಿ ಸಂಘಟನೆ

ಸ್ವಾತಂತ್ರ್ಯಾನಂತರದಲ್ಲಿ ಅಂದರೆ 1959ರಲ್ಲಿ ಎಲ್ಲಾ ರಾಜ್ಯಗಳಲ್ಲೂ ಪಂಚಾಯತ್ ರಾಜ್ ಅಧಿನಿಯಮವನ್ನು ಜಾರಿಗೆ ತಂದು 3 ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹುಟ್ಟುಹಾಕಲಾಯಿತು. ಎ) ಗ್ರಾಮ ಪಂಚಾಯಿತಿ ಬಿ) ಬ್ಲಾಕ್ ಪಂಚಾಯಿತಿ ಸಮಿತಿ (ತಾಲ್ಲೂಕು ಬೋರ್ಡ್) ಸಿ) ಜಿಲ್ಲಾ ಪರಿಷತ್

ಈ ವ್ಯವಸ್ಥೆಯಲ್ಲಿ ಬ್ಲಾಕ್ ಪಂಚಾಯಿತಿ ಸಮಿತಿಗೆ ಹೆಚ್ಚಿನ ಅಧಿಕಾರ ನೀಡಲಾಯಿತು. ಅನಂತರದಲ್ಲಿ 1977ರಲ್ಲಿ ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯ ಕಾಲಕಲ್ಪಕ್ಕೆ ಪ್ರಯತ್ನ ಮಾಡಿತು. ಇದರ ಪರಿಣಾಮವಾಗಿ ದೇಶಾದ್ಯಂತ 2 ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲು ಶಿಫಾರಸ್ಸು ಮಾಡಿತು. ಅದರಲ್ಲಿ; ಎ) ಮಂಡಲ್ ಪಂಚಾಯಿತಿ ಬಿ) ಜಿಲ್ಲಾ ಪಂಚಾಯಿತಿ 1987 ರಿಂದ 1992ರ ಅವಧಿಯಲ್ಲಿ ಈ ಎರಡೂ ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಲ್ಲಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ಇಡೀ ದೇಶಕ್ಕೆ ಏಕರೂಪದ ಪಂಚಾಯತ್ ರಾಜ್ ಮಾದರಿಯನ್ನು ಜಾರಿಗೆ ತರುವ ಹಿನ್ನೆಲೆಯಲ್ಲಿ ಸಂವಿಧಾನದ 1973ರ ತಿದ್ದುಪಡಿಯನ್ನು ಮಾಡಿ, 3 ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಯನ್ನು 1993 ರಿಂದ ಜಾರಿಗೆ ತರಲಾಗಿದೆ. ಎ) ಗ್ರಾಮ ಪಂಚಾಯಿತಿ ಬಿ) ಮಧ್ಯಂತರ ಪಂಚಾಯಿತಿ (ತಾಲ್ಲೂಕು ಪಂಚಾಯಿತಿ) ಸಿ) ಜಿಲ್ಲಾ ಪಂಚಾಯಿತಿ

ಎ) ಗ್ರಾಮ ಪಂಚಾಯಿತಿ: ಪ್ರತಿ 5,000 ದಿಂದ 7,000 ಜನಸಂಖ್ಯೆಗೆ ಒಂದರಂತೆ ಗ್ರಾಮ ಪಂಚಾಯಿತಿಯ ರಚನೆಯನ್ನು ಮಾಡಲಾಯಿತು. ಪ್ರತಿ 400 ಜನಸಂಖ್ಯೆಗೆ ಒಬ್ಬರಂತೆ ಗ್ರಾಮ ಪಂಚಾಯಿತಿ ಸದಸ್ಯರನ್ನು ಆಯ್ಕೆ ಮಾಡಲು ಅವಕಾಶವಿರುತ್ತದೆ. ತಿಪಟೂರು ತಾಲ್ಲೂಕಿನ ಒಟ್ಟು ಜನಸಂಖ್ಯೆ 2,17,124 ಇದ್ದು, ಒಟ್ಟು 231 ಗ್ರಾಮಗಳು ಮತ್ತು 26 ಗ್ರಾಮ ಪಂಚಾಯಿತಿಗಳು ಇರುತ್ತವೆ.

ಬಿ) ಮಧ್ಯಂತರ ಪಂಚಾಯಿತಿ (ತಾಲ್ಲೂಕು ಪಂಚಾಯಿತಿ): ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರದ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ತಾಲ್ಲೂಕಿನ ಮೇಲೆ ತಾಲ್ಲೂಕು ಪಂಚಾಯಿತಿ ನಿಯಂತ್ರಣ ಹೊಂದಿರುತ್ತದೆ. ತಾಲ್ಲೂಕಿನ ಒಟ್ಟು ಜನಸಂಖ್ಯೆಯಲ್ಲಿ 10,000ಕ್ಕೆ ಒಬ್ಬರಂತೆ ತಾಲ್ಲೂಕು ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ. ಪ್ರತಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣೆ ಮೂಲಕ ಸದಸ್ಯರ ಆಯ್ಕೆ ನಡೆಯುತ್ತದೆ. ಮಾತ್ರವಲ್ಲದೆ, ತಾಲ್ಲೂಕನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಪದನಿಮಿತ್ತ ಸದಸ್ಯರುಗಳಾಗಿರುತ್ತಾರೆ. ಜೊತೆಗೆ ಒಂದು ವರ್ಷದ ಅವಧಿಗೆ ಸರದಿ ಪ್ರಕಾರ ತಾಲ್ಲೂಕಿನ 1/5 ಭಾಗದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು ತಾಲ್ಲೂಕು ಪಂಚಾಯಿತಿಗೆ ಸಹ-ಸದಸ್ಯರುಗಳಾಗಿರುತ್ತಾರೆ. ತಿಪಟೂರು ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 17 ಸದಸ್ಯರಿದ್ದು, ಅದರಲ್ಲಿ 10 ಜನ ಮಹಿಳೆಯರು ಮತ್ತು 7 ಜನ ಪುರುಷರು ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.

ಸಿ) ಜಿಲ್ಲಾ ಪಂಚಾಯಿತಿ: ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರದ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ, ಇಡೀ ಜಿಲ್ಲೆಯ ಮೇಲೆ ಜಿಲ್ಲಾ ಪಂಚಾಯಿತಿ ನಿಯಂತ್ರಣ ಹೊಂದಿದೆ. ಪ್ರತಿ ಜಿಲ್ಲಾ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾಯಿತ ಸದಸ್ಯರಲ್ಲದೆ ಜಿಲ್ಲೆಯನ್ನು ಪ್ರತಿನಿಧಿಸುವ ಲೋಕಸಭಾ ಸದಸದ್ಯರು, ವಿಧಾನಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರುಗಳು ಸದಸ್ಯರುಗಳಾಗಿರುತ್ತಾರೆ. ಭಾರತದಲ್ಲಿ ನಗರ ಪಂಚಾಯತ್ (ಪಟ್ಟಣ ಪಂಚಾಯತ್; ಅನುವಾದ. 'ಟೌನ್ ಕೌನ್ಸಿಲ್') ಅಥವಾ ಅಧಿಸೂಚಿತ ಪ್ರದೇಶ ಮಂಡಳಿ (ಎನ್‌ಎಸಿ) ಗ್ರಾಮೀಣದಿಂದ ನಗರಕ್ಕೆ ಪರಿವರ್ತನೆಯಾಗುವುದು [1] ಮತ್ತು ಆದ್ದರಿಂದ ಪುರಸಭೆಗೆ ಹೋಲಿಸಬಹುದಾದ ನಗರ ರಾಜಕೀಯ ಘಟಕದ ಒಂದು ರೂಪ. 11,000 ಕ್ಕಿಂತ ಹೆಚ್ಚು ಮತ್ತು 25,000 ಕ್ಕಿಂತ ಕಡಿಮೆ ನಿವಾಸಿಗಳನ್ನು ಹೊಂದಿರುವ ನಗರ ಕೇಂದ್ರವನ್ನು ನಗರ ಪಂಚಾಯತ್ ಎಂದು ವರ್ಗೀಕರಿಸಲಾಗಿದೆ.

 

ಇಂತಹ ಪರಿಷತ್ತುಗಳನ್ನು ಪಂಚಾಯತಿ ರಾಜ್ ಆಡಳಿತ ವ್ಯವಸ್ಥೆಯಡಿ ರಚಿಸಲಾಗಿದೆ. [2] ಜನಗಣತಿಯ ಮಾಹಿತಿಯಲ್ಲಿ, ಟಿ.ಪಿ. "ಪಟ್ಟಣ ಪಂಚಾಯತ್" ಅನ್ನು ಸೂಚಿಸಲು ಬಳಸಲಾಗುತ್ತದೆ. [3] ಗ್ರಾಮೀಣ ಹಳ್ಳಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು (ಯುಎಲ್‌ಬಿ) ನಡುವಿನ ಮಧ್ಯಂತರ ಹೆಜ್ಜೆಯಾಗಿ ಪಂಚಾಯತ್ ಪಟ್ಟಣವನ್ನು ಪರಿಚಯಿಸಿದ ಮೊದಲ ರಾಜ್ಯ ತಮಿಳುನಾಡು. [4] ನಗರ ಪಂಚಾಯಿತಿಯ ರಚನೆ ಮತ್ತು ಕಾರ್ಯಗಳನ್ನು ರಾಜ್ಯ ಸರ್ಕಾರ ನಿರ್ಧರಿಸುತ್ತದೆ.ಪಟ್ಟಣ ಪಂಚಾಯಿತಿವು ಪಂಚಾಯತಿ ರಾಜ್ ವ್ಯವಸ್ಥಯಡಿ ಸುಮಾರು ೧೦,೦೦೦ ದಿಂದ ೨೦೦೦೦ ಜನಸಂಖ್ಯೆಯ ನಗರಗಳಲ್ಲಿ ಜಾರಿಯಲ್ಲಿರುವ ಆಡಳಿತ ವ್ಯವಸ್ಥೆ.

ನಿರ್ವಹಣೆ

ಪ್ರತಿ ನಗರ ಪಂಚಾಯತ್‌ನಲ್ಲಿ ವಾರ್ಡ್ ಸದಸ್ಯರೊಂದಿಗೆ ಅಧ್ಯಕ್ಷರನ್ನು ಒಳಗೊಂಡ ಸಮಿತಿಯಿದೆ. ಸದಸ್ಯತ್ವವು ಕನಿಷ್ಠ ಹತ್ತು ಚುನಾಯಿತ ವಾರ್ಡ್ ಸದಸ್ಯರು ಮತ್ತು ಮೂವರು ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಿದೆ. ನಗರ ಪ್ರದೇಶದ ಎನ್‌ಎಸಿ ಸದಸ್ಯರನ್ನು ಐದು ವರ್ಷಗಳ ಅವಧಿಗೆ ವಯಸ್ಕ ಫ್ರ್ಯಾಂಚೈಸ್ ಆಧಾರದ ಮೇಲೆ ನಗರ ಪಂಚಾಯತ್‌ನ ಹಲವಾರು ವಾರ್ಡ್‌ಗಳಿಂದ ಆಯ್ಕೆ ಮಾಡಲಾಗುತ್ತದೆ. ಮೂರನೇ ಒಂದು ಭಾಗದಷ್ಟು ಸ್ಥಾನಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ನಗರ ಪಂಚಾಯತ್‌ನ ಚುನಾವಣಾ ವಾರ್ಡ್‌ಗಳಿಂದ ನೇರ ಚುನಾವಣೆಯ ಮೂಲಕ ಕೌನ್ಸಿಲರ್‌ಗಳು ಅಥವಾ ವಾರ್ಡ್ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ನಗರ ಪಂಚಾಯಿತಿಯ ರಚನೆ ಮತ್ತು ಕಾರ್ಯಗಳನ್ನು ರಾಜ್ಯ ಸರ್ಕಾರ ನಿರ್ಧರಿಸುತ್ತದೆ.

ಪ್ರತಿಯೊಂದು ಭಾರತೀಯ ರಾಜ್ಯವು ಪಂಚಾಯತ್ ಪಟ್ಟಣಗಳಿಗೆ ತನ್ನದೇ ಆದ ನಿರ್ವಹಣಾ ನಿರ್ದೇಶನಾಲಯವನ್ನು ಹೊಂದಿದೆ.