ವಿಷಯಕ್ಕೆ ಹೋಗು

ಶುಕ್ತೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಹಾರ ಮಳಿಗೆಯಲ್ಲಿ ಶುಕ್ತೊ

ಶುಕ್ತೊ (ಬಂಗಾಳಿ: শুক্তো) ಬಂಗಾಳಿ ಪಾಕಶೈಲಿಯಲ್ಲಿ ಒಂದು ಜನಪ್ರಿಯ ತರಕಾರಿ ಖಾದ್ಯವಾಗಿದೆ. ಭಾರತದ ಪಶ್ಚಿಮ ಬಂಗಾಳ ರಾಜ್ಯ ಮತ್ತು ನೆರೆ ದೇಶ ಬಾಂಗ್ಲಾದೇಶದಲ್ಲಿ ಇದನ್ನು ಸಾಮಾನ್ಯವಾಗಿ ಅನ್ನದೊಂದಿಗೆ ಬಡಿಸಲಾಗುತ್ತದೆ.[] ಇದು ಸ್ವಲ್ಪ ಕಹಿ ರುಚಿಯನ್ನು ಹೊಂದಿದ್ದು ಇದನ್ನು ಅನ್ನಪ್ರಾಶನ ಅಥವಾ ಮದುವೆಗಳಂತಹ ವಿಶೇಷವಾಗಿ ಬಂಗಾಳಿ ಸಾಮಾಜಿಕ ಸಮಾರಂಭಗಳ ಔತಣಗಳಲ್ಲಿ ಸಾಂಪ್ರದಾಯಿಕ ಬಂಗಾಳಿ ಥಾಲಿಯ ಭಾಗವಾಗಿ ಬಡಿಸಲಾಗುತ್ತದೆ.

ಶುಕ್ತೊ ಅಸಂಖ್ಯಾತ ಭಿನ್ನ ರೂಪಗಳನ್ನು ಹೊಂದಿದೆ ಮತ್ತು ಇದನ್ನು ವಿಭಿನ್ನ ಬಗೆಗಳಲ್ಲಿ ತಯಾರಿಸಬಹುದು.[]

ದೂಧ್ ಶುಕ್ತೊ ಒಂದು ಜನಪ್ರಿಯ ಬಗೆಯಾಗಿದ್ದು ಖಾದ್ಯದ ಕಹಿ ರುಚಿಯನ್ನು ತಗ್ಗಿಸಲು ಇದನ್ನು ಹಾಲಿನಿಂದ ತಯಾರಿಸಲಾಗುತ್ತದೆ.[]

ಕೆಲವು ಬಗೆಗಳನ್ನು ವಿಭಿನ್ನ ಗಾತ್ರಗಳ ಮೀನುಗಳಿಂದ ತಯಾರಿಸಲಾಗುತ್ತದೆ. ಅಂತಹ ಬಗೆಗಳು ಸಾಮಾನ್ಯವಾಗಿ ಸಸ್ಯಾಹಾರಿ ಬಗೆಗಳಲ್ಲಿ ಇಲ್ಲದಿರುವ ಅರಿಸಿನವನ್ನು ಬಳಸುತ್ತವೆ. ಕೆಲವು ಬಗೆಗಳು ಕಹಿ ತರಕಾರಿಗಳನ್ನು ಕೂಡ ಬಿಟ್ಟುಬಿಡುತ್ತವೆ. ಬದಲಾಗಿ ಕಹಿ ರುಚಿಯನ್ನು ಉಳಿಸಿಡಲು ಇವನ್ನು ಸಾಮಾನ್ಯವಾಗಿ ಮೆಂತೆ ಬೀಜಗಳಿಂದ ತಯಾರಿಸಲಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. >"Shukto: An Essential Bengali Cuisine not Influenced by the Portuguese Cooking – Different Truths" (in ಅಮೆರಿಕನ್ ಇಂಗ್ಲಿಷ್). Retrieved 2020-08-14.
  2. ೨.೦ ೨.೧ ೨.೨ >"Shukto: Why Can't Bengalis Start Their Meal Without This Bitter Medley Of Vegetables". NDTV Food. Retrieved 2020-08-14.
"https://kn.wikipedia.org/w/index.php?title=ಶುಕ್ತೊ&oldid=1007198" ಇಂದ ಪಡೆಯಲ್ಪಟ್ಟಿದೆ