ಶುಕ್ತೊ
ಶುಕ್ತೊ (ಬಂಗಾಳಿ: শুক্তো) ಬಂಗಾಳಿ ಪಾಕಶೈಲಿಯಲ್ಲಿ ಒಂದು ಜನಪ್ರಿಯ ತರಕಾರಿ ಖಾದ್ಯವಾಗಿದೆ. ಭಾರತದ ಪಶ್ಚಿಮ ಬಂಗಾಳ ರಾಜ್ಯ ಮತ್ತು ನೆರೆ ದೇಶ ಬಾಂಗ್ಲಾದೇಶದಲ್ಲಿ ಇದನ್ನು ಸಾಮಾನ್ಯವಾಗಿ ಅನ್ನದೊಂದಿಗೆ ಬಡಿಸಲಾಗುತ್ತದೆ.[೧] ಇದು ಸ್ವಲ್ಪ ಕಹಿ ರುಚಿಯನ್ನು ಹೊಂದಿದ್ದು ಇದನ್ನು ಅನ್ನಪ್ರಾಶನ ಅಥವಾ ಮದುವೆಗಳಂತಹ ವಿಶೇಷವಾಗಿ ಬಂಗಾಳಿ ಸಾಮಾಜಿಕ ಸಮಾರಂಭಗಳ ಔತಣಗಳಲ್ಲಿ ಸಾಂಪ್ರದಾಯಿಕ ಬಂಗಾಳಿ ಥಾಲಿಯ ಭಾಗವಾಗಿ ಬಡಿಸಲಾಗುತ್ತದೆ.
ಶುಕ್ತೊ ಅಸಂಖ್ಯಾತ ಭಿನ್ನ ರೂಪಗಳನ್ನು ಹೊಂದಿದೆ ಮತ್ತು ಇದನ್ನು ವಿಭಿನ್ನ ಬಗೆಗಳಲ್ಲಿ ತಯಾರಿಸಬಹುದು.[೨]
ದೂಧ್ ಶುಕ್ತೊ ಒಂದು ಜನಪ್ರಿಯ ಬಗೆಯಾಗಿದ್ದು ಖಾದ್ಯದ ಕಹಿ ರುಚಿಯನ್ನು ತಗ್ಗಿಸಲು ಇದನ್ನು ಹಾಲಿನಿಂದ ತಯಾರಿಸಲಾಗುತ್ತದೆ.[೨]
ಕೆಲವು ಬಗೆಗಳನ್ನು ವಿಭಿನ್ನ ಗಾತ್ರಗಳ ಮೀನುಗಳಿಂದ ತಯಾರಿಸಲಾಗುತ್ತದೆ. ಅಂತಹ ಬಗೆಗಳು ಸಾಮಾನ್ಯವಾಗಿ ಸಸ್ಯಾಹಾರಿ ಬಗೆಗಳಲ್ಲಿ ಇಲ್ಲದಿರುವ ಅರಿಸಿನವನ್ನು ಬಳಸುತ್ತವೆ. ಕೆಲವು ಬಗೆಗಳು ಕಹಿ ತರಕಾರಿಗಳನ್ನು ಕೂಡ ಬಿಟ್ಟುಬಿಡುತ್ತವೆ. ಬದಲಾಗಿ ಕಹಿ ರುಚಿಯನ್ನು ಉಳಿಸಿಡಲು ಇವನ್ನು ಸಾಮಾನ್ಯವಾಗಿ ಮೆಂತೆ ಬೀಜಗಳಿಂದ ತಯಾರಿಸಲಾಗುತ್ತದೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ >"Shukto: An Essential Bengali Cuisine not Influenced by the Portuguese Cooking – Different Truths" (in ಅಮೆರಿಕನ್ ಇಂಗ್ಲಿಷ್). Archived from the original on 2020-12-02. Retrieved 2020-08-14.
- ↑ ೨.೦ ೨.೧ ೨.೨ >"Shukto: Why Can't Bengalis Start Their Meal Without This Bitter Medley Of Vegetables". NDTV Food. Retrieved 2020-08-14.