ಶಾಂತಿವನ ಟ್ರಸ್ಟ್, ಧರ್ಮಸ್ಥಳ

ವಿಕಿಪೀಡಿಯ ಇಂದ
Jump to navigation Jump to search


ಪ್ರಕೃತಿಯ ರಮ್ಯ ಮನೋಹರ ತಾಣ, ಸಹ್ಯಾದ್ರಿಯ ಮನೋಹರ ತಪ್ಪಲು, ಬಳುಕುತ್ತಿರುವ ನೇತ್ರಾವತಿ ನದಿ ಮನೋಹರ ವಲಯಗಳಿಂದ ಸುತ್ತುವರಿದಿರುವ ಪುಣ್ಯಕ್ಷೇತ್ರ, ಧರ್ಮಸ್ಥಳವಾಗಿದೆ ಶ್ರೀ ಕ್ಷೇತ್ರ ಧರ್ಮಸ್ಥಳ. ಭಕ್ತರ ಸ್ನೇಹಮಯನಾದ ಮಂಜುನಾಥನೆಂಬ ಕರುಣೆಯ ವಲ್ಲಭ ತ್ರಿಮೂರ್ತಿಗಳಲ್ಲಿ ಓರ್ವ ನೆಲೆಸಿಹ ಧರ್ಮಸ್ಥಳದ ಬಗ್ಗೆ 'ಎಲ್ಲೆ ಮೀರದಿರಲಿ, ಸೀಮೆಯ ಕಾಣದಿರಲಿ, ಎಲ್ಲೆ ಸೀಮೆಯ ತರಸಿಹೆನು ಅದು ಮಂಜುನಾಥನ ಮಹಿಮೆಯೇ' ಎಂದು ಈ ಕ್ಷೇತ್ರದ ಬಗ್ಗೆ ಹೇಳಬಹುದಾಗಿದೆ. ಈ ಪುಣ್ಯ ಕ್ಷೇತ್ರಕ್ಕೆ ಅನ್ನಭೂಮಿಗೆ ಶಿರೋಭೂಷಣವೇ "ಶಾಂತಿವನ" ವಾಗಿದೆ. ಹೆಸರೇ ಸೂಚಿಸುವಂತೆ ಶಾಂತಿಯ ಸ್ಥಳ. ಪುಣ್ಯಕ್ಷೇತ್ರದ ಕರಮಂಡಲ, ಕರಮಂಡಲವೇ ಈ ನಿಸ್ವಾರ್ಥತೆಯ, ನಿರರ್ಗಳತೆಯ ತಾಣವಾಗಿದೆ. ಲೌಕಿಕ, ಅಲೌಕಿಕ, ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕತೆಗಳ ಅಪೂರ್ವ ಸಂಗಮವಾಗಿದೆ. ಶಾಂತಿವನವು ತನ್ನ ಸಹ ಅಂಗಗಳನ್ನು ಒಂದರ ಮೇಲೊಂದಾಗಿ ವಿಶಾಲವಾಗಿ ವಿಸ್ತರಿಸಿಕೊಂಡಿದೆ. ಅದರ ಪರಮಕರಗಳಾಗಿ ಶ್ರೀ ಧ.ಮ. ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ, ಶ್ರೀ ಧ.ಮ. ಯೋಗ ಮತ್ತು ನೈತಿಕ ಶಿಕ್ಷಣ ಸಂಸ್ಥೆ ಮತ್ತು ಶ್ರೀ ಧ.ಮ. ಕಲ್ಯಾಣ ಮಂಟಪ ಮಂಟಪ. ಒಂದಕ್ಕೊಂದು ಸಾಟಿಯಿಲ್ಲವೆಂಬಂತೆ ಪ್ರತಿಯೊಂದೂ ತನ್ನ ಪ್ರಚಂಡ ಕರಗಳನ್ನು ಆಗಸದೆತ್ತರಕ್ಕೆ ಹಿಡಿದಿದೆ. ಇಲ್ಲಿ ಪ್ರತಿಯೊಂದು ಘಟಕಗಳನ್ನು ದೀರ್ಘವಾಗಿ, ಸುದೀರ್ಘವಾಗಿ ವಿಂಗಡಿಸಿ ಹೇಳಬಹುದಾಗಿದೆ.

ಯೋಗ ಮತ್ತು ನೈತಿಕ ಶಿಕ್ಷಣ: ಕಾರ್ಯಯೋಜನೆ ಮತ್ತು ಉದ್ದೇಶ[ಬದಲಾಯಿಸಿ]

ಇದು ಒಗ್ಗಟ್ಟಿನ ಸಹಬಾಳ್ವೆಯ ಯೋಜನೆಯಾಗಿದೆ. ಇದನ್ನೊಂದು ಪಂಚವಾರ್ಷಿಕ ಯೋಜನೆ ಎಂದು ಕರೆಯಬಹುದಾಗಿದೆ. ಈ ಯೋಜನೆ ತನ್ನ ಎಲ್ಲೆಗಳನ್ನು ಕಿಲೋಮೀಟರ್ ಗಳಿಂದ ಹಿಡಿದು ನೂರಾರು ಮೈಲುಗಳವರೆಗೆ ಸುದೀರ್ಘವಾಗಿ ವಿಸ್ತರಿಸಿಕೊಂಡು ಹೋಗಿದೆ ಎನ್ನಬಹುದಾಗಿದೆ. ಇದು ಪ್ರಪ್ರಥಮವಾಗಿ ಅವಿಭಜಿತ ದ.ಕ ಜಿಲ್ಲೆಯಿಂದಲೇ ತನ್ನ ನಾಗಾಲೋಟಕ್ಕೆ ಅಭಿಯಾನವನ್ನು, ತಳಪಾಯವನ್ನು ಆರಂಭಿಸಿದೆ ಎನ್ನಬಹುದಾಗಿದೆ. ಪ್ರತಿ ವರ್ಷವೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ೫೦ ಆಸಕ್ತ ಶಿಕ್ಷಕ-ಶಿಕ್ಷಕಿಯರಿಗೆ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ೨೧ ದಿನಗಳ ಸನಿವಾಸ ಉಚಿತ ಯೋಗ ಮತ್ತು ನೈತಿಕ ಪ್ರತಿಶಿಕ್ಷಣ ನೀಡುತ್ತಾರೆ. ತರಬೇತಿಯನ್ನು ಪಡೆದು ನವಚೈತನ್ಯವನ್ನು, ಉತ್ಸಾಹವನ್ನು ಪಡೆದು ಹೊರಬಂದ ಪ್ರತಿಯೋರ್ವ ಶಿಕ್ಷಕನೂ ಅವರವರ ಶಾಲೆಗಳಲ್ಲಿ ಕನಿಷ್ಠ ೧೦೦ ಜನ ವಿದ್ಯಾರ್ಥಿಗಳಿಗೆ ಉಚಿತವಾಗಿ ಒಂದು ವರ್ಷದ ಯೋಗ ಮತ್ತು ನೈತಿಕ ಶಿಕ್ಷಣವನ್ನು ನೀಡುವ ಕಾರ್ಯ ಕೈಗೊಳ್ಳಬೇಕು. ಅಂದರೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನೂರಾರು ಭವ್ಯಭಾರತದ ಸದೃಢ, ಆಚಾರವಂತ ಪ್ರಜೆಗಳನ್ನು, ಅವರ ವ್ಯಕ್ತಿತ್ವವನ್ನು ಬೆಳೆಸುವುದೇ ಅದರ ಉದ್ದೇಶ. ಹಾಗಾಗಿ ಅಪೂರ್ವವಾದ ನಿಸ್ವಾರ್ಥತೆಯ, ಕೇಂದ್ರವೇ ಸರಿ. ಓರ್ವ ಶಿಕ್ಷಕ ೧೦೦ ಮಂದಿಗೆ ಎಂಬಂತೆ ವಿದ್ಯೆಯನ್ನು ಧಾರೆಯೆರೆದರೆ ವರ್ಷದಿಂದ- ವರ್ಷಕ್ಕೆ ದಶಕದಿಂದ-ದಶಕಕ್ಕೆ ತಲೆಮಾರಿನಿಂದ-ತಲೆಮಾರಿಗೆ ಎಷ್ಟೋಂದು ಭವ್ಯವಾದ, ಏಕಾಗ್ರ ಚಿತ್ತರಾದ, ಆಲೋಚನಾಪರರಾದ ಪ್ರಜೆಗಳು ನಿರ್ಮಾಣವಾದಾರು? ಒಮ್ಮೆ ಆಲೋಚಿಸಿ ನೋಡಿ. ಶಾಂತಿವನವು ಕಳೆದ ಹತ್ತು ವರ್ಷಗಳಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಅದು ನಡೆದು ಬಂದ ದಾರಿ, ಸಾಧನೆಗಳ ಬಗ್ಗೆ ಪರಿಚಯಿಸುವ ಒಂದು ಕಿರು ಪ್ರಯತ್ನವೇ ಇದು. ಆದರ್ಶ ಶಿಕ್ಷಕರ ಸಂಘಟನೆ ಭಾರತೀಯ ಸಂಸ್ಕ್ಳತಿಯ ಜೀವನಾದರ್ಶಗಳ, ನೈತಿಕ ಮೌಲ್ಯಗಳ ಪುಸ್ತಕ ಪ್ರಕಾಶನ ಹಾಗೂ ಪರಿಚಯ ಯೋಗದ ಮೂಲಕ "ಪಂಚಮುಖ" ವ್ಯಕ್ತಿತ್ವ ವಿಕಾಸದ ತರಬೇತಿ ಹೀಗೆ ಹಲವಾರು ಯೋಜನೆಗಳು ಕಳೆದೊಂದು ದಶಕದಿಂದ ಯಶಸ್ವಿಯಾಗಿ ಕಾರ್ಯಗತಗೊಳ್ಳುತ್ತಿವೆ. ಎಳವೆಯಲ್ಲಿಯೇ ಸುದೃಢ ಶರೀರ, ಸ್ವಸ್ಥ ಮನಸ್ಸಿನ ನಿರ್ಮಾಣ, ಯೋಗದ ಸಮಗ್ರ ಪರಿಚಯ ಆಗುವುದರಿಂದ ಅರ್ಷಗಳು ಉರುಳಿದಂತೆ ಬಾಲ್ಯದಲ್ಲಿ ಕಲಿತ ಸದ್ವಿದ್ಯೆ, ಭವ್ಯ ಭವಿಷ್ಯದ ಭದ್ರ ಅಡಿಪಾಯಕ್ಕೆ ಕಾರಣವಾಗುತ್ತದೆ. ಅದರ ಪರಿಣಾಮವಾಗಿ ಸುಶಿಕ್ಷಿತ, ಆರೋಗ್ಯವಂತ, ಸುದೃಢ ಸಮಾಜ ರಚನೆ ಸುಲಭಸಾಧ್ಯವಾದೀತಲ್ಲವೇ? ಈ ವಿದ್ಯಾರ್ಥಿಗಳ ಮೂಲಕ ಅವರ ಮನೆಗಳಲ್ಲಿ ಸುಸಂಸ್ಕೃತ ಪರಿಸರ, ಸಮಾಜ ನಿರ್ಮಾಣದ ಕನಸನ್ನು ಸಾಧಿಸಬಹುದಾಗಿದೆ. ಈ ಯೋಜನೆಗಳ ರೂವಾರಿಯಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರೋತ್ಸಾಹ, ಪ್ರೇರಣೆಯೇ ಇದಕ್ಕೆಲ್ಲಾ ಮೂಲ ಕಾರಣವಾಗಿದೆ. ಸಮಾಜದ ಸ್ವಾಸ್ಥ್ಯಕ್ಕಾಗಿ, ಸಮ್ಯಕ್ ಜ್ಞಾನಶೀಲ ಚಾರಿತ್ರ್ಯಗಳ ನಿರ್ಮಾಣಕ್ಕಾಗಿ ಅಗಾಧ ವೆಚ್ಚದ ಇಂತಹ ಕಾರ್ಯಯೋಜನೆಯನ್ನು ಅವರ ಅಪೂರ್ವ ವ್ಯಕ್ತಿತ್ವವೇ ಕಾರ್ಯಗತಗೊಳಿಸಿತು ಎನ್ನಬಹುದು. ಅನ್ನದಾನ, ವಸ್ತ್ರದಾನ, ಅಭಯದಾನ, ವಿದ್ಯಾದಾನಗಳಿಗೆ ಪ್ರಸಿದ್ಧವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳವು ಆರೋಗ್ಯದಾನ ಪ್ರಕಲ್ಪದಡಿಯಲ್ಲಿ ಶರೀರ ಮನ ಬುದ್ಧಿಗಳ ಸರ್ವಾಂಗೀಣ ಆರೋಗ್ಯಭಾಗ್ಯಕ್ಕೆ ಮೂಲವಾಗಿದೆ. ಯೋಗ, ಪ್ರಕೃತಿ ಚಿಕಿತ್ಸೆ ಮತ್ತು ನೈತಿಕ ಶಿಕ್ಷಣ ಮೌಲ್ಯಗಳ ಪ್ರಸಾರದ ಉದ್ದೇಶದ ಅನುಷ್ಠಾನಕ್ಕೆ ಆಶ್ರಯ ಒದಗಿಸಿದೆ. ಪ್ರತಿಯೊಂದಕ್ಕೂ ಮಿತಿಯಿದೆ. ಅವು ಅನ್ನ, ವಸ್ತ್ರ ಇವುಗಳಲ್ಲಿರುತ್ತವೆ. ಆದರೆ ವಿದ್ಯೆಗೆ ಮಿತಿಯಿಲ್ಲ. ನಾವು ಅನ್ನ ದಾನವನ್ನು ಶ್ರೇಷ್ಠವೆಂದರು ಅದು ಉಂಡು, ತಿಂದು ತೇಗುವ ತನಕ ಮಾತ್ರ ಅದರ ಕೃತಾರ್ಥಭಾವನೆ ಉಳಿಯುತ್ತದೆ. ಆದರೆ ವಿದ್ಯಾದಾನಕ್ಕೆ ಮಿತಿಯಿಲ್ಲ. ಅದಕ್ಕೆ ಬೆಲೆ ಕಟ್ಟಲು ಅಸಾಧ್ಯ. ಅದಕ್ಕೆ ಕೊನೆಯನ್ನು ದೊರಕಿಸಿಕೊಳ್ಳುವುದು ಒಂದು ಅಸಾಧ್ಯದ ಮಾತೇ ಸರಿ. ಆದರೆ ಇವುಗಳೆಲ್ಲದರ ಮೂರ್ತಸ್ವರೂಪವೇ ಶಾಂತಿವನ. ಶಾಂತಿವನಕ್ಕೆ ಇನ್ನೊಂದು ಮುಕುಟವೆಂದರೆ ಬಂಟ್ವಾಳದಲ್ಲಿರುವ ಕಲ್ಯಾಣ ಮಂಟಪ. ಅದು ತನ್ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮದುವೆ, ಮುಂಜಿ ಮುಂತಾದ ಶುಭ ಸಮಾರಂಭಗಳನ್ನು ಶ್ರೀ ಸಾಮಾನ್ಯರಿಗೆ ಎಟುಕುವ ರೀತಿಯಲ್ಲಿ, ಮಿತಿದರದಲ್ಲಿ ನಡೆಸಿಕೊಡುತ್ತದೆ.

ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ[ಬದಲಾಯಿಸಿ]

“ಶರೀರ ಮಾಧ್ಯಂ ಖಲು ಧರ್ಮಸಾಧನಂ” ಆದುದರಿಂದ ಈ ಶರೀರ ನಿರೋಗವಾಗಬೇಕಾದರೆ ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸು ರೂಪುಗೊಳ್ಳಬೇಕು. ಅಸ್ವಸ್ಥತೆಯಿದ್ದರೆ ಸ್ವಸ್ಥತೆ ದೊರಕಲಾರದು. ಈ ಶರೀರಕ್ಕೆ ತಗುಲಬಹುದಾದ ರೋಗಗಳಿಗೆ ದುಷ್ಪರಿಣಾಮ ಬೀರುವ ಯಾವುದೇ ಮದ್ದುಗಳನ್ನು ಬಳಸಿ ತಾತ್ಕಾಲಿಕ ಶಮನ ನೀಡವ ಬದಲು ಸರಳ, ನಿರೌಷಧ, ಸ್ವದೇಶಿ ಪದ್ಧತಿಯನ್ನು ಬಳಸಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮೂಲಕ ಪೂರ್ಣ ಗುಣಮುಖರನ್ನಾಗಿ ಮಾಡಬೇಕು. ಈ ಉದ್ದೇಶದಿಂದ 1987 ಜೂನ್ 29 ರಂದು ಸ್ಥಾಪಿಸಲಾದ ಸಂಸ್ಥೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ. ಯಾವುದೇ ಕಾಯಿಲೆಗಳಿಗೆ ಇಲ್ಲಿ ಮದ್ದುಗಳಿಲ್ಲ, ಗುಳಿಗೆ ಇಲ್ಲ, ಟಾನಿಕ್ ಇಲ್ಲ, ಇಂಜೆಕ್ಷನ್ ಗಳಂತೂ ಇಲ್ಲವೇ ಇಲ್ಲ. ಅಂದರೆ ಆಧುನಿಕತೆಯ, ವೈಜ್ಞಾನಿಕತೆಯ ಯಾವುದೇ ಸೋಂಕೂ ಇಲ್ಲಿ ಕಾಣಸಿಗುವುದಿಲ್ಲ. ಪ್ರತಿಯೊಂದುಪರಂಪರಾಗತ, ಪ್ರಾಚೀನ , ದೈವದತ್ತ, ಪಂಚಭೂತಗಳಿಂದ ನಿರ್ಮಿತವಾದ ಈ ಶರೀರಕ್ಕೆ ಪಂಚಭೂತಗಳನ್ನೇ ಮಾಧ್ಯಮವನ್ನಾಗಿ ಬಳಸಿ ರೋಗವನ್ನು ದೂರಮಾಡುವ ನಿಸರ್ಗ ಚಿಕಿತ್ಸ ಕ್ರಮ ಈ ಚಿಕಿತ್ಸಾಲಯದ್ದು. ಈ ನಿರೌಷಧ ಪದ್ಧತಿಯ ಜೊತೆಗೆ “ಯೋಗ” ವನ್ನು ಬಳಸಿಕೊಂಡು ಶರೀರ ಮನಸ್ಸುಗಳ ಸಮತೋಲನವನ್ನು ಸಾಧಿಸುವ ಚಿಕಿತ್ಸೆಯನ್ನು ಇಲ್ಲಿ ನೀಡಲಾಗುತ್ತಿದೆ. ದೇವರ ದಯೆಯಾದ ಈ ನಿಸರ್ಗವೇ ನಮ್ಮೆಲ್ಲರ ಪ್ರತಿಯೊಂದು ಚಟುವಟಿಕೆಗಳಿಗೆ ಮೂಲವಾಗಿದೆ. ಇಲ್ಲಿ ಯಾವುದೇ ದುಷ್ಪರಿಣಾಮವಿಲ್ಲದ ಕಡಿಮೆ ಖರ್ಚಿನ ಚಿಕಿತ್ಸೆಗಳು ದೊರೆಯುತ್ತವೆ. ಪವಿತ್ರ ನದಿ ತೀರದ ‘ಶಾಂತಿವನ ಟ್ರಸ್ಟ್’ ನಿಜಕ್ಕೂ ಅದ್ಭುತ. ಚಿಕಿತ್ಸೆಯ ವೈಜ್ಞಾನಿಕ ಕ್ರಮಗಳಾದ ಉಗಿಸ್ನಾನ, ಸೋನಾಬಾತ್, ನೀರಿನ ಕಂಪನ ಚಿಕಿತ್ಸೆ, ಸುಳಿಸ್ನಾನ, ಕಟಿ ಮತ್ತು ಬೆನ್ನು ಹುರಿಸ್ನಾನ, ವಿಶೇಷ ಚಿಕಿತ್ಸೆಗಳಾದ ಫಿಜಿಯೋತೆರಪಿ, ಆಯಸ್ಕಾಂತ ಚಿಕಿತ್ಸೆ, ವರ್ಣ ಮತ್ತು ವಿದ್ಯುತ್ ಕಂಪನ ಚಿಕಿತ್ಸೆ ಮಣ್ಣಿನ ಹಾಗೂ ಆಹಾರ ಉಪಚಾರಗಳು ಇಲ್ಲಿ ನಡೆಯುತ್ತಿವೆ. ಸಂಚಾರಿ ಯೋಗ ಘಟಕ ಭಾರತ ಮಾತೆಯ ತವ ನಿಧಿಯಾದ ಯೋಗವು ಋಷಿಮುನಿಗಳ ಬಳುವಳಿಯಾಗಿದ್ದು ಅಂತರಂಗದ ಕನ್ನಡಿ, ಬಹಿರಂಗದ ಶಿಕ್ಷಕನಾಗಿದ್ದು ಆರೋಗ್ಯವರ್ಧಕವಾಗಿದೆ. ಇಂದು ವಿಶ್ವದಾದ್ಯಂತ ಯೋಗ ಪ್ರಚಾರ ಅನುಸರಣೆಯಲ್ಲಿದ್ದರೂ, ಭಾರತದಲ್ಲಿ ಅದಕ್ಕೆ ಸಿಗುತ್ತಿರುವ ಪ್ರಾಧಾನ್ಯತೆ ಹೆಚ್ಚಾಗಬೇಕಾಗಿದೆ. ಜನಸಾಮಾನ್ಯರಿಗೂ ಲಾಭವಾಗಬೇಕಾಗಿರುವುದರಿಂದ ಹಳ್ಳಿ-ಹಳ್ಳಿಗಳಲ್ಲಿ ಯೋಗದ ಪ್ರಚಾರವಾಗಬೇಕು. ಅಬಾಲವೃದ್ಧರಾದಿಯಾಗಿ ಎಲ್ಲರೂ ಈ ವಿದ್ಯೆಯನ್ನು ಪರಿಚಯಿಸಿಕೊಳ್ಳುವಂತಾಗಬೇಕು ಎನ್ನುವ ಕನಸು ಪೂಜ್ಯ ಶ್ರೀ ವೀರೇಂದ್ರ ಹಗ್ಗಡೆಯವರದು. ಅದನ್ನು ನನಸಾಗಿಸಲು ಆರಂಭಿಸಿದುದೇ ‘ಸಂಚಾರಿ ಯೋಗ ಘಟಕ’. ಯಾವುದೇ ಊರಿನ ಸಂಘ ಸಂಸ್ಥೆಗಳಾಗಲೀ, ಊರಿನ ಆಸಕ್ತರಾಗಲೀ ಯೋಗಾಸಕ್ತರನ್ನು ಕೂಡಿಸಿ ಕಲಿಯಲು ಹಂಬಲತೋರಿಸಿದರೆ ಅಲ್ಲಿಗೆ ಶಾಂತಿವನ ಟ್ರಸ್ಟ್ ನ ವತಿಯಿಂದ ಉಚಿತವಾಗಿ ಯೋಗ ಶಿಕ್ಷಣ ನೀಡಲು ಶಿಕ್ಷಕರನ್ನು ನಿಯೋಜಿಸಲಾಗಿತ್ತದೆ. ಹದಿನೈದು ದಿನಗಳ ಇಂತಹ ಶಿಬಿರಕ್ಕೆ ಸಾಂಕೇತಿಕವಾಗಿ ಸಂದಾಯ ಮಾಡಬೇಕಾದ ನೋಂದವಣಾ ಶುಲ್ಕ ಸಣ್ಣ ಮಟ್ಟದಾಗಿದೆ. ಈ ಬಗೆಯ ಸ್ಫೂರ್ತಿಗೊಂಡು ಹಲವಾರು ಊರಿನ ಸಂಘ ಸಂಸ್ಥೆಗಳು ಈವರೆಗೆ ಹಮ್ಮಿಕೊಂಡ ಶಿಬಿರಗಳ ಸಂಖ್ಯೆ ಹಲವಾರು. ಈ ಶಿಬಿರಗಳಲ್ಲಿ ತರಬೇತಿ ಪಡೆದವರ ಸಂಖ್ಯೆ 18,000 ಕ್ಕೂ ಹೆಚ್ಚು. ಯೋಗ ಮತ್ತು ನೈತಿಕ ಯೋಜನೆಯ ನಿರ್ದೇಶಕ ಈ ಎಲ್ಲಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ. ಯೋಗ ಶಿಬಿರಗಳಲ್ಲಿ ಬಹುಮುಖ್ಯವಾಗಿ ಉಲ್ಲೇಖಿಸಬಹುದಾದ ಶಿಬಿರವೆಂದರೆ ರಾಜ್ಯದ ಶಾಸಕರುಗಳಿಗೆ ಬೆಂಗಳೂರಿನ ಶಾಸಕರ ಭವನದಲ್ಲಿ ೧೯೯೧ ಮತ್ತು ೧೯೯೩ ರಲ್ಲಿ ಹಮ್ಮಿಕೊಂಡಿದ್ದ ಯೋಗ ಶಿಬಿರಗಳು. ಪಕ್ಷಭೇದ ಮರೆತು ಭಾಗವಹಿಸಿದ್ದ ೩೮ ಶಾಸಕರು, ಸಚಿವರುಗಳಲ್ಲಿ ಮುಖ್ಯವಾಗಿ ಶ್ರೀ ಭಿಮಣ್ಣ ಖಂಡ್ರೆ, ಶ್ರೀ ರಮಾನಾಥ ರೈ, ಶ್ರೀ ಮಲ್ಲಾರಿ ಗೌಡ ಪಾಟೀಲ್, ಶ್ರೀ ಕೆ. ಈಶ್ವರಪ್ಪ, ಮುಂತಾದ ಹಿರಿಯ ಶಾಸಕರು ಭಾಗವಹಿಸಿದ್ದರು. ಇಲ್ಲಿ ವಯಸ್ಸಿನ ತಾರತಮ್ಯ ಗೌಣವಾಗಿದೆ. ಶಿಬಿರದ ಅವಧಿಯಲ್ಲಿ ಶಿಸ್ತು, ಸಮಯ ಪಾಲನೆ, ಕಲಿಕೆಯಲ್ಲಿ ಆಸಕ್ತಿ ಇವುಗಳು ಶಿಬಿರಾರ್ಥಿಗಳಲ್ಲಿ ಕಂಡುಬರಬೇಕಾದ ಪ್ರಮುಖವಾದ ಪ್ರಾಥಮಿಕ ಆಂಶ. ಮೊದಲ ಶಿಬಿರದ ಅಂತ್ಯದಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಶ್ರೀ ವೀರೇಂದ್ರ ಪಾಟೀಲರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ. ಪೂಜ್ಯ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಸಭೆಯಲ್ಲಿ ಮುಖ್ಯ ಆಮಂತ್ರಿತರು. ಅಲ್ಲಿ ಶಾಸಕರಿಂದ ಯೋಗಾಸನದ ಪ್ರದರ್ಶನದ ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಯೋಗದ ಕಲಿಕೆ, ಅನುಸರಣೆಯಿಂದ ಶಾರೀರಿಕ ದೃಢತೆ, ಮಾನಸಿಕ ಶಾಂತಿಯ ಜೊತೆಗೆ ಸಚ್ಚಾರಿತ್ರ್ಯ ನಿರ್ಮಾಣ ಸಾಧ್ಯ.

ಶಿಬಿರದ ದಿನಚರಿ[ಬದಲಾಯಿಸಿ]

ಬೆಳಗ್ಗೆ ೫.೦೦-ಉತ್ಥಾನ, ಪ್ರಾತರ್ವಿಧಿ
೫.೩೦-೬.೩೦- ಪ್ರಾತಃಸ್ಮರಣೆ, ವಂದೇ ಮಾತರಂ, ಪಂಚಾಂಗ
೬.೩೦-೮.೦೦-ಯೋಗಭ್ಯಾಸ(ಪ್ರಾಯೋಗಿಕ)
೮-೧೫-೮.೪೫-ಉಪಹಾರ
೮.೪೫-೯.೧೫-ಕರ್ಮಯೋಗ
೯.೧೫.೯.೪೫- ಸ್ನಾನಾದಿ ಸ್ವಚ್ಛತೆ
೯.೪೫-೧೧- ಬೌದ್ಧಿಕ ವರ್ಗ-೧
೧೧.೦೦-೧೧.೧೫- ಲಘು ಪಾನೀಯ
೧೧.೧೫-೧೨.೩೦- ಉಪನ್ಯಾಸ-೨
೧೨.೩೦-೨.೩೦- ಭಗವದ್ಗೀತಾ ಪಠಣ, ಭೋಜನ, ವಿಶ್ರಾಂತಿ
೨.೩೦-೩.೪೫- ವ್ಯಕ್ತಿತ್ವ ವಿಕಸನ ತರಬೇತಿ
೩.೪೫-೪.೩೦- ಲಘುಪಾನೀಯ-ವಿರಾಮ
೪.೩೦-೫.೩೦- ಪ್ರಾಣಾಯಾಮ-ಧ್ಯಾನ ತರಗತಿ
೫.೩೦-೬.೦೦- ಯೆೌಗಿಕ ಆಟಗಳು
೬.೦೦-೬.೩೦- ಪ್ರಕೃತಿ ವಿಹಾರ
೬.೩೦-೭.೧೫- ಭಕ್ತಿಯೋಗ,ಭಜನೆ
೭.೧೫-೮.೧೫- ಬೋಜನ
೮.೩೦-೯.೩೦-ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನ
೯.೪೫- ವಿಶ್ರಾಂತಿ

ಯೋಗ ಶಿಬಿರದ ದಿನಚರಿಗಳ ಪಠ್ಯಕ್ರಮಗಳು ಶಿಸ್ತು ಬದ್ಧ. ಅದು ನಮ್ಮನ್ನು ಆ ಕ್ಷೇತ್ರದ ಕಡೆಗೆ ಆಸಕ್ತರಾಗುವಂತೆ ಮತ್ತು ಅದರಲ್ಲಿ ಒಂದು ರೀತಿಯ ಅವ್ಯಕ್ತ ಅನುಭವ, ಅನುಭೂತಿ ಮೂಡಲು ಸಹಾಯ ನೀಡಿತ್ತದೆ. ಅದು ಕೂಡ ಒಂದು ವ್ಯಕ್ತಿತ್ವ ವಿಕಸನದ ಅಪೂರ್ವ ಮಾರ್ಗದರ್ಶಕ ಕೇಂದ್ರವಾಗಿದೆ. ಯೋಗ ಶಿಕ್ಷಣದ ಸುದೀರ್ಘ ಪರಿಚಯ ನಾವು ಅದರಲ್ಲಿ ಕೇಂದ್ರಿತವಾದಾಗ ತಿಳಿಯಲು ಸಾಧ್ಯವಾಗುತ್ತದೆ.

ಯೋಗ ಪ್ರಶಿಕ್ಷಣ ಶಿಬಿರದ ಪಠ್ಯಕ್ರಮಗಳು[ಬದಲಾಯಿಸಿ]

ಭಾಗ-೧ ಯೋಗದ ಮೂಲ ಕಲ್ಪನೆಗಳು[ಬದಲಾಯಿಸಿ]

ಯೋಗವ್ಯಾಖ್ಯೆ, ಸಾಮಾನ್ಯ ಕಲ್ಪನೆ, ವಿಸ್ತಾರ[ಬದಲಾಯಿಸಿ]

ಅ.ಯೋಗದ ಪಥಗಳು:

 • ಜ್ಞಾನಯೋಗ
 • ಭಕ್ತಿಯೋಗ
 • ಕರ್ಮಯೋಗ
 • ರಾಜಯೋಗ
 • ನಾಲ್ಕು ಪಥಗಳ ಐಕ್ಯತೆ

ಆ.ಯೋಗ ಮತ್ತು ಶಿಕ್ಷಣ:

 • ಶಿಕ್ಷಣ-ಪೌರಾತ್ಯ ಕಲ್ಪನೆ
 • ಯೋಗ ಮತ್ತು ಶಿಕ್ಷಣದ ಸಂಬಂಧ

ಸರ್ವತೋಮುಖ ವ್ಯಕ್ತಿತ್ವ ವಿಕಾಸದ ಸಾಧನವಾಗಿ ಯೋಗ[ಬದಲಾಯಿಸಿ]

ಇ.ಪಂಚಮುಖಿ ವ್ಯಕ್ತಿತ್ವ ವಿಕಾಸ

 • ಶಾರೀರಿಕ ವ್ಯಕ್ತಿತ್ವ ವಿಕಾಸ
 • ಮಾನಸಿಕ ವ್ಯಕ್ತಿತ್ವ ವಿಕಾಸ
 • ಬೌದ್ಧಿಕ ವ್ಯಕ್ತಿತ್ವ ವಿಕಾಸ
 • ಭಾವನಾತ್ಮಕ ವ್ಯಕ್ತಿತ್ವ ವಿಕಾಸ
 • ಆಧ್ಯಾತ್ಮಿಕ ವ್ಯಕ್ತಿತ್ವ ವಿಕಾಸ

ಈ.ಚತುರ್ಮುಖ ಪ್ರಜ್ಞಾಭಿವೃದ್ಧಿ

 • ನಾಗರಿಕ ಪ್ರಜ್ಞೆ
 • ದೇಶ ಪ್ರೇಮ
 • ಸೇವಾ ಭಾವ
 • ಆಧ್ಯಾತ್ಮಿಕ ಹಂಬಲ

ಉ.ಪಂಚಕೋಶ ಕಲ್ಪನೆ:

 • ಅನ್ನಮಯ ಕೋಶ
 • ಪ್ರಾಣಾಮಯ ಕೋಶ
 • ಮನೋಮಯ ಕೋಶ
 • ವಿಜ್ಞಾಮಯ ಕೋಶ
 • ಆನಂದಮಯ ಕೋಶ

ಭಾಗ-೨ ಯೌಗಿಕ ಅಭ್ಯಾಸಗಳ ಸಿದ್ಧಾಂತ[ಬದಲಾಯಿಸಿ]

 • ಉಸಿರಾಟದ ಅಭ್ಯಾಸಗಳು
 • ಶಿಥಿಲೀಕರಣ ವ್ಯಾಯಾಮಗಳು
 • ಸೂರ್ಯ ನಮಸ್ಕಾರ
 • ಆಸನಗಳು
 • ಪ್ರಾಣಾಯಾಮ
 • ಧಾರಣಾ, ಧ್ಯಾನ ಮತ್ತು ಸಮಾಧಿ
 • ಕ್ರಿಯೆಗಳು
 • ಬಂಧುಗಳು, ಮುದ್ರೆಗಳು
 • ಯೌಗಿಕ ಸೂಕ್ಷ್ಮ ವ್ಯಾಯಾಮಗಳು

ಭಾಗ-೩ ವ್ಯಕ್ತಿತ್ವದ ವಿಕಾಸದ ಕೋರ್ಸ್ ಗಳು[ಬದಲಾಯಿಸಿ]

 • ದೃಷ್ಟಿಶಕ್ತಿ ಅಭಿವರ್ಧನೆ
 • ಧ್ವನಿ ಸಂಸ್ಕರಣ
 • ಸ್ಮರಣ ಶಕ್ತಿ ಅಭಿವರ್ಧನೆ
 • ಮೇಧಾ ಶಕ್ತಿ ಅಭಿವರ್ಧನೆ
 • ಭಾವನಾ ಸಂಸ್ಕರಣ

ಈ ಮೇಲಿನವುಗಳು ಶಿಬಿರದ ವಿಶೇಷ ಪಠ್ಯಕ್ರಮಗಳಾಗಿ ಗೋಚರಿಸುತ್ತವೆ. ಇದೇ ರೀತಿಯಲ್ಲಿ ಶಿಬಿರದಲ್ಲಿನ ಕಲಿಕೆಯ ಅಂಶಗಳನ್ನು ಹೀಗೆ ಪಟ್ಟಿಮಾಡಬಹುದಾಗಿದೆ.

 1. ಪರಿಣತರಿಂದ, ವಿದ್ವಾಂಸರಿಂದ ಶಿಕ್ಷಕರಿಗೆ ಮಾರ್ಗದರ್ಶನ
 2. ಯೋಗ , ನೈತಿಕ ಪ್ರಶಿಕ್ಷಣದ ತಾತ್ವಿಕ ಪ್ರಾಯೋಗಿಕ ತರಬೇತಿಯ ಜೊತೆಗೆ ವ್ಯಕ್ತಿತ್ವ ವಿಕಸನ, ಮೌಲ್ಯ ಶಿಕ್ಷಣ.
 3. ಸಂಘಟನೆ, ವಿದ್ಯಾರ್ಥಿಗಳಿಗೆ ಕಲಿಸಬಹುದಾದ ಯೋಗಿಕ ಆಟಗಳು
 4. ಭಜನೆ, ಪ್ರಾರ್ಥನೆ ಮೂಲಕ ಭಕ್ತಿಯೋಗ ಪರಿಚಯ
 5. ಸಾಂಸ್ಕೃತಿಕ ಪ್ರತಿಭಾ ಪುರಸ್ಕಾರ
 6. ಸರಳತೆಯ ಅಭ್ಯಾಸಕ್ಕೆ, ವಿವಿಧ ಕಾಯಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಕರ್ಮಯೋಗ
 7. ಶಿಸ್ತು, ಸಮಯ ಪಾಲನೆ, ಸಹಭೋಜನ, ಇತರರನ್ನು ಗೌರವಿಸುವಿಕೆ, ಮೌನದ ಮಹತ್ವ ಮುಂತಾದವುಗಳು.

ನೈತಿಕ ಶಿಕ್ಷಣ: ಉದ್ದೇಶ[ಬದಲಾಯಿಸಿ]

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ನೈತಿಕತೆ, ಸಚ್ಚಾರಿತ್ರ್ಯ, ದೇಶಭಕ್ತಿ, ಉತ್ತಮ ಆರೋಗ್ಯ ಪಾಲನೆಗಳ ಬಗ್ಗೆ ಹೆಚ್ಚು ಅರಿವನ್ನು ಮೂಡಿಸುವುದು ಅವಶ್ಯವೆನಿಸಿದೆ. ಇಂದಿನ ಸಂಕೀರ್ಣ ಬದುಕಿನಲ್ಲಿ ಮನೆಯಲ್ಲಿ ಹಿರಿಯರಿಗೂ ತಮ್ಮ ಮಕ್ಕಳಿಗೆ ಇವುಗಳ ಅರಿವನ್ನು ತರಲು ಸಾಧ್ಯವಾಗುತ್ತಿಲ್ಲ. ಪುಣ್ಯಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜಶ್ರೀ ಡಾ.ವೀರೇಂದ್ರ ಹೆಗ್ಗಡೆಯವರು ಭಾರತೀಯ ಸಾಂಸ್ಕೃತಿಕ ಸಂಪತ್ತು ಮತ್ತು ರಾಷ್ಟ್ರೀಯ ಧ್ಯೇಯಾದರ್ಶಗಳ ಬಗ್ಗೆ ಅಪಾರ ಕಳಕಳಿ ಉಳ್ಳವರು. ಎಳೆಯ ಪೀಳಿಗೆ ಮಕ್ಕಳು ಈ ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕೆಂಬ ಆಶಯ ಅವರದು. ಮಕ್ಕಳಲ್ಲಿ ಅಂತಸ್ಥವಾಗಿರುವ ಶಕ್ತಿ ಸಾಮರ್ಥ್ಯಗಳು ಪೂರ್ಣ ರೂಪದಲ್ಲಿ ವಿಕಾಸವಾಗಬೇಕು. ಸಮಗ್ರವಾಗಬೇಕೆಂಬ ಉದ್ದೇಶ ಹಾಗೂ ದೂರ ದೃಷ್ಟಿ ಪೂಜ್ಯ ಹೆಗ್ಗಡೆಯವರದು. ಅದಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ (ರಿ) ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ವತಿಯಿಂದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಾನೆ, ಯೋಗಾಭ್ಯಾಸ, ಪ್ರಾಣಾಯಾಮ, ಮೌನ, ಪಂಚಮುಖಿ ವ್ಯಕ್ತಿತ್ವ ವಿಕಾಸದಂಥ ವಿಷಯಗಳನ್ನು ಕಲಿಯುವ ವ್ಯವಸ್ಥೆಯೊಂದನ್ನು ಮಾಡಲಾಗಿದೆ.

ಶ್ರೀ ಗುರು ಯೋಗ ಸಂಘ[ಬದಲಾಯಿಸಿ]

‘ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ’ಯನ್ವಯ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಯೋಗ ಶಿಕ್ಷಣ ಪಡೆದ ಯೋಗ ಶಿಕ್ಷಕ/ಶಿಕ್ಷಕಿಯರ ಸಂಘಟನೆಯ ಶ್ರೀ ಗುರು ಯೋಗ ಸಂಘ, 1996 ಮೇ 26 ರಂದು ಪೂಜ್ಯ ರಾಜಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿತು. ಎಲ್ಲಾ ಪ್ರಶಿಕ್ಷಿತರು ಗುರುಸ್ಥಾನದಲ್ಲಿರುವ ಶಿಕ್ಷಕರು ತಮ್ಮ ಸೇವಾ ಮನೋಧರ್ಮದಿಂದ, ಶ್ರೀ ಕ್ಷೇತ್ರದ ಅಭಿಮಾನದಿಂದ ಶಾಂತಿ ಟ್ರಸ್ಟ್ ನ ಯೋಜನೆ ಆಶ್ರಯದಲ್ಲಿ ಕಲಿತ ಯೋಗ ವಿದ್ಯೆಯನ್ನು ಯೋಜನೆಗೆ ಪೂರಕವಾಗಿ ವಿದ್ಯಾಥಿ೯ಗಳಿಗೆ ಕಲಿಸಲು ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಯೋಜಿಸಲಾಗಿದೆ. ಶ್ರೀ ಗುರು ಯೋಗ ಸಂಘವು ‘ಯೋಗ ಮತ್ತು ನೈತಿಕ ಶಿಕ್ಷಣ’ದಲ್ಲಿ ಏಕರೂಪತೆ ನೀಡುವ ಹಾಗೂ ವಿವಿಧ ಯೋಗಶಾಲೆಗಳ ಮಕ್ಕಳ ನಡುವೆ ಸಂಪರ್ಕ ಏರ್ಪಡುವ ಸಾಂಘಿಕ ಜೀವನ ನಡೆಸುವ ಹಾಗೂ ಮಕ್ಕಳ ಪ್ರತಿಭಾ ಪ್ರದರ್ಶನ ಹಾಗೂ ಪುರಸ್ಕಾರಕ್ಕೆ ವೇದಿಕೆಯನ್ನು, ಅವಕಾಶವನ್ನು ಒದಗಿಸಿಕೊಡುವ ಉದ್ದೇಶದಿಂದ ಮೂರು ಕಾರ್ಯಯೋಜನಾ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿದೆ.

 1. ಅಂತರ್ ಶಾಲಾ ಸಾಂಸ್ಕೃತಿಕ ಪ್ರತಿಭೆಗಳ ವಿನಿಮಯ ಯೋಜನೆ
 2. ತಾಲೂಕು ಮಟ್ಟದ ‘ಯೋಗೋತ್ಸವ’
 3. ಜಿಲ್ಲಾ ಮಟ್ಟದಲ್ಲಿ ಬೃಹತ್ ಶೈಕ್ಷಣಿಕ ಯೋಗ ಸಮ್ಮೇಳನ

ಯೋಗ ಸಂಗಮ[ಬದಲಾಯಿಸಿ]

ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ (ರಿ)ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ’ಯ ಅಡಿಯಲ್ಲಿ ಯೋಗ ಪ್ರತಿಶಿಕ್ಷಣ ಪಡೆದ ಯೋಗ ಶಿಕ್ಷಕರ ಸಹಕಾದಲ್ಲಿ ವಿವಿಧ ಸ್ಥಳಗಳಲ್ಲಿ ಅಕ್ಟೋಬರ್ ರಜಾ ದಿನಗಳಲ್ಲಿ ನಡೆಸುವ ಚಟುವಟಿಕೆಗಳೇ ‘ಯೋಗ ಸಂಗಮ’. ಅಕ್ಟೋಬರ್ ರಜಾದಿನಗಳಲ್ಲಿ ಯೋಗ ಶಿಕ್ಷಕರು ತಾವು ಕಲಿತ ಯೋಗ ವಿದ್ಯೆಯನ್ನು ಸಮಾಜಕ್ಕೆ ಸೇವಾ ಮನೋಧರ್ಮದಿಂದ ಕಲಿಸಿಕೊಡುವ ಯೋಜನೆ ಇದಾಗಿದೆ. ರಾಜ್ಯದ ಆಯ್ದ ನಗರ ಸ್ಥಳಗಳಲ್ಲಿ, ಪೂರ್ವ ನಿಶ್ಚಿತ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ವಿಜ್ಞಾನಿಗಳಿಗೆ, ಅನಾಥರಿಗೆ, ಕೈದಿಗಳಿಗೆ ಮುಂತಾದವರಿಗೆ ಏಕಕಾಲದಲ್ಲಿ ಯೋಗಾಸನ, ಪ್ರಾಣಾಯಾಮಗಳನ್ನು ಹೇಳಿಕೊಡಲಾಗುವುದು. ಈ ಯೋಜನೆಗೆ ಯೋಗ ಶಿಕ್ಷಕರ, ಯೋಗ ಸಂಗಮ ನಡೆಸುವ ಮಹನೀಯರ, ಮಠಾಧೀಶರ, ಸಾರ್ವಜನಿಕ ಸಹಕಾರವನ್ನು ಪಡೆಯಲಾಗುತ್ತದೆ. ಏಕಕಾಲದಲ್ಲಿ ನಡೆಯುವ ಈ ಎಲ್ಲಾ ಚಟುವಟಿಕೆಗಳ ಸಮಾರೋಪ ಕಾರ್ಯಕ್ಮದಲ್ಲಿ ಯೋಗ ಶಿಬಿರಾರ್ಥಿಗಳ, ಶ್ರೀ ಕ್ಷೇತ್ರದ ಅಭಿಮಾನಿಗಳ, ಯೋಗ ಶಿಕ್ಷಕರ, ಪರಿಣಿತರ,ಮಠಾಧೀಶರ, ಗಣ್ಯರ, ಧರ್ಮಾಧಿಕಾರಿಗಳವರ ಸಮಾವೇಶವೇ’ಯೋಗ ಸಂಗಮ’.

ಯೋಗ ಶಿಕ್ಷಣ ಶಿಬಿರದ ಅಭ್ಯಾಸ ವಿಷಯಗಳು[ಬದಲಾಯಿಸಿ]

ಅ.ಯೋಗಾಭ್ಯಾಸ ಪ್ರಾರಂಭದ ಮಂತ್ರಗಳು

 • ಯೋಗೇನ ಚಿತ್ತಸ್ಯ ಪದೇನ ವಾಚಾಂ। ಮಲಂ ಶರೀರಸ್ಯ ಚ ವೈದ್ಯಕೇನ।

ಯೋಪಾ ಕರೋತ್ತಮ್ ಪ್ರವರಂ ಮುನೀನಾಂ।ಪತಂಜಲಿಂ ಪ್ರಾಜಂಲಿ ರಾನತೋಸ್ಮಿ।।

 • ಓಂ ಅಸತೋಮಾ ಸದ್ಗಮಯ। ತಮಸೋಮಾ ಜ್ಯೋತಿರ್ಗಮಯ।

ಮೃತ್ಯೋರ್ಮಾ ಅಮೃತಂಗಮಯ। ಓಂ ಶಾಂತಿಃ ಶಾಂತಿಃ ಶಾಂತಿಃ।।

ಆ.ಶಿಥಿಲೀಕರಣ ವ್ಯಾಯಾಮ ಹಾಗೂ ಉಸಿರಾಟದ ವ್ಯಾಯಾಮಗಳು

ಇ.ಸೂರ್ಯ ನಮಸ್ಕಾರ ಅಭ್ಯಾಸ ಕನಿಷ್ಟ 4 ಆವರ್ತ ಮಂತ್ರ ಸಹಿತವಾಗಿ

ಈ.ದಿನನಿತ್ಯ ಕಡ್ಡಾಯ ಯೋಗಾಸನಗಳು

 • ಸಮಸ್ಥಿತಿ ,*ಶವಾಸನ, *ಶೀರ್ಷಾಸನ, *ಸರ್ವಾಂಗಾಸನ, *ಮತ್ಯ್ಸಾಸನ, *ಹಲಾಸನ, *ಭುಜಂಗಾಸನ, *ಶಂಭಾಸನ, *ಮಕರಾಸನ, *ಧನುರಾಸನ, *ನೌಕಾಸನ, *ಚಕ್ರಾಸನ, *ವಜ್ರಾಸನ, *ಉಷ್ಟ್ರಾಸನ, * ಯೋಗಮುದ್ರೆ, *ಸುಪ್ತ ವಜ್ರಾಸನ, *ಪಶ್ಚಿಮೋತ್ತಾಸನ, *ವಕ್ರಾಸನ, *ಗೋಮುಖಾಸನ, *ಅರ್ಧಮತ್ಸ್ಯೇಂದ್ರಾಸನ, *ಮಯೂರಾಸನ, *ಪದ್ಮಾಸನ, *ತ್ರಿಕೋನಾಸನ, *ಪಾರ್ಶ್ವಕೋನಾಸನ, *ಅರ್ಧಕಟಿ ಚಕ್ರಾಸನ, *ಪಾರ್ಶ್ವಕಟಿ ಚಕ್ರಾಸನ, *ವೃಕ್ಷಾಸನ, *ಉತ್ಕಟಾಸನ, *ಶವಾಸನದಲ್ಲಿ ಯೋಗ ನಿದ್ರೆ

ಉ.ಪ್ರಾಣಾಯಾಮ

 • ಅನುಲೋಮ ವಿಲೋಮ,*ಚಂದ್ರಭೇದನ, *ಸೂರ್ಯಭೇದನ, *ನಾಡೀ ಶುದ್ದಿ, *ಉಜ್ಜಾಯ, *ವಿಭಾಗೀಯ ಪ್ರಾಣಾಯಾಮ, *ಭ್ರಾಮರೀ ಪ್ರಾಣಾಯಾಮ, *ಧ್ಯಾನ-ವಜ್ರಾಸನ ಻ಥವಾ ಪದ್ಮಾಸನದಲ್ಲಿ ಕುಳಿತು ಓಂಕಾರ ಧ್ಯಾನ 5 ನಿಮಿಷ

ಊ.ಅಭ್ಯಾಸದ ಕೊನೆಯಲ್ಲಿ ಸ್ವಸ್ತಿಮಂತ್ರ ಹೀಗೆ ನಿಸ್ವಾರ್ಥ ಸೇವೆಯ ಪ್ರತಿ ರೂಪವೇ ಶಾಂತಿವನ. ವಿವೇಕಾನಂದರ, ಮೋಹನ್ ರಾಯರ, ಗಾಂಧೀಜಿಯವರ ಆದರ್ಶಗಳ ಸುಪ್ತ ಪ್ರತಿಭೆಗಳು ಇಲ್ಲಿ ಬೆಳಗುತ್ತಿವೆ. ಅದು ಮುಂದೆ ಕೂಡ ‘ಶಾಂತಿವನ’ ಎಂಬ ಹೆಸರಿನಲ್ಲಿ ರಾರಾಜಿಸಲಿ. ಈ ಟ್ರಸ್ಟ್ ಅನ್ನು ‘ಧರ್ಮಸ್ಥಳದ ಶಿರೋಭೂಷಣ’ ಎಂದರೂ ಅತಿಶಯೋಕ್ತಿಯಾಗಲಾರದು.[೧]

ಉಲ್ಲೇಖ[ಬದಲಾಯಿಸಿ]

 1. www.shantivana trust.com