ಶಾಂತಿಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾಂತಿಮರ
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
T. bellerica
Binomial name
ಟರ್ಮಿನಾಲಿಯ ಬೆಲ್ಲೆರಿಕ

ಶಾಂತಿಮರ (ತಾರೆ, ಗೋಟಿಂಗ) ದೊಡ್ಡಪ್ರಮಾಣದ ಮರ. ಶುಷ್ಕ ಹಾಗೂ ತೇವಪರ್ಣಪಾತಿ ಕಾಡುಗಳಲ್ಲಿ ಕಂಡು ಬರುವುದು. ಆಗ್ನೇಯ ಎಷಿಯಾ ದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.[೧]

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಶಾಂತಿಮರ (Terminalia bellirica) ಹಣ್ಣುಗಳು

ಇದು ಕೊಂಬ್ರೆಟೆಸಿ(Combretaceae) ಕುಟುಂಬಕ್ಕೆ ಸೇರಿದ್ದು, ಟರ್ಮಿನಾಲಿಯ ಬೆಲೆರಿಕ (Terminalia Belerica)ಎಂದು ಸಸ್ಯಶಾಸ್ತ್ರೀಯ ಹೆಸರು.

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ದೊಡ್ಡಪ್ರಮಾಣದ ಮರ. ೩೦ ಮೀ.ರಷ್ಟು ಎತ್ತರ,೩ ಮೀ.ದಪ್ಪ ಬೆಳೆಯುತ್ತದೆ.ಎಲೆಗಳು ಅಗಲವಾಗಿ ಅಂಡವೃತ್ತಾಕಾರವಾಗಿರುವುದು. ರೆಂಬೆಗಳ ತುದಿಯಲ್ಲಿ ಗುಚ್ಚ ಗುಚ್ಚವಾಗಿರುವುದು.ಇದರ ಹಣ್ಣುಗಳು ಕೋತಿ, ಅಳಿಲು ಮುಂತಾದ ಪ್ರಾಣಿಗಳಿಗೆ ಮೆಚ್ಚಿನ ಆಹಾರ. ಇದರ ದಾರುವು ಹಳದಿ ಛಾಯೆಯ ಬೂದು ಬಣ್ಣದ್ದಾಗಿದೆ. ಬಾಳಿಕೆ ಬರುವುದಿಲ್ಲ.

ಉಪಯೋಗಗಳು[ಬದಲಾಯಿಸಿ]

ಇದರ ದಾರುವು ನೀರಿನಲ್ಲಿ ಚೆನ್ನಾಗಿ ಬಾಳಿಕೆ ಬರುವುದರಿಂದ ದೋಣಿಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ಪದರ ಹಲಗೆಗಳಿಗೆ,ನಿರ್ಮಾಣ ಕೆಲಸಗಳಲ್ಲಿ ತಾತ್ಕಾಲಿಕ ರಚನೆಗಳಿಗೆ ಉಪಯೋಗವಾಗುತ್ತದೆ. ಇದರ ಹಣ್ಣುಗಳಿಂದ ಟ್ಯಾನಿನ್ ದೊರಕುತ್ತದೆ. ಕಾಯಿಗಳನ್ನು ಬಟ್ಟೆ, ಚರ್ಮಗಳಿಗೆ ಬಣ್ಣ ಕೊಡಲು ಬಳಸುತ್ತಾರೆ. ಔಷಧಗಳಲ್ಲಿಯೂ ಉಪಯೋಗದಲ್ಲಿದೆ.

ಆಧಾರ ಗ್ರಂಥಗಳು[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ


ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಶಾಂತಿಮರ&oldid=1164420" ಇಂದ ಪಡೆಯಲ್ಪಟ್ಟಿದೆ