ಶಾಂತಿಮರ
ಶಾಂತಿಮರ | |
---|---|
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | T. bellerica
|
Binomial name | |
ಟರ್ಮಿನಾಲಿಯ ಬೆಲ್ಲೆರಿಕ |
ಶಾಂತಿಮರ (ತಾರೆ, ಗೋಟಿಂಗ) ದೊಡ್ಡಪ್ರಮಾಣದ ಮರ. ಶುಷ್ಕ ಹಾಗೂ ತೇವಪರ್ಣಪಾತಿ ಕಾಡುಗಳಲ್ಲಿ ಕಂಡು ಬರುವುದು. ಆಗ್ನೇಯ ಎಷಿಯಾ ದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.[೧]
ಸಸ್ಯಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಇದು ಕೊಂಬ್ರೆಟೆಸಿ(Combretaceae) ಕುಟುಂಬಕ್ಕೆ ಸೇರಿದ್ದು, ಟರ್ಮಿನಾಲಿಯ ಬೆಲೆರಿಕ (Terminalia Belerica)ಎಂದು ಸಸ್ಯಶಾಸ್ತ್ರೀಯ ಹೆಸರು.
ಸಸ್ಯದ ಗುಣಲಕ್ಷಣಗಳು
[ಬದಲಾಯಿಸಿ]ದೊಡ್ಡಪ್ರಮಾಣದ ಮರ. ೩೦ ಮೀ.ರಷ್ಟು ಎತ್ತರ,೩ ಮೀ.ದಪ್ಪ ಬೆಳೆಯುತ್ತದೆ.ಎಲೆಗಳು ಅಗಲವಾಗಿ ಅಂಡವೃತ್ತಾಕಾರವಾಗಿರುವುದು. ರೆಂಬೆಗಳ ತುದಿಯಲ್ಲಿ ಗುಚ್ಚ ಗುಚ್ಚವಾಗಿರುವುದು.ಇದರ ಹಣ್ಣುಗಳು ಕೋತಿ, ಅಳಿಲು ಮುಂತಾದ ಪ್ರಾಣಿಗಳಿಗೆ ಮೆಚ್ಚಿನ ಆಹಾರ. ಇದರ ದಾರುವು ಹಳದಿ ಛಾಯೆಯ ಬೂದು ಬಣ್ಣದ್ದಾಗಿದೆ. ಬಾಳಿಕೆ ಬರುವುದಿಲ್ಲ.
ಉಪಯೋಗಗಳು
[ಬದಲಾಯಿಸಿ]ಇದರ ದಾರುವು ನೀರಿನಲ್ಲಿ ಚೆನ್ನಾಗಿ ಬಾಳಿಕೆ ಬರುವುದರಿಂದ ದೋಣಿಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ಪದರ ಹಲಗೆಗಳಿಗೆ,ನಿರ್ಮಾಣ ಕೆಲಸಗಳಲ್ಲಿ ತಾತ್ಕಾಲಿಕ ರಚನೆಗಳಿಗೆ ಉಪಯೋಗವಾಗುತ್ತದೆ. ಇದರ ಹಣ್ಣುಗಳಿಂದ ಟ್ಯಾನಿನ್ ದೊರಕುತ್ತದೆ. ಕಾಯಿಗಳನ್ನು ಬಟ್ಟೆ, ಚರ್ಮಗಳಿಗೆ ಬಣ್ಣ ಕೊಡಲು ಬಳಸುತ್ತಾರೆ. ಔಷಧಗಳಲ್ಲಿಯೂ ಉಪಯೋಗದಲ್ಲಿದೆ.
ಆಧಾರ ಗ್ರಂಥಗಳು
[ಬದಲಾಯಿಸಿ]೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ