ವಿಷಯಕ್ಕೆ ಹೋಗು

ಸಂಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿಸರ್ಗ ಸಂಧಿ ಇಂದ ಪುನರ್ನಿರ್ದೇಶಿತ)

ಸಂಧಿ ಎಂದರೇನು?

ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಾಸ ಬರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.ಉದಾ : ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ ಪೂರ್ವಪದ+ಉತ್ತರಪದ=ಸಂಧಿಪದ. ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ‘ಅ’ಮತ್ತು ಉತ್ತರಪದದ ಮೊದಲನೆಯ ಅಕ್ಷರ ‘ಕ್’ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ಹೊಸ(ಅ)+(ಕ್)ಕನ್ನಡ = ಹ್+ಒ+ಸ್+ಅ+ಕ್+ಅ+ನ್+ನ್+ಅ+ಡ್+ಅ. ಸಂಧಿ = ಕೂಡುವುದು. ಎಂದರೆ, ಎರಡು ವರ್ಣಗಳು ಕೂಡಿ ಸಂಧಿಯಾಗುತ್ತದೆ. ಉದಾ: ಮರ=ಮ್+ಅ+ರ್+ಅ. ಎರಡು ವರ್ಣಗಳು = ಮ್+ಅ ಮತ್ತು ರ್+ಅ.

ವಿದ್ವಾಂಸರ ಅಭಿಪ್ರಾಯ

ಸಂಧಿ ಎಂದರೆ, “ಎರಡು ಅಥವಾ ಹಲವಾರು ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ವರ್ಣಾಕ್ಷರ ಸಂಧಿ ಎಂದು ಹೆಸರು”- ಕೇಶಿರಾಜ.

  • ಬೇರೆ ಬೇರೆಯಾಗಿದ್ದ ಅಕ್ಷರಗಳನ್ನು ಕೂಡಿಸಿ ಉಚ್ಛರಿಸುವುದಕ್ಕೆ ಸಂಧಿ ಎಂದು ಹೆಸರು - ಕ್ಯೆಪಿಡಿಕಾರ.

ಸಂಧಿಗಳಲ್ಲಿ ವಿಧ

ಸಂಧಿಗಳಲ್ಲಿ ಎರಡು ವಿಧ.

ಸ್ವರ ಸಂಧಿ ವ್ಯಂಜನ ಸಂಧಿ
ಲೋಪ ಸಂಧಿ ಆದೇಶ ಸಂಧಿ
ಆಗಮ ಸಂಧಿ
ಸ್ವರ ಸಂಧಿ ವ್ಯಂಜನ ಸಂಧಿ
ಸವರ್ಣದೀರ್ಘಸಂಧಿ (ದೀರ್ಘಸ್ವರಾದೇಶ) ಜಶ್ತ್ವಸಂಧಿ (ಜಬಗಡದ ಆದೇಶ)
ಗುಣಸಂಧಿ (ಏ, ಓ, ಅರ್ ಆದೇಶ) ಶ್ಚುತ್ವಸಂಧಿ (ಶಕಾರ ಚವರ್ಗಾದೇಶ)
ವೃದ್ಧಿಸಂಧಿ (ಐ, ಔ ಆದೇಶ) ಅನುನಾಸಿಕಸಂಧಿ (ಙ,ಞ,ಣ,ನ,ಮ ಗಳ ಆದೇಶ)
ಯಣ್ಸಂಧಿ (ಯ, ವ, ರ ಆದೇಶ)

ಉಲ್ಲೇಖ


"https://kn.wikipedia.org/w/index.php?title=ಸಂಧಿ&oldid=1165897" ಇಂದ ಪಡೆಯಲ್ಪಟ್ಟಿದೆ