ವಿಷಯಕ್ಕೆ ಹೋಗು

ಗುಣ ಸಂಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುಣ ಸಂಧಿ ಎಂಬ ಸಂಸ್ಕೃತ ಸಂಧಿಯು ಪ್ರಮುಖವಾಗಿ ಮೂರು ಸಂದರ್ಭಗಳಲ್ಲಿ ಕಂಡು ಬರುತ್ತದೆ. ಅ ಆ ಕಾರಗಳ ಮುಂದೆ ಇ ಈ ಕಾರವು ಬಂದಾಗ 'ಏ' ಕಾರವು ಉ ಊ ಕಾರವು ಬಂದಾಗ 'ಓ' ಕಾರವೂ ಋ ಕಾರವು ಬಂದಾಗ 'ಆರ್' ಕಾರವೂ ಆದೇಶವಾಗಿ ಬಂದರೆ ಗುಣಸಂಧಿ ಎನಿಸುವುದು.ಅಥವ ಅ,ಆ ಕಾರಗಳಿಗೆ ಇ,ಈ ಕಾರಗಳು ಪರವಾದರೆ, ಓ ಕಾರವು ಋ ಕಾರವು ಪರವಾದರೆ ಅರ್ ಕಾರವು ಬರುತ್ತದೆ ಇದನ್ನ ಗುಣ ಸಂಧಿ ಎನ್ನುವರು.

  1. ಅ,ಆ  +  ಇ,ಈ    ಸ್ವರಗಳು ಸಂಧಿಯಾಗಿ, 'ಏ' ಸ್ವರವಾಗಿ ಉಳಿಯುತ್ತದೆ.
  2. ಅ,ಆ  +  ಉ,ಊ   ಸ್ವರಗಳು ಸಂಧಿಯಾಗಿ, 'ಓ' ಸ್ವರವಾಗಿ ಉಳಿಯುತ್ತದೆ.
  3. ಅ,ಆ  +  ಋ   ಸ್ವರಗಳು ಸಂಧಿಯಾಗಿ, 'ಅರ್' ಎಂದು ಉಳಿಯುತ್ತದೆ.


ಉದಾಹರಣೆಗಳು: ದೇವ + ಈಶ = ದೇವೇಶ (ಅ+ಈ=ಏ) ಸೂರ್ಯ + ಉದಯ = ಸೂರ್ಯೋದಯ (ಅ+ಉ=ಓ)

ರಾಜ + ಇಂದ್ರ = ರಾಜೇಂದ್ರ
(ಅ + ಇ  =  ಏ)


ಜನ್ಮ + ಉತ್ಸವ = ಜನ್ಮೋತ್ಸವ
(ಅ + ಉ   =  ಓ)


ದೇವ+ ಋಷಿ = ದೇವರ್ಷಿ
(ಅ + ಋ  =  ಅರ್)


ರಮಾ + ಈಶ = ರಮೇಶ
(ಆ + ಈ  =  ಏ)


ಮಹಾ + ಉತ್ಸವ = ಮಹೋತ್ಸವ
(ಆ + ಉ   =  ಓ)