ಆಗಮ ಸಂಧಿ
ಕನ್ನಡ ಸಂಧಿಗಳಲ್ಲಿ ಲೋಪ, ಆಗಮ, ಆದೇಶ ಎಂದು ಮೂರು ವಿಧದ ಕನ್ನಡದ ಸಂಧಿಗಳು. ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.
ಆಗಮ ಸಂಧಿಕಾರ್ಯ
[ಬದಲಾಯಿಸಿ]ಆಗಮ ಸಂಧಿಯು ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲ ಅಕ್ಷರಗಳ ಸಂಧಿಸುವಿಕೆಯಲ್ಲಿ ನಡೆಯುತ್ತದೆ.
- ಸಂಧಿ ಮಾಡುವಾಗ - ಪೂರ್ವಪದದಲ್ಲಿಯ ಒಂದು ಅಕ್ಷರವು ಸಂಧಿಪದದಲ್ಲಿ ಇಲ್ಲದಿದ್ದರೆ - ಲೋಪಸಂಧಿ. ಉದಾ: ಮಾತಿಲ್ಲ= ಮಾತು+ಇಲ್ಲ=ಇಲ್ಲಿ ‘ಉ’ ಸ್ವರ ಲೋಪ.
- ಸಂಧಿ ಮಾಡುವಾಗ - ಪೂರ್ವಪದ ಮತ್ತು ಉತ್ತರ ಪದಗಳಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇದ್ದು ಹೊಸದಾಗಿ ಒಂದು ಅಕ್ಷರ ಸಂಧಿಪದದಲ್ಲಿ ಬಂದಿದ್ದರೆ-ಆಗಮಸಂಧಿ. ಉದಾ: ಮನೆ+ಅನ್ನು = ಮನೆಯನ್ನು = ‘ಯ್’ ವ್ಯಂಜನ ಆಗಮ.
- ಸಂಧಿ ಮಾಡುವಾಗ - ಉತ್ತರ ಪದದ ಆದಿಯಲ್ಲಿಯ ಒಂದು ವ್ಯಂಜನವು ಸಂಧಿಪದದಲ್ಲಿ ಲೋಪವಾಗಿ ಆ ಸ್ಥಳದಲ್ಲಿ ಹೊಸದಾಗಿ ಮತ್ತೊಂದು ವ್ಯಂಜನವು ಆಗಮವಾಗಿ ಬಂದರೆ - ಆದೇಶ ಸಂಧಿ. ಉದಾ: ಮಳೆ+ಕಾಲ=ಮಳೆಗಾಲ=‘ಕ್’ವ್ಯಂಜನ ಲೋಪ. ‘ಗ್’ ವ್ಯಂಜನ ಆದೇಶ.
- ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ಪ್ರಕೃತಿ ಭಾವ ಅಥವಾ ವಿಸಂಧಿ.
ಆಗಮಸಂಧಿ
[ಬದಲಾಯಿಸಿ]ಇರ್ದುದಂ ಕೆಡಿಸದೆ ಪತ್ತುವುದಾಗಮಂ ಶಬ್ದಮಣಿದರ್ಪಣಂ ಸೂತ್ರ 174 ಕೇಶಿರಾಜನ ಶಬ್ದಮಣಿದರ್ಪಣಂ ಇದ್ದ ವರ್ಣವನ್ನು ನಾಶಮಾಡದೆ ನಯದಿಂದ ಬಂದು ಸೇರಿಕೊಳ್ಳುವ ವರ್ಣವನ್ನು ‘ಆಗಮ’ವೆಂದು ಕೇಶಿರಾಜ ಕರೆದಿದ್ದಾನೆ. “ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ‘ಯ’ಕಾರವನ್ನೋ ಅಥವಾ ‘ವ’ಕಾರವನ್ನೋ ಹೊಸದಾಗಿ ಸೇರಿಸಿ ಹೇಳುವ ಸಂಧಿ ಆಗಮಸಂಧಿ. ಕೇಶಿರಾಜ ಆಗಮ ಸಂಧಿಯನ್ನು ಯಕಾರಾಗಮ, ವಕಾರಾಗಮ ಸಂಧಿಯೆಂದು ಎರಡು ವಿಭಾಗ ಮಾಡುತ್ತಾನೆ.
ಯ ಕಾರಾಗಮ ಸಂಧಿ
[ಬದಲಾಯಿಸಿ]ಯ ಕಾರಾಗಮ ಸಂಧಿಯಾಗುವ ನಿಯಮ
- ಆ, ಇ, ಈ, ಓ, ಐ, ಎ, ಏ ಎಂಬ ವರ್ಣಗಳು ಪೂರ್ವಪದಾಂತ್ಯದಲ್ಲಿದ್ದು ಇವುಗಳ ಮುಂದೆ ಸ್ವರ ಬಂದುದಾದರೆ ನಡುವೆ
‘ಯ’ಕಾರಾಗಮವಾಗುತ್ತದೆ. ಉದಾ:
- ಆ = ಆ+ಇರ್ದ = ಆಯಿರ್ದ, ಸಾ+ಅಲೆ= ಸಾಯಲೆ, ಕಾ+ಅಲುಂ = ಕಾಯಲುಂ.
- ಇ= ಕಲಿ+ಆರ್ = ಕಲಿಯಾರ್, ಬಲಿ+ಅಂ = ಬಲಿಯಂ, ಪಿಡಿ+ಎಂದು = ಪಿಡಿಯೆಂದು.
- ಈ= ಈ+ಅಲ್ = ಈಯಲ್, ಶ್ರೀ+ಅಂ = ಶ್ರೀಯಂ, ಸ್ತ್ರೀ+ ಎಂಬ = ಸ್ತ್ರೀಯೆಂಬ.
- ಓ= ಜೋ+ಎಂದು = ಜೋಯೆಂದು, ಭೋ+ಎನಲು = ಭೋಯೆನಲು, ನೋ+ಇಸಿದಂ = ನೋಯಿಸಿದಂ.
- ಐ= ರೈ+ಎಂದು = ರೈಯೆಂದು[ರೈ=ಸಂಪತ್ತು(ಸಂಸ್ಕøತ)], ಥೈ+ ಎಂದು = ಥೈಯೆಂದು.
- ಎ= ನಡೆನಡೆ+ಎಂದು = ನಡೆನಡೆಯೆಂದು, ತೊರೆ+ಅಂ = ತೊರೆಯಂ, ಪಸೆ+ಇರ್ದ = ಪಸೆಯಿರ್ದ.
- ಏ= ಉಘೇಉಘೇ+ಎಂದು = ಉಘೇಉಘೇಯೆಂದು, ತೇ+ಇಸಿದಂ = ತೇಯಿಸಿದಂ.
- ಅವಧಾರಣೆ(ಒತ್ತಿ ಹೇಳುವುದು, ನಿರ್ಣಯಿಸಿ ಹೇಳುವುದು) = ನಿರ್ಧಾರಣಾರ್ಥ ಸೂಚಕ ಪ್ರತ್ಯಯವಾದ ‘ಅ’ಕಾವಿದ್ದರೆ ಆಗಲೂ ‘ ಯಕಾರಾಗಮವಾಗುತ್ತದೆ. ಅವಧಾರಣೆಯ ‘ಎ’ತ್ವಕ್ಕೆ ಷಷ್ಠಿ ನಿಯಮದಿಂದ ‘ಯ’ಕಾರ. ಆತನ+ಎ = ಆತನಯೆ. (ಆತನೆ ಆಗುವುದಿಲ್ಲ) ಅವಳ+ಎ = ಅವಳಯೆ. ಅದರ+ಎ = ಅದರಯೆ.
- ಸಂಸ್ಕಂತ ನಾಮಪ್ರಕೃತಿಗಳಿಗೆ ‘ಇಸು’ಪ್ರತ್ಯಯ ಬಂದರೆ ಯಕಾರಾಗಮವಾಗುತ್ತದೆ. ಶುದ್ಧ+ಇಸು+ದಂ = ಶುದ್ಧಯಿಸಿದಂ. ಕನ್ನಡ ನಾಮಪ್ರಕೃತಿಗಳಿಗೆ ‘ಇಸು’ಪ್ರತ್ಯಯ ಬಂದರೆ ‘ಯ’ಕಾರಾಗಮವಾಗುತ್ತದೆ. ಒರ+ಇಸು+ದಂ = ಒರಯಿಸಿದಂ. (ಕೋರಯಿಸು, ತೇರಯಿಸು, ಮೇಳಯಿಸು)
- 'ಆ' ಕಾರಾಂತ್ಯದ ಅನುಕರಣವಾಚಿ ಪದಗಳಗೆ ಅನುಕೃತಿ ಸ್ವರ ಬಂದಾಗ 'ಯ'ಕಾರಾಗಮವಾಗುತ್ತದೆ. ಪಳಪಳ+ಎಂದು = ಪಳಪಳಯೆಂದು, ಗುಳುಗುಳು+ಎನುತಂ = ಗುಳುಗುಳುಯೆನುತಂ
ವ ಕಾರಾಗಮ ಸಂಧಿ
[ಬದಲಾಯಿಸಿ]‘ವ’ ಕಾರಾಗಮ ಸಂಧಿಯಾಗುವ ನಿಯಮ
- ಉ, ಊ, ಋ, ಓ, ಔ ಎಂಬಿವುಗಳ ಮುಂದೆ ಸ್ವರ ಬಂದರೆ ನಡುವೆ ‘ವ’ಕಾರಾಗಮವಾಗುತ್ತದೆ. ಅಲ್ಲದೆ ಕೇಶಿರಾಜ ಇ, ಈ ವರ್ಣಗಳಗೂ ಕೂಡ ‘ವ’ಕಾರವೆಂಬುದನ್ನು ವೃತ್ತಿಯಲ್ಲಿ ಹೇಳಿದ್ದಾನೆ.
- ಇ=ಇದು+ಇದು = ಇದುವಿದು. ಈ=ಈ+ಇದು = ಈವಿದು/ಇವಿದು.} ಇವೆರಡು ಮೇಲಿನ ನಿಯಮದಲ್ಲಿದೆ.
- ಉ= ಕುಡು+ಉದು = ಕುಡುವುದು, ಮನು+ಇನ = ಮನುವಿನ. ಊ= ಪೂ+ಇನ = ಪೂವಿನ.
- ಋ= ಕರ್ತೃ+ಆದ= ಕರ್ತೃವಾದ. ಋ= ಋ+ಎಂದ = ಋವೆಂದ. (ಋ=ಭಯ,ಸಹಾನುಭೂತಿ)
- ಓ= ಗೋ+ಇನ=ಗೋವಿನ. ಔ= ನೌ+ಅಂ=ನೌವಂ, ಗ್ಲೌ+ಅಂ=ಗ್ಲೌವಂ (ಸಂಸ್ಕøತ- ನೌ=ನೌಕೆ, ಗ್ಲೌ=ಚಂದ್ರ)
- ಸಂಸ್ಕೃತದಲ್ಲಿ ‘ಯತ್ವ’- ‘ವತ್ವ’ಗಳಿಗೆ ಲೋಪವಿಲ್ಲ. ನದಿ+ಎಲ್ಲಂ=ನದಿಯೆಲ್ಲಂ, ವಧು+ಇಲ್ಲ=ವಧುವಿಲ್ಲ, ಮಧುವಿಲ್ಲ. ಈ+ಉದ್ಯಾನಂ=ಈಯುದ್ಯಾನಂ/ ಈವುಧ್ಯಾನಂ, ಈಯೊಕ್ಕಲ್, ಈಯೂರ್. ‘ಯತ್ವ ವತ್ವಂಗಳ್ಗೆ ಕನ್ನಡದೊಳ್ ಬಹುಳತೆಯಿಂ ಲೋಪವುಂಟು’ - ಸಂಸ್ಕೃತದಲ್ಲಿ ಇಲ್ಲ. ಕನ್ನಡದಲ್ಲಿ ನಡೆಯುವುದು. ಈ ಬಹುಳತೆಯು ನಾಮರೂಢಿಯಳಿಯದ ಪಕ್ಷದಲ್ಲಿ - ಮಾತ್ರ. ಉದಾ: ಒತ್ತೆ+ಇಟ್ಟಂ>ಒತ್ತೆಯಿಟ್ಟಂ>ಒತ್ತಿಟ್ಟಂ, ಕರೆಯಿಸು>ಕರೆಸು, ಸ್ತುತಿಯಿಸು>ಸ್ತುತಿಸು, ಇಳಿಯಿಸು>ಇಳಿಸು, ಮಾತು+ಎಲ್ಲಂ> ಮಾತುವೆಲ್ಲಂ>ಮಾತೆಲ್ಲಂ.
- ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಸಾಮಾನ್ಯವಾಗಿ ಹೊಸದಾಗಿ ಒಂದು ವ್ಯಂಜನವು ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು ಸೇರುತ್ತದೆ. ಇದರಲ್ಲಿ ಎರಡು ವಿಧ. 'ಯಕಾರಾಗಮ ಸಂಧಿ' ಹಾಗೂ 'ವಕಾರಾಗಮ ಸಂಧಿ'.
- ಉದಾ:- ಮನೆ(ಎ)+ಅನ್ನು=ಮನೆಯನ್ನು.ಇಲ್ಲಿ ಉತ್ತರಪದದ ಆದಿಯಲ್ಲಿ 'ಯ್ ಕಾರ' 'ಆಗಮ'ವಾಗಿದೆ.
- ಉದಾ:- ಮಗು(ಉ)+ಇಗೆ=ಮಗುವಿಗೆ.ಇಲ್ಲಿ ಉತ್ತರಪದದ ಆದಿಯಲ್ಲಿ 'ವ್ ಕಾರ' 'ಆಗಮ'ವಾಗಿದೆ.
- ಕನ್ನಡದ ಹಲವಾರು ವ್ಯಾಕರಣದ ಹೊತ್ತಗೆಗಳು ಮೇಲಿನಂತೆ ಹೇಳಿದರೂ, ಹೀಗೆ ಹೇಳುವದು ಹಲವು ವಿವಾದಗಳಿಗೆ ಮತ್ತು ತಪ್ಪುತಿಳಿವಿಗೆ ಅನುವು ಮಾಡುವುದು.
- ಈ ಸಂಧಿಯ ವಿವರಣೆಯಲ್ಲಿ ಇರುವಂತೆ "ಸಾಮಾನ್ಯವಾಗಿ ಹೊಸದಾಗಿ ಒಂದು ವ್ಯಂಜನವು ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು ಸೇರುತ್ತದೆ" ಎಂದಾಗ ಆ ಸಾಮಾನ್ಯವಲ್ಲದ( ಅಸಮಾನ್ಯ ) ಸನ್ನಿವೇಶಗಳು ಯಾವುವು ಎಂದು ಯಾವ ಹೊತ್ತಗೆಗಳು ಹೇಳುವುದಿಲ್ಲ.
ಮನೆ + ಅನ್ನು = ಮನೆಗಳನ್ನು ಏಕೆ ಆಗಬಾರದು? "ಗಳ್" ಯಾಕೆ ಆಗಮವಾಗಬಾರದು? ಹಾಗೆ...
- ಮಗು + ಅನ್ನು = ಮಗುವನ್ನು
- ನೀರು + ಅನ್ನು = ನೀರುವನ್ನು
- ಮನೆ + ಅನ್ನು = ಮನೆಯನ್
- ಹೀಗೆ ಇನ್ನು ಹಲವು ವಿಚಾರಗಳಿಗೆ ಕಾರಣವನ್ನು ಕೊಡಲು ಆಗದು.
- ಅದಕ್ಕೆ ಕೆಲವರು ಕನ್ನಡದಲ್ಲಿ "ಆಗಮಸಂಧಿ" ಎನ್ನವ ಸಂಧಿಯಿಲ್ಲ. ಕನ್ನಡದಲ್ಲಿ "ಲೋಪ ಸಂಧಿ" ಯೊಂದೆ ಸ್ವರ ಸಂಧಿ ಎನ್ನುವರು. ಜತೆಗೆ ಅವರು "ಆಗಮಸಂಧಿ"ಗೆ ಉದಾಹರಣೆಯಾಗಿ ಹೇಳಿರುವ ಪದಗಳನ್ನು ಬಿಡಿಸಲು ಬೇರೆ ಬಗೆಯನ್ನು ಕೂಡ ಸೂಚಿಸಿರುವರು.
ಮನಯು + ಅನ್ನು = ಮನೆಯನ್ನು; ಉ ಕಾರ ಲೋಪ. "ಮನೆಯು => ಒಂದು ಮನೆ" ಮನೆಗಳು + ಅನ್ನು = ಮನೆಗಳನ್ನು :ಉ ಕಾರ ಲೋಪ; "ಮನೆಗಳು => ಹಲವು ಮನೆಗಳು" ಮಗುವು + ಅನ್ನು = ಮಗುವನ್ನು; ಉ ಕಾರ ಲೋಪ