ವಿಶ್ವ ಸಾಮಾಜಿಕ ವೇದಿಕೆ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (August 2006) |
Expression error: Unexpected < operator.
This article includes a list of references, but its sources remain unclear because it has insufficient inline citations. (January 2010) |
ದಿ ವರ್ಲ್ಡ್ ಸೊಸಿಯಲ್ ಫೊರಮ್ (WSF)ಇದೊಂದು ಬ್ರಾಜಿಲ್ ನಲ್ಲಿ ನಡೆಯುವ ಸಂಘಟಿತ ವಾರ್ಷಿಕ ಸಭೆಯಾಗಿದೆ.ಅದು "ತನ್ನನ್ನೇ ತಾನು ವ್ಯಾಖ್ಯಾನಿಸಿಕೊಳ್ಳುತ್ತದೆ.ಇದೊಂದು ಮುಕ್ತ ವಾತಾವರಣ-ಬಹುವೈವಿಧ್ಯದ,ವಿಭಿನ್ನತೆ-ವಿವಿಧತೆಯುಳ್ಳ,ಸರ್ಕಾರೇತರ ಮತ್ತು ಅವಿಭಜಿತವಾಗಿದೆ;ಇದು ವಿಕೇಂದ್ರೀಕೃತ ಚರ್ಚೆಗೆ ಉತ್ತೇಜಿಸುತ್ತದೆ,ಜೊತೆಗೆ ಅದನ್ನು ಪ್ರತಿಬಿಂಬಿಸುತ್ತದೆ,ಪ್ರಸ್ತಾವನೆಗಳ ರಚನೆ-ನಿರ್ಮಾಣ,ಅನುಭವಗಳ ಪರಸ್ಪರ ವಿನಿಮಯ,ಅಲ್ಲದೇ ಚಳವಳಿಗಳು ಮತ್ತು ಸಂಘಟನಾತ್ಮಕ ಕ್ರಿಯೆಗಳನ್ನು ಒಟ್ಟಿಗೆ ಸೇರಿಸುತ್ತದೆ,ಇದರೊಟ್ಟಿಗೆ ಸಮಗ್ರತೆಯನ್ನು ಸಮೃದ್ಧಗೊಳಿಸಿ ಪ್ರಜಾತಾಂತ್ರಿಕ ವ್ಯವಸ್ಥೆಯೊಂದಿಗೆ ಸ್ವಸ್ಥ ವಿಶ್ವ ನಿರ್ಮಿಸುವುದು ಇದರ ಉದ್ದೇಶವಾಗಿದೆ.ಇದು ನವಯುಗದಲ್ಲಿ ವಿಮೋಚನಾ ತತ್ವಕ್ಕೆ ಪರ್ಯಾಯ ವ್ಯವಸ್ಥೆಯನ್ನು ನಿರ್ಮಿಸಲು ನೆರವಾಗುತ್ತದೆ.[೧] ಇದು ಬದಲೀ-ಜಾಗತಿಕರಣ ಚಳವಳಿಯ ಸದಸ್ಯರಿಂದ ಆಯೋಜಿತವಾಗುತ್ತದೆ.(ಇದನ್ನು ಜಾಗತಿಕ ನ್ಯಾಯ ಚಳವಳಿ [ಗ್ಲೊಬಲ್ ಜಸ್ಟಿಸ್ ಮೂಮೆಂಟ್]ಎಂದೂ ಉಲ್ಲೇಖಿಸುತ್ತಾರೆ.ಇವರೆಲ್ಲರೂ ವಿಶ್ವದ ಪ್ರಚಾರಾಂದೋಲನದಲ್ಲಿ ಸಹಕರಿಸಲು ಒಂದೆಡೆ ಸೇರುತ್ತಾರೆ.ಸಂಘಟನಾತ್ಮಕ ನೀತಿ-ಸೂತ್ರಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅದನ್ನು ಸುಧಾರಿತ ರೀತಿಗೆ ಪರಿವರ್ತಿಸುತ್ತಾರೆ.ವಿಶ್ವಾದಾದ್ಯಂತ ಮತ್ತು ಸುತ್ತಲಿನ ಜಗತ್ತಿನ ಚಳವಳಿಗಳ ಬಗ್ಗೆ ಪರಸ್ಪರ ಮಾಹಿತಿ-ಸಮಸ್ಯೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇದು ಸಾಮಾನ್ಯವಾಗಿ ಜನವರಿಯಲ್ಲಿ ಏರ್ಪಾಡಾಗುತ್ತದೆ.ಅದೇ ವೇಳೆಗೆ ಸ್ವಿಜರ್ ಲೆಂಡ್ ನ ಡಾವೊಸ್ ನಲ್ಲಿ "ಅದರ ಬದ್ದ ವೈರಿಯಾದ ಬೃಹತ್ ಬಂಡವಾಳಶಾಹಿ ಸಮಾವೇಶ"ವರ್ಲ್ಡ್ ಎಕಾನಮಿಕ್ ಫೊರಮ್ ನ ವಾರ್ಷಿಕ ಕಾರ್ಯಕ್ರಮವೂ ಆಯೋಜಿತವಾಗಿರುತ್ತದೆ. ಇದೇ ದಿನಾಂಕವನ್ನು ನಿಗದಿ ಮಾಡಿದ್ದೇಕೆಂದರೆ ವಿಶ್ವದ ಆರ್ಥಿಕ ಸಮಸ್ಯೆಗಳಿಗೆ ಈ ವೇದಿಕೆ ಪರ್ಯಾಯಗಳನ್ನು ಸೂಚಿಸುವ ಯತ್ನ ಮಾಡುತ್ತದೆ.ಜೊತೆಗೇ ಅದಕ್ಕೆ ಪರ್ಯಾಯ ಪರಿಹಾರೋಪಾಯಗಳನ್ನು ಹುಡುಕಲು ಸಾಧ್ಯವಿದೆ ಎಂದು ಹಲವರು ಅಭಿಪ್ರಾಯಪಡುತ್ತಾರೆ.ವರ್ಲ್ಡ್ ಎಕಾನಾಮಿಕ್ ಫೊರಮ್ ಇದೇ ಸಂದರ್ಭದಲ್ಲಿ WSF ನ ವಿಚಾರಧಾರೆಗಳೂ ಸಹ ಸುದ್ದಿ ಮಾಧ್ಯಮದವರ ಗಮನಕ್ಕೆ ಬಂದು ಇದರೊಟ್ಟಿಗೆ ಜಾಗೃತಿಗೆ ನೆರವಾಗಬಹುದೆಂಬ ಆಶಯವೂ ಇದರೊಟ್ಟಿಗೆ ಇದೆ.
ಇತಿಹಾಸ
[ಬದಲಾಯಿಸಿ]ಈ ಪರಿಕಲ್ಪನೆಯು ಒಡೆಡ್ ಗ್ರಾಜೆವ್ ರಿಂದ ಮೂಲದಲ್ಲಿ ಆರಂಭ ಕಂಡಿದೆ.ಮೊದಲ WSF ನ ಕಾರ್ಯಕ್ರಮವು ಜನವರಿ 25 ರಿಂದ 2001 ರ ಜನವರಿ 30 ರವರೆಗೆ ಬ್ರಾಜಿಲ್ ನ ಪೊರ್ಟೊ ಅಲೆಗ್ರೆ ಯಲ್ಲಿ ಏರ್ಪಾಡಾಗಿತ್ತು.ಇದನ್ನು ಹಲವು ಸಂಘಟನಾ ಗುಂಪುಗಳು ಆಯೋಜಿಸಿದ್ದವು.ಅದರಲ್ಲಿ ಫ್ರೆಂಚ ನಾಗರಿಕರ ತೆರಿಗೆ ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಅಂದರೆ ಫ್ರೆಂಚ್ ಅಸೊಶಿಯೇಶನ್ ಫಾರ್ ಟ್ಯಾಕ್ಸೇಶನ್ ಆಫ್ ಫೈನಾನ್ಸಿಯಲ್ ಟ್ರಾಂಜಕ್ಷನ್ಸ್ ಫಾರ್ ದಿ ಏಡ್ ಆಫ್ ಸಿಟಿಜನ್ಸ್ (ATTAC)ಕೂಡಾ ಪಾತ್ರ ವಹಿಸಿದೆ. ಭಾಗಶಃ WSF ಕಾರ್ಯಕ್ರಮಗಳನ್ನು ಪೊರ್ಟ್ ಅಲೆಗ್ರೆ ಸರ್ಕಾರ ಆಯೋಜಿಸಿದ್ದರೆ ಇದರ ನೇತೃತ್ವವನ್ನು ಬ್ರಾಜಿಲಿಯನ್ ವರ್ಕರ್ಸ್ ಪಾರ್ಟಿ(PT) ವಹಿಸಿತ್ತು. ಪಟ್ಟಣವು ನವೀನ ಮಾದರಿಯ ಪ್ರಯೋಗಶೀಲತೆಗೆ ತನ್ನನ್ನು ತಾನು ತೆರೆದುಕೊಂಡಿತು.ಸ್ಥಳೀಯ ಸರ್ಕಾರಕ್ಕಾಗಿ ಅನುಕೂಲ ಒದಗಿಸಲು ಸಾಂಪ್ರದಾಯಕ ಪ್ರಾತಿನಿಧ್ಯದ ಸಂಸ್ಥೆಗಳು ಅಲ್ಲದೇ ಮುಕ್ತ ಒಕ್ಕೂಟ ಮಾದರಿಯ ಅಸೆಂಬ್ಲಿಗಳು ಇದರಲ್ಲಿ ಪಾಲ್ಗೊಂಡವು.ವಿಶ್ವದ ಸುತ್ತಮುತ್ತಲಿನ ಹಲವೆಡೆಯಿಂದ ಸುಮಾರು 12,000 ಜನರು ಈ ಅಸೆಂಬ್ಲಿಯ ಭಾಗವಾಗಿದ್ದರು. ಅದೇ ವೇಳೆ ಬ್ರಾಜಿಲ್ ಕೂಡಾ ಪರಿವರ್ತನೆಯ ಹಾದಿಯಲ್ಲಿತ್ತು.ಅದಕ್ಕಾಗಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ PT ಪಕ್ಷದ ಅಭ್ಯರ್ಥಿ ಲುಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಜಯಗಳಿಸಿದರು. ವರ್ಲ್ಡ್ ಸೊಸಿಯಲ್ ಫೊರಮ್,ಈ ವಿಶ್ವ ಸಾಮಾಜಿಕ ವೇದಿಕೆಯು ಪರ್ಯಾಯ ಭವಿಷ್ಯ ಅಭಿವೃದ್ಧಿಗೆ ತನ್ನ ಸ್ವಯಂ-ಜಾಗೃತಿಯ ಪ್ರಯತ್ನಗಳನ್ನು ಹಾಕಿತು.ಇದರ ಸಫಲತೆಗಾಗಿ ಹಲವು ವ್ಯಕ್ತಿಗಳು-ಸಂಘಟನೆಗಳು ವಿಭಿನ್ನ ರೀತಿಯಲ್ಲಿ ಭಾಗಿಯಾದವು.ಅಲ್ಲಿನ ಫಲಕ-ಪಟ್ಟಿಯೊಂದರಲ್ಲಿ: "ಪ್ರಜಾಪ್ರಭುತ್ವದ ಮರು ಆವಿಷ್ಕಾರ" ಎಂಬ ಘೋಷಣೆ ಮೊಳಗಿತ್ತು. ಈ "ಮರುಆವಿಷ್ಕಾರ"ವನ್ನು "ಅಮೂಲಾಗ್ರ, ತಲಸ್ಪರ್ಶಿಯಾದ ಸುಧಾರಣೆಗಳನ್ನು ಅಸ್ತಿತ್ವದಲ್ಲಿರುವ ವರ್ಗ,ಲಿಂಗ ಮತ್ತು ಜನಾಂಗೀಯ ಸಭಂಧಗಳಲ್ಲಿ ತಂದು ಅವು ಪೂರ್ಣಪ್ರಮಾಣದ ಪ್ರಜಾಪ್ರಭುತ್ವದ ಕಾರ್ಯಶೀಲತೆಗೆ ನಿಷಿದ್ದ ಹೇರಬಾರದೆಂಬುದೇ ಇದರ ಮೂಲಮಂತ್ರವಾಗಿತ್ತು".
ಎರಡನೆಯ WSF ನ್ನು ಕೂಡಾ ಪೊರ್ಟೊ ಅಲೆಗ್ರೆ ದಲ್ಲಿ ಜನವರಿ 31 ರಿಂದ 2002 ರ ಫೆಬ್ರವರಿ 5 ರ ವರೆಗೆ ಆಯೋಜಿತವಾಗಿತ್ತು.ಒಟ್ಟು 123 ದೇಶಗಳ 12,000 ಅಧಿಕಾರಿ ಮಟ್ಟದ ನಿಯೋಗದ ಸದಸ್ಯರು ಆ ದೇಶಗಳ ಜನರನ್ನು ಪ್ರತಿನಿಧಿಸಿದ್ದರು.ಅದಲ್ಲದೇ 60,000 ಜನರ ಉಪಸ್ಥಿತಿಯಿತ್ತು;652 ಕಾರ್ಯಾಗಾರಗಳು ಮತ್ತು 27 ಭಾಷಣ-ಪ್ರವಚನಗಳನ್ನು ನಡೆಸಲಾಯಿತು. ಇದರಲ್ಲಿ ನಿಯೋಗದವರಲ್ಲಿದ್ದ 500 ಅಮೆರಿಕನ್ ರಲ್ಲಿ ಕೆಲವರನ್ನು ಈ ವೇದಿಕೆಯ "ಅಂತರರಾಷ್ಟ್ರೀಯ ಸಮಿತಿ"ಗೆ ಆಯ್ಕೆ ಮಾಡಲಾಯಿತು.ಇದು ದೊಡ್ಡ ಪ್ರಮಾಣದ ಸಂಘಟನೆಗಳಿಗೆ ದಾರಿಯಾಯಿತು. ಇದರಲ್ಲಿ ಪ್ರಾತಿನಿಧ್ಯ ವಹಿಸಿದವರೆಂದರೆ ರಾಲ್ಫ್ ನಾಡೆರ್ ಅವರ ಸಾರ್ವಜನಿಕ ನಾಗರಿಕರ ಸಂಘಟನೆಯಿಂದ (ಮೆದೆಯಾ ಬೆಂಜಾಮಿನ್ ಮತ್ತು ಲಿಂಡಾ ಚಾವೆಜ್-ಥಾಂಪ್ಸನ್), ಬ್ರಾಜಿಲ್ ನ ಸರ್ಕಾರೇತರ ಸಂಸ್ಥೆ NGO Ibaseಐಬೇಸ್ Archived 2011-05-26 ವೇಬ್ಯಾಕ್ ಮೆಷಿನ್ ನಲ್ಲಿ. (ಕ್ಯಾಂಡಿಡೊ ಗ್ರೆಜಿಬಿಸ್ಕಿ ಮತ್ತು ಮೊಯೆಮಾ ಮಿರಂಡಾ), ಬ್ರಾಜಿಲ್ ನ ನಾಗರಿಕರಿಗಾಗಿರುವ ಉದ್ಯಮಿಗಳ ಸಂಸ್ಥೆ CIVES (ಒಡೆಡ್ ಗ್ರಾಜೆವ್,WSF ನ ಸಂಸ್ಥಾಪಕ), ಬ್ರಾಜಿಲ್ ನ ನ್ಯಾಯ ಮತ್ತು ಶಾಂತಿ ಅಯೋಗದ (ಫ್ರಾನ್ಸಿಸ್ಕೊ ವ್ಹಿಟ್ಕರ್ Archived 2011-07-25 ವೇಬ್ಯಾಕ್ ಮೆಷಿನ್ ನಲ್ಲಿ.),ATTAC (ಕ್ರಿಸ್ಟೊಫೆ ಅಕ್ವಿಟೊನ್), CRID ಫ್ರಾನ್ಸ್ Archived 2011-07-20 ವೇಬ್ಯಾಕ್ ಮೆಷಿನ್ ನಲ್ಲಿ. (ಗುಸ್ತಾವೆ ಮಾಸೈ), ಫೊಕಸ್ ಆನ್ ದಿ ಗ್ಲೊಬಲ್ ಸೌತ್ ಥೈಲ್ಯಾಂಡ್ (ನಿಕೊಲಾ ಬುಲರ್ಡ್), ಮತ್ತು ಅಲೈಯನ್ಸ್ ಫಾರ್ ರಿಸ್ಪೊನ್ಸಿಬಲ್,ಪ್ಲುರಲ್ ಅಂಡ್ ಯುನೈಟೆಡ್ ವರ್ಲ್ಡ್ Archived 2011-06-23 ವೇಬ್ಯಾಕ್ ಮೆಷಿನ್ ನಲ್ಲಿ. (ಗುಸ್ತಾವೊ ಮರಿನ್)ಇತ್ಯಾದಿ. ಇದರಲ್ಲಿ AFL-CIO ಮತ್ತು SEIU ಸಂಸ್ಥೆಗಳ ಸದಸ್ಯರೂ ಕೂಡಾ ಬಹಳಷ್ಟು ಕ್ರಿಯಾಶೀಲರಾಗಿದ್ದಾರೆ. ಇದಕ್ಕಾಗಿಫೊರ್ಡ್ ಫೌಂಡೇಶನ್ (ಫೊರ್ಡ ಪ್ತತಿಷ್ಠಾನ)ವು ಮುಂದಿನ ಸಭೆಗಾಗಿ $500,000 ರಷ್ಟು ನಿಧಿ ಒದಗಿಸಿದೆ.
ಮೂರನೆಯ WSF ಕೂಡಾ ಪೊರ್ಟೊ ಅಲೆಗ್ರಾದಲ್ಲಿ ಜನವರಿ 2003ರಲ್ಲಿ ಏರ್ಪಾಡಾಗಿತ್ತು. ಇದರೊಂದಿಗೆ ಸಮಾನಾಂತರವಾಗಿ ಹಲವು ಕಾರ್ಯಗಳನ್ನು ಆಯೋಜಿಸಲಾಗಿತ್ತು.ಉದಾಹರಣೆಗೆ ಲೈಫ್ ಆಫ್ಟರ್ ಕ್ಯಾಪ್ಟಲೈಜೇಶನ್ ಕಾರ್ಯಾಗಾರ,ಇದು ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿತು.ಕಮ್ಯುನಿಷ್ಟ್ ರಹಿತ,ಬಂಡವಾಳಶಾಹಿ ರಹಿತ ವಿಷಯಗಳ ಗಹನ ಚರ್ಚೆ ನಡೆಸಲಾಯಿತು.ಇದರಲ್ಲಿ ವಿವಿಧ ಸಾಧ್ಯತೆಗಳನ್ನು ಸಾಮಾಜಿಕ,ರಾಜಕೀಯ,ಆರ್ಥಿಕ,ಸಂಪರ್ಕ ರಚನೆಗಳು ವಿಭಾಗದಲ್ಲಿ ಗುರುತಿಸುವ ಯತ್ನ ಮಾಡಲಾಯಿತು.[೨] ಇದರಲ್ಲಿನ ಪ್ರಮುಖ ಭಾಷಣಕಾರರಲ್ಲಿ ಅಮೆರಿಕನ್ ಭಾಷಾತಜ್ಞ ಮತ್ತು ರಾಜಕೀಯ ಕಾರ್ಯಕರ್ತ ನೊಯಮ್ ಚೊಮ್ಸಿಕಿ ಇದ್ದರು.
ನಾಲ್ಕನೆಯ WSF ಸಭೆಯು ಭಾರತದ ಮುಂಬೈನಲ್ಲಿ 2004ರ ಜನವರಿ 16 ರಿಂದ 21 ರ ವರೆಗೆ ನೆರವೇರಿತು. ಒಟ್ಟು ಜನರ ಹಾಜರಾತಿಯನ್ನು 75,000 ಎಂದು ಪರಿಗಣಿಸಲಾಗಿತ್ತು ಆದರೆ ಅದು ಕೇವಲ ಸಾವಿರಕ್ಕೆ ಸೀಮಿತವಾಗಿತ್ತು. ಈ ವೇದಿಕೆಯು ಅಂದು ಸಾಂಸ್ಕೃತಿಕ ವೈವಿಧ್ಯತೆಗೆ ಸಂಕೇತವಾಗಿತ್ತು. ಅಲ್ಲಿ ಅತ್ಯಂತ ಮಹತ್ವದ ನಿರ್ಣಯ ಮಂಡಿಸಿದ್ದೆಂದರೆ ಫ್ರೀ ಸಾಫ್ಟ್ ವೇರ್ ಮೇಲೆ,ಮುಕ್ತವಾಗಿ ಸಾಫ್ಟ್ ವೇರ್ ಬಳಕೆ ಇದರ ಉದ್ದೇಶವಾಗಿತ್ತು. ಆ WSF ನ 2004 ರ ವೇದಿಕೆಯಲ್ಲಿ ಜೊಸೆಫ್ ಸ್ಟಿಗ್ಲಿಜ್ ಪ್ರಮುಖ ಭಾಷಣಕಾರರಲ್ಲೊಬ್ಬರಾಗಿದ್ದರು.
ಐದನೆಯ ವರ್ಲ್ಡ್ ಸೊಸಿಯಲ್ ಫೊರಮ್ 2005 ರಲ್ಲಿ ಬ್ರಾಜಿಲ್ ನ ಪೊರ್ಟೊ ಅಲೆಗ್ರೆನಲ್ಲಿ ಜನವರಿ 26 ರಿಂದ 31 ರ ವರೆಗೆ ನಡೆಯಿತು. ವೇದಿಕೆಯಲ್ಲಿ ಒಟ್ಟು 155,000 ನೊಂದಾಯಿತ ಸದಸ್ಯರು ಭಾಗವಹಿಸಿದ್ದರು. ಅವರೆಲ್ಲರೂ ಬ್ರಾಜಿಲ್, ಅರ್ಜೈಂಟೈನಾ, ಯುನೈಟೆಡ್ ಸ್ಟೇಟ್ಸ್, ಉರುಗ್ವೆ,ಮತ್ತು ಫ್ರಾನ್ಸ್ ನಿಂದ ಬಂದಿದ್ದರು. ವೇದಿಕೆಯಲ್ಲಿ ಪಾಲ್ಗೊಂಡ ಹಲವರು ಪೊರ್ಟೊ ಅಲೆಗ್ರೆ ಮ್ಯಾನಿಫೆಸ್ಟೊವನ್ನು ಬಿಡುಗಡೆಗೊಳಿಸಿದರು.
ಆರನೆಯ ವರ್ಲ್ಡ್ ಸೊಸಿಯಲ್ ಫೊರಮ್ "ಪೊಲಿಸೆಂಟ್ರಿಕ್"ಆಗಿತ್ತು.ಇದು ಜನವರಿ 2006 ರಲ್ಲಿ ಕಾರಾಕಾಸ್ ನಲ್ಲಿ (ವೆನೆಜುಲಾ ಮತ್ತು ಬಾಮಕೊ (ಮಾಲಿ)ಯಲ್ಲಿ, ಮತ್ತು ಮಾರ್ಚ್ 2006 ರಲ್ಲಿ ಕರಾಚಿಯಲ್ಲಿ (ಪಾಕಿಸ್ತಾನ)ದಲ್ಲಿ ಅಯೋಜಿತವಾಗಿತ್ತು. ಕಾಶ್ಮೀರ್ ದಲ್ಲಿನ ಭೂಕಂಪದಿಂದಾಗಿ ಪಾಕಿಸ್ತಾನದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಮಾರ್ಚ್ ವರೆಗೆ ವಿಳಂಬಿಸಲಾಯಿತು,ಹೀಗಾಗಿ ಅದು ಇತ್ತೀಚಿಗೆ ನಡೆಯಿತು.[೩]
ಏಳನೆಯ ವರ್ಲ್ಡ್ ಸೊಸಿಯಲ್ ಫೊರಮ್ ಕೀನ್ಯದ ನೈರೊಬಿಯಾದಲ್ಲಿ ಜನವರಿ 2007 ರಲ್ಲಿ ಏರ್ಪಾಡಾಗಿತ್ತು. ಇದರಲ್ಲಿ 110 ದೇಶಗಳಿಂದ 1,400 ಸಂಘಟನೆಗಳು ಭಾಗವಹಿಸಿದ್ದವಲ್ಲದೇ 66,000 ನೊಂದಾಯಿತ ಸದಸ್ಯರ ಪಾಲ್ಗೊಳ್ಳುವಿಕೆಯಿಂದ ಇಲ್ಲಿಯ ವರೆಗೆ ನಡೆದ ಎಲ್ಲಾ WSF ಸಭೆಗಳಿಗಿಂತ ಜಾಗತಿಕವಾಗಿ ಕಂಡದ್ದು ಅತಿ ದೊಡ್ಡ ಎನ್ನಬಹುದು.[೪] ಇದನ್ನು 'ಒಂದು NGOಮೇಳ' [೫] ಎಂದು ಟೀಕಿಸಲಾಯಿತು.ಕೀನ್ಯ ಮತ್ತು ದಕ್ಷಿಣ ಆಫ್ರಿಕೆಯಲ್ಲಿನ ಜನರ ಚಳವಳಿಗಳು ಇದರಲ್ಲಿ ಪಾಲ್ಗೊಂಡ ಹಲವು NGO ಸರ್ಕಾರೇತರ ಸಂಘಟನೆಗಳ ವಿರುದ್ದ ಸಿಡೆದೆದ್ದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ದೇಶಗಳ ಬಡವರನ್ನು ತೋರಿಸಿ ಅವರನ್ನು ಬಳಿಪಶುಗಳನ್ನಾಗಿಸಲಾಗುತ್ತದೆ ಎಂದು ಅವರು ಆಕ್ಷೇಪಿಸಿದರು.
ಎಂಟನೆಯ ವರ್ಲ್ಡ್ ಸೊಸಿಯಲ್ ಫೊರಮ್ ನ ಸಭೆ 2008 ರಲ್ಲಿ ನಿಗದಿತ ಸ್ಥಳದಲ್ಲಿ ನಡೆಯಲಿಲ್ಲ.ಆದರೆ ಜಾಗತಿಕವಾಗಿ ಸ್ಥಳೀಯ ಮತ್ತು ಇನ್ನಿತರ ಸಂಘಟನೆಗಳು ತಾವಿರುವಲ್ಲಿಯೇ ಜನವರಿ 26 ರಂದು ಕಾರ್ಯಪ್ರವೃತ್ತವಾಗಿದ್ದವು. ಅವುಗಳನ್ನು ಗ್ಲೊಬಲ್ ಕಾಲ್ ಫಾರ್ ಆಕ್ಷನ್ ಕ್ರಿಯಾಶೀಲತೆಗಾಗಿ ಜಾಗತಿಕ ಕರೆ,ಎಂದೂ ಹೆಸರಿಸಲಾಯಿತು.[೬]
ಅಮೆಜಾನ್ ಮಳೆಕಾಡಿನಲ್ಲಿರುವ ಬ್ರಾಜಿಲ್ ನ ಬೆಲೆಮ್ ನಗರದಲ್ಲಿ ಒಂಬತ್ತನೆಯ ವರ್ಲ್ಡ್ ಸೊಸಿಯಲ್ ಫೊರಮ್ ಸಭೆಯು 2009 ರ ಜನವರಿ 27 ರಿಂದ ಫೆಬ್ರವರಿ 1 ರ ವರೆಗೆ ನಡೆಯಿತು.[೭]
ಸೆನೆಗಲ್ ನ ಡಾಕಾರ್ ನಲ್ಲಿ 2011 ರಲ್ಲಿ ವರ್ಲ್ಡ್ ಸೊಸಿಯಲ್ ಫೊರಮ್ ನ ಸಭೆ ಏರ್ಪಾಡಾಗಿದೆ.
ಯುನೈಟೆಡ್ ನೇಶನ್ಸ್ ಸಂಯುಕ್ತ ರಾಷ್ಟ್ರ ಸಂಘವು 2001 ರಿಂದ UNESCOಪರವಾಗಿ WSF ಸಭೆಯಲ್ಲಿ ಪಾಲ್ಗೊಳ್ಳುತ್ತಿದೆ.ಈ ವೇದಿಕೆಯಿಂದ ಸಾಂಸ್ಥಿಕ ಉತ್ತಮ ಸಾಧನೆ ನಡೆದ ಬಗ್ಗೆ ಅದು ತನ್ನ ಮೆಚ್ಚುಗೆ ವ್ಯಕ್ತಪಡಿಸಿದೆ."ಪರಸ್ಪರ ಮಾತುಕತೆಗಳಿಗೆ ಪ್ರಧಾನ ಅವಕಾಶ ಮತ್ತು ಸಾರ್ವಜನಿಕ ಯೋಜನೆಗಳ ಸೂತ್ರ ನಿರ್ಮಿಸಲು ಅಗತ್ಯ ಯೋಚನಾಲಹರಿಯ ವಿಚಾರಧಾರೆಯ ಪ್ರಯೋಗಾಲಯ" ಇದನ್ನು "ಮುಂಬರುವ ಸಾಮಾಜಿಕ ಪ್ರಗತಿ ಮೇಲೆ ವಿಮರ್ಶಿಸಲಾಗುತ್ತದೆ.ಇದರೊಂದಿಗೆ ಸಮೃದ್ಧ,ಸಮಗ್ರತೆ,ನ್ಯಾಯ,ಶಾಂತಿ ಮತ್ತು ಮಾನವ ಹಕ್ಕುಗಳನ್ನು ಸಂಯೋಜಿಸಿ ಅದಕ್ಕೆ ವಿಶಾಲ ರೂಪ ನೀಡಲು ಈ ವೇದಿಕೆಯ ಸಭೆಗಳು ನೆರವಾಗಿವೆ.[೮]
ಪ್ರಾದೇಶಿಕ ಸಾಮಾಜಿಕ ವೇದಿಕೆಗಳು
[ಬದಲಾಯಿಸಿ]ಇಲ್ಲಿ WSF ನ ಸಭೆಗಳು ಹಲವು ಪ್ರಾದೇಶಿಕ ಸಂಘಟನೆಗಳ ಉತ್ತೇಜನ ಮತ್ತು ಉತ್ಥಾನಕ್ಕೆ ಪ್ರೊತ್ಸಾಹಿಸಿದೆ,ಅವುಗಳಲ್ಲಿ ಪ್ರಾದೇಶಿಕ ಸಾಮಾಜಿಕ ವೇದಿಕೆಗಳು, ಅದರಲ್ಲಿ ಅಮೆರಿಕಾಸ್ ಸೊಸಿಯಲ್ ಫೊರಮ್,ಯುರೊಪಿಯನ್ ಸೊಸಿಯಲ್ ಫೊರಮ್, ಏಶಿಯನ್ ಸೊಸಿಯಲ್ ಫೊರಮ್,ಮೆಡಿಟೇರಿಯನ್ ಸೊಸಿಯಲ್ ಫೊರಮ್ ಮತ್ತು ಸದರ್ನ್ ಆಫ್ರಿಕಾ ಸೊಸಿಯಲ್ ಫೊರಮ್. ಅದಲ್ಲದೇ ಇದೇ ಮಾದರಿಯಲ್ಲಿ ಹಲವು ಸ್ಥಳೀಯ ಮತ್ತು ರಾಷ್ಟ್ರೀಯ ಸಾಮಾಜಿಕ ವೇದಿಕೆಗಳಿವೆ.ಉದಾಹರಣೆಗೆ ಇಟಾಲಿಯನ್ ಸೊಸಿಯಲ್ ಫೊರಮ್, ಇಂಡಿಯಾ ಸೊಸಿಯಲ್ ಫೊರಮ್,[೯] ಲೈವರ್ ಪೂಲ್ ಸೊಸಿಯಲ್ ಫೊರಮ್ ಬಾಸ್ಟನ್ ಸೊಸಿಯಲ್ ಫೊರಮ್. ಮೊಟ್ಟ ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್ ಸೊಸಿಯಲ್ ಫೊರಮ್ ಸಭೆಯನ್ನು ಅಟ್ಲಾಂಟಾ ದಲ್ಲಿ ಜೂನ್ 2007ರಲ್ಲಿ ಆಯೋಜಿಸಲಾಗಿತ್ತು.[೧೦] ಅಂದರೆ 2010 ರಲ್ಲಿ ಡೆಟ್ರೊಯಿಟ್, ಮಿಶಿಗನ್, ಯುನೈಟೆಡ್ ಸ್ಟೇಟ್ಸ್ ಸೊಸಿಯಲ್ ಫೊರಮ್ ವೇದಿಕೆ ಸಭೆಯನ್ನು ಜೂನ್ 22–26 ರ ವರೆಗೆ ಆಯೋಜಿಸಿ ನಡೆಸಿತು.
ಪ್ರಾದೇಶಿಕ ವೇದಿಕೆಗಳ ಸಭೆಗಳು ನೈಋತ್ಯದಲ್ಲಿ ಏರ್ಪಾಡಾಗಿದ್ದವು,ಅದೇ ರೀತಿ ಯುನೈಟೆಡ್ ಸ್ಟೇಟ್ಸ್ ನ ಪ್ರಾದೇಶಿಕತೆಗಳಾದ [೧೧] ವಾಯವ್ಯ, ಈಶಾನ್ಯ, ಮಧ್ಯಪ್ರಾಚ್ಯ ಮತ್ತುಆಗ್ನೇಯ ಗಳಲ್ಲಿ ಸಭೆಗಳು ನಡೆದವು. ಅದಲ್ಲದೇ ಕೆನಡಿಯನ್ ಸೊಸಿಯಲ್ ಫೊರಮ್ ಜೂನ್ 2010 ರಲ್ಲಿ ತನ್ನ ಕಾರ್ಯಕ್ರಮ ಪಟ್ಟಿ ರೂಪಿಸಿತ್ತು.[೧೨]
ಬಹುತೇಕ ಎಲ್ಲಾ ಸಾಮಾಜಿಕ ವೇದಿಕೆಗಳು WSF ಚಾರ್ಟರ್ ಆಫ್ ಪ್ರಿನ್ಸಿಪಲ್ಸ್ ಮೇಲೆಯೇ ತಮ್ಮ ವರ್ಲ್ಡ್ ಸೊಸಿಯಲ್ ಫೊರಮ್ ನಡಿ ನಡೆದುಕೊಳ್ಳುತ್ತವೆ.
ಟೀಕೆಗಳು
[ಬದಲಾಯಿಸಿ](NGOs) ಸರ್ಕಾರೇತರ ಸಂಸ್ಥೆಗಳ ಪಾತ್ರ
[ಬದಲಾಯಿಸಿ]ಈ WSF ಇತ್ತೀಚಿಗೆ ಜನರ ಚಳವಳಿಯನ್ನು ಸ್ಥಗಿತಗೊಳಿಸಿ ಈ NGO ಗಳು ಸರ್ಕಾರೇತರ ಸಂಸ್ಥೆಗಳಿಗೆ ಮಣೆ ಹಾಕುತ್ತಿದೆ, ಎಂದು ಜನರು ಇದರ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಡಜನರನ್ನು ಹೊರಗಿಟ್ಟು ಇವರಿಗೆ ಆದ್ಯತೆ ದೊರೆಯುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ.[೧೩] ಜಗತ್ತಿನ ಬಡವರಲ್ಲಿನ ಬಡವರ ಚಳವಳಿಗಳನ್ನು ಹತ್ತಿಕ್ಕಲಾಗಿದೆ.ಉದಾಹರಣೆಗೆ ಆಫ್ರಿಕಾದಂತಹ ದೇಶಗಳು ವಾದಿಸುವಂತೆ ತಮ್ಮನ್ನು ಈ ವೇದಿಕೆ ಸಂಪೂರ್ಣವಾಗಿ ನಿರ್ಲಕ್ಷಿಸಿ ದೂರ ಇಟ್ಟಿದೆ ಎಂದು ಹೇಳಿವೆ.ಕೀನ್ಯ ಮತ್ತು ದಕ್ಷಿಣ ಆಫ್ರಿಕಾ ಗಳಲ್ಲಿ ಈ NGO ಗಳು ತಮ್ಮ ಹೆಸರಲ್ಲಿ ವಂತಿಗೆ ಸಂಗ್ರಹಿಸಿ ನಮ್ಮನ್ನು ತೋರಿಸಿ ತಾವು ಮುಚ್ಚಿಕೊಳ್ಳುತ್ತಿವೆ ಎಂದೂ ಅವರು ದೂರಿದ್ದಾರೆ.ಆಫ್ರಿಕಾದ ಪ್ರಾಬಲ್ಯ ಮತ್ತು ಅದರ ಪ್ರಾತಿನಿಧ್ಯಕ್ಕೆ ಬೆಲೆ ನೀಡದಿದ್ದುದು ಒಂದು ನಿರ್ಲಕ್ಷ್ಯ ಧೋರಣೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈ NGO ಗಳು ತೀರ ಕೆಳವರ್ಗದ ವರೆಗಿನ ಚಳವಳಿಗಳಲ್ಲಿ ಮೂಗು ತೂರಿಸಿ ಈ ವೇದಿಕೆಯಲ್ಲಿ ತಮ್ಮ ಪ್ರದರ್ಶನಕ್ಕೆ ಮುಂದಾಗಿವೆ.ಅಲ್ಲಿ ತಮ್ಮ ಪ್ರಭಾವ ಬೀರುವುದೊಂದೇ ಅವುಗಳ ಉದ್ದೇಶ ಎಂದು ವಾದಿಸಲಾಗುತ್ತದೆ.[೧೪]
ಪ್ರಜಾಪ್ರಭುತ್ವ
[ಬದಲಾಯಿಸಿ]ಜೈ ಸೆನ್ ಅವರ ಪ್ರಕಾರ"ಹಲವು ಕಾರ್ಪೊರೇಟ್ ರಚನೆಗಳಲ್ಲಿ ಇಂತಹ ಬಾಗಿಲು ಕಾಯುವ ಕೆಲಸ ಸಾಮಾನ್ಯವೆನಿಸಿದೆ.ಕೇವಲ ಸಡಿಳು ನೀತಿ ನಿಯಮಗಳ ಮೂಲಕ ಅಷ್ಟೇ ಅಲ್ಲ 'ಈ ರಚನಾ ನಿರ್ಮತಿಯಲ್ಲಿನ ದೋಷಪೂರಿತ ಸೂತ್ರಗಳೂ'ಇದರಲ್ಲಿ ತಮ್ಮ ಪಾಲು ಪಡೆದಿವೆ.ಕೇವಲ ಗೋಚರ ನಾಯಕತ್ವ ಇಂತಹ ಕಾನೂನು ನಿಯಮಾವಳಿಗಳನ್ನು ಗಾಳಿಗೆ ತೂರುತ್ತದೆ.ಅಲ್ಲದೇ ಈ ವೇದಿಕೆಗೆ ಯಾರು ಯೋಗ್ಯರೆನ್ನುವುದನ್ನು ಅದು ಎಗ್ಗಲ್ಲಿದೇ ಹೆಸರಿಸುತ್ತದೆ,ಬಡಪಾಯಿಗಳು ಇದರ ಮೂಕ ಪ್ರೇಕ್ಷಕರಷ್ಟೇ ಆಗಲು ಸಾಧ್ಯವಾಗಿದೆ." [೧೫]
ರೇಸ್(ಜನಾಂಗೀಯತೆಯ ವರ್ಗ)
[ಬದಲಾಯಿಸಿ]ಮತ್ತೆ ಜೈ ಸೆನ್ ಹೇಳುವಂತೆ ಈ ವೇದಿಕೆ "ಕೇವಲ ವಯಸ್ಸಾಗುತ್ತಿರುವ ಪುರುಷರ ನೇತೃತ್ವದಲ್ಲಿ ನಡೆಯುತ್ತಿದೆ,ಬಹುತೇಕ ಬಿಳಿಯರು ಅಥವಾ ಗೌರವಪೂರ್ವಕವದ ಬಿಳಿಯರು,ಮಧ್ಯಮ ಮತ್ತು ಮೇಲ್ಜಾತಿಯ ಮತ್ತು ವರ್ಗದ ವಿಶ್ವದಲ್ಲಿ ಉತ್ತಮ ನೆಲೆ ಕಂಡವರಿಗೆ ಮಾತ್ರ ಇದು ಜಾಗ ಒದಗಿಸುತ್ತಿದೆ."[೧೬]
2001 ರ ಮೊನ್ಸೊಂಟೊ ಪ್ರಕರಣ
[ಬದಲಾಯಿಸಿ]ಈ WSF ವೇದಿಕೆಯಲ್ಲಿ ಹಾಜರಾಗುವ ಕಾರ್ಯಕರ್ತರ ಕಾರ್ಯಚಟುವಟಿಕೆಗಳ ಬಗ್ಗೆ ವ್ಯಾಪಕ ಟೀಕೆ ಕೇಳಿ ಬರುತ್ತಿದೆ.ಉದಾಹರಣೆಗೆ WSF 2001 ರಲ್ಲಿ ಅನುವಂಶೀಯವಾಗಿ ಸುಧಾರಿತ ಮೊನ್ಸೊಂಟೊ ಕಂಪನಿಯ ಸಸ್ಯಗಳ ಪ್ರಾತ್ಯಕ್ಷಿಕೆಯನ್ನು ಕಾರ್ಯಕರ್ತರು ದಾಳಿ ನಡೆಸಿ ಅದನ್ನು ನಾಶಪಡಿಸಿದರು.[೧೭]
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ರಿಚಾರ್ಡ್ ಫಾಲ್ಕ್, (2009), 'ಅಚಿವಿಂಗ್ ಹುಮನ್ ರೈಟ್ಸ್', ರೂಟ್ ಲೆಜ್.
- ಮಾರ್ಕ್ ಬಟ್ಲರ್(2007), "[ರಿ]ಕನೆಕ್ಟಿಂಗ್ ದಿ ವರ್ಲ್ಡ್ ಸೊಸಿಯಲ್ ಫೊರಮ್"[೧೮]
- ಜೊಸೆ ಕೊರಿಯಾ ಲಿಟೆ (2005), ದಿ ವರ್ಲ್ಡ್ ಸೊಸಿಯಲ್ ಫೊರಮ್: ಸ್ಟ್ರಾಜಿಜ್ಸ್ ಆಫ್ ರೆಸಿಸ್ಟನ್ಸ್ , ಹೇ ಮಾರ್ಕೆಟ್ ಬುಕ್ಸ್ [೧] Archived 2005-11-19 ವೇಬ್ಯಾಕ್ ಮೆಷಿನ್ ನಲ್ಲಿ.
- ಜಾಕ್ಕಿ ಸ್ಮಿತ್. (2004). ದಿ ವರ್ಲ್ಡ್ ಸೊಸಿಯಲ್ ಫೊರಮ್ ಅಂಡ್ ದಿ ಚಾಲೇಂಜಿಸ್ ಆಫ್ ಗ್ಲೊಅಬಲ್ ಡೆಮಾಕ್ರಸಿ Archived 2009-02-11 ವೇಬ್ಯಾಕ್ ಮೆಷಿನ್ ನಲ್ಲಿ.. ಗ್ಲೊಬಲ್ ನೆಟ್ವರ್ಕ . 4(4):413-421.
- ಟಿ. ತೈವಿನಿಯನ್. (2002). ದಿ ವರ್ಲ್ಡ್ ಸೊಸಿಯಲ್ ಫೊರಮ್ ಅಂಡ್ ಗ್ಲೊಬಲ್ ಡೆಮಾಕ್ರೇಟೇಶನ್: ಲರ್ನಿಂಗ್ ಫ್ರಾಮ್ ಪೊರ್ಟೊ ಅಲೆಗ್ರೆ. ಥರ್ಡ್ ವರ್ಲ್ಡ್ ಕ್ವಾರ್ಟರ್ಲಿ . 23(4):621-632.
- ವಿಲ್ಯಮ್ ಎಫ್. ಫಿಶರ್ ಅಂಡ್ ಥಾಮಸ್ ಪೊನ್ನೈಯ(2003). ಎನದರ್ ವರ್ಲ್ಡ್ ಈಸ್ ಪಾಸಿಬಲ್: ಪಾಪ್ಯುಲರ್ ಆಲ್ಟರ್ ನೇಟಿವ್ಸ್ ಟು ಗ್ಲೊಬಲೈಜೇಶನ್ ಆಟ್ ದಿ ವರ್ಲ್ಡ್ಸ್ ಸೊಸಿಯಲ್ ಫೊರಮ್
- ಬೊವೆಂಚುರಾ ಡೆ ಸೌಸ ಸಂಟೊಸ್ (2005). O ಫೊರಮ್ ಸೊಸಿಯಲ್ ಮುಡೇಲ್: ಮ್ಯಾನ್ಯುವಲ್ ಡೆ ಉಸೊ , ಕೊರ್ಟೆಜ್ ಎಡಿಟೊರ.
- ಸೆನ್, ಜೈ, ಅನಿತಾ ಆನಂದ, ಆರ್ತುರೊ ಎಸ್ಕೊಬಾರ್ & ಪೀಟರ್ ವಾಟರ್ ಮನ್ (eds). 2004. ದಿ ವರ್ಲ್ಡ್ ಸೊಸಿಯಲ್ ಫೊರಮ್: ಚಾಲೇಂಜಿಂಗ್ ಎಂಪೈಯರ್ಸ್ Archived 2008-09-19 ವೇಬ್ಯಾಕ್ ಮೆಷಿನ್ ನಲ್ಲಿ.. ನವದೆಹಲಿ: ದಿ ವಿವೇಕಾ ಫೌಂಡೇಶನ್.
ಟಿಪ್ಪಣಿಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2020-06-12. Retrieved 2011-01-27.
- ↑ "ಆರ್ಕೈವ್ ನಕಲು". Archived from the original on 2003-01-25. Retrieved 2011-01-27.
- ↑ http://www.wsf2006karachi.org/
- ↑ ಫ್ರಾಂಕ್ ಜೊಯ್ಸಿ. ಆರ್ಟಿಕಲ್ ಆನ್ ಅಲ್ಟರ್ ನೇಟ್. ಪರಿಷ್ಕರಿಸಿದ್ದು 2010-02-23.
- ↑ "PZN - World Social Forum: just another NGO fair?". Pambazuka.org. 2007-01-26. Retrieved 2009-05-10.
- ↑ "Jan. 26, 2008 - Act together for another world! | WSF2008". WSF2008<!. 2008-01-26. Archived from the original on 2009-02-19. Retrieved 2009-05-10.
- ↑ "ವಿಶ್ವ ಸಾಮಾಜಿಕ ವೇದಿಕೆ 2009"
- ↑ "UNESCO and the World Social Forum page". Portal.unesco.org. 2007-03-07. Archived from the original on 2009-04-25. Retrieved 2009-05-10.
- ↑ "ಆರ್ಕೈವ್ ನಕಲು". Archived from the original on 2016-02-13. Retrieved 2011-01-27.
- ↑ http://www.ussf2007.org
- ↑ "ಆರ್ಕೈವ್ ನಕಲು". Archived from the original on 2006-10-22. Retrieved 2011-01-27.
- ↑ "ಆರ್ಕೈವ್ ನಕಲು". Archived from the original on 2013-12-08. Retrieved 2021-08-10.
- ↑ "ಮಜೊಂಕೆ ಪೊನಿ ಆನ್ ದಿ ವರ್ಲ್ಡ್ ಸೊಸಿಯಲ್ ಫೊರಮ್". Archived from the original on 2010-11-19. Retrieved 2011-01-27.
- ↑ Abahlali baseMjondolo (2007-03-06). "Article by David Ntseng on NGOs and grassroots movements at the forum". Abahlali.org. Archived from the original on 2011-07-24. Retrieved 2009-05-10.
- ↑ http://p2pfoundation.net/Engaging_Critically_with_the_Reality_and_Concept_of_Civil_SocietyInterrogating the Civil. ಎಂಗೇಜಿಂಗ್ ಕ್ರಿಟಿಕಲ್ಲಿ ಉಯಿತ್ ದಿ ರಿಯಾಲ್ಟಿ ಅಂಡ್ ಕಾನ್ ಸೆಪ್ಟ್ ಆಫ್ ಸಿವಿಲ್ ಸೊಸೈಟಿ{/0}, ಜೈ ಸೆನ್ ಅಂಡ್ ಪೀಟರ್ ವಟರ್ ಮ್ಯಾನ್, eds, (2010) - ವರ್ಲ್ಡ್ಸ್ ಆಫ್ ಮೂಮೆಂಟ್, ವರ್ಲ್ಡ್ಸ್ ಇನ್ ಮೂಮೆಂಟ್. ಸಂಪುಟ 4 ಇನ್ ದಿ ಚಾಲೇಂಜಿಂಗ್ ಎಂಪೈಯರ್ ಸಿರೀಸ್. ನವದೆಹಲಿ : ಒಪನ್ ವರ್ಡ್
- ↑ ದಿ ಸಿವಿಲ್. ಎಂಗೇಜಿಂಗ್ ಕ್ರಿಟಿಕಲ್ಲಿ ಉಯಿತ್ ದಿ ರಿಯಾಲ್ಟಿ ಅಂಡ್ ಕಾನ್ ಸೆಪ್ಟ್ ಆಫ್ ಸಿವಿಲ್ ಸೊಸೈಟಿ, ಜೈ ಸೆನ್ ಅಂಡ್ ಪೀಟರ್ ವಟರ್ ಮ್ಯಾನ್, eds, (2010) - ವರ್ಲ್ಡ್ಸ್ ಆಫ್ ಮೂಮೆಂಟ್, ವರ್ಲ್ಡ್ಸ್ ಇನ್ ಮೂಮೆಂಟ್. ಸಂಪುಟ 4 ಚಾಲೇಂಜಿಂಗ್ ಎಂಪೈಯರ್ ಸಿರೀಸ್ ನಲ್ಲಿ. ನವದೆಹಲಿ : ಒಪನ್ ವರ್ಲ್ಡ್
- ↑ "Folha Online - Brasil - José Bové, militante francês antiglobalização, chega a Porto Alegre - 28 January 2002". .folha.uol.com.br. 2002-01-28. Retrieved 2009-05-10.
- ↑ Abahlali baseMjondolo (2007-02-08). "[re]connecting the World Social Forum | Abahlali baseMjondolo". Abahlali.org. Archived from the original on 2008-12-23. Retrieved 2009-05-10.
ಇವನ್ನೂ ನೋಡಿ
[ಬದಲಾಯಿಸಿ]- ವರ್ಗ:Social forums - ಅದರ್ ಸೊಸಿಯಲ್ ಫೊರಮ್ಸ್
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಧಿಕೃತ
- ಅಫಿಶಿಯಲ್ ಹೊಮ್ಪೆಜ್ Archived 2006-08-08 ವೇಬ್ಯಾಕ್ ಮೆಷಿನ್ ನಲ್ಲಿ.
- ಚಾರ್ಟರ್ ಆಫ್ ಪ್ರಿನ್ಸಿಪಲ್ಸ್
- ನಿವ್ಸ್ ರಿಪೊರ್ಟ್ಸ್
- CIRANDA WSF 2010 Archived 2011-02-06 ವೇಬ್ಯಾಕ್ ಮೆಷಿನ್ ನಲ್ಲಿ.
- IPS-ಟೆರ್ರಾವಿವಾ WSF 2010 Archived 2010-12-30 ವೇಬ್ಯಾಕ್ ಮೆಷಿನ್ ನಲ್ಲಿ.
- Choike.org WSF 2010 Archived 2011-01-28 ವೇಬ್ಯಾಕ್ ಮೆಷಿನ್ ನಲ್ಲಿ.
- Choike.org WSF In-Depth Report Archived 2011-01-30 ವೇಬ್ಯಾಕ್ ಮೆಷಿನ್ ನಲ್ಲಿ.
- ಪ್ರಾಚೀನ ವೇದಿಕೆ
- WSF 2009 Archived 2014-07-15 ವೇಬ್ಯಾಕ್ ಮೆಷಿನ್ ನಲ್ಲಿ.
- WSF 2008 Archived 2016-02-04 ವೇಬ್ಯಾಕ್ ಮೆಷಿನ್ ನಲ್ಲಿ.
- wsf-2007 Archived 2016-02-04 ವೇಬ್ಯಾಕ್ ಮೆಷಿನ್ ನಲ್ಲಿ.
- ನೈರೊಬಿನಲ್ಲಿ 20-25 WSF ಸಭೆ, ಜನವರಿ 2007 Archived 2012-02-19 ವೇಬ್ಯಾಕ್ ಮೆಷಿನ್ ನಲ್ಲಿ.
- ವರ್ಲ್ಡ್ ಸೊಸಿಯಲ್ ಫೊರ್ಮ್2009 Archived 2008-09-18 ವೇಬ್ಯಾಕ್ ಮೆಷಿನ್ ನಲ್ಲಿ. ಬೆಲೆಮ್, ಬ್ರಾಜಿಲ್- ಫ್ರಾಮ್ ಜನವರಿ 27 ಅಂಟಿಲ್ ಫೆಬ್ರವರಿ 1, .
- Pages using the JsonConfig extension
- Articles needing additional references from August 2006
- All articles needing additional references
- Articles lacking in-text citations from January 2010
- All articles lacking in-text citations
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಜಾಗತೀಕರಣ ವಿರೋಧಿ
- ಪೊಲಿಟಿಕಲ್ ಕಾಂಗ್ರೆಸ್ಸಿಸ್
- ಸಾಮಾಜಿಕ ವೇದಿಕೆ