"ನಿಡ್ಪಳ್ಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
ನಿಡ್ಪಳ್ಳಿಯು [[ಕರ್ನಾಟಕ]] ತಾಲೂಕಿನ [[ದಕ್ಷಿಣ ಕನ್ನಡ]] ಜಿಲ್ಲೆಯ [[ಪುತ್ತೂರು]] ತಾಲೂಕಿನ ದಕ್ಷಿಣ ಭಾಗದಲ್ಲಿರುವ ಒಂದು ಪುಟ್ಟ ಗ್ರಾಮ<ref>.
http://www.onefivenine.com/india/villages/Dakshin-Kannad/Puttur/Nidpalli
</ref>. ತಾಲ್ಲೂಕು ಕೇಂದ್ರವಾದ ಪುತ್ತೂರಿನಿಂದ ಸುಮಾರು ೧೮ ಕಿಲೊಮೀಟರ್ ದಕ್ಷಿಣಕ್ಕಿದೆ. ನಿಡ್ಪಳ್ಳಿಯು ಸಂಪೂರ್ಣವಾದ ಕೃಷಿ ಆಧಾರಿತ ಗ್ರಾಮಕ್ಕೊಂದು ಉದಾಹರಣೆಯೂ ಹೌದು.
==ಕೃಷಿ==
ಕೃಷಿಯೇ ಇಲ್ಲಿನ ಜನರ ಪ್ರಧಾನ ವೃತ್ತಿ. ಮುಖ್ಯವಾಗಿ [[ಅಡಿಕೆ]], ತೆಂಗು, [[ಬಾಳೆ]], [[ಭತ್ತ]], [[ಕೊಕ್ಕೊ]], [[ರಬ್ಬರ್]], [[ಗೇರು ]]ಬೀಜಗಳ ಬೆಳೆ ಹಾಗೂ ಹೈನುಗಾರಿಕೆ ಇಲ್ಲಿನ ಜನರ ಜೀವನಾಧಾರ.
 
==ಭೌಗೋಳಿಕ ವಿಶೇಷತೆಗಳು==
ಶಾಂತಾದುರ್ಗಾ ದೇವಸ್ಥಾನವು ನಿಡ್ಪಳ್ಳಿಯ ಗ್ರಾಮದೇವಸ್ಥಾನ. ಕಿನ್ನಿಮಾಣಿ-ಪೂಮಾಣಿ ಇಲ್ಲಿನ ಗ್ರಾಮ ದೈವಗಳು. ಪುರಾತನ ಕಾಲದಿಂದಲೂ ಆರಿಗ ಮನೆತನದ [[ಜೈನ]] ಅರಸರ ಮುಂದಾಳುತ್ವದಲ್ಲಿ ಕ್ರಮಬದ್ಧವಾಗಿ ನಡೆಯುತ್ತಿದ್ದ ದೈವಾರಾಧನೆ, ಜಾತ್ರೊತ್ಸವಗಳು ಕ್ರಿ. ಶ ೧೯೭೨ ರ ಆಸುಪಾಸಿನ ಅನಿರೀಕ್ಷಿತ ಸಾಮಾಜಿಕ ಬದಲಾವಣೆಗಳ ಪರಿಣಾಮವಾಗಿ ಸಂಪೂರ್ಣವಾಗಿ ನಿಂತೇ ಹೊದವು. ದೇವ-ದೈವಸ್ಥಾನಗಳೂ<ref>https://www.nikharanews.com/%E0%B2%A8%E0%B2%BF%E0%B2%A1%E0%B3%8D%E0%B2%AA%E0%B2%B3%E0%B3%8D%E0%B2%B3%E0%B2%BF-%E0%B2%97%E0%B3%8D%E0%B2%B0%E0%B2%BE%E0%B2%AE%E0%B2%A6-%E0%B2%9C%E0%B2%A8%E0%B2%A4%E0%B3%86-%E0%B2%AC%E0%B2%82/ </ref> ಕಾಲನ ಹೊಡೆತಕ್ಕೆ ಸಿಕ್ಕು ಜೀರ್ಣವಾದವು. ಈಗ ಇರುವ ದೈವಸ್ಥಾನಗಳ ಅನತಿ ದೂರದಲ್ಲೇ ಒಂದು ಶಿವ ದೇವಸ್ಥಾನದ ಕುರುಹುಗಳನ್ನು ಕಾಣಬಹುದು. ಇದೇ ಪರಿಸರದಲ್ಲಿ ಹಲವಾರು ತಲೆಮಾರುಗಳ ಹಿಂದೆ ದುರ್ಗಾ ಮಂದಿರವೂ ಇತ್ತೆನ್ನುವುದು ಕೆಲವರ ಅಭಿಮತ; ಇದಕ್ಕೆ ಸಾಕ್ಷಿಯಾಗಿ, ಪ್ರಸ್ತುತ ದೇವಸ್ಥಾನ ನಿರ್ಮಾಣದ ಸಂದರ್ಭದಲ್ಲಿ ದೇವ ಗುಡಿಯೊಂದರ ಪಳೆಯುಳಿಕೆಗಳು ದೊರಕಿತ್ತು. ೧೯೯೦ ರ ದಶಕದ ಆದಿಯಿಂದಲೂ ಗ್ರಾಮದ ಪ್ರಮುಖರು ದೈವಸ್ಥಾನಗಳ ಪುನರುಜ್ಜೀವನಕ್ಕಾಗಿ ಪ್ರಯತ್ನ ಪಟ್ಟರೂ, ೨೦೧೮ ರಲ್ಲಷ್ಟೇ ದೇವಸ್ಥಾನ ಮತ್ತು ದೈವಸ್ಥಾನಗಳು ಸಂಪೂರ್ಣವಾಗಿ ರೂಪುಗೊಂಡವು. ಈ ದೇವಸ್ಥಾನ ಸಂಕೀರ್ಣಗಳು ಸುಂದರವಾದ ಶಾಂತಾದುರ್ಗಾ ದೇವಸ್ಥಾನ, ಕಿನ್ನಿಮಾಣಿ-ಪೂಮಾಣಿ-ಹುಲಿಭೂತ-ಮಲರಾಯ ಮತ್ತು [[ಧೂಮಾವತೀ ದೈವ]]ಗಳ ದೈವಸ್ಥಾನಗಳನ್ನು ಒಳಗೊಂಡಿದೆ. ೨೦೧೯ನೇ ಇಸವಿಯ ಮಾರ್ಚ್ ತಿಂಗಳಿನಲ್ಲಿ ಬ್ರಹ್ಮಕಲಶೊತ್ಸವ ಮತ್ತು ನೇಮೊತ್ಸವಗಳೊಂದಿಗೆ ನಿಡ್ಪಳ್ಳಿಯ ಗ್ರಾಮ ದೇವಸ್ಥಾನ ಮತ್ತು ದೈವಸ್ಥಾನಗಳು ಪುನರೂರ್ಜಿತಕ್ಕೆ ಬಂದವು.
 
==ಪ್ರಯಾಣ==
ನಿಡ್ಪಳ್ಳಿ ಗ್ರಾಮವು ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಹತ್ತಿರದ ರೈಲು ನಿಲ್ದಾಣ ಕಬಕ-ಪುತ್ತೂರು. ವಿಮಾನ ನಿಲ್ದಾಣ ಮಂಗಳೂರು
 
 
[[ಚಿತ್ರ:Remainings of Old Shiva temple Nidpalli.jpg|thumb|ಶಿವಲಿಂಗದ ಪೀಠ]][[ಚಿತ್ರ:ಜೀರ್ಣಾವಸ್ಥೆಯಲ್ಲಿರುವ ನಿಡ್ಪಳ್ಳಿಯ ಪುರಾತನ ಶಿವ ದೇವಸ್ಥಾನ .jpg|frameless|ನಿಡ್ಪಳ್ಳಿಯ ಶಿಥಿಲ ಶಿವ ದೇವಸ್ಥಾನ]]
"https://kn.wikipedia.org/wiki/ವಿಶೇಷ:MobileDiff/909734" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ