ನಿಡ್ಪಳ್ಳಿ
ನಿಡ್ಪಳ್ಳಿಯು ಕರ್ನಾಟಕ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ದಕ್ಷಿಣ ಭಾಗದಲ್ಲಿರುವ ಒಂದು ಪುಟ್ಟ ಗ್ರಾಮ[೧]. ತಾಲ್ಲೂಕು ಕೇಂದ್ರವಾದ ಪುತ್ತೂರಿನಿಂದ ಸುಮಾರು ೧೮ ಕಿಲೊಮೀಟರ್ ದಕ್ಷಿಣಕ್ಕಿದೆ. ನಿಡ್ಪಳ್ಳಿಯು ಸಂಪೂರ್ಣವಾದ ಕೃಷಿ ಆಧಾರಿತ ಗ್ರಾಮಕ್ಕೊಂದು ಉದಾಹರಣೆಯೂ ಹೌದು.
ಕೃಷಿ
[ಬದಲಾಯಿಸಿ]ಕೃಷಿಯೇ ಇಲ್ಲಿನ ಜನರ ಪ್ರಧಾನ ವೃತ್ತಿ. ಮುಖ್ಯವಾಗಿ ಅಡಿಕೆ, ತೆಂಗು, ಬಾಳೆ, ಭತ್ತ, ಕಾಳುಮೆಣಸು, ಕೊಕ್ಕೊ, ರಬ್ಬರ್, ಗೇರು ಬೀಜಗಳ ಬೆಳೆ ಹಾಗೂ ಹೈನುಗಾರಿಕೆ ಇಲ್ಲಿನ ಜನರ ಜೀವನಾಧಾರ.
ಭಾಷೆ
[ಬದಲಾಯಿಸಿ]ತುಳು, ಕನ್ನಡ, ಕೊಂಕಣಿ, ಬ್ಯಾರಿ ಮತ್ತು ಹವ್ಯಕ ಭಾಷೆಗಳು ಸಾಮಾನ್ಯವಾಗಿ ಉಪಯೊಗಿಸಲ್ಪಡುತ್ತವೆ.
ಜನಸಂಖ್ಯೆ
[ಬದಲಾಯಿಸಿ]೨೦೧೧ ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೩೨೫೭. ಸರ್ವ ಧರ್ಮದವರೂ ಶಾಂತಿ ಸಮನ್ವಯತೆಯಿಂದ ಜೀವಿಸುವ ಇಲ್ಲಿ, ಶಾಂತಾದುರ್ಗಾ ದೇವಸ್ಥಾನ ಮತ್ತು ಕಿನ್ನಿಮಾಣಿ-ಪೂಮಾಣಿ-ಮಲರಾಯ-ಧೂಮವತೀ ದೈವಸ್ಥಾನ, ಬದ್ರಿಯಾ ಮಸೀದಿ ತಂಬುತ್ತಡ್ಕ ಮತ್ತು ಹೋಲಿ ರೊಜರಿ ಚರ್ಚ್ ಪ್ರಮುಖ ಧಾರ್ಮಿಕ ಆರಾಧನಾ ಕೇಂದ್ರಗಳು.
ಭೌಗೋಳಿಕ ವಿಶೇಷತೆಗಳು
[ಬದಲಾಯಿಸಿ]ಶಾಂತಾದುರ್ಗಾ ದೇವಸ್ಥಾನವು ನಿಡ್ಪಳ್ಳಿಯ ಗ್ರಾಮದೇವಸ್ಥಾನ. ಕಿನ್ನಿಮಾಣಿ-ಪೂಮಾಣಿ (ಉಳ್ಳಾಕುಲು) ಇಲ್ಲಿನ ಗ್ರಾಮ ದೈವಗಳು. ಪುರಾತನ ಕಾಲದಿಂದಲೂ ಆರಿಗ ಮನೆತನದ ಜೈನ ಅರಸರ ಮುಂದಾಳುತ್ವದಲ್ಲಿ ಕ್ರಮಬದ್ಧವಾಗಿ ನಡೆಯುತ್ತಿದ್ದ ದೈವಾರಾಧನೆ, ಜಾತ್ರೊತ್ಸವಗಳು ಕ್ರಿ. ಶ ೧೯೭೨ ರ ಆಸುಪಾಸಿನ ಅನಿರೀಕ್ಷಿತ ಸಾಮಾಜಿಕ ಬದಲಾವಣೆಗಳ ಪರಿಣಾಮವಾಗಿ ಸಂಪೂರ್ಣವಾಗಿ ನಿಂತೇ ಹೊದವು. ದೇವ-ದೈವಸ್ಥಾನಗಳೂ[೨] ಕಾಲನ ಹೊಡೆತಕ್ಕೆ ಸಿಕ್ಕು ಜೀರ್ಣವಾದವು. ಈಗ ಇರುವ ದೈವಸ್ಥಾನಗಳ ಅನತಿ ದೂರದಲ್ಲೇ ಒಂದು ಶಿವ ದೇವಸ್ಥಾನದ ಕುರುಹುಗಳನ್ನು ಕಾಣಬಹುದು. ಇದೇ ಪರಿಸರದಲ್ಲಿ ಹಲವಾರು ತಲೆಮಾರುಗಳ ಹಿಂದೆ ದುರ್ಗಾ ಮಂದಿರವೂ ಇತ್ತೆನ್ನುವುದು ಕೆಲವರ ಅಭಿಮತ. ಇದಕ್ಕೆ ಸಾಕ್ಷಿಯಾಗಿ, ಪ್ರಸ್ತುತ ದೇವಸ್ಥಾನ ನಿರ್ಮಾಣದ ಸಂದರ್ಭದಲ್ಲಿ ವಿಗ್ರಹವೋಂದರ ಪಾಣಿಪೀಠ ಮತ್ತು ದೇವ ಗುಡಿಯೊಂದರ ಪಳೆಯುಳಿಕೆಗಳು ದೊರಕಿತ್ತು. ೧೯೯೦ ರ ದಶಕದ ಆದಿಯಿಂದಲೂ ಗ್ರಾಮದ ಪ್ರಮುಖರು ದೈವಸ್ಥಾನಗಳ ಪುನರುಜ್ಜೀವನಕ್ಕಾಗಿ ಪ್ರಯತ್ನ ಪಟ್ಟರೂ, ೨೦೧೮ ರಲ್ಲಷ್ಟೇ ದೇವಸ್ಥಾನ ಮತ್ತು ದೈವಸ್ಥಾನಗಳು ಸಂಪೂರ್ಣವಾಗಿ ರೂಪುಗೊಂಡವು. ಈ ದೇವಸ್ಥಾನ ಸಂಕೀರ್ಣಗಳು ಸುಂದರವಾದ ಶಾಂತಾದುರ್ಗಾ ದೇವಸ್ಥಾನ, ಕಿನ್ನಿಮಾಣಿ-ಪೂಮಾಣಿ-ಹುಲಿಭೂತ-ಮಲರಾಯ ಮತ್ತು ಧೂಮಾವತೀ ದೈವಗಳ ದೈವಸ್ಥಾನಗಳನ್ನು ಒಳಗೊಂಡಿದೆ. ೨೦೧೯ನೇ ಇಸವಿಯ ಮಾರ್ಚ್ ತಿಂಗಳಿನಲ್ಲಿ ಬ್ರಹ್ಮಕಲಶೊತ್ಸವ ಮತ್ತು ನೇಮೊತ್ಸವಗಳೊಂದಿಗೆ ನಿಡ್ಪಳ್ಳಿಯ ಗ್ರಾಮ ದೇವಸ್ಥಾನ ಮತ್ತು ದೈವಸ್ಥಾನಗಳು ಪುನರೂರ್ಜಿತಕ್ಕೆ ಬಂದವು. ಹೆಸರೇ ಸೂಚಿಸುವಂತೆ ಇಲ್ಲಿನ ಮುಖ್ಯ ದೇವತೆ ಶಾಂತ ರೂಪಿಣಿಯಾದ ದುರ್ಗೆ. ದೇವಸ್ಥಾನದಲ್ಲಿ ಸುಮಾರು ೨ ಅಡಿ ಎತ್ತರದ ಕರಿ ಕಲ್ಲಿನ ಸುಂದರವಾದ ದುರ್ಗೆಯ ವಿಗ್ರಹ ಪೂಜಿಸಲ್ಪಡುತ್ತದೆ. ಗಣಪತಿಯ ಗುಡಿಯೂ ಈ ದೇವಸ್ಥಾನದ ಒಂದು ಭಾಗ.<ref>[೧]<ref>
ಪ್ರಯಾಣ
[ಬದಲಾಯಿಸಿ]ನಿಡ್ಪಳ್ಳಿ ಗ್ರಾಮವು ಸಮೀಪದ ಪಟ್ಟಣಗಳಾದ ಪುತ್ತೂರು, ಸುಳ್ಯ, ಮಂಗಳೂರು ಮತ್ತು ಕಾಸರಗೊಡುಗಳಿಂದ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಹತ್ತಿರದ ರೈಲು ನಿಲ್ದಾಣ ಕಬಕ-ಪುತ್ತೂರು. ವಿಮಾನ ನಿಲ್ದಾಣ ಮಂಗಳೂರು.
ಉಲ್ಲೇಖ
[ಬದಲಾಯಿಸಿ]- ↑ . http://www.onefivenine.com/india/villages/Dakshin-Kannad/Puttur/Nidpalli
- ↑ https://www.nikharanews.com/%E0%B2%A8%E0%B2%BF%E0%B2%A1%E0%B3%8D%E0%B2%AA%E0%B2%B3%E0%B3%8D%E0%B2%B3%E0%B2%BF-%E0%B2%97%E0%B3%8D%E0%B2%B0%E0%B2%BE%E0%B2%AE%E0%B2%A6-%E0%B2%9C%E0%B2%A8%E0%B2%A4%E0%B3%86-%E0%B2%AC%E0%B2%82/