ವಿಷಯಕ್ಕೆ ಹೋಗು

ವಿಲಿಯಮ್ ಹರ್ಷಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೆಮ್ಯುಯೆಲ್ ಫ಼್ರಾನ್ಸಿಸ್ ಆಬಟ್ ರಚಿಸಿದ ಭಾವಚಿತ್ರ, ೧೭೮೫

ವಿಲಿಯಮ್ ಹರ್ಷಲ್ (1738-1822) ಒಬ್ಬ ಜರ್ಮನ್-ಇಂಗ್ಲಿಷ್[] ಖಗೋಳವಿಜ್ಞಾನಿ. ಯುರೇನಸ್ ಗ್ರಹದ ಆವಿಷ್ಕರ್ತೃ.

ಜೀವನ, ಸಾಧನೆಗಳು

[ಬದಲಾಯಿಸಿ]

ಮೂಲ ಜರ್ಮನಿಗನಾಗಿದ್ದರೂ ಏಳು ವರ್ಷಗಳ ಯುದ್ಧದ ವೇಳೆ ಇವನ ತಂದೆತಾಯಿ ಇವನನ್ನು ಇಂಗ್ಲೆಂಡಿಗೆ ಗುಟ್ಟಾಗಿ ಸಾಗಹಾಕಿದರು (1757). ಸೃಜನಶೀಲ ಆರ್ಗನ್ ವಾದಕನೂ,[] ಬೋಧಕನೂ ಆಗಿದ್ದ ಇವನಿಗೆ ಧ್ವನಿವಿಜ್ಞಾನದಲ್ಲಿ, ಮುಂದಕ್ಕೆ ಖಗೋಳವಿಜ್ಞಾನದಲ್ಲಿ (ಇದನ್ನು ನಕ್ಷತ್ರಗಳ ಮೌನಗಾನ ಎನ್ನುವುದುಂಟು) ಸಹಜವಾಗಿ ಆಸಕ್ತಿ ಕುದುರಿತು. ಖಗೋಳವೀಕ್ಷಣೆಯ ಸಲುವಾಗಿ ಯಾಂತ್ರಿಕ ಸಲಕರಣೆಗಳನ್ನು, ಅದರಲ್ಲಿಯೂ ಪ್ರಬಲ ದೂರದರ್ಶಕಗಳನ್ನು ನಿರ್ಮಿಸಿದ. 12 ಮೀ ನಾಭೀ ದೂರ ಮತ್ತು 1.2 ಮೀ ದೃಶ್ಯದ್ವಾರ ಇರುವ ಈತ ನಿರ್ಮಿಸಿದ ದೂರದರ್ಶಕ ಪ್ರಸಿದ್ಧವಾಗಿದೆ.[][]: 215 

ನಕ್ಷತ್ರಲೋಕದ ದೂರದರ್ಶಕ ಸರ್ವೇಕ್ಷಣೆ ವೇಳೆ ಈತನಿಗೆ ಶನಿಗ್ರಹದ ಆಚೆಗೆ ಇದ್ದ ಮಸಕು ‘ತಾರೆ’ಯೊಂದು ಗೋಚರಿಸಿತು. ಆದರೆ ಇದರ ನೆಲೆ ಸ್ಥಿರವಾಗಿರಲಿಲ್ಲ. ದೀರ್ಘ ವೀಕ್ಷಣೆ-ಅಧ್ಯಯನಾನಂತರ ಇದೊಂದು ಗ್ರಹ, ಸೌರವ್ಯೂಹದ ಏಳನೆಯ ಸದಸ್ಯ ಮತ್ತು ಇದರ ಕಕ್ಷೆ ಶನಿಯದರದ್ದಕ್ಕಿಂತ ಆಚೆಗೆ ಇದೆ ಎಂದು ನಿರ್ಣಾಯಕವಾಗಿ ಸಾರಿದ (1781). ಇದೇ ಯುರೇನಸ್ ಗ್ರಹ.[] ಮುಂದೆ ಇದರ ಹಾಗೂ ಶನಿಗ್ರಹದ ಹಲವಾರು ಉಪಗ್ರಹಗಳನ್ನು ಪತ್ತೆ ಮಾಡಿದ.[][][][] ಬೋಡ್ ನಿಯಮದ  7ನೆಯ ಪದಕ್ಕೆ ಯುರೇನಸ್ ಕಕ್ಷೆಯ ಸರಾಸರಿ ಸೂರ್ಯದೂರ ಹೊಂದುವುದು. ಇದೊಂದು ಆಕಸ್ಮಿಕ.

ಉಲ್ಲೇಖಗಳು

[ಬದಲಾಯಿಸಿ]
  1. "Sir William Herschel | British-German astronomer". 21 August 2023.
  2. Holmes 2008, p. 67.
  3. Roberts, Jacob (2017). "A Giant of Astronomy". Distillations. 3 (3): 6–11.
  4. Lubbock, Constance Ann (1933). The Herschel Chronicle: The Life-story of William Herschel and His Sister, Caroline Herschel. CUP Archive. pp. 1–.
  5. "Remembering William Herschel". British Guild of Tourist Guides (in ಅಮೆರಿಕನ್ ಇಂಗ್ಲಿಷ್). Retrieved 12 June 2024.
  6. Holmes 2008, pp. 190.
  7. "Mimas". NASA Science Solar System Exploration. Retrieved 5 June 2018.
  8. "Enceladus". NASA Science Solar System Exploration. Retrieved 5 June 2018.
  9. Franz, Julia (1 January 2017). "Why the moons of Uranus are named after characters in Shakespeare". Studio 360.

ಮೂಲಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: