ವಿಟಮಿನ್ ಸೊಪ್ಪು
ವಿಟಮಿನ್ ಸೊಪ್ಪಿನ ಬಗ್ಗೆ
[ಬದಲಾಯಿಸಿ]ವಿಟಮಿನ್ ಸೊಪ್ಪು, ಹೆಸರೇ ಸೂಚಿಸುವಂತೆ ಇದರಲ್ಲಿ ಹೆಚ್ಚಿನ ಪೋಷಕಾಂಶಗಳು ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಗಿಡವನ್ನು ಬೆಳೆಸಲು ನೀವು ಹೆಚ್ಚಿನ ಆರೈಕೆ ಮಾಡಬೇಕಾಗಿಲ್ಲ. ನೀರು ಗೊಬ್ಬರ ಉಣಬಡಿಸಬೇಕಿಲ್ಲ. ನಿಮ್ಮ ಹೂದೋಟದ ನಡುವೆಯೇ ಇದೊಂದು ಗಿಡವನ್ನು ನೆಟ್ಟುಕೊಳ್ಳಬಹುದು ಯಾಕೆಂದರೆ ಇದರಿಂದ ನೀವು ರುಚಿಕರವಾದ ಅಡುಗೆಯನ್ನು ಮಾಡಬಹುದು. ಈ ವಿಟಮಿನ್ ಸೊಪ್ಪನ್ನು ಚಕ್ರಮುನಿಚಕ್ರಮುನಿ ಸೊಪ್ಪು ಎಂದು ಸಹ ಕರೆಯುತ್ತಾರೆ. ಈ ಗಿಡದ ಸೊಪ್ಪು, ಚಿಗುರು ಮತ್ತು ಕಾಂಡ ಎಲ್ಲವನ್ನೂ ಬಳಸಿ ನೀವು ಅಡುಗೆ ಮಾಡಬಹುದು. ಇದರಿಂದ ಚಟ್ನಿ, ತಂಬುಳಿ ಹಾಗೂ ಪಲ್ಯವನ್ನು ತಯಾರಿಸಬಹುದು.
ಆರೋಗ್ಯ ಗುಣ
[ಬದಲಾಯಿಸಿ]ರಕ್ತ ಹೀನತೆ ಇದ್ದವರಿಗೆ ಒಳ್ಳೆಯದು ಇದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಈ ಸೊಪ್ಪು ರಕ್ತ ಹೀನತೆ ಇರುವವರಿಗೆ ತುಂಬಾ ಉಪಕಾರಿ ರಕ್ತಹೀನತೆ ರಕ್ತಹೀನತೆ ಇರುವವರು ಈ ಸೊಪ್ಪಿನ ಪದಾರ್ಥ ಗಳನ್ನು ಸೇವಿಸಿದರೆ ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಮುಟ್ಟಿನ ದಿನದಲ್ಲಿ ಈ ಸೊಪ್ಪಿನ ಪದಾರ್ಥಗಳನ್ನ ಸೇವಿಸಬೇಕು ಯಾಕೆಂದರೆ ಇದು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳಿರುವುದರಿಂದ ದೇಹಕ್ಕೆ ಇನ್ನಷ್ಟು ಬಲ ನೀಡುತ್ತದೆ ಜೀವಕೋಶಗಳ ಅಭಿವೃದ್ಧಿ ಹಾಗೂ ಸ್ನಾಯುವಿನಸ್ನಾಯು ರಚನೆಗೆ ಇದು ಸಹಾಯ
ಪಲ್ಯ ಮಾಡುವ ವಿಧಾನ
[ಬದಲಾಯಿಸಿ]ಇದರಿಂದ ನೀವು ಪಲ್ಯವನ್ನು ತಯಾರಿಸಬಹುದು. ಪಲ್ಯ ಮಾಡುವ ವಿಧಾನ ಇಲ್ಲಿದೆ. ಮೊದಲಿಗೆ ವಿಟಮಿನ್ [೧]ಸೊಪ್ಪನ್ನು ತೆಗೆದುಕೊಳ್ಳಿ. ನಂತರ ಎಲೆಗಳನ್ನು ಬಿಡಿಸಿ ಹೆಚ್ಚಿಕೊಳ್ಳಿ. ನಂತರ ಬಂದು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆಜೀರಿಗೆ ಹಾಗೆ ಸ್ವಲ್ಪ ಅರಿಶಿನಅರಿಸಿನ ಹಾಕಿ ನಂತರ ಈರುಳ್ಳಿಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ಅದಾದ ಮೇಲೆ ಈ ಎಲ್ಲಾ ಸೊಪ್ಪುಗಳನ್ನು ಅದೇ ಬಾಣಲೆಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇದರ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸ್ವಲ್ಪೇ ಸ್ವಲ್ಪ ಸಕ್ಕರೆ ಹಾಕಿ. ಇದು ಬಾಡುತ್ತದೆ ಬಾಡಿದ ನಂತರ ನೀವು ಇದನ್ನು ಬಡಿಸಿಕೊಂಡು ತಿನ್ನಬಹುದು.