ವಿಜಯ ಘಾಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯ ಘಾಟೆ
ಜನನ೧೮-೧೦-೧೯೬೪
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಕಲಾವಿದ

ವಿಜಯ್ ಘಾಟೆ (ಜನನ ೧೮ ಅಕ್ಟೋಬರ್ ೧೯೬೪) ಒಬ್ಬ ಭಾರತೀಯ ತಬಲಾ ವಾದಕ. ಇವರಿಗೆ ೨೦೧೪ ರಲ್ಲಿ "ಪದ್ಮಶ್ರೀ" ಪ್ರಶಸ್ತಿಯನ್ನು ನೀಡಲಾಯಿತು, ಇದು ಭಾರತ ಸರ್ಕಾರದಿಂದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. [೧]

ಆರಂಭಿಕ ಜೀವನ[ಬದಲಾಯಿಸಿ]

ಘಾಟೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ಜನಿಸಿದರು. [೨] ಅವರು ಜಬಲ್ಪುರದಲ್ಲಿ ತಮ್ಮ ಮೂರನೆ ವಯಸ್ಸಿನಲ್ಲಿ ತಮ್ಮ ಕಲೆಯನ್ನು ಕಲಿಯಲು ಪ್ರಾರಂಭಿಸಿದರು. ನಂತರ ಅವರು ಮುಂಬೈಗೆ ತೆರಳಿದರು ಮತ್ತು ತಾಳಯೋಗಿ ಪಂಡಿತ್ ಸುರೇಶ್ ತಲ್ವಾಲ್ಕರ್ ಅವರ ಬಳಿ ಹನ್ನೆರಡು ವರ್ಷಗಳ ಕಾಲ ಕಲಿತರು. [೩]

ವೃತ್ತಿ[ಬದಲಾಯಿಸಿ]

ಸುರೇಶ್ ತಲ್ವಾಲ್ಕರ್ ರವರು ವಿಜಯ್ ಘಾಟೆರವರನ್ನು ತಮ್ಮ ಅನೇಕ ಸಂಗೀತ ಕಚೇರಿಗಳಲ್ಲಿ ತಬಲ ನುಡಿಸಲು ಆಯ್ಕೆ ಮಾಡಿದರು. ಹರಿಪ್ರಸಾದ್ ಚೌರಾಸಿಯಾ, [೪] ವಿಲಾಯತ್ ಖಾನ್, ಪಂಡಿತ್ ಜಸರಾಜ್, ಕೌಶಿಕಿ ಚಕ್ರಬರ್ತಿ, ಶಿವಕುಮಾರ್ ಶರ್ಮಾ, ಅಮ್ಜದ್ ಅಲಿ ಖಾನ್, ಶಾಹಿದ್ ಪರ್ವೇಜ್, ಮತ್ತು ವಿಶ್ವ ಮೋಹನ್ ಭಟ್ ಮತ್ತು ಬಿರ್ಜು ಮಹಾರಾಜ್ ಮತ್ತು ನಂದಕ್ ಸೇರಿದಂತೆ ಭಾರತೀಯ ಶಾಸ್ತ್ರೀಯ ಕಥಕ್ ನರ್ತಕರನ್ನು ಒಳಗೊಂಡ ಸಂಗೀತ ಕಾರ್ಯಕ್ರಮದಲ್ಲಿ ಘಾಟೆ ಅವರು ಭಾರತೀಯ ಶಾಸ್ತ್ರೀಯ ಸಂಗೀತಗಾರರ ಭಾಗವಹಿಸಿದ್ದಾರೆ. [೫]

ಘಾಟೆ ಅವರು ಜಾಝ್ ಗಿಟಾರ್ ವಾದಕ ಲ್ಯಾರಿ ಕೊರಿಯೆಲ್ ಮತ್ತು ಸ್ಯಾಕ್ಸೋಫೋನ್ ವಾದಕ ಜಾರ್ಜ್ ಬ್ರೂಕ್ಸ್ ಅವರೊಂದಿಗೆ ಸಹ ಕಛೇರಿಗಳಲ್ಲಿ ಭಾಗವಹಿಸಿದ್ದಾರೆ. [೬]

ತಾಳಚಕ್ರ[ಬದಲಾಯಿಸಿ]

ತಾಳಚಕ್ರವು ವಿಜಯ್ ಘಾಟೆ ಮತ್ತು ಇತರ ಕೆಲವರು ಪ್ರಾರಂಭಿಸಿದ ಸಂಗೀತ ಉತ್ಸವವಾಗಿದೆ. ಈ ಉತ್ಸವವು ಯುವ ಸಂಗೀತಗಾರರಿಗೆ ಪ್ರದರ್ಶನ ನೀಡಲು ವೇದಿಕೆಯನ್ನು ಒದಗಿಸುತ್ತದೆ. ಸಂಗೀತದ ವಿವಿಧ ಪ್ರಕಾರಗಳ ವಿವಿಧ ಕಲಾವಿದರು ಉತ್ಸವದಲ್ಲಿ ಪ್ರದರ್ಶನ ನೀಡುತ್ತಾರೆ. [೭]

ಉಲ್ಲೇಖಗಳು[ಬದಲಾಯಿಸಿ]

  1. "'Padma Awards 2014'". 6 February 2014. Retrieved 18 September 2017.
  2. Suhasini, Lalitha (2005-02-13). "Taal order". Indianexpress.com. Retrieved 2013-07-10.
  3. "US edition: A year of melody". Rediff.com. 2000-08-03. Retrieved 2013-07-10.
  4. "The Hindu : Musical conversation". Hinduonnet.com. 2004-02-08. Archived from the original on 22 June 2008. Retrieved 2013-07-10.
  5. "National Cultural Audiovisual Archives".
  6. "Sangam wants to wash away 'promoted' music - The Times of India". Timesofindia.indiatimes.com. Retrieved 2013-07-10.
  7. "'Taalchakra is back for music lovers'". The Times of India. Retrieved 18 September 2017.

ಬಾಹ್ಯ ಕೊಂಡಿಗಳು[ಬದಲಾಯಿಸಿ]