ವಿಕಿಪೀಡಿಯ:ಸಂಪಾದನೋತ್ಸವಗಳು/ವಿಕಿಪೀಡಿಯ ಏಷ್ಯನ್ ತಿಂಗಳು ೨೦೨೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಕಿಪೀಡಿಯ ಏಷ್ಯನ್ ತಿಂಗಳು

ವಿಕಿಪೀಡಿಯ ಏಷ್ಯನ್ ತಿಂಗಳು(Asian Month) ಏಷ್ಯಾದ ವಿಕಿಪೀಡಿಯ ಸಮುದಾಯಗಳ ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುವ ಗುರಿಯಿಂದ ಆಯೋಜಿಸಲಾದ ಆನ್‌ಲೈನ್ ಸಂಪಾದನೋತ್ಸವವಾಗಿದೆ. ನವೆಂಬರ್ ೨೦೨೧ರ ಉದ್ದಕ್ಕೂ ಕನ್ನಡ ವಿಕಿಪೀಡಿಯದಲ್ಲಿ ನೆಡೆಯುವ ಏಷ್ಯನ್ ತಿಂಗಳ(Asian Month) ಉದ್ದೇಶ, ಭಾರತವನ್ನು ಹೊರತುಪಡಿಸಿ ಇತರ ಏಷ್ಯನ್ ದೇಶಗಳ ಬಗೆಗಿನ ಲೇಖನಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಉತ್ತಮಪಡಿಸುವುದಾಗಿದೆ.

ವಿಕಿಪೀಡಿಯ ಏಷ್ಯನ್ ಸಮುದಾಯಗಳ ನಡುವಿನ ಸ್ನೇಹದ ಗುರುತಾಗಿ, ಮಾನದಂಡಗಳನ್ನು ಪೂರೈಸುವ ಕನಿಷ್ಠ ಐದು ಲೇಖನಗಳನ್ನು ಬರೆದ ಪ್ರತಿಯೊಬ್ಬರೂ, ಇತರ ಭಾಗವಹಿಸಿದ ದೇಶಗಳಿಂದ ವಿಶೇಷವಾಗಿ ವಿನ್ಯಾಸ ಮಾಡಿರುವ ವಿಕಿಪೀಡೀಯಾ ಅಂಚೆಕಾರ್ಡನ್ನು ಪಡೆಯುತ್ತಾರೆ.

ಪ್ರತಿ ವಿಕಿಪೀಡಿಯದಲ್ಲಿ ಅತಿ ಹೆಚ್ಚು ಲೇಖನಗಳನ್ನು ಬರೆಯುವ ವಿಕಿಪೀಡಿಯನ್ನರನ್ನು "ವಿಕಿಪೀಡಿಯ ಏಷ್ಯನ್ ರಾಯಭಾರಿಗಳು" ಎಂದು ಗೌರವಿಸಲಾಗುವುದು.

ನಿಯಮಗಳು

  • ನವೆಂಬರ್ ೧ ೨೦೨೧ ೦:೦೦ ರಿಂದ ನವೆಂಬರ್ ೩೦ ೨೦೨೧ ೨೩:೫೯(ಯುಟಿಸಿ)ರ ಒಳಗೆ ನೀವೇ ಲೇಖನಗಳನ್ನು ಹೊಸದಾಗಿ ಸೃಷ್ಟಿಸಬೇಕು (ಚುಟುಕುಗಳನ್ನು ವಿಸ್ತರಿಸುವಂತಿಲ್ಲ).
  • ಲೇಖನವು ಕನಿಷ್ಠ ೩೦೦ ಪದಗಳಿರಬೇಕು. ಫೌಂಟೀನ್ ನ ತಾಂತ್ರಿಕ ಸಮಸ್ಯೆಗಳ ಕಾರಣ ಟೇಬಲ್ ಮತ್ತು ಪಟ್ಟಿಗಳು ೩೦೦ ಪದಗಳಲ್ಲಿ ಅಡಕ ಆಗುತ್ತಿಲ್ಲ. ಕ್ಷಮಿಸಿ.

* ಲೇಖನವು ಭಾರತವನ್ನು ಹೊರತುಪಡಿಸಿ ಏಷ್ಯನ್ ದೇಶ ಅಥವಾ ಪ್ರದೇಶದ(ಸಾಂಸ್ಕೃತಿಕ, ಭೌಗೋಳಿಕ, ರಾಜಕೀಯ, etc.,.) ಬಗ್ಗೆ ಇರಬೇಕು.

  • ಲೇಖನವು ಗಮನಾರ್ಹ ಮಾನದಂಡಗಳನ್ನು ಪೂರೈಸಬೇಕು.
  • ಲೇಖನಗಳು ಯೋಗ್ಯ ಉಲ್ಲೇಖಗಳನ್ನು ಹೊಂದಿರಬೇಕು; ಸಂದೇಹಾಸ್ಪದ ಅಥವಾ ವಿವಾದಾತ್ಮಕ ಹೇಳಿಕೆಗಳು ಇದ್ದಲ್ಲಿ, ಪಟ್ಟಿ ಮಾಡಿರುವ ಸೂಕ್ತ ಉಲ್ಲೇಖಗಳಿಂದ ಲೇಖನವನ್ನು ಪರಿಶೀಲಿಸುವಂತಿರಬೇಕು.
  • ಲೇಖನವು ಯೋಗ್ಯ ಭಾಷೆಯಲ್ಲಿದ್ದು, ಯಾಂತ್ರಿಕವಾಗಿ ಭಾಷಾಂತರವಾಗಿರಬಾರದು.
  • ಲೇಖನದಲ್ಲಿ ಯಾವುದೇ ರೀತಿಯ ಸಮಸ್ಯೆ ಇರಬಾರದು.
  • ಲೇಖನವು ಪಟ್ಟಿಯ ರೀತಿ ಇರಬಾರದು.
  • ಲೇಖನವು ಮಾಹಿತಿ ನೀಡುವಂತಿರಬೇಕು.
  • ಸಂಘಟಕರೇ ಸಲ್ಲಿಸಿರುವ ಲೇಖನಗಳನ್ನು ಇತರ ಸಂಘಟಕರು ಪರೀಕ್ಷಿಸಬೇಕು.
  • ಟಿಪ್ಪಣಿ: ಕೊನೆಯಲ್ಲಿ ಲೇಖನಗಳ ಒಪ್ಪಿಗೆಯನ್ನು ಸ್ಥಳೀಯ ವಿಕಿಪೀಡಿಯದ ಮಾನವ ತೀರ್ಪುಗಾರರು ನಿರ್ಧರಿಸುತ್ತಾರೆ.

ಸಂಘಟಕರು


ಭಾಗವಹಿಸಿ

ಸೂಚನೆ: ಕನ್ನಡ ಫೌಂಟೇನ್ ಕೊಂಡಿ ೨೪ರಂದು ತೆರೆದುಕೊಳ್ಳುತ್ತದೆ.

[[೧]]

ಭಾಗವಹಿಸಿ ನಿಮ್ಮ ಕೊಡುಗೆಯನ್ನು ಇಲ್ಲಿ ಸಲ್ಲಿಸಿ. ನಿಮ್ಮ ಲೇಖನವು ಮಾನದಂಡಗಳನ್ನು ಪೂರೈಸಿದ್ದಲ್ಲಿ ಸಂಘಟಕರು ಗುರುತು ಹಾಕುತ್ತಾರೆ.

ಭಾಗವಹಿಸುವವರ ಪಟ್ಟಿ

ಸಂಪಾದನೋತ್ಸವದ ನಿಯಮಗಳು[ಬದಲಾಯಿಸಿ]

  1. ಭಾರತವಲ್ಲದೇ ಏಷ್ಯಾದ ಬೇರೆ ಯಾವುದಾದರೂ ದೇಶದ ಬಗೆಗಿನ ಲೇಖನ ರಚಿಸಬೇಕು
  2. ಲೇಖನ ಕನಿಷ್ಟ ೩೦೦ ಪದಗಳನ್ನು ಹೊಂದಿರಬೇಕು.
  3. ಹೆಚ್ಚಿನ ನಿಯಮಗಳನ್ನು ಇಲ್ಲಿ ನೋಡಬಹುದು
  4. ಬರೆದ ಲೇಖನವನ್ನು ಇಲ್ಲಿ ಸಲ್ಲಿಸಿ

ಸಂಪಾದನೋತ್ಸವದಲ್ಲಿ ಭಾಗವಹಿಸುವವರು[ಬದಲಾಯಿಸಿ]

  1. Gangaasoonu (ಚರ್ಚೆ) ೦೮:೧೨, ೨೫ ನವೆಂಬರ್ ೨೦೨೧ (UTC)
  2. ಪ್ರಶಸ್ತಿ (ಚರ್ಚೆ) ೧೫:೫೧, ೨೫ ನವೆಂಬರ್ ೨೦೨೧ (UTC)

ಹಿಂದಿನ ಆವೃತ್ತಿಗಳು

ಅಂತಾರಾಷ್ಟ್ರೀಯ ಸಮುದಾಯ

ವಿಕಿಪೀಡಿಯ

Affiliation