ವಿಕಿಪೀಡಿಯ:ಸಂಪಾದನೋತ್ಸವಗಳು/ವಿಕಿಪೀಡಿಯ ಏಷ್ಯನ್ ತಿಂಗಳು ೨೦೧೫
ನಿಯಮಗಳು
- ನವೆಂಬರ್ ೧ ೨೦೧೫ ೦:೦೦ ರಿಂದ ನವೆಂಬರ್ ೩೦ ೨೦೧೫ ೨೩:೫೯(ಯುಟಿಸಿ)ರ ಒಳಗೆ ನೀವೇ ಲೇಖನಗಳನ್ನು ಹೊಸದಾಗಿ ಸೃಷ್ಟಿಸಬೇಕು (ಚುಟುಕುಗಳನ್ನು ವಿಸ್ತರಿಸುವಂತಿಲ್ಲ).
- ಲೇಖನವು ಕನಿಷ್ಠ ೩,೫೦೦ ಬೈಟ್‌ಗಳು ಮತ್ತು ಸುಮಾರು ೩೦೦ ಪದಗಳಿರಬೇಕು.
- ಲೇಖನವು ಗಮನಾರ್ಹ ಮಾನದಂಡಗಳನ್ನು ಪೂರೈಸಬೇಕು.
- ಲೇಖನಗಳು ಯೋಗ್ಯ ಉಲ್ಲೇಖಗಳನ್ನು ಹೊಂದಿರಬೇಕು; ಸಂದೇಹಾಸ್ಪದ ಅಥವಾ ವಿವಾದಾತ್ಮಕ ಹೇಳಿಕೆಗಳು ಇದ್ದಲ್ಲಿ, ಪಟ್ಟಿ ಮಾಡಿರುವ ಸೂಕ್ತ ಉಲ್ಲೇಖಗಳಿಂದ ಲೇಖನವನ್ನು ಪರಿಶೀಲಿಸುವಂತಿರಬೇಕು.
- ಲೇಖನವು ಯೋಗ್ಯ ಭಾಷೆಯಲ್ಲಿದ್ದು, ಯಾಂತ್ರಿಕವಾಗಿ ಭಾಷಾಂತರವಾಗಿರಬಾರದು.
- ಲೇಖನದಲ್ಲಿ ಯಾವುದೇ ರೀತಿಯ ಸಮಸ್ಯೆ ಇರಬಾರದು.
- ಲೇಖನವು ಪಟ್ಟಿಯ ರೀತಿ ಇರಬಾರದು.
- ಲೇಖನವು ಮಾಹಿತಿ ನೀಡುವಂತಿರಬೇಕು.
- ಲೇಖನವು ಭಾರತವನ್ನು ಹೊರತುಪಡಿಸಿ ಏಷ್ಯನ್ ದೇಶ ಅಥವಾ ಪ್ರದೇಶದ(ಸಾಂಸ್ಕೃತಿಕ, ಭೌಗೋಳಿಕ, ರಾಜಕೀಯ, etc.,.) ಬಗ್ಗೆ ಇರಬೇಕು.
- ಸಂಘಟಕರೇ ಸಲ್ಲಿಸುರುವ ಲೇಖನಗಳನ್ನು ಇತರ ಸಂಘಟಕರು ಪರೀಕ್ಷಿಸಬೇಕು.
- ಟಿಪ್ಪಣಿ: ಕೊನೆಯಲ್ಲಿ ಲೇಖನಗಳ ಒಪ್ಪಿಗೆಯನ್ನು ಸ್ಥಳೀಯ ವಿಕಿಪೀಡಿಯದ ಮಾನವ ತೀರ್ಪುಗಾರರು ನಿರ್ಧರಿಸುತ್ತಾರೆ.
ಸಂಘಟಕರು
ಭಾಗವಹಿಸಿ
ಭಾಗವಹಿಸಿ ನಿಮ್ಮ ಕೊಡುಗೆಯನ್ನು ಇಲ್ಲಿ ಸಲ್ಲಿಸಿ. ನಿಮ್ಮ ಲೇಖನವು ಮಾನದಂಡಗಳನ್ನು ಪೂರೈಸಿದ್ದಲ್ಲಿ ಸಂಘಟಕರು ಗುರುತು ಹಾಕುತ್ತಾರೆ.
(ಬುದ್ಧ, ಬಸವಾದಿ ಶರಣರು, ಅಂಬೇಡ್ಕರರು, ಇನ್ನಿತರ ಮಾಹಾನ್ ವೈಚಾರಿಕ ಚಿಂತಕರು, ಸಮಾಜ ವಿಜ್ಞಾನಿಗಳು ಈ ದೇಶಕ್ಕೆ ವೈಚಾರಿಕತೆಯ ಎಚ್ಚರಿಕೆ ಘಂಟೆ ಬಡೆದು ಎಚ್ಚರಿಸಿದರೂ, ಜನತೆ ಇನ್ನು ಅದೇ ಮೌಡ್ಯ ಮನದ ಅಜ್ಞಾನದ ಹಾಸಿಗೆಯಲ್ಲಿ ಮಲಗಿರುವುದು ಒಂದು ಸೋಜಿಗವೆ ಸರಿ. ಅದೆಕ್ಕೆಲ್ಲ ಮೂಲ ಕಾರಣ ನಮ್ಮಲ್ಲಿ ಸುತ್ತಿ ಸುಳಿಯುತ್ತಿರುವ ಅಜ್ಞಾನ, ಅಂಧಕಾರ ಅದಕ್ಕೆ ಆಧುನಿಕತೆಯಲ್ಲೂ ಉಧಾಹರಣೆಗಳು ಹುಟ್ಟಿಕೊಳ್ಳುತ್ತಿವೆ.)
ಆಧುನಿಕ ಅಜ್ಞಾನ : ಮೌಡ್ಯದ ಹೊಸ ಹಾದಿ ಅವರವರು ಕಂಡಂತೆ !
"ನಮ್ಮ ಅಜ್ಞಾನವೇ ನಮ್ಮ ಮೊದಲ ಶತೃ" ಎಂದು ಸಾರಿದ ಸಾವಿತ್ರಿಬಾಯಿ ಫುಲೆಯವರನ್ನು ನೆನಪಿಸುತ್ತ, ಇತ್ತೀಚಿನ ದಿನಗಳಲ್ಲಿ "ಡಿಜಿಟಲಿಕರಣ" ಮತ್ತು "ವೈಜ್ಞಾನಿಕ ಮನೋಭಾವ" ಎಂಬ ಪದಗಳು ಎಲ್ಲಾ ರಂಗಗಳಲ್ಲೂ ರಾರಾಜಿಸುತ್ತಿವೆ. ಆದರೆ, ಎಷ್ಟೇ ವೈಜ್ಞಾನಿಕವಾಗಿ ಬೆಳೆದರೂ ನಮ್ಮ ಮನಸ್ಸು ಮತ್ತು ಭಾವನೆಗಳು ವೈಚಾರಿಕತೆಯಡೆ ವಾಲದೆ, ಕೇವಲ ಹಿಂದಿನ ನಂಬಿಕೆಗಳಿಗೆ ರಂಜಿಸಿ ಆಚರಿಸುವ ಹೊಸ ಹೊಸ ವಿಧಾನಗಳು ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿವೆ. ಇದಕ್ಕೆ ಕಾರಣ ಆಧಾರವಿಲ್ಲದ ಅವೈಜ್ಞಾನಿಕ ನಂಬಿಕೆಗಳ ಆಚರಣೆಗಳು.
ಸೂರ್ಯ, ಚಂದ್ರ, ಭೂಮಿ, ನಕ್ಷತ್ರ, ಕಲ್ಲು, ಮಣ್ಣು, ಮರ,ಗಾಳಿ, ಬೆಳಕು, ನೀರು ಇವುಗಳೆಲ್ಲವು ಪ್ರಕೃತಿ ನಮಗೆ ಕೊಟ್ಟ ವರವಾಗಿವೆ. ಇವುಗಳಿಲ್ಲದೆ ಜೀವಿಗಳಿರಲು ಸಾಧ್ಯವಿಲ್ಲ. ನಾವಿರುವುದಕ್ಕೆ ಕಾರಣ ಈ ಪ್ರಕೃತಿ. ಹೀಗಿರುವಾಗ ರಾಹು, ಕೇತು, ರಾಶಿ, ನಕ್ಷತ್ರ, ಭವಿಷ್ಯದ ಹೆಸರಿನಲ್ಲಿ ಈ ಪ್ರಕೃತಿ ನಮಗೆ ಕೇಡು ಬಯಸಲು ಹೇಗೆ ಸಾಧ್ಯ. ಆಗುವ ಒಂದಿಷ್ಟು ಘಟನೆಗಳು ಪ್ರಕೃತಿಯಲ್ಲಿನ ಬದಲಾವಣೆಗಳಷ್ಟೆ. ಇತ್ತೀಚಿನ ಕಾಲಘಟ್ಟದಲ್ಲಿ ಮೌಡ್ಯತೆಯ ಆಚರಣೆಗಳು ಹೆಚ್ಚಾಗತೊಡಗಿವೆ. ಇದಕ್ಕೆ ಮೂಲ ಕಾರಣ, ವಿದ್ಯಾವಂತರೆನಿಸಿಕೊಂಡವರೆ ಇಂತಹ ಆಚರಣೆಗಳಲ್ಲಿ ತೊಡಗಿಸಿಕೊಂಡು ಮಗ್ನರಾಗಿರುವುದು ವಿಪರ್ಯಾಸವೇ ಸರಿ. ಅಲ್ಲದೇ ಪ್ರಕೃತಿಯಲ್ಲಿನ ಬದಲಾವಣೆಗಳನ್ನು ಗಮನಿಸುವ ಸ್ವಾರ್ಥಿಗಳು, ಮಾನಸಿಕ ಭಯೋತ್ಪಾದಕರು ತಮ್ಮ ವ್ಯವಹಾರಿಕ ಜ್ಞಾನವನ್ನು ಬಳಸಿಕೊಂಡು ಆದಾಯದ ಮೂಲವಾಗಿಸಿಕೊಂಡು ಬರುತ್ತಿದ್ದಾರೆ. ಆಧುನಿಕ ಯುಗಲ್ಲೂ ಅಂತಹ ಅನೇಕ ಮೌಡ್ಯಗಳು ಹೊಸ ಮೊಳಕೆಯೊಡೆತ್ತಿವೆ. ಅಂತಹ ಹಲವಾರು ಉಧಾಹರಣೆಗಳು ನಮ್ಮ ಸಮಾಜದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿವೆ.
ಕರೋನ ಕಾಲದಲ್ಲಿ ಬದುಕು ದುಸ್ತರವಾಗಿ ಬಲವಾದ ಬದಲಾವಣೆಗಳು ಕಾಣಿಸಿಕೊಂಡರೂ, ಹೊಸ ಹೊಸ ಮೌಡ್ಯಗಳು ಕಾಣಿಸಿಕೊಂಡವೇ ವಿನಹ ಹಳೆಯ ಮೌಡ್ಯಗಳು ಬದುಕಿನಿಂದ ದೂರ ಸರಿಸಲು ಆಗಲಿಲ್ಲ. ಕೊರೋನವು ಮಾರೆಮ್ಮ, ಕಾಳಿ, ಚಂಡಿ, ದೇವಿಯ ವಿವಿಧ ರೂಪದ ಅವತಾರವಂತೆ !! ಇದು ದುಷ್ಟರನ್ನು ದಮನಿಸುತ್ತದಂತೆ !! ಏನೆಲ್ಲ ವಿವಿಧ ರೂಪದ ಕಥೆಗಳು ಕಟ್ಟಿದರು. ಆದರೆ ಅದು ಯಾರ ಭಾವನೆಗೂ ನಿಲುಕದೆ, ದುಷ್ಟರು, ಶಿಷ್ಟರು, ಬಡವ ಬಲ್ಲಿದ, ಅವರು ಇವರು ಎಂದು ಭೇಧ ಮಾಡದೆ, ಏಕ್ಯತೆಯನ್ನು ಸಾರಿತು. ಹಾಗೆ ಮುಂದೆ ಬೇವಿನ ಮರವು ಎಲ್ಲಮ್ಮಳಂತೆ, ಇವಳು ಜನಹಿತ ರಕ್ಷಕಳಂತೆ, ಎಂದಲ್ಲ ಜನರು ಕೊಂಡಾಡಿದರು. "ನೋಡು ಹಿರಿಯ ಅಕ್ಕಳೆ, ನೀನು ನನ್ನ ಭಕ್ತರಿಗೆ ತೊಂದರೆ ಕೊಡಬೇಡ. ಏನೇ ನೋವು, ತೊಂದರೆ, ಕೇಡು ಮಾಡುವದಾದರೆ, ನನಗೆ ನೋವುಂಟು ಮಾಡು. ನನ್ನ ಭಕ್ತರನ್ನು ನೆಮ್ಮದಿಯಿಂದ ಬದುಕಲು ಬೀಡು ಎಂದು ಎಲ್ಲಮ್ಮಳು ಮಾರೆಮ್ಮಳಿಗೆ ಕೇಳಿದಳಂತೆ. ಆಗ ಮಾರೆಮ್ಮಳು ತನ್ನ ಕರೋನದ ರೌದ್ರಾವತಾರವನ್ನು ಬೇವಿನ ಮರದ ಮೇಲೆ ಪರಿಣಮಿಸಿದಳಂತೆ. ಆಗ ಎಲ್ಲಮ್ಮಳು ಈ ವೈರಸ್ ನ್ನು ಸ್ವಕರಿಸಿದಳಂತೆ. ಆಗ ಈ ಬೇವಿನ ಮರಗಳು ಒಣಗಲು ಪ್ರಾರಂಭಿಸಿದವಂತೆ. ಎಂದೆಲ್ಲ ಅವೈಜ್ಞಾನಿಕ ಉಹಾಪುಹದ ಕಥೆಗಳು ಕಟ್ಟಿ ಹೊಸ ಮೌಡ್ಯದ ಹಾದಿಯೊಂದು ತೆರೆದು ಜನರನ್ನು ಸೆಳೆದುಕೊಳ್ಳುತ್ತಿದೆ. ಇಲ್ಲಿರುವ ಸೃಷ್ಠಿಯ ಸತ್ಯವೇನೆಂದರೆ, ಬೇವಿನ ಮರಗಳಿಗೆ “ಡೈಬ್ಯಾಕ್” ಎನ್ನುವ ರೋಗ ಹರಡಿ ಒಣಗುತ್ತಿವೆ. ಬೇವಿನ ಮರಗಳು ಒಣಗಿದ ಮೇಲು ಕರೋನದ ಮೂರನೆ ಅಲೆ ಹೆಚ್ಚಾಗಿದ್ದು, ನಂತರ ಒಣಗಿದ ಮರಗಳು ಮತ್ತೆ ಚಿಗುರಿಕೊಳ್ಳುತ್ತಿರುವುದು, ಸೃಷ್ಠಿಯ ಸತ್ಯದ ಎಳೆಗಳು ಜನತೆ ಅರಿಯಲು ಪ್ರಯತ್ನಿಸಬೇಕು. ಇಂತಹ ಘಟನೆಗಳನ್ನ ವೈಚಾರಿಕ ನೆಲೆಗಟ್ಟಿನ ಪರದೆ ಮೇಲೆ ತರದಿದ್ದರೆ, ಸುಜ್ಞಾನರು ಇದ್ದು ಇಲ್ಲದಂತಾಗುತ್ತದೆ.
ಕೊರೋನ ಓಡಿಸಲೆಂದು ಕರೋನಮ್ಮನ ಗುಡಿಯ ಕಟ್ಟುವುದು, ಮಾರೆಮ್ಮಳಿಗೆ ಬಲಿ ಕೊಡುವುದು, ತಟ್ಟೆ ಬಡಿಯುದು, ದೀಪ ಹಚ್ಚುವುದು, ಅನ್ನವನ್ನು ಬೀದಿಗೆ ಚಲ್ಲುವುದು, ಹೋಮ ಮಾಡುವುದು, ಜನ ಮರುಳೊ - ಜಾತ್ರೆ ಮರುಳೊ,ಒಂದೂ ಗೊತ್ತಾಗದಂತ್ತಾಗುತ್ತದೆ !! "ತಿಂಗಳನಂಗಳಕ್ಕಿಳಿದರೂ ತಿಲಿಯಾಗಲಿಲ್ಲ ಮನಸ್ಸು, ಮಂಗಳನಂಳಕ್ಕಿಳಿದರೂ ಮಂಗಾನಾಟ ನಿಲ್ಲಲಿಲ್ಲ" ಎಂಬಂತ್ತಾಗಿದೆ. ಹಿಂದಿಗಿಂತ ಇಂದಿನ ದಿನಗಳು ಲೇಸೆಂಬ ಮನಸ್ಸುಗಳಿಗೆ ನಿರಾಸೆಯಾಗುತ್ತಿದೆ. ಇಂದಿನ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಮುಂದುವರಿಕೆಯಲ್ಲಯೂ, ವೈಚಾರಿಕತೆಯಿಲ್ಲದ ರಾಶಿ, ನಕ್ಷತ್ರ, ಭವಿಷ್ಯ, ದೇವರು, ದೆವ್ವ, ಮಾಟ, ಮಂತ್ರ, ಚಿಟ್ಟಿ ಎಂಬ ಅಜ್ಞಾನದ ನಂಬಿಕೆಗಳು ಎಷ್ಟು ಸಮಂಜಸ, ಆದುನಿಕ ಅಜ್ಞಾನದಲ್ಲೂ ಮೌಡ್ಯ ಹುಟ್ಟುವುದೆಂದರೆ ಇದೇನಾ !!! ನೀವೆ ಹೇಳಿ !
:- ದೇವೇಂದ್ರ ಕಟ್ಟಿಮನಿ
ಅಂತಾರಾಷ್ಟ್ರೀಯ ಸಮುದಾಯ
ವಿಕಿಪೀಡಿಯ

- Assameese Wikipedia
- Bashkir Wikipedia
- Bengali Wikipedia
- Central Bikol Wikipedia
- Chinese Wikipedia
- English Wikipedia
- Gujarati Wikipedia
- Hindi Wikipedia
- Indonesian Wikipedia
- Japanese Wikipedia
- ಕನ್ನಡ ವಿಕಿಪೀಡಿಯ
- Korean Wikipedia
- Ladino Wikipedia
- Malayalam Wikipedia
- Marathi Wikipedia
- Oriya Wikipedia
- Punjabi Wikipedia
- Russian Wikipedia
- Tagalog Wikipedia
- Tamil Wikipedia
- Thai Wikipedia
- Ukrainian Wikipedia
- Urdu Wikipedia
- Uzbek Wikipedia
Affiliation

