ವಿಷಯಕ್ಕೆ ಹೋಗು

ವಿಕಿಪೀಡಿಯ:ವಿಕಿಪೀಡಿಯ ಸಾಧಕರು/ವಿಕಾಸ ಹೆಗಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ಶ್ರೀ ವಿಕಾಸ ಹೆಗಡೆ .

ವಿಕಾಸ್ ಹೆಗಡೆ

[ಬದಲಾಯಿಸಿ]
ವಿಕಾಸ ಹೆಗಡೆ

ಇವರು ೨೦೦೯ರಿಂದ ವಿಕಿಸಂಪಾದಕ. ವಿಕಿಪೀಡಿಯಾ, ವಿಕಿಸೋರ್ಸ್, ವಿಕಿಕೋಟ್ಸ್‌ಗಳಲ್ಲಿ ಕೆಲಸ ಮಾಡಿದ್ದಾರೆ. ವಿಕಿಪೀಡಿಯಾದಲ್ಲಿ ಹಲವಾರು ಲೇಖನಗಳನ್ನು ಸೇರಿಸಿದ್ದಾರೆ. ಅನೇಕ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡು ಪುಟಗಳನ್ನು ಸೇರಿಸಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಲೇಖನ ಯೋಜನೆ, ಭಾರತೀಯ ಗೋತಳಿ, ವಿಜ್ಞಾನ ಪಠ್ಯ ಲೇಖನಗಳು, ಇತ್ಯಾದಿ ಹಲವು ಯೋಜನೆಗಳಲ್ಲಿ ಲೇಖನಗಳನ್ನು ಸೇರಿಸಿದ್ದಾರೆ. ವಿಕಿಮೀಡಿಯ ಕಾಮನ್ಸ್‌ಗೆ ಅನೇಕ ಚಿತ್ರಗಳನ್ನೂ ಸೇರಿಸಿದ್ದಾರೆ.

ವೈಯಕ್ತಿಕ

[ಬದಲಾಯಿಸಿ]

ಇವರು ಮೂಲತಃ ಭದ್ರಾವತಿಯವರು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್. ಓದು, ಬರವಣಿಗೆ, ಚಾರಣ ಇವರ ಹವ್ಯಾಸಗಳು.
'ವಿಕಾಸವಾದ' ಎಂಬ ಬ್ಲಾಗ್‍ನಲ್ಲಿ ತಮ್ಮ ಬರಹಗಳನ್ನು ಪ್ರಕಟಿಸಿದ್ದಾರೆ. ಫೇಸ್ಬುಕ್, ಟ್ವಿಟ್ಟರ್, ವಾಟ್ಸಪ್‍ಗಳ ಕನ್ನಡ ಆವೃತ್ತಿಗಳಿಗಾಗಿ ಕೆಲಸ ಮಾಡಿದ್ದಾರೆ.

ಇನ್ನಷ್ಟು

[ಬದಲಾಯಿಸಿ]