ವಕ್ರರೇಖೆ
ಗೋಚರ
ಗಣಿತದಲ್ಲಿ, ವಕ್ರರೇಖೆ ಎಂದರೆ ಸ್ವಾತಂತ್ರ್ಯಾಂಕ (ಡಿಗ್ರಿ ಆಫ್ ಫ್ರೀಡಮ್) 1 ಇರುವ ಯಾವುದೇ ಬಿಂದು ರೇಖಿಸುವ ಡೊಂಕುಗೆರೆ (ಕರ್ವ್). ವಕ್ರರೇಖೆಯು ಸರಳರೇಖೆಯನ್ನು ಹೋಲುವ ವಸ್ತುವಾದರೂ ಅದು ನೇರವಾಗಿರಬೇಕಿಲ್ಲ. ಉದಾಹರಣೆಗೆ ವೃತ್ತ, ಶಂಕುಜಗಳು, ಉಲ್ಕಾಪಥ ಇತ್ಯಾದಿ. ವಕ್ರರೇಖೆಗಳು ಸಂವೃತವಾಗಿರಬಹುದು (ಕ್ಲೋಸ್ಡ್)-ವೃತ್ತ, ದೀರ್ಘವೃತ್ತಗಳಂತೆ; ವಿವೃತವಾಗಿರಬಹುದು (ಓಪನ್)-ಪರವಲಯ, ಅತಿಪರವಲಯಗಳಲ್ಲಿಯಂತೆ ಮೂರು ಆಯಾಮಗಳಲ್ಲಿಯೂ ಇರಬಹುದು.
ಅವುಗಳು ಗಣಿತೀಯ ಅಧ್ಯಯನದ ವಿಷಯವಾಗುವ ಬಹಳ ಮೊದಲು ವಕ್ರರೇಖೆಗಳಲ್ಲಿ ಆಸಕ್ತಿ ಶುರುವಾಯಿತು. ಪ್ರಾಗೈತಿಹಾಸಿಕ ಕಾಲದಷ್ಟು ಹಿಂದಿನ ಕಲೆ ಮತ್ತು ದೈನಂದಿನ ವಸ್ತುಗಳ ಮೇಲಿನ ಅಸಂಖ್ಯಾತ ಉದಾಹರಣೆಗಳಲ್ಲಿ ಇದನ್ನು ನೋಡಬಹುದು.[೧]
ಉಲ್ಲೇಖಗಳು
[ಬದಲಾಯಿಸಿ]- ↑ Lockwood p. ix
- E. H. Lockwood ''A Book of Curves'' (1961 Cambridge)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: