ವಿಷಯಕ್ಕೆ ಹೋಗು

ಸರಳರೇಖೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
see caption
ಎರಡು ಆಯಾಮದ ಕಾರ್ಟೀಸಿಯನ್ ನಿರ್ದೇಶಾಂಕ ವ್ಯವಸ್ಥೆಯಲ್ಲಿ ಮೂಲಬಿಂದುವಿನ ಹತ್ತಿರ ಒಂದು ಕೆಂಪು ಸರಳರೇಖೆ

ಸರಳರೇಖೆಯು ಎರಡು ಬಿಂದುಗಳನ್ನು ಜೋಡಿಸುವ ಕನಿಷ್ಠ ದೀರ್ಘತೆಯ ರೇಖೆ (ಸ್ಟ್ರೇಟ್ ಲೈನ್). ಛೇದಿಸುವ ಎರಡು ಸಮತಲಗಳ ಸಾಮಾನ್ಯ ರೇಖೆ. ಸಂಧಿಸುವ ಎರಡು ಸರಳರೇಖೆಗಳು (l,m) ನಾಲ್ಕು ಪ್ರತ್ಯೇಕ ಕೋನಗಳನ್ನು ರಚಿಸುವುದು ಸರಿಯಷ್ಟೆ: u, v, w, x. ಇಲ್ಲಿ u = w, v = x.

ಚಿತ್ರ 1


ಇವುಗಳಿಗೆ ಶಿರೋಅಭಿಮುಖ ಕೋನಗಳೆಂದು (ವರ್ಟಿಕಲ್ಲಿ ಆಪೊಸಿಟ್ ಆ್ಯಂಗಲ್ಸ್) ಹೆಸರು.[೧] ಅಲ್ಲದೇ ಇಲ್ಲಿ ಯಾವುವೇ ಒಂದು ಜೊತೆ ಆಸನ್ನ ಕೋನಗಳ ಮೊತ್ತ 1800 - ಇದರ ಹೆಸರು ಸರಳಕೋನ.[೨] u + v = u + x =  v + w = w + x = 1800. ಆದ್ದರಿಂದ u, v; u, x; v, w; w, x ಜೊತೆಗಳನ್ನು ಸರಳಪೂರಕ ಕೋನಗಳು (ಸಪ್ಲಿಮೆಂಟರಿ ಆ್ಯಂಗಲ್ಸ್) ಎನ್ನುತ್ತೇವೆ.[೩]

ಉಲ್ಲೇಖಗಳು[ಬದಲಾಯಿಸಿ]

  1. Wong & Wong 2009, pp. 161–163
  2. Moser 1971, p. 41.
  3. "Supplementary Angles". www.mathsisfun.com. Retrieved 2020-08-17.

ಗ್ರಂಥಸೂಚಿ[ಬದಲಾಯಿಸಿ]

  • Wong, Tak-wah; Wong, Ming-sim (2009), "Angles in Intersecting and Parallel Lines", New Century Mathematics, vol. 1B (1 ed.), Hong Kong: Oxford University Press, pp. 161–163, ISBN 978-0-19-800177-5
  • Moser, James M. (1971), Modern Elementary Geometry, Prentice-Hall
"https://kn.wikipedia.org/w/index.php?title=ಸರಳರೇಖೆ&oldid=1231924" ಇಂದ ಪಡೆಯಲ್ಪಟ್ಟಿದೆ