ವಿಷಯಕ್ಕೆ ಹೋಗು

ಲಿನ್ ಡಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಿನ್ ಡಾನ್ (Lin Dan)
— ಬ್ಯಾಡ್ಮಿಂಟನ್‌ ಆಟಗಾರ —
ಲಿನ್ ಡಾನ್
ವೈಯುಕ್ತಿಕ ಮಾಹಿತಿ
ಹುಟ್ಟು ಹೆಸರುಲಿನ್ ಡಾನ್
ಹುಟ್ಟು(೧೯೮೩-೧೦-೧೪)೧೪ ಅಕ್ಟೋಬರ್ ೧೯೮೩
Longyan, Fujian, China
ವಾಸಸ್ಥಾನ ಚೀನಾ
ಎತ್ತರ1.78 m (5 ft 10 in)
ತೂಕ೭೦ kg
ದೇಶಚೀನಾ
ಆಡುವ ಕೈಎಡಗೈ
ಪುರುಷರ ಸಿಂಗಲ್ಸ್
ಅತಿಹೆಚ್ಚಿನ ಸ್ಥಾನ೧ (ಫೆಬ್ರವರಿ ೨೦೧೪)
ಸದ್ಯದ ಸ್ಥಾನ೧೦೦ (ಅಕ್ಟೋಬರ್ ೧೭, ೨೦೧೩)
BWF profile
Updated on 14:39, 23 October 2013 (UTC).

ಲಿನ್ ಡಾನ್( ಫುಜಿಯನ್ ಅಕ್ಟೋಬರ್ 14 , 1983 ರಂದು ಜನನ)[೧] ಚೀನಾ ದೇಶದ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ. ಇವರು ಎರಡು ಬಾರಿ ಒಲಿಂಪಿಕ್ , ಐದು ಬಾರಿ ವಿಶ್ವ ಚಾಂಪಿಯನ್ ಮತ್ತು ಐದು ಬಾರಿ ಆಲ್ ಇಂಗ್ಲೆಂಡ್ ಚಾಂಪಿಯನ್ ಪಟ್ಟ ಗಳಿಸಿದ್ದಾರೆ. ಡಾನ್ ರನ್ನು ಜಗತ್ತಿನೆಲ್ಲೆಡೆ ಸಾರ್ವಕಾಲಿಕ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರನೆಂದೇ ಪರಿಗಣಿಸಲಾಗುತ್ತದೆ. ತನ್ನ 28 ನೇ ವಯಸ್ಸಿನವರೆವಿಗೆ ಬ್ಯಾಡ್ಮಿಂಟನ್ ಜಗತ್ತಿನ " ಸೂಪರ್ ಗ್ರ್ಯಾಂಡ್ ಸ್ಲ್ಯಾಮ್ " ಎನ್ನಲಾಗುವ ಎಲ್ಲ ಒಂಬತ್ತು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಒಲಿಂಪಿಕ್ ಕ್ರೀಡಾಕೂಟ, ವರ್ಲ್ಡ್ ಚಾಂಪಿಯನ್ಶಿಪ್ , ವಿಶ್ವ ಕಪ್ , ಥಾಮಸ್ ಕಪ್ , ಸುದಿರ್ಮನ್ ಕಪ್ , ಸೂಪರ್ ಸೀರಿಸ್ ಮಾಸ್ಟರ್ಸ್ ಫೈನಲ್ಸ್ , ಆಲ್ ಇಂಗ್ಲೆಂಡ್ ಓಪನ್ , ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್ಷಿಪ್ ಗಳನ್ನು ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿರುವ ಮೊದಲ ಮತ್ತು ಏಕೈಕ ಆಟಗಾರರೆನಿಸಿಕೊಂಡಿದ್ದಾರೆ.[೨][೩][೪] ಇವರು 2008 ಮತ್ತು 2012 ರಲ್ಲಿ ಜರುಗಿದ ಒಲಿಂಪಿಕ್ ಆಟೋಟದಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿಕೊಂಡ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳಿಂದ " ಸೂಪರ್ ಡಾನ್ " ಎಂದೂ ಕರೆಯಿಸಿಕೊಳ್ಳುತ್ತಿದ್ದಾರೆ.[೫]

ವೈಯಕ್ತಿಕ ಜೀವನ[ಬದಲಾಯಿಸಿ]

ಆರಂಭಿಕ ವರ್ಷಗಳಲ್ಲಿ ಹೆತ್ತವರು ಲಿನ್ ಗೆ ಪಿಯಾನೋ ಕಲಿಯಲು ಪ್ರೋತ್ಸಾಹಿಸಿದರು. ಆದರೆ ಐದನೆಯ ವಯಸ್ಸಿನಲ್ಲಿಯೇ ಲಿನ್ ಮನಸ್ಸು ಬ್ಯಾಡ್ಮಿಂಟನ್ ಆಟದದೆಡೆಗೆ ಸೆಳೆಯಿತು ಮತ್ತು ಅದನ್ನೇ ಆಯ್ಕೆ ಮಾಡಿಕೊಂಡರು. ಡಾನ್ ತನ್ನ 13 ನೇ ವಯಸ್ಸಿನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಕ್ರೀಡಾ ತಂಡವನ್ನು ಸೇರಿದರು ಮತ್ತು ಅಲ್ಲಿಂದ 18 ವರ್ಷದವರರೆವಿಗೂ(2001 ರ ವರೆಗೆ) ಚೀನಾ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಸದಸ್ಯರಾಗಿದ್ದರು.[೬][೭][೮] ಮುಂದೆ ಥಾಮಸ್ ಕಪ್ ಗಾಗಿ ನೇಡೆಯುತ್ತಿದ್ದ ಅಭ್ಯಾಸ ಪಂದ್ಯಾವಳಿಯಲ್ಲಿ ತನ್ನ ತಂಡದ ಮತ್ತು ವರದಿಗಾರರ ಮುಂದೆ ತಂಡದ ತರಬೇತುದಾರ ಜಿ Xinpeng ಮೇಲೆ ಯಾವುದೋ ಕಾರಣಕ್ಕಾಗಿ ಹಲ್ಲೆ ಮಾಡಿದ್ದು (ಏಪ್ರಿಲ್ 10 , 2008 ರಂದು) ವಿವಾದವನ್ನೇ ಸೃಷ್ಟಿಸಿತು. ಈ ಘಟನೆಯ ನಂತರ ಲಿನ್ ಥಾಮಸ್ ಕಪ್ ಪಂದ್ಯಾವಳಿಗಳಲ್ಲಿ ತನ್ನ ತಂಡದ ಸದಸ್ಯರು ಮತ್ತು ತರಬೇತುದಾರರೊಂದಿಗೆ ಸಂತೋಷವಾಗಿರಲಿಲ್ಲ ಎಂಬ ಸುದ್ದಿಯೂ ಹಬ್ಬಿತ್ತು.[೯]

2003 ರಲ್ಲಿ ಲಿನ್ ಡಾನ್ ಅವರು ಎಕ್ಸಿಸ್ Xingfang ರೊಂದಿಗೆ (ಮಾಜಿ ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ) ಪ್ರಣಯ ಸಂಬಂಧವನ್ನಿಟ್ಟುಕೊಂಡಿದ್ದಾರೆ ಎಂಬ ಸುದ್ದಿಯೂ ಹಬ್ಬಿತು .[೧೦] ಈ ಸುದ್ದಿಯನ್ನು ಎಕ್ಸಿಸ್ ಮೊದಮೊದಲು ನಿರಾಕರಿಸಿದರೂ ನಂತರ ಲಿನ್ ಜತೆಗಿನ ತನ್ನ ಪ್ರೇಮ ಸಂಬಂಧವನ್ನು ಒಪ್ಪಿಕೊಂಡರು. ಆದರೆ ಲಿನ್ ಡಾನ್ ಮಾಧ್ಯಮದವರೆದೆರು ಸಿಟ್ಟಿನಿಂದ ಪ್ರತಿಕ್ರಿಯೆ ನೀಡಿ, ತನ್ನ ಮತ್ತು ಎಕ್ಸಿಸ್ ನಡುವಿನ ಸಂಬಂಧ ವೈಯಕ್ತಿಕ ವಿಚಾರ ಎಂದು ಹೇಳಿ ಗಾಳಿಸುದ್ದಿಗಳಿಗೆ ಮುಕ್ತಾಯ ಹೇಳಿದರು.[೧೧] ಮುಂದೆ ಸೆಪ್ಟೆಂಬರ್ 23 , 2012 ರಂದು ಲಿನ್ ಮತ್ತು ಎಕ್ಸಿಸ್ ಬೀಜಿಂಗ್ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮದುವೆಯಾದರು.[೧೨]

ವೃತ್ತಿಜೀವನ[ಬದಲಾಯಿಸಿ]

ಕಿರಿಯನಾಗಿದ್ದಾಗಿನ ಘಟನೆಗಳು[ಬದಲಾಯಿಸಿ]

2000 ದನೆಯ ಇಸವಿಯಲ್ಲಿ ಜರುಗಿದ ಏಷ್ಯನ್ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ತಂಡ ಮತ್ತು ಬಾಲಕರ ಸಿಂಗಲ್ಸ್ ಎರಡರಲ್ಲೂ ಲಿನ್ ವಿಜಯಿಯಾಗಿ ಹೊರಹೊಮ್ಮಿದರು. ಮುಂದೆ ಇದೇ ವರುಷ ನೆಡೆದ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಸೆಮಿ ಫೈನಲ್ ತಲುಪಿದ ಚೀನೀ ತಂಡದ ಸದಸ್ಯರಲ್ಲಿ ಲಿನ್ ಕೂಡಾ ಇದ್ದರು.[೧೩]

2001-2003[ಬದಲಾಯಿಸಿ]

2001 ನೆಯ ಇಸವಿಯು ಲಿನ್ ರ ವೃತ್ತಿಜೀವನದ ಹೆಗ್ಗುರುತಾಯಿತು. ತನ್ನ ಮೊದಲ ಪಂದ್ಯವಾದ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಅವರು ತನ್ನ ದೇಶದವರಾದ ಕ್ಸಿಯಾ Xuanze ಎದುರು ಅಂತಿಮ ಹಂತದಲ್ಲಿ ಮುಗ್ಗರಿಸಿದರು.[೧೪] ಆದರೆ, ಮುಂದೆ 2002 ರಲ್ಲಿ ಕೊರಿಯಾ ಓಪನ್ ನಲ್ಲಿ ತಮ್ಮ ಮೊದಲ ಪ್ರಶಸ್ತಿಯನ್ನು ಪಡೆದರು.[೧೫] . 2002 ರಲ್ಲಿ ಜರುಗಿದ ಥಾಮಸ್ ಕಪ್ ಚಾಂಪಿಯನ್ಶಿಪ್ ನಲ್ಲಿ, ಸ್ವೀಡನ್ ( 5-0 ) [೧೬] Denmark (3–2),[೧೭] and Korea, ಡೆನ್ಮಾರ್ಕ್ ( 3-2 ) , ಮತ್ತು ಕೊರಿಯಾ ದೇಶದ ತಂಡಗಳನ್ನು ಸೋಲಿಸಿ ಸೆಮಿಫೈನಲ್ಸ್ ತಲುಪಿದ ಚೀನಾ ದೇಶದ ತಂಡದಲ್ಲಿ ಲಿನ್ ಕೂಡಾ ಇದ್ದರು[೧೮]. ಆದರೆ, ವೈಯಕ್ತಿಕ ಕಾರಣಗಳಿಂದ ಲಿನ್ ಸೆಮಿಫೈನಲ್ ನಲ್ಲಿ ಮಲೇಶಿಯ ವಿರುಧ್ಧ ಆಡಲಿಲ್ಲ. ಈ ಪಂದ್ಯದಲ್ಲಿ ಚೀನಾ ತಂಡವು 1-3 ರಿಂದ ಮಲೇಶ್ಯಾ ಎದುರು ಸೋತಿತು[೧೯]. ಮುಂದೆ ಲಿನ್ ಆಡಿದ ಇತರೆ ನಾಲ್ಕು ಪಂದ್ಯಾವಳಿಗಳಲ್ಲಿ ಚೀನಾ ತಂಡವು ಜಯಗಳಿಸಿತು. ಆದರೆ, ಸಿಂಗಪುರ ಸಿರೀಸ್ ಮತ್ತು ಇಂಡೋನೇಶ್ಯಾ ಓಪನ್[೨೦] ಆಟೋಟಗಳಲ್ಲಿ ಮೊದಲ ಸುತ್ತಿನಲ್ಲಿಯೇ ಸೋಲುಂಡರು. ಮುಂದೆ ಡೆನ್ಮಾರ್ಕ್ ಓಪನ್ ನ ಎರಡನೇ ಸುತ್ತಿನಲ್ಲಿ , ಮತ್ತು ಚೀನಾ ಓಪನ್ ನ ಮೂರನೆ ಸುತ್ತಿನಲ್ಲಿ ಸೋಲುಂಡರು[೨೧]. ಭರವಸೆ ಹುಟ್ಟಿಸಿದ್ದ ಏಷ್ಯನ್ ಗೇಮ್ಸ ನಲ್ಲಿ ತಂಡವನ್ನು ಸ್ಪರ್ಧೆಯ ಸೆಮಿಫೈನಲ್ಸ್ ವರೆವಿಗೂ ಕೊಂಡೊಯ್ದು ಅಂತಿಮ ಹಂತದಲ್ಲಿ ಮುಗ್ಗರಿಸಿದ್ದರಿಂದ ಚಿನ್ನದ ಪದಕದ ಆಸೆಯಿಟ್ಟುಕೊಂಡಿದ್ದ ಚೀನಾ ತಂಡಕ್ಕೆ ನಿರಾಸೆಯಾಯಿತು.[೨೨]

ನಂತರ ಲಿನ್ ಡಾನ್, ಆಲ್ ಇಂಗ್ಲೆಂಡ್ ಓಪನ್ ನಲ್ಲಿ ಮೂರನೇ ಸುತ್ತಿನಲ್ಲಿ ಸೋಲುವ ಮೂಲಕ 2003 ನೇ ಇಸವಿಯ ಕ್ರೀಡಾಋತುವನ್ನು ಆರಂಭಿಸಿದರು[೨೩]. ಜಪಾನ್ ಓಪನ್ನಲ್ಲಿ ವರ್ಷದ ನಂತರ ಸ್ಪರ್ಧೆಯ ಫೈನಲ್ ತಲುಪಿದರೂ ಮತ್ತೊಮ್ಮೆ ತನ್ನ ದೇಶದವರೇ ಆದ ಕ್ಸಿಯಾ Xuanze ಎದುರು ಸೋಲು ಕಂಡರು[೨೪]. ನಂತರ ಇಂಗ್ಲೆಂಡಿನ ಬರ್ಮಿಂಗ್ಹ್ಯಾಮ್ ನಲ್ಲಿ ಜರುಗಿದ ವಿಶ್ವ ಚಾಂಪಿಯನ್ಶಿಪ್ ಪಂದ್ಯಾವಳಿಗೆ ಮೊದಲ ಬಾರಿ ಕಾಲಿರಿಸಿದರು. ಮೊದಲ ಎರಡು ಸುತ್ತುಗಳಲ್ಲಿ ಹೆನ್ರಿಕ್ Croona ಮತ್ತು Przemysław Wacha breezed , ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದರು. ಆದರೆ ಮೂರನೇ ಸುತ್ತಿನ ಪಂದ್ಯದಲ್ಲಿ ಮತ್ತೆ ಕ್ಸಿಯಾ ಅವರಿಂದ ಸೋಲುಂಡರು[೨೫]. ಇದಾದ ನಂತರ ಸಿಂಗಪುರ ಓಪನ್ ನಲ್ಲಿ ಸೆಮಿಫೈನಲ್ಸ್ ಹಂತದಲ್ಲಿ ಸೋತರು. ಇಂಡೋನೇಷ್ಯಾ ಓಪನ್ ನ ಮೂರನೆ ಸುತ್ತಿನಲ್ಲಿ , ಮಲೇಷ್ಯಾ ಓಪನ್ ನ ಎರಡನೇ ಸುತ್ತಿನಲ್ಲಿ ಸತತ ಸೋಲುಂಡರು. ಆದರೂ, ಡೆನ್ಮಾರ್ಕ್ ಓಪನ್, ಹಾಂಗ್ ಕಾಂಗ್ ಓಪನ್, ಚೀನಾ ಓಪನ್ ಪ್ರಶಸ್ತಿಗಳನ್ನು ಗೆದ್ದು[೨೬] ಜರ್ಮನ್ ಓಪನ್ ನಲ್ಲಿ ರನ್ನರ್ ಅಪ್ ಆಗುವ ಮೂಲಕ ವರ್ಷವನ್ನು ಆತ್ಮವಿಶ್ವಾಸದೊಂದಿಗೆ ಕೊನೆಗೊಳಿಸಿದರು.

2004[ಬದಲಾಯಿಸಿ]

ಲಿನ್ಡಾನ್ ಗೆ 2004 ನೆಯ ಇಸವಿಯು ಅದೃಷ್ಟದ ವರುಷವಾಯಿತು. ಮೊದಲ ಬಾರಿಗೆ ಒಂದನೆಯ ವಿಶ್ವ ಶ್ರೇಯಾಂಕವನ್ನು ಲಿನ್ ಅವರು ಇದೇ ವರುಷ ಗಳಿಸಿದರು. ಚೀನಾ ತಂಡವು ಥಾಮಸ್ ಕಪ್ ನ ಅರ್ಹತಾ ಸುತ್ತಿನಲ್ಲಿ ಗೆಲ್ಲಲು ಬೆನೆಲುಬಾಗಿ ನಿಂತರು. ಮುಂದೆ ಸ್ವಿಸ್ ಓಪನ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು[೨೭][೨೮]. ಪೀಟರ್ ಗೇಡ್ ಅವರನ್ನು ಸೋಲಿಸುವ ಮೂಲಕ ತನ್ನ ಮೊಟ್ಟಮೊದಲ ಆಲ್ ಇಂಗ್ಲೆಂಡ್ ಓಪನ್ ಪ್ರಶಸ್ತಿಯನ್ನು ಗೆದ್ದರು[೨೯] . ಮೇ ತಿಂಗಳಿನಲ್ಲಿ ನೆಡೆಯಲಿದ್ದ ಥಾಮಸ್ ಕಪ್ ಅಭಿಯಾನಕ್ಕಾಗಿ ಜಕಾರ್ತಾ ಗೆ ಹೋಗುವ ಮೊದಲು ಜಪಾನ್ ಓಪನ್ ನ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದರು[೩೦]. ಥಾಮಸ್ ಕಪ್ ನಲ್ಲಿ ಲಿನ್ ಅವರು ಯುನೈಟೆಡ್ ಸ್ಟೇಟ್ಸ್ ತಂಡವನ್ನು ಟೂರ್ನಿಯಿಂದ ಹೊರಗಟ್ಟಿದ್ದಲ್ಲದೆ ಹಾಲಿ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು 5 0 ಅಂತರದಲ್ಲಿ ಮಣಿಸುವ ಮೂಲಕ ಚೀನಾ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸಲು ನೆರವಾದರು[೩೧]. ಅನಂತರ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಗಳಲ್ಲಿ ಕ್ರಮವಾಗಿ ಜಪಾನ್ ಮತ್ತು ಕೊರಿಯಾ ತಂಡಗಳನ್ನು 3-0 ಅಂತರದಲ್ಲಿ ಮಣಿಸಿದರು . ಅಂತಿಮ ಪಂದ್ಯದಲ್ಲಿ , ೧-೩ ರ ನೇರ ಸೆಟ್ನಲ್ಲಿ ಪೀಟರ್ ಗೇಡ್ ಅವರನ್ನು ಸೋಲಿಸುವ ಮೂಲಕ ಈ ಪಂದ್ಯಾವಳಿಯಲ್ಲಿ 14 ವರ್ಷಗಳ ನಂತರ ಚಾಂಪಿಯನ್ಶಿಪ್ ಆಗುವ ಬರವನ್ನು ನೀಗಿಸಿಕೊಂಡಿತು[೩೨][೩೩] .[೩೪]

ಅನಂತರ ಮಲೇಷ್ಯಾ ಓಪನ್ ಕ್ವಾರ್ಟರ್ ಫೈನಲ್ ನಲ್ಲಿ ಸೋಲುವ ಮೂಲಕ ಕೊಂಚ ಹಿನ್ನಡೆ ಅನುಭವಿಸಿದರು ಮತ್ತು ಒಲಿಂಪಿಕ್ ಕ್ರೀಡೆಗಳು ಆರಂಭವಾಗುವ ಮುನ್ನ ಜುಲೈ ತಿಂಗಳಿನಲ್ಲಿ ಕಾಲಿನ ನೋವಿಗೆ ಒಳಗಾದರು[೩೫] .[೩೬]. ಒಲಂಪಿಕ್ ಕ್ರೀಡಾಕೂಟದಲ್ಲಿ ಹೀನಾಯವಾಗಿ ಸೋಲುವುದರ ಜೊತೆಗೆ "ಯಾವಾಗಲೂ ಗೆಲ್ಲುವ ಉತ್ಸಾಹದಲ್ಲೇ ಇರುತ್ತಾನೆ " ಎಂಬ ವ್ಯಂಗ್ಯವನ್ನೂ ಎದುರಿಸಿದರು [೩೭][೩೮]. ಆದಾಗ್ಯೂ , ಡೆನ್ಮಾರ್ಕ್ , ಜರ್ಮನ್ ಮತ್ತು ಚೀನಾ ಓಪನ್ ಒಳಗೊಂಡಂತೆ ಮೂರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡು ವರ್ಷಾಂತ್ಯದಲ್ಲಿ ಇಂಡೋನೇಷ್ಯಾ ಓಪನ್ನಲ್ಲಿ ಸೆಮಿಫೈನಲ್ ತಲುಪುವುದರೊಂದಿಗೆ ೨೦೦೪ ರ ಅಭಿಯಾನವನ್ನು ಮುಗಿಸಿದರು[೩೯] .

2005[ಬದಲಾಯಿಸಿ]

ಲಿನ್ ತನ್ನ ಎರಡನೇ ಜರ್ಮನ್ ಓಪನ್ ಮತ್ತು ಹಾಂಗ್ ಕಾಂಗ್ ಓಪನ್ ಪ್ರಶಸ್ತಿಗಳನ್ನು ಹಾಗೆಯೇ ಜಪಾನ್ ಓಪನ್ , ಚೀನಾ ಮಾಸ್ಟರ್ಸ್ , ಮತ್ತು ವಿಶ್ವ ಕಪ್ ಪಂದ್ಯಾವಳಿಯನ್ನು ಗೆಲ್ಲುವುದರ ಮೂಲಕ 2005 ರಲ್ಲಿ ಅಗ್ರ ವಿಶ್ವ ಶ್ರೇಯಾಂಕವನ್ನು ಉಳಿಸಿಕೊಂಡರು[೪೦][೪೧][೪೨][೪೩][೪೪] . ಸುದಿರ್ಮನ್ ಕಪ್ ನಲ್ಲಿ ಉಪಾಂತ್ಯ ಮತ್ತು ಅಂತಿಮ ಪದ್ಯದಲ್ಲಿ ಕ್ರಮವಾಗಿ ದಕ್ಷಿಣ ಕೊರಿಯಾ ಮತ್ತು ಇಂಡೋನೇಶಿಯಾ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಬಾಚಿಕೊಳ್ಳುವಲ್ಲಿ ಚೀನಾ ತಂಡಕ್ಕೆ ನೆರವಾದರು[೪೫][೪೬].

ಲಿನ್ ತಮ್ಮ ಸಹ ಆಟಗಾರ ಚೆನ್ ಹಾಂಗ್ ಅವರೆದುರು ಮೂರು ಸೆಟ್ಗಳ ಅಂತರದಲ್ಲಿ ಸೋಲುವ ಮೂಲಕ ಆಲ್ ಇಂಗ್ಲೆಂಡ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ವಿಫಲವಾದರು[೪೭]. ಮಲೇಷ್ಯಾ ಓಪನ್ ಫೈನಲ್ನಲ್ಲಿ ಮತ್ತೊಬ್ಬ ಉದಯೋನ್ಮುಖ ಸಹ ಆಟಗಾರ ಲೀ ಚೊಂಗ್ ವೀ ಅವರೆದುರು ಸೋತು ನಿರ್ಗಮಿಸಿದರು[೪೮]. ತಮ್ಮ ಮೊದಲ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಕ್ಯಾಲಿಪೋರ್ನಿಯಾದಲ್ಲಿ ನೆಡೆದ ಕ್ರೀಡಾಕೂಟದಲ್ಲಿ ಅಂತಿಮ ಹಂತದವರೆವಿಗೂ ಸೋಲದೆ ಆಡಿದ ಲಿನ್[೪೯][೫೦][೫೧] , ಅಂತಿಮ ಪಂದ್ಯದಲ್ಲಿ ಇಂಡೋನೇಶಿಯಾದ ತೌಫಿಕ್ ಹಿದಾಯತ್ ಅವರೆದುರು ಹೀನಾಯವಾಗಿ ಸೋತರು[೫೨] . ಮುಂದೆ ಸಿಂಗಪುರ್ ಓಪನ್ ಮತ್ತು ಚೀನಾ ಓಪನ್ ಪಂದ್ಯಗಳಲ್ಲಿ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ಸ್ ಹಂತದಲ್ಲಿ ಸೋತು ಹೊರಬಂದರು[೫೩] .

2006[ಬದಲಾಯಿಸಿ]

ಜರ್ಮನ್ ಓಪನ್ ಪಂದ್ಯದ ಸೆಮಿಫೈನಲ್ಸ್ ಹಂತವನ್ನು ತಲುಪುವ ಮೂಲಕ ಲಿನ್ ಈ ಋತುವನ್ನು ಪ್ರಾರಂಭಿಸಿದರು[೫೪]. ಚೀನಾ ಮಾಸ್ಟರ್ಸ್ ಮತ್ತು ಚೀನಾ ಓಪನ್ ನಲ್ಲೂ ಕೂಡ ಉಪಾಂತ್ಯವನ್ನು ತಲುಪಿ ಗಮನಾರ್ಹ ಸಾಧನೆ ಮಾಡಿದರು. ತನ್ನ ಎದುರಾಳಿ ಲೀ ಚೋಂಗ್ ವೀ ವಿರುದ್ದ ಜೂನ್ ನಲ್ಲಿ ನೆಡೆದ ಮಲೇಷ್ಯಾ ಓಪನ್ನಲ್ಲಿ ಅಂತಿಮ ಪಂದ್ಯದಲ್ಲಿ 13 20ರ ಅಂತರದಲ್ಲಿ ಸೋತರು[೫೫] ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ತೌಫಿಕ್ ಹಿದಾಯತ್ ವಿರುಧ್ಧ ಸೋತರು[೫೬] . ಆದಾಗ್ಯೂ , ಅವರು ಋತುವಿನ ಆರು ಪ್ರತ್ಯೇಕ ಪ್ರಶಸ್ತಿಗಳನ್ನು ಗೆದ್ದರು . ಆಲ್ ಇಂಗ್ಲೆಂಡ್ ಓಪನ್[೫೭] , ಚೀನೀ ತೈಪೆ ಓಪನ್[೫೮] , ಮಕಾವು ಓಪನ್ , ಹಾಂಗ್ ಕಾಂಗ್ ಓಪನ್ , ಜಪಾನ್ ಓಪನ್ , ಮತ್ತು ತನ್ನ ದೇಶದವರೇ ಆದ ಬಾವೊ ಚುನ್ಲೈ ಅವರನ್ನು ಸೋಲಿಸಿ ಮೊದಲ ವಿಶ್ವ ಚಾಂಪಿಯನ್ ಪಟ್ಟವನ್ನು ವಿಶ್ವ ಚಾಂಪಿಯನ್ ಪಂದ್ಯಾವಳಿಯಲ್ಲಿ ಗಳಿಸಿಕೊಂಡರು[೫೯]. ಮೇ ತಿಂಗಳಿನಲ್ಲಿ , ಲಿನ್ ಮತ್ತು ಅವರ ತಂಡವು ಸತತ ಎರಡನೇ ಬಾರಿಗೆ ಡೆನ್ಮಾರ್ಕ್ ತಂಡವನ್ನು ಸೋಲಿಸುವುದರ ಮೂಲಕ ಥಾಮಸ್ ಕಪ್ ಪ್ರಶಸ್ತಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿತು [೬೦] .

2011 ರ ಜರ್ಮನ್ ಓಪನ್ ಪಂದ್ಯದಲ್ಲಿ.
2012 ರ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ

ಚಾಂಪಿಯನ್ ಪಟ್ಟ ಗಳಿಸಿದ ಪಂದ್ಯಗಳು[ಬದಲಾಯಿಸಿ]

ಪ್ರಶಸ್ತಿಗಳು(55)[ಬದಲಾಯಿಸಿ]

ವರ್ಷ ಕ್ರೀಡಾಕೂಟ ಅಂತಿಮ ಪಂದ್ಯದ ಎದುರಾಳಿ ಅಂಕ/ಅಂತರ
2002 ಕೊರಿಯಾ ಓಪನ್ ದಕ್ಷಿಣ ಕೊರಿಯಾ Shon Seung-mo 1–7, 7–3, 7–3, 7–5
2003 ಡೆನ್ಮಾರ್ಕ್ ಓಪನ್ ಚೀನಾ Chen Yu 15–4, 15–6
2003 ಹಾಂಕಾಂಗ್ ಓಪನ್ ಥೈಲ್ಯಾಂಡ್ Boonsak Ponsana 15–4, 9–15, 15–8
2003 ಚೈನಾ ಓಪನ್ ಮಲೇಶಿಯ Wong Choong Hann 17–16, 15–12
2004 ಸ್ವಿಸ್ ಓಪನ್ ಚೀನಾ Bao Chunlai 15–12, 15–6
2004 ಆಲ್ ಇಂಗ್ಲೆಂಡ್ ಓಪನ್ ಡೆನ್ಮಾರ್ಕ್ Peter Gade 9–15, 15–5, 15–8
2004 ಡೆನ್ಮಾರ್ಕ್ ಓಪನ್ (2) ಚೀನಾ Xia Xuanze 15–12, 15–11
2004 ಜರ್ಮನ್ ಓಪನ್ ಚೀನಾ Xia Xuanze 17–16, 15–9
2004 ಚೈನಾ ಓಪನ್ (2) ಚೀನಾ Bao Chunlai 15–11, 15–10
2005 ಜರ್ಮನ್ ಓಪನ್ (2) ಮಲೇಶಿಯ Muhammad Hafiz Hashim 15–8, 15–8
2005 ಜಪಾನ್ ಓಪನ್ ಚೀನಾ Chen Hong 15–4, 2–0r
2005 ಚೈನಾ ಮಾಸ್ಟರ್ಸ್ ಚೀನಾ Bao Chunlai 15–6, 15–13
2005 ಹಾಂಕಾಂಗ್ ಓಪನ್ (2) ಚೀನಾ Bao Chunlai 15–10, 15–4
2005 ವಿಶ್ವಕಪ್ ಥೈಲ್ಯಾಂಡ್ Boonsak Ponsana 21–13, 21–11
2006 ಆಲ್ ಇಂಗ್ಲೆಂಡ್ ಓಪನ್ (2) ದಕ್ಷಿಣ ಕೊರಿಯಾ Lee Hyun-il 15–7, 15–7
2006 ಚೈನಾ ತೈಪೆ ಓಪನ್ ಮಲೇಶಿಯ Lee Chong Wei 21–18, 12–21, 21–11
2006 ಮಕಾವು ಓಪನ್ ಮಲೇಶಿಯ Lee Chong Wei 21–18, 18–21, 21–18
2006 ಹಾಂಕಾಂಗ್ ಓಪನ್ (3) ಮಲೇಶಿಯ Lee Chong Wei 21–19, 8–21, 21–16
2006 ವಿಶ್ವ ಚಾಂಪಿಯನ್ಶಿಪ್ ಚೀನಾ Bao Chunlai 18–21, 21–17, 21–12
2006 ಜಪಾನ್ ಓಪನ್ (2) ಇಂಡೋನೇಷ್ಯಾ Taufik Hidayat 16–21, 21–16, 21–3
2006 ವಿಶ್ವಕಪ್ (2) ಚೀನಾ Chen Yu 21–19, 19–21, 21–17
2007 ಕೊರಿಯಾ ಓಪನ್ (2) ಚೀನಾ Chen Jin 21–14, 21–19
2007 ಜರ್ಮನ್ ಓಪನ್ (3) ಚೀನಾ Chen Yu Walkover
2007 ಆಲ್ ಇಂಗ್ಲೆಂಡ್ ಓಪನ್ (3) ಚೀನಾ Chen Yu 21–13, 21–12
2007 ಚೈನಾ ಮಾಸ್ಟರ್ಸ್ (2) ಮಲೇಶಿಯ Wong Choong Hann 21–19, 21–9
2007 ವಿಶ್ವ ಚಾಂಪಿಯನ್ಶಿಪ್ (2) ಇಂಡೋನೇಷ್ಯಾ Sony Dwi Kuncoro 21–11, 22–20
2007 ಡೆನ್ಮಾರ್ಕ್ ಓಪನ್ (3) ಚೀನಾ Bao Chunlai 21–15, 21–12
2007 ಹಾಂಕಾಂಗ್ ಓಪನ್ (4) ಮಲೇಶಿಯ Lee Chong Wei 9–21, 21–15, 21–15
2008 ಸ್ವಿಸ್ ಓಪನ್ (2) ಮಲೇಶಿಯ Lee Chong Wei 21–13, 21–18
2008 ಥಾಯಿಲ್ಯಾಂಡ್ ಓಪನ್ ಥೈಲ್ಯಾಂಡ್ Boonsak Ponsana 17–21, 21–15, 21–13
2008 ಓಲಂಪಿಕ್ ಕ್ರೀಡಾಕೂಟ ಮಲೇಶಿಯ Lee Chong Wei 21–12, 21–8
2008 ಚೈನಾ ಓಪನ್ (3) ಮಲೇಶಿಯ Lee Chong Wei 21–18, 21–9
2009 ಆಲ್ ಇಂಗ್ಲೆಂಡ್ ಓಪನ್ (4) ಮಲೇಶಿಯ Lee Chong Wei 21–19, 21–12
2009 ವಿಶ್ವ ಚಾಂಪಿಯನ್ಶಿಪ್ (3) ಚೀನಾ Chen Jin 21–18, 21–16
2009 ಚೈನಾ ಮಾಸ್ಟರ್ಸ್ (3) ಥೈಲ್ಯಾಂಡ್ Boonsak Ponsana 21–17, 21–17
2009 ಫ್ರೆಂಚ್ ಓಪನ್ ಇಂಡೋನೇಷ್ಯಾ Taufik Hidayat 21–6, 21–15
2009 ಚೈನಾ ಓಪನ್ (4) ಡೆನ್ಮಾರ್ಕ್ Jan Ø. Jørgensen 21–12, 21–12
2010 ಏಶಿಯಾ ಚಾಂಪಿಯನ್ಶಿಪ್ ಚೀನಾ Wang Zhengming 21–17, 21–15
2010 ಚೈನಾ ಮಾಸ್ಟರ್ಸ್ (4) ಚೀನಾ Chen Long 21–15, 13–21, 21–14
2010 ಏಶಿಯನ್ ಗೇಮ್ಸ್ ಮಲೇಶಿಯ Lee Chong Wei 21–13, 15–21, 21–10
2011 ಕೊರಿಯಾ ಓಪನ್ (3) ಮಲೇಶಿಯ Lee Chong Wei 21–19, 14–21, 21–16
2011 ಜರ್ಮನ್ ಓಪನ್ (4) ಚೀನಾ Chen Jin 21–19, 21–11
2011 ಏಶಿಯಾ ಚಾಂಪಿಯನ್ಶಿಪ್ (2) ಚೀನಾ Bao Chunlai 21–19, 21–13
2011 ವಿಶ್ವ ಚಾಂಪಿಯನ್ಶಿಪ್ (4) ಮಲೇಶಿಯ Lee Chong Wei 20–22, 21–14, 23–21
2011 ಹಾಂಕಾಂಗ್ ಓಪನ್ (5) ಚೀನಾ Chen Jin 21–12, 21–19
2011 ಚೈನಾ ಓಪನ್ (5) ಚೀನಾ Chen Long 21–17, 26–24
2011 ಮಾಸ್ಟರ್ಸ್ ಸೂಪರ್ ಸೀರೀಸ್ ಚೀನಾ Chen Long 21–12, 21–16
2012 ಜರ್ಮನ್ ಓಪನ್ (5) ಇಂಡೋನೇಷ್ಯಾ Simon Santoso 21–11, 21–11
2012 ಆಲ್ ಇಂಗ್ಲೆಂಡ್ ಓಪನ್ (5) ಮಲೇಶಿಯ Lee Chong Wei 21–19, 6–2r
2012 ಒಲಂಪಿಕ್ಸ್ (2) ಮಲೇಶಿಯ Lee Chong Wei 15–21, 21–10, 21–19
2013 ವಿಶ್ವ ಚಾಂಪಿಯನ್ಶಿಪ್ (5) ಮಲೇಶಿಯ Lee Chong Wei 16–21, 21–13, 20–17r
2014 ಚೈನಾ ಮಾಸ್ಟರ್ಸ್ (5) ಚೀನಾ Tian Houwei 21–14, 21–9
2014 ಏಶಿಯಾ ಚಾಂಪಿಯನ್ಶಿಪ್ (3) ಜಪಾನ್ Sho Sasaki 14–21, 21–9, 21–15
2014 ಆಸ್ಟ್ರೇಲಿಯನ್ ಓಪನ್ ಇಂಡೋನೇಷ್ಯಾ Simon Santoso 22–24, 21–16, 21–7
2014 ಚೈನೀಸ್ ತೈಪೆ ಓಪನ್ (2) ಚೀನಾ Wang Zhengming 21–19, 21–14

ಉಲ್ಲೇಖಗಳು[ಬದಲಾಯಿಸಿ]

 1. "Lin Dan". sports-reference.com. Archived from the original on 2015-09-25. Retrieved 2011-02-02.
 2. "Lin Dan: The Greatest Ever By Richard Eaton". ibadmintonstore.com. Archived from the original on 2013-11-03. Retrieved 2011-10-24.
 3. "Is Lin Dan the greatest ever?". Daily News and Analysis. Retrieved 2011-10-24.
 4. "Lin Dan the greatest, says record-breaking Gade". Times of India. 2012-03-06.
 5. "林丹:不喜欢超级丹称号 会选择留在潘多拉星球". enorth.com.cn (in Chinese). 2010-03-05. Retrieved 2011-02-02.{{cite news}}: CS1 maint: unrecognized language (link)
 6. "中国羽毛球首席单打林丹". ci123.com. Retrieved 2011-02-02.
 7. "林丹个人资料". CCTV.com. Retrieved 2011-02-02.
 8. "Chinese stars a perfect couple in badminton". NJ.com. 2008-08-14. Retrieved 2011-02-02.
 9. "林丹发威当众拳打教练 吉新鹏遭突袭并未还手". Xinhuanet (in Chinese). 2008-04-10. Retrieved 2011-02-02.{{cite news}}: CS1 maint: unrecognized language (link)
 10. "七年爱情长跑成正果 林丹谢杏芳演绎最浪漫的事". Sohu (in Chinese). 2010-12-14. Retrieved 2011-02-02.{{cite news}}: CS1 maint: unrecognized language (link)
 11. "亲友爆料林丹已在筹备婚礼 计划将办三场婚宴". sports.qq.com (in Chinese). 2010-12-15. Retrieved 2011-02-02.{{cite news}}: CS1 maint: unrecognized language (link)
 12. Sachetat, Raphael (2012-09-24). "Lin Dan finally ties the knot". Badzine. Retrieved 2012-10-21.
 13. "林丹". data.sports.163.com. Archived from the original on 2011-06-30. Retrieved 2011-03-18.
 14. "Chinese dominate badminton". Philippine Daily Inquirer. 2001-08-27. Retrieved 2011-02-03.
 15. "Lin Dan bags Korean Open singles title". New Straits Times. 2002-04-01. Retrieved 2011-02-03.
 16. "2002年汤姆斯杯羽毛球锦标赛首轮比赛:中国队3:0轻取瑞典队" (in Chinese). bbeshop.com. Retrieved 2011-02-03.{{cite web}}: CS1 maint: unrecognized language (link)
 17. "China Knocks out Denmark in Thomas Cup". People's Daily Online. 2002-05-12. Archived from the original on 2013-11-03. Retrieved 2011-02-03.
 18. "China Nails down South Korea 4–1 at Thomas Cup". People's Daily Online. 2002-05-15. Archived from the original on 2013-11-03. Retrieved 2011-02-03.
 19. "汤姆斯杯中国队1:3负于马来西亚队无缘决赛". bbeshop.com (in Chinese). 2002-05-16. Retrieved 2011-02-03.{{cite news}}: CS1 maint: unrecognized language (link)
 20. "印尼羽球赛:鲍春来勇擒叶诚万、林丹不敌无名将". bbeshop.com (in Chinese). 2002-08-29. Retrieved 2011-02-03.{{cite news}}: CS1 maint: unrecognized language (link)
 21. "Trio in third round, Lin Dan stunned". The Star. 2002-11-01. Archived from the original on 2002-11-10. Retrieved 2011-02-03.
 22. "叹息林丹丢失单打,李永波指摘韩国"低劣"裁判". bbeshop.com (in Chinese). 2002-10-07. Archived from the original on 2004-10-10. Retrieved 2011-02-03.{{cite news}}: CS1 maint: unrecognized language (link)
 23. "全英羽赛名将落马:鲍春来淘汰盖德,林丹出局". bbeshop.com (in Chinese). 2003-02-12. Retrieved 2011-02-03.{{cite news}}: CS1 maint: unrecognized language (link)
 24. "Camilla tames another Chinese shuttler en route to crown". The Star. 2003-04-07. Archived from the original on 2011-06-29. Retrieved 2011-02-03.
 25. "Coach hopes one of his Red Dragons will rule the world". The Star. 2003-08-02. Archived from the original on 2011-06-29. Retrieved 2011-02-03.
 26. "中国队独揽中国羽球公开赛4金,新星林丹再显威". bbeshop.com (in Chinese). 2003-11-17. Retrieved 2011-02-03.{{cite news}}: CS1 maint: unrecognized language (link)
 27. Paul, Rajes (2004-02-23). "Malaysia give gutsy display against China". The Star. Archived from the original on 2004-03-27. Retrieved 2011-02-04.
 28. "瑞士羽球赛:中国队独取四金,混双金牌再度旁落". bbeshop.com (in Chinese). 2004-03-07. Retrieved 2011-02-04.{{cite news}}: CS1 maint: unrecognized language (link)
 29. "Lin wins All England title". BBC Sport. 2004-03-14. Retrieved 2011-02-04.
 30. "日本羽球赛:鲍春来淘汰林丹,中国男双挺进决赛". bbeshop.com (in Chinese). 2004-04-10. Retrieved 2011-02-04.{{cite news}}: CS1 maint: unrecognized language (link)
 31. "汤姆斯杯小组赛:中国5:0印尼,终结十年不胜历史". bbeshop.com (in Chinese). 2004-05-10. Retrieved 2011-02-04.{{cite news}}: CS1 maint: unrecognized language (link)
 32. "汤杯1/4决赛:林丹睡狮猛醒,完胜对手先下一城". bbeshop.com (in Chinese). 2004-05-13. Retrieved 2011-02-04.{{cite news}}: CS1 maint: unrecognized language (link)
 33. "汤杯半决赛:中国3:0胜韩国将与丹麦争冠军". bbeshop.com (in Chinese). 2004-05-14. Retrieved 2011-02-04.{{cite news}}: CS1 maint: unrecognized language (link)
 34. "China claims the Thomas Cup title". People's Daily Online. 2004-05-17. Archived from the original on 2013-11-03. Retrieved 2011-02-04.
 35. "马羽赛完全战报:林丹不敌朴成焕,春来败给李宗伟". bbeshop.com (in Chinese). 2004-07-03. Retrieved 2011-02-04.{{cite news}}: CS1 maint: unrecognized language (link)
 36. "林丹脚伤暂缺席训练,鲍春来:去雅典只为夺金". bbeshop.com (in Chinese). 2004-07-13. Retrieved 2011-02-04.{{cite news}}: CS1 maint: unrecognized language (link)
 37. "Super Dan crashes out as Susilo steals the show". ABC News. 2004-08-16. Retrieved 2011-02-04.
 38. "Day of mixed fortunes for Chinese shuttlers". China daily. 2004-08-16. Retrieved 2011-02-04.
 39. "End of the road for Malaysian". New Straits Times. 2004-12-18. Retrieved 2011-02-04.
 40. "Chinese set sights on a clean sweep at world meet". The Star. 2005-08-13. Archived from the original on 2012-10-18. Retrieved 2011-05-23.
 41. "Roslin still has to show his worth". The Star. 2005-03-15. Archived from the original on 2005-03-15. Retrieved 2011-05-23.
 42. "Lin Dan crowned at Japan Open". China daily. 2005-04-11. Retrieved 2011-05-23.
 43. "Lin, Zhang Win China Maters Titles". Crienglish. 2005-09-04. Archived from the original on 2019-07-18. Retrieved 2011-05-23.
 44. "China clean sweep at HK Open badminton". The China Post. 2005-11-07. Retrieved 2011-05-23.
 45. "China whitewashes 3–0 over South Korea". 2005sc.163.com. 2005-05-14. Archived from the original on 2011-07-17. Retrieved 2011-05-23.
 46. "China secure Sudirman Cup triumph". BBC Sport. 2005-05-15. Retrieved 2011-05-23.
 47. "Bulutangkis All England: Cina Rebut Empat Gelar". detikSport. 2005-03-14. Archived from the original on 2011-09-01. Retrieved 2011-05-23.
 48. Wei Loon, Ng (2005-07-14). "Chong Wei draws the fans back". The Star. Archived from the original on 2012-10-18. Retrieved 2011-05-23.
 49. "Top Seeds Lin and Zhang Advance Into 3rd Round". Arab News. 2005-08-19. Archived from the original on 2012-07-08. Retrieved 2011-05-23.
 50. "Top seeds reach quarterfinals at Badminton Championships". SignOnSanDiego.com. 2005-08-15. Retrieved 2011-05-23.
 51. "Badminton 2005 – IBF World Badminton Championships". Corbis images. Retrieved 2011-05-23.
 52. "Hidayat routs Lin Dan to capture world title". China daily. 2005-08-22. Retrieved 2011-05-23.
 53. "Badminton: Super Dan out of Men's Singles at China Open". Crienglish. 2005-11-12. Archived from the original on 2019-07-18. Retrieved 2011-05-23.
 54. "Timetable GO 2006-SFresults" (PDF). german-open-badminton.de. Archived from the original (PDF) on 2015-09-24. Retrieved 2011-06-09.
 55. Paul, Rajes (2006-06-19). "Double joy for Malaysia". The Star. Archived from the original on 2006-06-21. Retrieved 2011-06-09.
 56. "Asian Games: Hidayat gets sweet revenge over Lin Dan". The Star. 2006-12-10. Archived from the original on 2012-10-18. Retrieved 2011-06-09.
 57. "Lin Dan and China reign supreme". Rediff. 2006-01-23. Retrieved 2011-06-09.
 58. "Lin Dan Exacts Sweet Revenge on Lee Chong Wei". Crienglish.com. 2006-06-26. Archived from the original on 2019-07-18. Retrieved 2011-06-09.
 59. "Lin Dan finally wins world title". The Star. 2006-09-25. Archived from the original on 2012-10-18. Retrieved 2011-06-09.
 60. "China men defend world team crown". BBC Sport. 2006-05-07. Retrieved 2011-06-09.