ರಿಯೊ ಫರ್ಡಿನ್ಯಾಂಡ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಿಯೊ ಫರ್ಡಿನ್ಯಾಂಡ್
Ferdinand playing for Manchester United
Personal information
Full name Rio Gavin Ferdinand
Date of birth (1978-11-07) ೭ ನವೆಂಬರ್ ೧೯೭೮ (ವಯಸ್ಸು ೪೫)
Place of birth Peckham, ಲಂಡನ್, England
Height 195cm
Playing position Centre back
Club information
Current club Manchester United
Number 5
Youth career
Eltham Town
1988–1990 Millwall[೧]
1990–1993 Queens Park Rangers
1993–1996 West Ham United
Senior career*
Years Team Apps (Gls)
1996–2000 West Ham United 127 (2)
1996Bournemouth (loan) 10 (0)
2000–2002 Leeds United 54 (2)
2002– Manchester United 224 (6)
National team
1997–2000 England U21 5 (0)
1997– England 78 (3)
 • Senior club appearances and goals counted for the domestic league only and correct as of 18:45, 24 October 2010 (UTC).

† Appearances (Goals).

‡ National team caps and goals correct as of 13:15, 30 May 2010 (UTC)

ರಿಯೊ ಗೆವಿನ್ ಫರ್ಡಿನ್ಯಾಂಡ್ (1978 , ನವೆಂಬರ್ 7ರಂದು ಜನನ)ಇಂಗ್ಲೀಷ್ ಫುಟ್ಬಾಲ್ ಆಟಗಾರ. ಅವನು ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪರವಾಗಿ ಸೆಂಟರ್ ಬ್ಯಾಕ್‌ ನಲ್ಲಿ ಆಡುತ್ತಾನೆ. 2010ರಲ್ಲಿ ಅವನು ಇಂಗ್ಲೆಂಡ್ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ನಾಯಕನಾಗಿ ಆಯ್ಕೆಯಾದ. ಅವನು ಒಟ್ಟು ಇಂಗ್ಲೆಂಡ್ ಪರವಾಗಿ 78 ಫುಟ್ಬಾಲ್ ಕ್ಯಾಪ್‌(ಆಟಗಾರನಿಗೆ ನೀಡುವ ವಿಶಿಷ್ಟ ಟೋಪಿ) ಸಂಪಾದಿಸಿದನು ಹಾಗೂ ಮೂರು FIFA ವಿಶ್ವಕಪ್ ತಂಡಗಳ ಆಟಗಾರನಾಗಿದ್ದ.

ಚೆಂಡಿನ ಮೇಲೆ ಹಿಡಿತ(ಸಮತೋಲನ)ಕ್ಕೆ ಹೆಸರಾದ ಫರ್ಡಿನ್ಯಾಂಡ್[೨] ವಿವಿಧ ಯುವ ತಂಡಗಳಿಗೆ ಆಡುವ ಮೂಲಕ ತನ್ನ ಪುಟ್ಬಾಲ್ ವೃತ್ತಿಯನ್ನು ಆರಂಭಿಸಿದ. ಅಂತಿಮವಾಗಿ ವೆಸ್ಟ್‌ಹ್ಯಾಂ ಯುನೈಟೆಡ್‌ಫುಟ್ಬಾಲ್ ಕ್ಲಬ್‌ನಲ್ಲಿ ತಳೂವೂರಿ, ಯುವ ದರ್ಜೆಗಳ ಮೂಲಕ ಪ್ರಗತಿ ಹೊಂದಿದ ಮತ್ತು 1996ರಲ್ಲಿ ವೃತ್ತಿಪರ ಪ್ರೀಮಿಯರ್ ಲೀಗ್‌ಗೆ ಚೊಚ್ಚಲ ಪ್ರವೇಶ ಪಡೆದ.

ಅವನು ನಂತರದ ಕ್ರೀಡಾಋತುವಿನಲ್ಲಿ 'ಹ್ಯಾಮರ್ ಆಫ್ ದಿ ಇಯರ್ ಅವಾರ್ಡ್' ಜಯಿಸುವ ಮೂಲಕ ಅಭಿಮಾನಿಗಳ ನೆಚ್ಚಿನ ಆಟಗಾರನೆನಿಸಿದ. ಅವನು ತನ್ನ ಪ್ರಥಮ ಹಿರಿಯ ಅಂತಾರಾಷ್ಟ್ರೀಯ ಕ್ಯಾಪನ್ನು 1997ರಲ್ಲಿ ಕೆಮರೂನ್ ವಿರುದ್ಧ ಪಂದ್ಯದಲ್ಲಿ ಸಂಪಾದಿಸಿದ. ಆ ಸಂದರ್ಭದಲ್ಲಿ ಇಂಗ್ಲೆಂಡ್ ಪರ ಆಡಿದ ಅತೀ ಕಿರಿಯ ರಕ್ಷಣೆ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ. ಅವನ ಸಾಧನೆಗಳು ಮತ್ತು ಫುಟ್ಬಾಲ್ ಆಡುವ ಸಾಮರ್ಥ್ಯವು ಲೀಡ್ಸ್ ಯುನೈಟೆಡ್ ತಂಡವನ್ನು ಆಕರ್ಷಿಸಿತು ಹಾಗೂ ದಾಖಲೆ ಮುರಿದ ಶುಲ್ಕವಾದ £18ದಶಲಕ್ಷಕ್ಕೆ ಕ್ಲಬ್‌ಗೆ ವರ್ಗಾವಣೆಗೊಂಡ. ಅವನು ಕ್ಲಬ್‌ನಲ್ಲಿ ಎರಡು ಋತುಗಳನ್ನು ಕಳೆದ ಹಾಗು 2001ರಲ್ಲಿ ತಂಡದ ನಾಯಕನಾದ.

2002 ಜುಲೈನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಸುಮಾರು £30 ದಶಲಕ್ಷ ಮೊತ್ತಕ್ಕೆ ಸೇರಿ, ವರ್ಗಾವಣೆ ಶುಲ್ಕದ ದಾಖಲೆಯನ್ನು ಮತ್ತೊಮ್ಮೆ ಮುರಿದ. ಅವನು ಪ್ರೀಮಿಯರ್ ಲೀಗ್‌ ಗೆಲ್ಲುವ ಮೂಲಕ ಕ್ಲಬ್‌ನ ಯಶಸ್ವಿ ಪ್ರಥಮ ಕ್ರೀಡಾಋತುವನ್ನು ಮುಗಿಸಿದ ಹಾಗು ಇದು ಅವನ ಪ್ರಥಮ ಕ್ಲಬ್ ಗೌರವವಾಗಿತ್ತು.

ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದರಿಂದ ಫರ್ಡಿನ್ಯಾಂಡ್‌ಗೆ 8 ತಿಂಗಳ ಕಾಲ ಸ್ಪರ್ಧೆಯಿಂದ ನಿಷೇಧಿಸಲಾಯಿತು. ಇದು ಪ್ರೀಮಿಯರ್ ಲೀಗ್ ಕ್ರೀಡಾಋತುವಿನ ಅರ್ಧದಷ್ಟು ಅವಧಿ ಮತ್ತು ಯೂರೊ 2004 ಅಂತಾರಾಷ್ಟ್ರೀಯ ಸ್ಪರ್ಧೆ ತಪ್ಪಿಹೋಗಲು ಕಾರಣವಾಯಿತು. ವಾಪಸಾತಿ ನಂತರ,ಅವನು ಮ್ಯಾಂಚೆಸ್ಟರ್ ಯುನೈಟೆಡ್ ಪ್ರಥಮ ತಂಡದಲ್ಲಿ ಸ್ವತಃ ಬೇರೂರಿದ ಹಾಗು ನಾಲ್ಕು ವರ್ಷಗಳಲ್ಲಿ PFA ವರ್ಷದ ತಂಡದಲ್ಲಿ ಮೂರು ಬಾರಿ ಕಾಣಿಸಿಕೊಳ್ಳುವ ಮೂಲಕ ತನ್ನ ಸಾಧನೆಗಳಿಗೆ ಮೆಚ್ಚುಗೆಗಳನ್ನು ಗಳಿಸಿದ. 2006–07 ಕ್ರೀಡಾಋತು ವಿನಲ್ಲಿ ಇನ್ನೊಂದು ಪ್ರೀಮಿಯರ್ ಲೀಗ್ ಜಯದೊಂದಿಗೆ ಹಾಗು ಪ್ರೀಮಿಯರ್ ಲೀಗ್ ಮತ್ತು ನಂತರದ ವರ್ಷದಲ್ಲಿ UEFA ಚಾಂಪಿಯನ್ಸ್ ಲೀಗ್ ಡಬಲ್‌ನೊಂದಿಗೆ ಹೆಚ್ಚು ಕ್ಲಬ್ ಯಶಸ್ಸುಗಳು ಹಿಂಬಾಲಿಸಿದವು.

ಫರ್ಡಿನ್ಯಾಂಡ್‌ಗೆ ಇಬ್ಬರು ಗಂಡುಮಕ್ಕಳಿದ್ದಾರೆ. ಲೊರೆಂಜ್ ಮತ್ತು ಟಾಟೆ, ಅವನ ಪತ್ನಿ ರೆಬೆಕಾ ಎಲಿಸನ್. ಅವನು ಫುಟ್ಬಾಲ್ ಕುಟುಂಬದಲ್ಲಿ ಹುಟ್ಟಿದ,ಸೋದರ ಆಂಟನ್ ಫರ್ಡಿನ್ಯಾಂಡ್ ಕೂಡ ಸೆಂಟರ್ ಬ್ಯಾಕ್ ಆಟಗಾರ ಮತ್ತು ಇಂಗ್ಲೆಂಡ್ ಅಂತಾರಾಷ್ಟ್ರೀಯ ಮಾಜಿ ಆಟಗಾರ ಲೆಸ್ ಫರ್ಡಿನ್ಯಾಂಡ್ ಅವನ ಸೋದರಸಂಬಂಧಿ. ಮೈದಾನದ ಹೊರಗೆ ಅಲ್ಪಕಾಲ ಉಳಿದಿದ್ದ ಲೇವಡಿ ಮಾಡುವ ಸರಣಿ ರಿಯೊ`ಸ್ ವರ್ಲ್ಡ್ ಕಪ್ ವೈಂಡ್-ಅಪ್ಸ್ ಸೇರಿದಂತೆ ಚಲನಚಿತ್ರ, ಸಂಗೀತ ಮತ್ತು ಟೆಲಿವಿಷನ್‌ಗಳಲ್ಲಿ ಫರ್ಡಿನ್ಯಾಂಡ್ ಭಾಗಿಯಾಗಿದ್ದ.

ಆರಂಭಿಕ ಜೀವನ[ಬದಲಾಯಿಸಿ]

ಬೆಳೆದ ವರ್ಷಗಳು ಮತ್ತು ಶಿಕ್ಷಣ[ಬದಲಾಯಿಸಿ]

ರಿಯೊ ಗ್ಯಾವಿನ್ ಫರ್ಡಿನ್ಯಾಂಡ್ ಲಂಡನ್ ಪೆಕ್ಯಾಮ್‌ನಲ್ಲಿ 1978ರ ನವೆಂಬರ್ 7ರಂದು ಜನಿಸಿದ. ಅವನು ಜ್ಯಾನಸ್ ಲ್ಯಾವೆಂಡರ್‌ ಮತ್ತು ಸೇಂಟ್ ಲೂಸಿಯನಕ್ಕೆ ಸೇರಿದ ಜ್ಯೂಲಿಯನ್ ಫರ್ಡಿನ್ಯಾಂಡ್ ಪುತ್ರ [೩][೪] ಫರ್ಡಿನ್ಯಾಂಡ್ ಪೆಕ್ಹಾಮ್‌ನ ಫ್ರಯರಿ ಎಸ್ಟೇಟ್‌ನಲ್ಲಿ ಜನಿಸಿದ ಹಾಗು ದೊಡ್ಡ ಕುಟುಂಬದ ಭಾಗವಾಗಿದ್ದ. ಕುಟುಂಬವನ್ನು ಪೋಷಿಸಲು ತಂದೆತಾಯಿಗಳಿಬ್ಬರೂ ಕೆಲಸ ಮಾಡಿದರು. ಅವನ ತಾಯಿ ಮಕ್ಕಳ ಪಾಲಕಿಯಾಗಿ ಮತ್ತು ತಂದೆ ದರ್ಜಿಯಾಗಿ ಕೆಲಸ ಮಾಡಿದರು. ಅವನ ತಂದೆತಾಯಿಗಳು ಎಂದೂ ವಿವಾಹವಾಗಿರಲಿಲ್ಲ ಹಾಗು ಅವನು 14 ವರ್ಷ ವಯಸ್ಸಿನ ಬಾಲಕನಾಗಿದ್ದಾಗ ತಂದೆತಾಯಿಗಳು ಪ್ರತ್ಯೇಕವಾದರು. ಆದಾಗ್ಯೂ,ಅವನ ತಂದೆ ನಿಕಟ ಸಾಮೀಪ್ಯ ಹೊಂದಿದ್ದು, ಸಮೀಪದ ಎಸ್ಟೇಟ್‌ಗೆ ಸ್ಥಳಾಂತರಗೊಂಡರು ಹಾಗು ಮಕ್ಕಳನ್ನು ಪುಟ್ಬಾಲ್ ತರಬೇತಿ ಮತ್ತು ಸ್ಥಳೀಯ ಪಾರ್ಕ್‌ಗಳಿಗೆ ಕರೆದುಕೊಂಡು ಹೋಗುವ ಮೂಲಕ ಮಕ್ಕಳ ಜೀವನದಲ್ಲಿ ಭಾಗಿಯಾಗಲು ಆಸಕ್ತಿ ತೋರಿಸಿದರು.[೩][೫] ಫರ್ಡಿನ್ಯಾಂಡ್ ಕ್ಯಾಮೆಲೆಟ್ ಪ್ರಾಥಮಿಕ ಶಾಲೆಗೆ ಸೇರಿದ ಹಾಗೂ ತನ್ನ ಹೀರೊಗಳ ಪಟ್ಟಿಯಲ್ಲಿ ಮೈಕ್ ಟೈಸನ್ ಮತ್ತು ಡೀಗೊ ಮರಡೋನಾ ಅವರನ್ನು ಸೇರಿಸಿ, ಉತ್ಸಾಹದ ಚಿಲುಮೆಯ ಬಾಲಕನಾಗಿದ್ದ.[೬]

ಅವನು ಉತ್ತಮ ಪಾಲನೆಯಲ್ಲಿ ಸಂತೋಷದ ಚಿಲುಮೆಯಾಗಿ ಬೆಳೆದ. ಆದರೆ ಬಡತನದಿಂದ ನೊಂದ ಲಂಡನ್ ಜಿಲ್ಲೆ ಪೆಕ್ಹಾಮ್‌ನಲ್ಲಿ ಸುಖಭೋಗವಿಲ್ಲದೇ ಜೀವನ ನಡೆಸುವುದು ಕಲಿಯಬೇಕಾಯಿತು. ಪೆಕ್ಹಾಮ್‌ನಲ್ಲಿ ಜನಸಂಖ್ಯೆಯ ಅರ್ಧದಷ್ಟು ಜನರು ಬಡವರು ಅಥವಾ ಬಡತನದ ಅಂಚಿನಲ್ಲಿದ್ದರು.[೭] ಅವನು ವಾಸಮಾಡುತ್ತಿದ್ದ ಪ್ರದೇಶದಲ್ಲಿ ಹಿಂಸಾತ್ಮಕ ಅಪರಾಧವು ಸಾಮಾನ್ಯವಾಗಿ ನಡೆಯುವ ಸಂಗತಿಯಾಗಿತ್ತು. ಆದರೆ ಅವನ ತಂದೆತಾಯಿಗಳು ಗೌರವಾನ್ವಿತ ಸ್ವಭಾವಗಳನ್ನು ಬೆಳೆಸಿದರು ಹಾಗು ಫರ್ಡಿನ್ಯಾಂಡ್ ನೆರೆಯ ಕರಾಳಮುಖಗಳಿಂದ ಹೆಚ್ಚಾಗಿ ದೂರವೇ ಉಳಿದ.[೫] ಶಾಲೆಯಲ್ಲಿ ಲೆಕ್ಕದಲ್ಲಿ ಗಮನಹರಿಸಿದ ಹಾಗೂ ಶಾಲೆಯ ನಿರ್ಮಾಣದ ಬಗ್ಲಿ ಮಾಲೋನ್‌ನಲ್ಲಿ ಪ್ರೇಕ್ಷಕರ ಎದುರು ಪ್ರದರ್ಶನ ನೀಡುವ ಅವಕಾಶದಿಂದ ಪುಳಕಿತನಾದ. ಮೈದಾನದಲ್ಲಿ ತನ್ನ ಕೌಶಲ್ಯದಿಂದ ತನ್ನ ಸಹಪಾಠಿಗಳನ್ನು ಮೆಚ್ಚಿಸಿದ. ಸತತವಾಗಿ ಫುಟ್ಬಾಲ್ ಆಡುವ ಮೂಲಕ, ವೃತ್ತಿಪರ ಆಟಗಾರನಾಗಿ ಮತ್ತು ಹೊಸ ಸ್ಥಳಗಳನ್ನು ಕಾಣುವ ಕನಸನ್ನು ಕಂಡ.[೫]

"ಬಾಲಕನಾಗಿ ನಾನು ಭಿನ್ನವಾಗಿ ಏನನ್ನಾದರೂ ಮಾಡಬೇಕೆಂದು ಬಯಸಿದೆ. ಫುಟ್ಬಾಲ್ ಆಡುವಲ್ಲಿ ಕೂಡ ಮತ್ತು ಸಹಪಾಠಿಗಳೊಂದಿಗೆ ತಿರುಗಾಡುವುದರಿಂದ ಕೂಡ ಸುಲಭವಾಗಿ ಬೇಸರಗೊಳ್ಳುತ್ತಿದ್ದೆ. ಆದ್ದರಿಂದ ಮನೆಯಿಂದ ದೂರ ಪ್ರಯಾಣಿಸುವುದು, ಹೊಸ ಜನರನ್ನು ಭೇಟಿಯಾಗುವುದು.... ನನಗೆ ಖುಷಿ ಉಂಟುಮಾಡಿತು."[೫]

ಅವನು ಬ್ಲಾಕ್‌ಹೆತ್ ಬ್ಲೂಕೋಟ್ಸ್ ಪ್ರೌಢಶಾಲೆಗೆ ಸೇರಿದ. ಅವನ ಮನೆಯಿಂದ ಸ್ವಲ್ಪಮಟ್ಟಿಗೆ ದೂರದಲ್ಲಿದ್ದ ಶಾಲೆಯಲ್ಲಿ ಹೊಸ ಸ್ನೇಹಿತರನ್ನು ಭೇಟಿಯಾಗಿ ಭದ್ರವಾಗಿ ನೆಲೆನಿಂತ, ಇದರಿಂದ ಅವನ ಆತ್ಮವಿಶ್ವಾಸ ಹೆಚ್ಚಿದ ಭಾವನೆ ಉಂಟಾಯಿತು.[೩] ತನ್ನ ಸಹಪಾಠಿ ಸ್ಟೀಫನ್ ಲಾರೆನ್ಸ್ ಸಾವಿನಿಂದ ಅವನ ಎರಡನೇ ವರ್ಷ ಹಾಳಾಯಿತು. ಈ ವಿದ್ಯಮಾನವು ಸದಾಇರುವ ಹಿಂಸಾಚಾರದ ಬೆದರಿಕೆಯನ್ನು ಪ್ರದರ್ಶಿಸಿತು.[೬] ಫರ್ಡಿನ್ಯಾಂಡ್ ದೈಹಿಕ ಅಭಿವ್ಯಕ್ತಿಯನ್ನು ಇಷ್ಟಪಡುತ್ತಿದ್ದ. ಫುಟ್ಬಾಲ್‌ ಮತ್ತು ಜಿಮ್ನಾಸ್ಟಿಕ್ ತರಗತಿಗಳು ಮಾತ್ರವಲ್ಲದೇ ನಾಟಕ, ರಂಗಮಂದಿರ ಮತ್ತು ಬ್ಯಾಲೆಟ್‌ ತರಗತಿಗಳಲ್ಲೂ ಭಾಗಿಯಾದ.[೫] ಅವನೊಬ್ಬ ಸಮರ್ಥ ಬಾಲಕನಾಗಿದ್ದ,10ನೇ ವಯಸ್ಸಿನಲ್ಲಿ ಕ್ವೀನ್ ಪಾರ್ಕ್ ರೇಂಜರ್ಸ್ F.C. ಅಕ್ಯಾಡೆಮಿಯ ತರಬೇತಿ ಪಡೆಯಲು ಆಹ್ವಾನಿಸಲಾಯಿತು. 11ನೇ ವರ್ಷದಲ್ಲಿ ಲಂಡನ್‌ನ ಸೆಂಟ್ರಲ್ ಸ್ಕೂಲ್ ಆಫ್ ಬ್ಯಾಲೆಟ್‌ನಲ್ಲಿ ಭಾಗವಹಿಸಲು ಅವನು ವಿದ್ಯಾರ್ಥಿವೇತನ ಗೆದ್ದುಕೊಂಡ.[೩] ನಾಲ್ಕುವರ್ಷಗಳವರೆಗೆ ವಾರಕ್ಕೆ ನಾಲ್ಕು ದಿನಗಳು ನಗರ ಕೇಂದ್ರಕ್ಕೆ ಪ್ರವಾಸ ಮಾಡುವ ಮೂಲಕ ಬ್ಯಾಲೆಟ್ ತರಗತಿಗಳಿಗೆ ಅವನು ಅತ್ಯಾಶೆಯಿಂದ ಹಾಜರಾದ. ಆದಾಗ್ಯೂ,ಪಾಠಗಳು ಅವನ ಸಮಚಿತ್ತತೆಯನ್ನು ಸುಧಾರಿಸಿದರೂ,ಅವನು ನಿಜವಾಗಲೂ ಇಷ್ಟಪಟ್ಟಿದ್ದು ವೃತ್ತಿಪರ ಪುಟ್ಬಾಲ್ ಆಟ.[೫]

ಯುವ ತಂಡದಲ್ಲಿ ವೃತ್ತಿಜೀವನ[ಬದಲಾಯಿಸಿ]

ಫರ್ಡಿನ್ಯಾಂಡ್'ರ ಮೇಲ್ಮಟ್ಟದ ಫುಟ್ಬಾಲ್ ಆಡುವ ಸಾಮರ್ಥ್ಯಗಳು ಬಾಲಕನಾಗಿದ್ದಾಗಲೇ ಗೋಚರಿಸಿತು. ಅವನು 11 ವರ್ಷದವನಿದ್ದಾಗ,ಯುವ ಕೋಚ್ ಡೇವಿಡ್ ಗುಡ್ವಿನ್ ಪ್ರತಿಕ್ರಿಯಿಸುತ್ತಾ, "ನಾನು ನಿನ್ನನ್ನು ಪೀಲೆ ಎಂದು ಕರೆಯಲು ಬಯಸುತ್ತೇನೆ, ಮಗನೇ, ನೀನು ಆಡುವ ರೀತಿ ನನಗೆ ಇಷ್ಟವಾಗಿದೆ." ಎಂದು ಹೇಳಿದ್ದಾನೆ[೫] ಫರ್ಡಿನ್ಯಾಂಡ್ ಯುವ ತಂಡಗಳಲ್ಲಿ ನಿಯಮಿತವಾಗಿ ಆಡಲಾರಂಭಿಸಿದ ಹಾಗು ಎಲ್ತಾಮ್ ಟೌನ್‌ನಲ್ಲಿ ಅವನು ದಾಳಿಮಾಡುವ ಮಿಡ್‌ಫೀಲ್ಡರ್ ಸ್ಥಾನದಲ್ಲಿ ಆಡಿದ. ಆದರೆ ಅಭ್ಯಾಸ ತಂಡವು ಯುವ ಆಟಗಾರನಿಗೆ ಬದಲಿಗೆ ಸೆಂಟರ್ ಬ್ಯಾಕ್‌ನಲ್ಲಿ ಆಡುವ ಸಾಮರ್ಥ್ಯವಿದೆ ಎಂದು ಕಂಡುಕೊಂಡಿತು. ತಂಡಗಳು ಯುವ ಫುಟ್ಬಾಲ್ ಆಟಗಾರನ ಸೇವೆಗಳಿಗಾಗಿ ಪೈಪೋಟಿ ನಡೆಸಿದರು. ಯುವಕನಾಗಿದ್ದಾಗ ಅವನು ಚಾರ್ಲ್‌ಟನ್ ಅಥ್ಲೆಟಿಕ್ , ಚೆಲ್ಸಿಯ, ಮಿಲ್‌ವಾಲ್ ಮತ್ತು ಕ್ವೀನ್ ಪಾರ್ಕ್ ರೇಂಜರ್ಸ್ ಜತೆ ತರಬೇತಿ ಪಡೆದ. ಫರ್ಡಿನ್ಯಾಂಡ್ ಸದಾ ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಆಸಕ್ತಿ ಹೊಂದಿದ್ದ. ಅವನು ಉತ್ತರದ ಮಿಡಲ್‌ಬ್ರೊನ ತರಬೇತಿ ಮೈದಾನಕ್ಕೆ ಕೂಡ ಪ್ರಯಾಣಿಸಿ, ಅಲ್ಲಿ ಕೇವಲ ಉಳಿಯುವುದಕ್ಕಾಗಿ ತನ್ನ ಶಾಲೆಯ ರಜಾದಿನಗಳಲ್ಲಿ ಬಹುಮಟ್ಟಿನ ಸಮಯವನ್ನು ಕೂತು ಮಲಗುವ ಕೋಣೆ(ಬೆಡ್‌ಸಿಟ್)ಯೊಂದರಲ್ಲಿ ಕಳೆದ.[೫]

ಆದಾಗ್ಯೂ, ಲಂಡನ್ ತಂಡ ವೆಸ್ಟ್ ಹ್ಯಾಮ್ ಯುನೈಟೆಡ್ ಅವನ ಫುಟ್ಬಾಲ್ ಆಡುವ ನೆಲೆಯಾಗಿದ್ದು,ಅವರ ಯುವ ವ್ಯವಸ್ಥೆಯನ್ನು ಅವನು 1992ರಲ್ಲಿ ಸೇರಿದನು.[೩] ಅವನು ತನ್ನ ಪ್ರಥಮ ಯುವ ತರಬೇತಿ ಯೋಜನೆ ಒಪ್ಪಂದಕ್ಕೆ 1994ರ ಜನವರಿಯಲ್ಲಿ ಸಹಿಹಾಕಿದ ಹಾಗು ಅಕಾಡೆಮಿಯಲ್ಲಿ ಫ್ರಾಂಕ್ ಲಾಂಪಾರ್ಡ್ ಮುಂತಾದ ಆಟಗಾರರ ಜತೆ ಆಟವಾಡಿದ.[೫][೮] ಫರ್ಡಿನ್ಯಾಂಡ್‌ಗೆ ಕ್ಲಬ್ ಮಟ್ಟದಲ್ಲಿ ಸಂಗತಿಗಳು ಭಾವಪರವಶಗೊಳಿಸಿದವು. 16ನೇ ವರ್ಷ ವಯಸ್ಸಿನಲ್ಲಿ ಅವನು ಇಂಗ್ಲೆಂಡ್ ಯುವ ತಂಡಕ್ಕೆ ಸೇರಿ, ಅವನ ವಯೋಮಾನದ ಗುಂಪಿನ UEFA ಐರೋಪ್ಯ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ. ಇದರಿಂದ ಅಂತಾರಾಷ್ಟ್ರೀಯ ಸ್ಪರ್ಧೆಯ ಪ್ರಥಮ ಅನುಭವ ಅವನಿಗಾಯಿತು.[೫]

ಹಿರಿಯ ವೃತ್ತಿಜೀವನ[ಬದಲಾಯಿಸಿ]

ವೆಸ್ಟ್ ಹ್ಯಾಮ್ ಯುನೈಟೆಡ್[ಬದಲಾಯಿಸಿ]

ಮೂಲತಃ ಫ್ರಾಂಕ್ ಲ್ಯಾಂಪಾರ್ಡ್ Sr.ಶೋಧವಾದ ಫರ್ಡಿನ್ಯಾಂಡ್ ಯುವ ತಂಡದ ದರ್ಜೆಗಳ ಮೂಲಕ ಪ್ರಗತಿ ಸಾಧಿಸಿ, ವೃತ್ತಿಪರ ಕರಾರನ್ನು ಸಂಪಾದಿಸಿದ ಮತ್ತು ಈ ಪ್ರಕ್ರಿಯೆಯಲ್ಲಿ ಪ್ರಥಮ ತಂಡದಲ್ಲಿ ಸ್ಥಾನಗಳಿಸಿದ.[೫] ಕ್ರೀಡಾಋತುವಿನ ಹ್ಯಾಮರ್ಸ್ ಕೊನೆಯ ಆಟದಲ್ಲಿ ಟೋನಿ ಕಾಟ್ಟೀ ಅವರಿಗೆ ಬದಲಿಯಾಗಿ ಬರುವ ಮೂಲಕ 1996ರ ಮೇ 5ರಂದು ಫರ್ಡಿನ್ಯಾಂಡ್ ಹಿರಿಯ ತಂಡಕ್ಕೆ ಚೊಚ್ಚಲ ಪ್ರವೇಶ ಮಾಡಿದ. ಶೆಫೀಲ್ಡ್ ವೆಡ್‌ನೆಸ್‌ಡೆ ವಿರುದ್ಧ ನಡೆದ ಈ ಪಂದ್ಯವು 1 -1 ಡ್ರಾನಲ್ಲಿ ಮುಕ್ತಾಯವಾಯಿತು.[೫][೯] 1997–98 ಕ್ರೀಡಾಋತುವಿನಲ್ಲಿ, ಫರ್ಡಿನ್ಯಾಂಡ್ 19ರ ಕಿರಿಯ ವಯಸ್ಸಿನಲ್ಲೇ ಹ್ಯಾಮರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದುಕೊಂಡ.[೧೦]

ಲೀಡ್ಸ್ ಯುನೈಟೆಡ್[ಬದಲಾಯಿಸಿ]

ಫರ್ಡಿನ್ಯಾಂಡ್ FA ಪ್ರೀಮಿಯರ್ ಲೀಗ್ ಫುಟ್ಬಾಲ್ ಕ್ಲಬ್ ಲೀಡ್ಸ್ ಯುನೈಟೆಡ್‌ನ್ನು ನವೆಂಬರ್ 2000ರಲ್ಲಿ £18 ದಶಲಕ್ಷಕ್ಕೆ ಸೇರಿದ, ಅದು ಆಗಿನ ಬ್ರಿಟಿಷ್ ವರ್ಗಾವಣೆ ದಾಖಲೆಯಾಗಿತ್ತು ಮತ್ತು ವಿಶ್ವದ ಅತೀ ದುಬಾರಿ ರಕ್ಷಣೆ ಆಟಗಾರ ಎಂಬ ಹಿರಿಮೆಗೆ ಪಾತ್ರನಾದ. ಅವರ ಚೊಚ್ಚಲ ಪ್ರವೇಶದಲ್ಲಿ ಲೈಸೆಸ್ಟರ್ ಸಿಟಿಯಲ್ಲಿ 3 -0ಸೋಲಿನ ಆರಂಭದೊಂದಿಗೆ, ಎಲ್ಯಾಂಡ್ ರೋಡ್‌ನಲ್ಲಿ ಅವನ ವೃತ್ತಿಜೀವನ ಅಹಿತಕರ ಪ್ರಾರಂಭ ಕಂಡರೂ, ಫರ್ಡಿನ್ಯಾಂಡ್ ಸ್ಥಿರವಾಗಿ ನೆಲೆನಿಂತ ಮತ್ತು ಲೀಡ್ಸ್ ತಂಡದ ಅವಿಭಾಜ್ಯ ಅಂಗವಾದ. UEFA ಚಾಂಪಿಯನ್ಸ್ ಲೀಗ್ ಸೆಮಿ ಫೈನಲ್ ಹಂತ ತಲುಪಿದ ಲೀಡ್ಸ್ ತಂಡದಲ್ಲಿ ಸ್ಪೇನ್‌ನ ಡಿಪೋರ್ಟಿವೊ ಲಾ ಕೊರುನಾ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಹೆಡರ್(ತಲೆಯಿಂದ ಚೆಂಡು ಹೊಡೆಯವುದು)ಮೂಲಕ ಸ್ಕೋರು ಗಳಿಸಿದ.[೧೧] ಯಾರ್ಕ್‌ಶೈರ್‌ನಲ್ಲಿ ಆಡಿದ ಸಂದರ್ಭದಲ್ಲಿ ಇತರೆ ಪ್ರಮುಖಾಂಶಗಳು ಲಿವರ್‌ಪೂಲ್ ವಿರುದ್ಧ ಆನ್‌ಫೀಲ್ಡ್‌ನಲ್ಲಿ ಹೊಡೆದ ಗೋಲುಗಳು[೧೨] ಮತ್ತು ಅಪ್ಟಾನ್ ಪಾರ್ಕ್‌ನಲ್ಲಿ ಸ್ಕೋರಿಂಗ್ ರಿಟರ್ನ್(ಚೆಂಡನ್ನು ಹಿಂದಕ್ಕೆ ಒಯ್ದು ಸ್ಕೋರು ಮಾಡುವುದು).[೧೩]

ನಂತರದ ಕ್ರೀಡಾಋತುವಿನಲ್ಲಿ, 2001 ಆಗಸ್ಟ್‌ನಲ್ಲಿ ಅವನು ಲುಕಾಸ್ ರೆಡೆಬೆ ಅವರಿಗೆ ಬದಲಿಯಾಗಿ ಕ್ಲಬ್ ನಾಯಕನಾದ ಹಾಗು ಎರಡನೇ ಅಭಿಯಾನವನ್ನು ಪರಿಣಾಮಕಾರಿಯಾಗಿ ಮುಗಿಸಿದ. ಮೇಲಿನ ನಾಲ್ಕನೇ ಸ್ಥಾನಕ್ಕೆ ಮುಟ್ಟಿ ಸ್ಪರ್ಧೆಗೆ ಅರ್ಹತೆ ಪಡೆಯಲು ಯುನೈಟೆಡ್ ವಿಫಲವಾದರೂ, ಹಿಂದಿನ ಋತುವಿನಲ್ಲಿ ಪ್ರಮುಖವಾಗಿ ಗಮನಸೆಳೆಯಿತು. 2002 FIFA ವಿಶ್ವ ಕಪ್‌ಸಂದರ್ಭದಲ್ಲಿ ಕ್ಲಬ್ ತೀವ್ರ ಹಣಕಾಸಿನ ಬಿಕ್ಕಟ್ಟಿನಲ್ಲಿದೆ ಹಾಗೂ ಹೊಸ ಮ್ಯಾನೇಜರ್‌ ಟೆರಿ ವೆನೇಬಲ್ಸ್‌‌ನಿಗೆ ಅವರ ಕಡೆಯ ಪ್ರಸಿದ್ಧ ರಕ್ಷಣೆ ಆಟಗಾರನನ್ನು ಗಣನೀಯ ನಗದು ಹಣದ ಮೊತ್ತಕ್ಕೆ ಕೈಬಿಡುವಂತೆ ಒತ್ತಾಯಿಸಲಾಗಿದೆ ಎಂದು ವದಂತಿಗಳು ಹಬ್ಬಲಾರಂಭಿಸಿದವು. ಫರ್ಡಿನ್ಯಾಂಡ್‌ ಇಂಗ್ಲೆಂಡ್ ಪರ ವಿಶ್ವಕಪ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ ನಂತರ, ಲೀಡ್ಸ್ ತನ್ನ ಗಂಡಾಂತರದ ಹಣಕಾಸಿನ ಸ್ಥಿತಿ ಹಿನ್ನೆಲೆಯಲ್ಲಿ £29.1 ದಶಲಕ್ಷ ಬಿಡ್(ಘೋಷಿತ ಬೆಲೆಗೆ ಕೊಟ್ಟ ಒಪ್ಪಿಗೆ) ಹಣ ಸ್ವೀಕರಿಸಲು ಒಪ್ಪಿಕೊಂಡಿತು.

ಮ್ಯಾಂಚೆಸ್ಟರ್ ಯುನೈಟೆಡ್[ಬದಲಾಯಿಸಿ]

ಫರ್ಡಿನ್ಯಾಂಡ್ ಮ್ಯಾಂಚೆಸ್ಟರ್ ಯುನೈಟೆಡ್ ಶರ್ಟ್‌(ಅಂಗಿ)ನಲ್ಲಿ.

2002ರ ಜುಲೈ 22ರಂದು ಫರ್ಡಿನ್ಯಾಂಡ್ ಸಹ ಪ್ರೀಮಿಯರ್ ಲೀಗ್ ತಂಡವಾದ ಮ್ಯಾಂಚೆಸ್ಟರ್ ಯುನೈಟೆಡ್ಗೆ 5 ವರ್ಷಗಳ ಒಪ್ಪಂದದ ಮೇಲೆ ಸೇರಿಕೊಂಡ. ಇದರಿಂದ ಫುಟ್ಬಾಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬ್ರಿಟಿಷ್ ಆಟಗಾರನೆನಿಸಿದ ಹಾಗು ಪುನಃ ವಿಶ್ವದ ಅತ್ಯಂತ ದುಬಾರಿ ರಕ್ಷಣೆ ಆಟಗಾರನಾದ(ಈ ಬಿರುದನ್ನು 2001ರಲ್ಲಿ ಅವನು ಲಿಲಿಯಾನ್ ಥುರಮ್‌ಗೆ ಕಳೆದುಕೊಂಡ). ಶುಲ್ಕವು £20 ದಶಲಕ್ಷದಲ್ಲಿ ಮೂಲ ಅಂಶವನ್ನು ಒಳಗೊಂಡಿತ್ತು ಹಾಗು ಕೆಲವು ಷರತ್ತಿನ ಅಂಶಗಳು ತಾವು ಅವನನ್ನು £30 ದಶಲಕ್ಷಕ್ಕಿಂತ ಹೆಚ್ಚಿನ ಹಣಕ್ಕೆ ಮಾರುತ್ತಿದ್ದೇವೆ ಎಂದು ಅಭಿಮಾನಿಗಳಿಗೆ ಹೇಳಲು ಅವಕಾಶ ಒದಗಿಸಿತು.

ಲೀಡ್ಸ್ ಯುನೈಟೆಡ್ ನಂತರ ಎಲ್ಲ ಆಕಸ್ಮಿಕ ಅಂಶಗಳಿಗೆ ಬದಲಾಗಿ, ತಮ್ಮ ಆರ್ಥಿಕ ಬಿಕ್ಕಟ್ಟಿನಿಂದ ಹಣಕ್ಕಾಗಿ ಹತಾಶರಾಗಿದ್ದರಿಂದ ಏಕ ಸಂದಾಯವನ್ನು ಪಡೆಯಿತು. ಮ್ಯಾಂಚೆಸ್ಟರ್ ಯುನೈಟೆಡ್‌ನಲ್ಲಿ ಫರ್ಡಿನ್ಯಾಂಡ್ ಗುತ್ತಿಗೆಯ ಅಂತಿಮ ಮೌಲ್ಯವು £33 ದಶಲಕ್ಷಗಳಾಗಿತ್ತು.[೧೪] ಇದರಲ್ಲಿ ಏಜಂಟರ ಶುಲ್ಕಗಳು ಸೇರಿದ್ದವು ಹಾಗು ಲೀಡ್ಸ್ £30ದಶಲಕ್ಷಕ್ಕಿಂತ ಸ್ವಲ್ಪ ಕಡಿಮೆ ಮೊತ್ತವನ್ನು ಸ್ವೀಕರಿಸಿತು. ಮ್ಯಾಂಚೆಸ್ಟರ್ ಯುನೈಟೆಡ್ ವೃತ್ತಿಜೀವನದಲ್ಲಿ ಫರ್ಡಿನ್ಯಾಂಡ್ ಆಟದಲ್ಲಿ ಲಯ ಕಂಡುಕೊಳ್ಳುವಲ್ಲಿ ಕೊರತೆ ಅನುಭವಿಸಿದ. ಇದು ನಿರ್ದಿಷ್ಟವಾಗಿ ಅವನು ಚಾಂಪಿಯನ್ಸ್ ಲೀಗ್‌ನಲ್ಲಿ ರಿಯಲ್ ಮ್ಯಾಡ್ರಿಡ್ ವಿರುದ್ಧದ ಸಾಧನೆ ಹಾಗು ಎಲ್ಲಾಂಡ್ ರೋಡ್‌ನಲ್ಲಿ ಅವನ ಮುಂಚಿನ ಕ್ಲಬ್ ಲೀಡ್ಸ್ ಯುನೈಟೆಡ್ ವಿರುದ್ಧ 1–0 ಸೋಲಿನಿಂದ ಇದು ಸಾಬೀತಾಯಿತು.

2003ರಲ್ಲಿ ಅವನು ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಹಾಜರಾಗಲು ವಿಫಲನಾದ.ತಾನು ಮನೆಗಳನ್ನು ಸ್ಥಳಾಂತರಿಸುವಲ್ಲಿ ಮುಳುಗಿದ್ದೆ ಮತ್ತು ಬದಲಿಗೆ ಶಾಪಿಂಗ್‌ಗೆ ಹೋಗಿದ್ದಾಗಿ ಸಮಜಾಯಿಷಿ ನೀಡಿದ. FA ಶಿಸ್ತು ಸಮಿತಿಅಧ್ಯಕ್ಷರಾಗಿದ್ದ ಬ್ಯಾರಿ ಬ್ರೈಟ್ 2004 ಜನವರಿಯಿಂದ ಕ್ಲಬ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ 8 ತಿಂಗಳ ನಿಷೇಧ ಮತ್ತು £50,000 ದಂಡ ವಿಧಿಸಿದರು. ಇದರ ಅರ್ಥವೇನೆಂದರೆ ಅವನು ಲೀಗ್‌ನ ಉಳಿದಕ್ರೀಡಾಋತು ಹಾಗು ಯೂರೊ 2004ಸೇರಿದಂತೆ ಮುಂದಿನ ಕೆಲವು ಆಟಗಳು ತಪ್ಪಿಹೋದವು.[೧೫] ಮ್ಯಾಂಚೆಸ್ಟರ್ ಯುನೈಟೆಡ್ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತು ಹಾಗೂ ಮ್ಯಾಂಚೆಸ್ಟರ್ ಸಿಟಿ ಆಟಗಾರ ಕ್ರಿಶ್ಚಿಯನ್ ನೆಗೋಯಿ ಪ್ರಕರಣಕ್ಕೆ ಸಮಾನಾಂತರವಾಗಿ ತೀರ್ಪು ನೀಡುವಂತೆ ಕೋರಿತು. ಕ್ರಿಶ್ಚಿಯನ್ ನೆಗೋಯಿ ಉದ್ದೀಪನ ಮದ್ದು ಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದಕ್ಕೆ £2,000 ದಂಡ ವಿಧಿಸಲಾಗಿತ್ತು. ಆದಾಗ್ಯೂ FIFA ಅಧ್ಯಕ್ಷ ಸೆಪ್ ಬ್ಲಾಟರ್ ಎರಡೂ ಪ್ರಕರಣಗಳಲ್ಲಿ ವ್ಯತ್ಯಾಸ ಇರುವುದರಿಂದ ಅಂತಹ ಹೋಲಿಕೆಗಳು ಅಸೂಕ್ತ ಎಂದು ಹೇಳಿದರು. ನೆಗೋಯಿ ಸಂಚಾರದಟ್ಟಣೆಯಲ್ಲಿ ಸಿಕ್ಕಿಬಿದ್ದಿದ್ದನಾದರೂ ಉದ್ದೀಪನ ಮದ್ದು ಪರೀಕ್ಷೆಗೆ ಹಾಜರಾಗುವ ಇಚ್ಛೆ ಹೊಂದಿದ್ದ. ಆದರೆ ಫರ್ಡಿನ್ಯಾಂಡ್ ಉದ್ದೀಪನ ಮದ್ದು ಪರೀಕ್ಷೆಗೆ ಹಾಜರಾಗಲು ವೈಫಲ್ಯತೆ ಅಥವಾ ನಿರಾಕರಣೆ ಎಂದು ಆರೋಪಿಸಲಾಯಿತು.[೧೬] FA ಮತ್ತು FIFAಎರಡೂ ನಿಷೇಧವನ್ನು 12 ತಿಂಗಳ ಕಾಲ ಹೆಚ್ಚಿಸುವಂತೆ ಕೋರಿತು.(ಸಂಭವನೀಯ ಗರಿಷ್ಠ ಅವಧಿಯ ಅರ್ಧದಷ್ಟು).

ಅಂತಿಮವಾಗಿ ಮೂಲ ತೀರ್ಪನ್ನು ಎತ್ತಿಹಿಡಿಯಲಾಯಿತು.[೧೭]

ಗೋಲು ಹೊಡೆದ ನಂತರ ಫರ್ಡಿನ್ಯಾಂಡ್ ಕ್ರಿಸ್ಟಿಯಾನೊ ರೊನಾಲ್ಡೊ ಜತೆ ಸಂಭ್ರಮಿಸುತ್ತಿರುವುದು.

ಫರ್ಡಿನ್ಯಾಂಡ್ ತನ್ನ ಪ್ರಥಮ ಕ್ರೀಡಾಋತುವಿನಲ್ಲೇ ಮ್ಯಾಂಚೆಸ್ಟರ್ ಯುನೈಟೆಡ್ ಪರ ಪ್ರೀಮಿಯರ್ ಲೀಗ್ ಪ್ರಶಸ್ತಿಯಲ್ಲಿ ಜಯಗಳಿಸಿದ. ಅವನು 2006 ಲೀಗ್ ಕಪ್‌ನಲ್ಲಿ ವಿಜಯಿಗಳ ಪದಕ 2003 ಲೀಗ್ ಕಪ್‌ ಮತ್ತು 2005 FA ಕಪ್‌ನಲ್ಲಿ ರನ್ನರ್ಸ್-ಅಪ್ ಪದಕಗಳನ್ನು ಸ್ವೀಕರಿಸಿದ.

2005ರ ಡಿಸೆಂಬರ್ 14ರಂದು ವಿಗಾನ್ ಅಥ್ಲೆಟಿಕ್ ವಿರುದ್ಧ ಪಂದ್ಯದಲ್ಲಿ ಫರ್ಡಿನ್ಯಾಂಡ್ ಯುನೈಟೆಡ್ ಪರವಾಗಿ ತನ್ನ ಪ್ರಥಮ ಗೋಲನ್ನು ಗಳಿಸುವ ಮೂಲಕ ಯುನೈಟೆಡ್‌ಗೆ 4-೦ ಜಯ ಸಿಕ್ಕಿತು. ಓಲ್ಡ್ ಟ್ರಾಫರ್ಡ್‌ನಲ್ಲಿ ಮೂರು ವರ್ಷಗಳ ಕಾಲ ಕಳೆದ ನಂತರ ಅದು ಅವನ ಮೊದಲನೇ ಗೋಲಾಗಿತ್ತು.

ಅದರ ಹಿಂದೆಯೇ ಪ್ರಬಲವಾಗಿ ಹೆಡ್ ಮಾಡಿದ(ತಲೆಯಿಂದ ಹೊಡೆದ)ಗೋಲು ವೆಸ್ಟ್ ಬ್ರಾಮ್‌ವಿಕ್ ಆಲ್ಬಿಯನ್ ವಿರುದ್ಧ ದೊರಕಿತು. ನಂತರ ಲಿವರ್‌ಪೂಲ್ ವಿರುದ್ಧ ಓಲ್ಡ್ ಟ್ರಾಫರ್ಡ್‌ನಲ್ಲಿ ಕೊನೆಯ ನಿಮಿಷದ ಗೆಲುವಿನ ಗೋಲು ಗಳಿಸಿದ. ಅದು ಇಲ್ಲಿಯವರೆಗೆ ಅತ್ಯಂತ ಮುಖ್ಯ ಮ್ಯಾಂಚೆಸ್ಟರ್ ಯುನೈಟೆಡ್ ಗೋಲಾಗಿರಬಹುದು. 2006ರ ಅಕ್ಬೋಬರ್ 22ರ ಸಂಬಂಧಿಸಿದ ಆಟದ ದಿನ, ರಿಯೊ ಪುನಃ 2-0 ವಿಜಯದ ಪಂದ್ಯದಲ್ಲಿ ಗೋಲು ಗಳಿಸಿದ.

ಲೀಗ್‌ನಲ್ಲಿ ಪರಿಣಾಮಕಾರಿ ಮತ್ತು ಸ್ಥಿರ ಸಾಧನೆಗಳನ್ನು ನೀಡಿದ ಹಿನ್ನೆಲೆಯಲ್ಲಿ 2006–07 ನೇ PFA ಪ್ರೀಮಿಯರ್‌ಶಿಪ್ ಟೀಂ ಆಫ್ ದಿ ಸೀಸನ್‌ನಲ್ಲಿ ಅವನನ್ನು ಮ್ಯಾಂಚೆಸ್ಟರ್ ತಂಡದ 7 ಮಂದಿ ಸಹಆಟಗಾರರೊಂದಿಗೆ ಹೆಸರಿಸಲಾಯಿತು.[೧೮]

ಫರ್ಡಿನ್ಯಾಂಡ್ 2007–08 ಕ್ರೀಡಾಋತುವನ್ನು ಚೆನ್ನಾಗಿಯೇ ಆರಂಭಿಸಿದ. ಅವನು ಪ್ರೀಮಿಯರ್ ಲೀಗ್‌ನಲ್ಲಿ ಸತತವಾಗಿ 6ಬಾರಿ ಎದುರಾಳಿ ತಂಡಕ್ಕೆ ಗೋಲುಗಳನ್ನು ನೀಡದಿರಲು ಸಮರ್ಥವಾದ ಯುನೈಟೆಡ್ ರಕ್ಷಣಾ ತಂಡದ ಭಾಗವಾಗಿದ್ದ. ಆದರೆ 2007ರ ಅಕ್ಟೋಬರ್ 20ರಂದು ವಿಲ್ಲಾ ಪಾರ್ಕ್‌ನಲ್ಲಿ ಆಸ್ಟನ್ ವಿಲ್ಲಾಗೆ ಪೂರ್ವಾರ್ಧದಲ್ಲೇ ಗೋಲನ್ನು ಒಪ್ಪಿಸಿತು. ಈ ಆಟದ ಸಂದರ್ಭದಲ್ಲಿ ಫರ್ಡಿನ್ಯಾಂಡ್ ಕ್ರೀಡಾಋತುವಿನ ಪ್ರಥಮ ಗೋಲನ್ನು ಗಳಿಸಿದ.ಅದು ಆಟದಲ್ಲಿ ಯುನೈಟೆಡ್‌ನ ಮೂರನೇ ಗೋಲಾಗಿತ್ತು. ಎಡಪಾದದ ಹೊಡೆತದೊಂದಿಗೆ ವಿಲ್ಲಾ ರಕ್ಷಣೆ ಆಟಗಾರನೊಬ್ಬ ತೀವ್ರವಾಗಿ ಪಕ್ಕಕ್ಕೆ ವಾಲಿದ. ಮೂರು ದಿನಗಳ ನಂತರ,ಫರ್ಡಿನ್ಯಾಂಡ್ ಯುನೈಟೆಡ್ ಪರವಾಗಿ ಪ್ರಥಮ ಯುರೋಪಿಯನ್ ಗೋಲು ಗಳಿಸಿದ. ಸೊಗಸಾದ ಹೆಡಿಂಗ್(ತಲೆಯಿಂದ ಚೆಂಡಿನ ಹೊಡೆತ)ಮೂಲಕ ಡೈನಾಮೊ ಕೆವಿವ್ ವಿರುದ್ಧ ಸ್ಕೋರನ್ನು ಆರಂಭಿಸಿದ. ಯುನೈಟೆಡ್ ಆಟದಲ್ಲಿ ಪ್ರಾಬಲ್ಯ ಮೆರೆದು 4 -2ರಿಂದ ಗೆಲುವು ಗಳಿಸಿತು.

ಫರ್ಡಿನ್ಯಾಂಡ್ ಜುವೆಂಟಸ್ ವಿರುದ್ಧ ಪಂದ್ಯದಲ್ಲಿ ಓಲೋಫ್ ಮೆಲ್‌ಬರ್ಗ್ ಜತೆಯಲ್ಲಿರುವುದು.

2008 ಜನವರಿ 12ರಂದು ಫರ್ಡಿನ್ಯಾಂಡ್ ಓಲ್ಡ್ ಟ್ರಾಫರ್ಡ್‌ನಲ್ಲಿ ನ್ಯೂಕ್ಯಾಸಲ್ ಯುನೈಟೆಡ್ ವಿರುದ್ಧ 6 -೦ ಭರ್ಜರಿ ಗೆಲುವಿನಲ್ಲಿ ಅಪರೂಪದ ಪ್ರೀಮಿಯರ್ ಲೀಗ್ ಗೋಲನ್ನು ಗಳಿಸಿದ.

ಪೋರ್ಟ್ಸ್‌ಮೌತ್ ವಿರುದ್ಧ 2008 ಮಾರ್ಚ್8ರಂದು FA ಕಪ್‌ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಮೇಲುಗೈ ಪಡೆದಿತ್ತು.ಎಡ್ವಿನ್ ವ್ಯಾನ್‌ಡರ್ ಸಾರ್ ತೊಡೆಸಂದಿನ ಗಾಯದಿಂದಾಗಿ ಮೈದಾನದಿಂದ ತೆರಳಿದ ಬಳಿಕ ಹಾಗು ಬದಲಿ ಗೋಲುರಕ್ಷಕ ಟೋಮಾಸ್ ಕುಸಾಕ್‌ನನ್ನು ಪೆನಾಲ್ಟಿಯನ್ನು ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಕಳಿಸಿದ ಬಳಿಕ ಫರ್ಡಿನ್ಯಾಂಡ್ ಅಪರೂಪವಾಗಿ ಗೋಲುರಕ್ಷಕನಾಗಿ ಕಾಣಿಸಿಕೊಂಡ. ಸರಿಯಾದ ಕಡೆ ಜಿಗಿದರೂ ಕೂಡ, ಅವನು ಸುಲ್ಲಿ ಮುಂಟಾರಿಯ ಸ್ಟಾಟ್ ಕಿಕ್(ಪೆನಾಲ್ಟಿ ಹೊಡೆತ)ನ್ನು ತಪ್ಪಿಸಲು ವಿಫಲನಾದ. ಮ್ಯಾಂಚೆಸ್ಟರ್ ಯುನೈಟೆಡ್ FA ಕಪ್‌ನಿಂದ ನಿರ್ಗಮಿಸಿತು.[೧೯]

2008ರ ಏಪ್ರಿಲ್ 6ರಂದು ಮಿಡಲ್ಸ್‌ಬ್ರಾಗ್ ವಿರುದ್ಧ ಫರ್ಡಿನ್ಯಾಂಡ್ ಪಾದದ ಗಾಯದಿಂದಾಗಿ ಪಂದ್ಯದಿಂದ ಕುಂಟುತ್ತಾ ಹೊರನಡೆದ. ಅವನು 2008 ಏಪ್ರಿಲ್ 9ರಂದುUEFA ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್ ಎರಡನೇ ಹಂತದಲ್ಲಿ A.S. ರೋಮಾ ತಂಡವನ್ನು ಎದುರಿಸುವ ಬಗ್ಗೆ ಅನುಮಾನ ಮೂಡಿತ್ತು. ಅವನು ಪೂರ್ವಾರ್ಧದಲ್ಲಿ ಮೂರು ಹೊಲಿಗೆಗಳನ್ನು ಹಾಕಿಕೊಂಡರೂ 90 ನಿಮಿಷಗಳ ಪೂರ್ಣಾವಧಿ ಆಟವಾಡಿದ.[೨೦]

2008–09 ಚಾಂಪಿಯನ್ಸ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ನಾಯಕನಾಗಿ ಫರ್ಡಿನ್ಯಾಂಡ್

2008 ಏಪ್ರಿಲ್‌ನಂದು ಪ್ರೀಮಿಯರ್ ಲೀಗ್‌ನಲ್ಲಿ ಯುನೈಟೆಡ್ ಚೆಲ್ಸಿಯಾಗೆ 2 -1ರಿಂದ ಸೋಲನುಭವಿಸಿದ ನಂತರ,ಸೋಲಿನಿಂದ ಕೋಪಗೊಂಡ ಅವನು, ಚೆಲ್ಸಿಯ ಪರಿಚಾರಕರನ್ನು ದೂಷಿಸಿ,ಸುರಂಗದಲ್ಲಿದ್ದ ಗೋಡೆಯನ್ನು ಒದೆಯಲು ಯತ್ನಿಸುವಾಗ ಅದರ ಬದಲಿಗೆ ಮಹಿಳಾ ಪರಿಚಾರಿಕೆ ಟ್ರೇಸಿ ವ್ರೇಗೆ ಒದ್ದಿದ್ದ. ಫರ್ಡಿನ್ಯಾಂಡ್ ತಾನು ಪಾದಗಳಿಂದ ಕೇವಲ ಉಜ್ಜಿದ್ದಾಗಿ ಹೇಳಿಕೆ ನೀಡಿದ.[೨೧] ಫರ್ಡಿನ್ಯಾಂಡ್ ತಾನು ಕ್ಷಮೆ ಕೇಳಿದ್ದಾಗಿ ತಿಳಿಸಿ ಪರಿಚಾರಿಕೆಗೆ ಕೆಲವು ಹೂವುಗಳನ್ನು ಕಳಿಸಿದ. ಆದರೆ ವ್ರೇ ಅದಕ್ಕೆ ಅಸಮ್ಮತಿ ಸೂಚಿಸಿದಳು ಮತ್ತು ದಿ ಸನ್‌ ನಲ್ಲಿ ಫರ್ಡಿನ್ಯಾಂಡ್ ಪಾದಗಳಿಂದ ಉಜ್ಜಿದ್ದರಿಂದ ಉಂಟಾದ ದೊಡ್ಡ ತರಚಿದ ಗಾಯವನ್ನು ತೋರಿಸಿದಳು. ಫರ್ಡಿನ್ಯಾಂಡ್ ಕ್ಷಮೆ ಕೇಳಲಿಲ್ಲ ಅಥವಾ ಹೂವುಗಳನ್ನು ಕಳಿಸಲಿಲ್ಲ ಎಂದು ಅವಳ ಪತಿ ಕೂಡ ವಾದಿಸಿದರು.[೨೨]

2008ರ ಏಪ್ರಿಲ್ 18ರಂದು,ಮೈಕೇಲ್ ಕ್ಯಾರಿಕ್, ವೆಸ್ ಬ್ರೌನ್ ಜತೆ ಫರ್ಡಿನ್ಯಾಂಡ್ ವಾರಕ್ಕೆ ಸುಮಾರು £130,000 ಮೌಲ್ಯದ 5 ವರ್ಷಗಳ ಕರಾರಿಗೆ ಸಹಿ ಹಾಕಲು ಸಮ್ಮತಿಸಿದ. ಇದು ಯುನೈಟೆಡ್ ಜತೆ ಅವನನ್ನು 2013ರವರೆಗೆ ಇರಿಸಿತು. ಈ ಕರಾರಿಗೆ ಅಂತಿಮವಾಗಿ 2008ರ ಮೇ 15ರಂದು ಸಹಿ ಹಾಕಲಾಯಿತು.[೨೩]

2008ರ ಮೇಲೆ 21ರಂದು ಫರ್ಡಿನ್ಯಾಂಡ್ ಚೆಲ್ಸಿಯ ವಿರುದ್ಧ ಚಾಂಪಿಯನ್ಸ್ ಲೀಗ್ ಫೈನಲ್ ಗೆಲುವಿನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪರ ನಾಯಕತ್ವ ವಹಿಸಿದ.[೨೪] ಅವರು ರೆಯಾನ್ ಗಿಗ್ಸ್ ಜತೆ ಟ್ರೋಫಿಯನ್ನು ಸ್ವೀಕರಿಸಿದ. ಗ್ಯಾರಿ ನೆವೆಲ್ಲೆ ಗಾಯದಿಂದಾಗಿ ಗೈರುಹಾಜರಿ ಆಗಿದ್ದರಿಂದ ಗಿಗ್ಸ್ ಕ್ರೀಡಾಋತುವಿನ ಬಹುತೇಕ ಪಂದ್ಯಗಳಿಗೆ ಮೈದಾನದಲ್ಲಿ ನಾಯಕನಾಗಿದ್ದ.

BBC ರೇಡಿಯೊ 5 ಲೈವ್‌ಗೆ ನೀಡಿದ ಸಂದರ್ಶನದಲ್ಲಿ ಫುಟ್ಬಾಲ್‌ನಲ್ಲಿ ಜನಾಂಗಭೇದ ನೀತಿಯನ್ನು FIFA ನಿಭಾಯಿಸುತ್ತಿರುವ ರೀತಿಯನ್ನು ಅವನು ಟೀಕಿಸಿದ.ಪಂದ್ಯಗಳಲ್ಲಿ ಜನಾಂಗೀಯ ನಿಂದನೆ ಅಥವಾ ಸಲಿಂಗಿ ವಿರೋಧಿ ನಿಂದನೆ ಆರೋಪಿಗಳಿಗೆ ಶಿಕ್ಷಿಸಲು ಸಾಕಷ್ಟು ಕೆಲಸ ಮಾಡಿಲ್ಲವೆಂದು ಹೇಳಿದ. ಇಂಗ್ಲೆಂಡ್ ಕ್ರೊವೇಷಿಯ ವಿರುದ್ಧ ಜಾಗ್ರೆಬ್‌ನಲ್ಲಿ ಗೆಲುವು ಗಳಿಸಿದ ಪಂದ್ಯದಲ್ಲಿ ಎಮಿಲೆ ಹೆಸಕಿಯ ವಿರುದ್ದ ಮೂದಲಿಕೆಗಳಿಗೆ ಸಂಬಂಧಿಸಿದಂತೆ ಅವನು ಕೆಳಗಿನಂತೆ ಪ್ರತಿಕ್ರಿಯಿಸಿದ.

"ಕ್ರೊವೇಷಿಯಕ್ಕೆ ಕೆಲವೇ ಸಾವಿರ ಪೌಂಡ್ ದಂಡ ವಿಧಿಸಲಾಯಿತು. ಅದರಿಂದ ಏನು ಪ್ರಯೋಜನ? ಇದು ಜನಾಂಗೀಯ ನಿಂದನೆ ಅಥವಾ ಸಲಿಂಗಿ ವಿರೋಧಿ ನಿಂದನೆ ಮಾಡುವುದರಿಂದ ಜನರನ್ನು ತಡೆಯುವುದಿಲ್ಲ...ಇಂತಹ ಸಂಗತಿಗಳು ಹೀಗೇ ಮುಂದುವರಿದರೆ,ಅವರಿಂದ ನೀವು ಪಾಯಿಂಟ್‌ಗಳನ್ನು ಹಿಂತೆಗೆದುಕೊಳ್ಳಬೇಕು. ಆಗ ತಂಡವು ಶಿಕ್ಷೆಗೆ ಒಳಗಾಗುತ್ತದೆಂದು ಬಾಜಿದಾರರಿಗೆ ಅರಿವಾಗುತ್ತದೆ."[೨೫]

ಫರ್ಡಿನ್ಯಾಂಡ್‌ಗೆ 2009–10 ಕ್ರೀಡಾಋತುವಿನಲ್ಲಿ ಗಾಯಗಳು ಕಾಡಿಸಿದವು. ಅನೇಕ ಬೆನ್ನು ಮತ್ತು ಮಂಡಿಯ ಗಾಯಗಳು ಕೆಲವು ತಿಂಗಳವರೆಗೆ ಅವನನ್ನು ಕ್ರೀಡಾಚಟುವಟಿಕೆಗಳಿಂದ ಹಿಂದೆ ಸರಿಯುವಂತೆ ಮಾಡಿತು. 2010ರ ಜನವರಿ 28ರಂದು ಅವನು ಮತ್ತೆ ಕ್ರಿಯಾಶೀಲನಾದ. ಆದರೆ ಹಲ್ ಸಿಟಿ ವಿರುದ್ಧ ವಿರೋಧಿ ತಂಡದ ಆಟಗಾರನಿಗೆ ಮೊಣಕೈನಿಂದ ಹೊಡೆದ ಹಿನ್ನೆಲೆಯಲ್ಲಿ ಹಿಂಸೆಯ ನಡವಳಿಕೆಗೆ ಸಂಬಂಧಿಸಿದಂತೆ ತಪ್ಪಿತಸ್ಥನೆಂದು ಕಂಡಿದ್ದರಿಂದ ನಾಲ್ಕು ಆಟಗಳಿಗೆ ಅವನಿಗೆ ನಿಷೇಧ ವಿಧಿಸಲಾಯಿತು.[೨೬][೨೭]

2010ರ ಬೇಸಿಗೆಯಲ್ಲಿ ಅನುಭವಿಸಿದ ಮಂಡಿಯ ಗಾಯದಿಂದಾಗಿ, ಇಂಗ್ಲೆಂಡ್ ಪರ ವಿಶ್ವಕಪ್‌‌‌ನಿಂದ ಅವನನ್ನು ಹೊರಗಿಡಲಾಯಿತು. ಅವನು ಕಮ್ಯುನಿಟಿ ಷೀಲ್ಡ್ ಮತ್ತು 2010–11 ಪ್ರೀಮಿಯರ್ ಲೀಗ್ ಕ್ರೀಡಾಋತುವಿನ ಮೊದಲ ನಾಲ್ಕು ಪಂದ್ಯಗಳು ಸೇರಿದಂತೆ ಕ್ರೀಡಾಋತು ಪೂರ್ವದ ಎಲ್ಲ ಪಂದ್ಯಗಳಿಂದ ವಂಚಿತನಾದ. ಅವನು ಸೆಪ್ಟೆಂಬರ್ 14ರಂದು ರೇಂಜರ್ಸ್ ವಿರುದ್ಧ ಚಾಂಪಿಯನ್ಸ್ ಲೀಗ್ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಪ್ರಥಮ ತಂಡದ ಫುಟ್ಬಾಲ್‌ ಆಟಕ್ಕೆ ಹಿಂತಿರುಗಿದ. ಅವನು ತಂಡದ ಪರವಾಗಿ ನಾಯಕತ್ವ ವಹಿಸಿದ ಹಾಗು ಗೋಲುರಹಿತ ಡ್ರಾದಲ್ಲಿ ಪೂರ್ಣ 90 ನಿಮಿಷಗಳವರೆಗೆ ಆಟವಾಡಿದ.

ಅಂತಾರಾಷ್ಟ್ರೀಯ ವೃತ್ತಿಜೀವನ[ಬದಲಾಯಿಸಿ]

19 ವರ್ಷ ಮತ್ತು 8 ದಿನಗಳ ವಯಸ್ಸಿನಲ್ಲೇ ಫರ್ಡಿನ್ಯಾಂಡ್ ಪ್ರಥಮ ಪೂರ್ಣ ಇಂಗ್ಲೆಂಡ್ ಕ್ಯಾಪ್‍‌(ಆಟಗಾರನಿಗೆ ನೀಡುವ ಟೊಪ್ಪಿ)ನ್ನು ಕ್ಯಾಮರೂನ್ ವಿರುದ್ಧ 1997ರ ನವೆಂಬರ್ 15ರಂದು ನಡೆದ ಸೌಹಾರ್ದ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಸಂಪಾದಿಸಿದ.ಆ ಕಾಲದಲ್ಲಿ ಇಂಗ್ಲೆಂಡ್ ಪರ ಆಡಿದ ಯುವ ರಕ್ಷಣೆ ಆಟಗಾರ ಎನಿಸಿದ(2006ರಲ್ಲಿ ಮಿಕಾ ರಿಚರ್ಡ್ಸ್ ಈ ದಾಖಲೆಯನ್ನು ಮುರಿದ.) ಇಂಗ್ಲೆಂಡ್‌ನ 1998ರ ವಿಶ್ವಕಪ್‌‌ನ ಮೋಲ್ಡೋವಾ ವಿರುದ್ಧ ಕ್ವಾಲಿಫೈಯರ್(ಅರ್ಹತಾ ಸುತ್ತಿನ ಪಂದ್ಯ)ಗೆ ಪೂರ್ವಸಿದ್ಧತೆಯಲ್ಲಿ ಅವನು ಕುಡಿದು ವಾಹನ ಚಲಾಯಿಸಿದ ಆರೋಪಕ್ಕೆ ಗುರಿಯಾಗಿರದಿದ್ದರೆ,ಫರ್ಡಿನ್ಯಾಂಡ್ ಸೆಪ್ಟೆಂಬರ್‌ನಲ್ಲಿ ಇನ್ನೂ ಮುಂಚೆ ಚೊಚ್ಚಲ ಪ್ರವೇಶ ಮಾಡುತ್ತಿದ್ದ. ಫರ್ಡಿನ್ಯಾಂಡ್‌ನನ್ನು ಈ ಆಟಕ್ಕಾಗಿ ತಂಡದಲ್ಲಿ ಹೆಸರಿಸಲಾಗಿತ್ತು ಹಾಗೂ ಅವನು ಪ್ರಾರಂಭಿಕ ಆಟಗಾರನಾಗುವ ಸಂಭವವಿತ್ತು. ಆದಾಗ್ಯೂ ಪ್ರಿನ್ಸಸ್ ಡಯಾನಳನ್ನು ಕುರಿತ ಸಾರ್ವಜನಿಕ ಶೋಕದಿಂದಾಗಿ ಗ್ಲೆನ್ ಹಾಡಲ್‌ಗೆ ಪ್ರತಿಭಾಶಾಲಿ ಹದಿಹರೆಯದ ಆಟಗಾರನನ್ನು ಕೈಬಿಡದೇ ಬೇರೆ ದಾರಿ ಇರಲಿಲ್ಲ. ಪ್ರಿನ್ಸೆಸ್ ಡಯಾನ ಕಾರಿನ ಚಾಲಕ ಕುಡಿದು ಚಾಲನೆ ಮಾಡುತ್ತಿದ್ದನೆಂದು ಶಂಕಿಸಲಾಗಿತ್ತು. ಪರಿಣಾಮಕಾರಿ 1997/98 ಕ್ರೀಡಾಋತುವಿನ ನಂತರ,ಅವನನ್ನು 1998 FIFA ವಿಶ್ವಕಪ್ ತಂಡಕ್ಕೆ ಸಹಾಯಕ ರಕ್ಷಣೆ ಆಟಗಾರನಾಗಿ ಆಯ್ಕೆಮಾಡಲಾಯಿತು. ಆದಾಗ್ಯೂ ಅವನು 2000 ಯುರೋಪಿಯನ್ ಚಾಂಪಿಯನ್‌ಷಿಪ್‌ಗಾಗಿ ಕೆವಿನ್ ಕೀಗನ್ಸ್‌ನ 22 ಆಟಗಾರರ ತಂಡದಲ್ಲಿ ಆಯ್ಕೆಯಾಗಲಿಲ್ಲ.[೨೮]

ಲೀಡ್ಸ್ ಯುನೈಟೆಡ್‌ಗೆ £18ದಶಲಕ್ಷದ ಸ್ಥಳಾಂತರದ ನಂತರ ಫರ್ಡಿನ್ಯಾಂಡ್‌ಗೆ ಉಸ್ತುವಾರಿ ಮ್ಯಾನೇಜರ್ ಪೀಟರ್ ಟೈಲರ್ ಇಟಲಿ ವಿರುದ್ಧ ಸೌಹಾರ್ದ ಪಂದ್ಯದಲ್ಲಿ ಆರಂಭಿಕ ಆಟಕ್ಕೆ ಇಳಿಸಿದರು.[೨೯] ಅವನು ಕೂಡಲೇ ಸ್ವೆನ್-ಗೋರೆನ್ ಎರಿಕ್‌ಸನ್ ನೇತೃತ್ವದಲ್ಲಿ ಪ್ರಥಮ ಆಯ್ಕೆಯ ಆಟಗಾರನಾಗಿ ಸ್ಥಿರವಾಗಿ ನೆಲೆನಿಂತ. 2002 ಮತ್ತು 2006 ವಿಶ್ವಕಪ್‌ಗಳಲ್ಲಿ ಇಂಗ್ಲೆಂಡ್‌ನ ಎರಡು ಪ್ರಥಮ ಆಯ್ಕೆ ಸೆಂಟರ್ ಬ್ಯಾಕ್ಸ್‌ ಆಟಗಾರನಾಗಿ ಆಯ್ಕೆಯಾದ.ಈ ಸಂದರ್ಭದಲ್ಲಿ 5ನೇ ನಂಬರಿನ ಶರ್ಟ್ ಧರಿಸಿದ್ದ. ಜಾನ್ ಟೆರಿ(ಸೆಂಟ್ರಲ್ ಡಿಫೆನ್ಸ್‌ನಲ್ಲಿ ಅನೇಕ ವರ್ಷಗಳ ಕಾಲ ಫರ್ಡಿನ್ಯಾಂಡ್ ಸಹಯೋಗಿ)ಫರ್ಡಿನ್ಯಾಂಡ್‌ನ 8 ತಿಂಗಳ ನಿಷೇಧದುದ್ದಕ್ಕೂ ಅವನ ಬದಲಿಗೆ ಇಂಗ್ಲೆಂಡ್ ಪರವಾಗಿ ಆಡಿದ. ವೇಲ್ಸ್ ವಿರುದ್ಧ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ 2004 ಅಕ್ಟೋಬರ್ 4ರಂದು ಫರ್ಡಿನ್ಯಾಂಡ ಹಿಂತಿರುಗುವ ತನಕ ಅವನ ಬದಲಿಗೆ ಆಡಿದ. ಫರ್ಡಿನ್ಯಾಂಡ್ ಇಂಗ್ಲೆಂಡ್ ಪರವಾಗಿ 10ವಿಶ್ವಕಪ್ ಪಂದ್ಯಗಳಲ್ಲಿ ಆಡಿದ. ಹೆನ್ರಿಕ್ ಲಾರ್ಸನ್ 2006ರ ವಿಶ್ವಕಪ್‌ನಲ್ಲಿ ಸ್ವೀಡನ್ ಪರವಾಗಿ ಗೋಲು ಗಳಿಸುವುದಕ್ಕೆ ಮುಂಚಿತವಾಗಿ ಅವನನ್ನು ಬದಲಿ ಆಟಗಾರನಾಗಿ ಆಡಿಸಲಾಯಿತು.

ಡ್ಯುರಾನ್ ಡ್ಯುರಾನ್ ಗೀತೆ "ರಿಯೊ "ವನ್ನು ಪುಟ್ಬಾಲ್ ಹಾಡುಗಳಲ್ಲಿ ಫರ್ಡಿನ್ಯಾಂಡ್ ಪರವಾಗಿ ಅಥವಾ ವಿರುದ್ಧವಾಗಿ ಬಳಸಲಾಗಿದೆ. ವಾಸ್ತವವಾಗಿ 2002ರಲ್ಲಿ ಅಭಿಮಾನಿ ಸೈಮನ್ ಲೆ ಬಾನ್(ಡ್ಯುರಾನ್ ಡ್ಯುರಾನ್ ಪ್ರಮುಖ ಗಾಯಕ)ತಂಡವು ಗೆಲುವು ಗಳಿಸಿದರೆ,ಫುಟ್ಬಾಲ್ ಹಾಡುಗಳಲ್ಲಿ ಒಂದನ್ನು ಮರುಮುದ್ರಣ ಮಾಡುವುದಾಗಿ ಭರವಸೆ ನೀಡಿದ್ದ. ಆದಾಗ್ಯೂ,ತಂಡವು ಗೆಲುವು ಗಳಿಸಲು ವಿಫಲವಾಯಿತು ಹಾಗೂ ಭರವಸೆಯು ಫಲಪ್ರದವಾಗುವ ಅವಕಾಶ ಸಿಗಲಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಫರ್ಡಿನ್ಯಾಂಡ್ ಇಂಗ್ಲೆಂಡ್‌ ಪರವಾಗಿ ಮೂರು ಗೋಲುಗಳನ್ನು ಗಳಿಸಿದ. ಡೆನ್ಮಾರ್ಕ್ ವಿರುದ್ಧ 2002ನೇ ವಿಶ್ವಕಪ್‌ನ ಎರಡನೇ ಸುತ್ತಿನಲ್ಲಿ ಪ್ರಥಮ ಗೋಲು ಗಳಿಸಿದ್ದ(ಆದರೂ ಕೆಲವು ಮೂಲಗಳು ಈ ಗೋಲನ್ನು ಥಾಮಸ್ ಸೊರೆನ್‌ಸನ್ ಸ್ವಂತ ಗೋಲು ಎಂದು ಪರಿಗಣಿಸುತ್ತವೆ).[೩೦] ಎರಡನೆಯ ಗೋಲು ಗೋಲುಪಟ್ಟಿಯ ಸಮೀಪದ ಹೊಡೆತವಾಗಿದ್ದು, ರಷ್ಯಾದ ಗೋಲುರಕ್ಷಕ ವ್ಯಾಚೆಸ್ಲಾವ್ ಮಲಾಫೀವ್ಅವರ ಕಣ್ತಪ್ಪಿಸಿ ಹೊಡೆಯಲಾಗಿತ್ತು. ಇದು 2007 ಸೆಪ್ಟೆಂಬರ್ 12ರಂದು ವೆಂಬ್ಲಿ ಕ್ರೀಡಾಂಗಣದಲ್ಲಿ ರಷ್ಯಾ ವಿರುದ್ಧ ಇಂಗ್ಲೆಂಡ್‌ನ ಯೂರೊ 2008 ಅರ್ಹತಾ ಸುತ್ತಿನ ಪಂದ್ಯವಾಗಿತ್ತು. ಮೂರನೆಯ ಗೋಲನ್ನು 2008 ಸೆಪ್ಟೆಂಬರ್ 11ರಂದು ಸ್ವದೇಶದಲ್ಲಿ 2010 FIFA ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕಜಕಸ್ತಾನ್ ವಿರುದ್ಧ ಗೋಲು ಹೊಡೆದ. ಇಂಗ್ಲೆಂಡ್ 5–1ರಿಂದ ಪಂದ್ಯವನ್ನು ಗೆದ್ದುಕೊಂಡಿತು.

2008ರ ಮಾರ್ಚ್ 25ರಂದು ರಿಯೊ ಫ್ಯಾಬಿಯೊ ಕೆಪೆಲೊನ ಎರಡನೇ ಆಟಕ್ಕಾಗಿ ನಾಯಕನ ತೋಳುಪಟ್ಟಿಯನ್ನು ಧರಿಸುತ್ತಾರೆಂದು ಪ್ರಕಟಿಸಲಾಯಿತು.[೩೧] ಜಾನ್ ಟೆರಿ,ಸ್ಟೀವನ್ ಗೆರಾರ್ಡ್ ಅಥವಾ ಡೇವಿಡ್ ಬೆಕ್ಹಾಮ್‌ ತನ್ನ ರಾಷ್ಟ್ರಕ್ಕಾಗಿ 100ನೇ ಕ್ಯಾಪ್ ಗಳಿಸುವ ನೆನಪಿಗಾಗಿ ನಾಯಕನಾಗಿ ಹೆಸರಿಸಲಾಗುತ್ತದೆಂದು ಕೆಲವರು ಭಾವಿಸಿದ್ದರು. ಫರ್ಡಿನ್ಯಾಂಡ್‌ನನ್ನು ನಾಯಕನನ್ನಾಗಿ ಹೆಸರಿಸುವ ನಿರ್ಧಾರವು ಸೆಪ್ಟೆಂಬರ್ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಅಧಿಕೃತ ನಾಯಕನನ್ನು ಹೆಸರಿಸುವ ಮುಂಚೆ ನಾಯಕಪಟ್ಟವನ್ನು ಸರದಿಯಲ್ಲಿ ನೀಡುವ ಕ್ಯಾಪೆಲೊ ಯೋಜನೆಯ ಭಾಗವಾಗಿತ್ತು ಎಂದು FA ಹೇಳಿಕೆಯು ಸೂಚಿಸಿತು.

ಆಗಸ್ಟ್ 19ರಂದು ಫರ್ಡಿನ್ಯಾಂಡ್ ನಾಯಕನ ತೋಳುಪಟ್ಟಿಯನ್ನು ಉಳಿಸಿಕೊಳ್ಳುವಲ್ಲಿ ಟೆರಿಗೆ ಸೋಲಪ್ಪಿದ ಹಾಗು ಫ್ಯಾಬಿಯೊ ಕ್ಯಾಪೆಲೊ ಅವರಿಂದ ಉಪನಾಯಕನಾಗಿ ನಾಮಕರಣಗೊಂಡ.

2008ರ ಅಕ್ಟೋಬರ್ 11ರಂದು ರಿಯೊ ಗೋಲುಪಟ್ಟಿಯ ಹಿಂದೆ ಹೆಡರ್(ತಲೆಯಲ್ಲಿ ಚೆಂಡು ಹೊಡೆಯುವುದು) ಮಾಡುವ ಮೂಲಕ ಕಜಕ್‌ಸ್ತಾನದ ವಿರುದ್ಧ 5 -1ಜಯದಲ್ಲಿ ಆರಂಭದ ಗೋಲು ಗಳಿಸಿದರು. ಈ ಆಟಕ್ಕಾಗಿ ಅವರನ್ನು ನಾಯಕನೆಂದು ಕೂಡ ಹೆಸರಿಸಲಾಯಿತು.

ಇಂಗ್ಲೆಂಡ್ ಮತ್ತು ಉಕ್ರೇನ್ ನಡುವೆ 2009 ಅಕ್ಟೋಬರ್ 10ರಂದು ನಡೆದ ಪಂದ್ಯದಲ್ಲಿ ಪ್ರಮಾದದಿಂದ ರಾಬರ್ಟ್ ಗ್ರೀನ್ ಅವರನ್ನು ಹೊರಗೆ ಕಳಿಸಲು ಕಾಣವಾದ ಹಿನ್ನೆಲೆಯಲ್ಲಿ ಕೆಲವರು ತಂಡದಲ್ಲಿ ರಿಯೊ ಸೇರ್ಪಡೆಯನ್ನು ಕುರಿತು ಪ್ರಶ್ನಿಸುವಂತಾಯಿತು. ಅವನ ಕ್ಲಬ್ ಪರವಾಗಿ ಪಂದ್ಯದ ಅಭ್ಯಾಸದ ಕೊರತೆ ಹಾಗೂ ಫುಟ್ಬಾಲ್ ಆಟಗಾರನಾಗಿ ಪೂರ್ವದ ದಿನಗಳಲ್ಲಿ ಅವನ ಸರಣಿ ತಪ್ಪುಗಳು ಅನೇಕ ಮೂಲೆಗಳಿಂದ ಅವನ ಸೇರ್ಪಡೆ ಕುರಿತು ಟೀಕೆಗೆ ದಾರಿ ಕಲ್ಪಿಸಿತು.[೩೨]

2010ರ ಫೆಬ್ರವರಿ 5ರಂದು ಫರ್ಡಿನ್ಯಾಂಡ್ ಜಾನ್ ಟೆರಿ ಬದಲಿಗೆ ಇಂಗ್ಲೆಂಡ್ ನಾಯಕನಾದ.[೩೩]

2010 ಜೂನ್‌ನಲ್ಲಿದ್ದಂತೆ, ಅವನು 78[೩೪] ತನ್ನ ಹೆಸರಿಗೆ 78 ಇಂಗ್ಲೆಂಡ್ ಕ್ಯಾಪ್‌ಗಳನ್ನು ಹೊಂದಿದ್ದ. ಇದು ಆಶ್ಲೆ ಕೋಲೆ ಮಟ್ಟದಲ್ಲಿ ಹಾಗೂ (ಈಗ ನಿವೃತ್ತರಾದ) ಕಪ್ಪು ವರ್ಣೀಯ ಆಟಗಾರರಲ್ಲಿ ಅತ್ಯಧಿಕ ಕ್ಯಾಪ್ ಸಂಪಾದಿಸಿದಜಾನ್ ಬಾರ್ನೆಸ್‌ಗಿಂತ ಒಂದು ಸ್ಥಾನ ಕಡಿಮೆ ಇರಿಸಿತು.[೩೫] ಫರ್ಡಿನ್ಯಾಂಡ್‌ನನ್ನು ಕೊನೆಯ ನಾಲ್ಕು ಇಂಗ್ಲೆಂಡ್ ವಿಶ್ವಕಪ್ ತಂಡಗಳಲ್ಲಿ ಹೆಸರಿಸಲಾಗಿದ್ದರೂ(1998ರಲ್ಲಿ ಆಡದಿದ್ದರೂ ಕೂಡ)ಅವನು ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಆಡಿರಲಿಲ್ಲ. ಉದ್ದೀಪನಾ ಮದ್ದು ಸೇವನೆ ಪರೀಕ್ಷೆ ತಪ್ಪಿಸಿಕೊಂಡಿದ್ದರಿಂದ ನಿಷೇಧಕ್ಕೆ ಗುರಿಯಾಗಿದ್ದು ಹಾಗು ಯೂರೊ 2008ಕ್ಕೆ ಅರ್ಹತೆ ಪಡೆಯಲು ಇಂಗ್ಲೆಂಡ್ ವೈಫಲ್ಯ ಇದಕ್ಕೆ ಕಾರಣವಾಗಿತ್ತು. ಆದರೂ ಬೆನ್ನು ಮತ್ತು ತೊಡೆಸಂದು ಗಾಯದ ಸಮಸ್ಯೆಗಳಿಂದಾಗಿ ಅವನು 2009 -10ರ ಬಹುಮಟ್ಟಿನ ಸ್ಥಳೀಯ ಕ್ರೀಡಾಋತುವಿನಿಂದ ವಂಚಿತನಾದರೂ, 2010ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ನಾಯಕನಾಗಿ ಆಯ್ಕೆಯಾದ. ಆದಾಗ್ಯೂ ಜೂನ್ ರಂದು ತಂಡದ ಪ್ರಥಮ ತರಬೇತಿ ಕಾರ್ಯಕ್ರಮದ ಸಂದರ್ಭದಲ್ಲಿ ಅವನು ಮಂಡಿ ಅಸ್ಥಿರಜ್ಜು ಗಾಯಕ್ಕೆ ಒಳಗಾದ ಹಾಗೂ ತರುವಾಯ ಪಂದ್ಯಾವಳಿಯಿಂದ ಹೊರಗಿಡಲಾಯಿತು.[೩೬]

ಅಂತಾರಾಷ್ಟ್ರೀಯ ಗೋಲುಗಳು[ಬದಲಾಯಿಸಿ]

ಅಂಕಗಳು ಮತ್ತು ಫಲಿತಾಂಶಗಳ ಪಟ್ಟಿ ಮೊದಲು ಇಂಗ್ಲೆಂಡ್‌'ನ ಗೋಲು ಲೆಕ್ಕಾಚಾರದ ಪಟ್ಟಿ.
# ದಿನಾಂಕ ಸ್ಥಳ ಎದುರಾಳಿ ಅಂಕ ಫಲಿತಾಂಶ ಸ್ಪರ್ಧೆ
1 15 ಜೂನ್ 2002 ನೈಗಾಟಾ, ಜಪಾನ್  ಡೆನ್ಮಾರ್ಕ್ 1-0 3–0 2002 FIFA ವಿಶ್ವ ಕಪ್‌
2 12 ಸೆಪ್ಟೆಂಬರ್ 2007 ಲಂಡನ್, ಇಂಗ್ಲೆಂಡ್  ರಷ್ಯಾ 3–0 3–0 UEFA ಯುರೊ 2000 ಅರ್ಹತಾ ಸುತ್ತಿನ ಪಂದ್ಯ
3 11 ಅಕ್ಟೋಬರ್ 2008 ಲಂಡನ್, ಇಂಗ್ಲೆಂಡ್  ಕಜಾಕಸ್ಥಾನ್ 1-0 5–1 2010 FIFA ವಿಶ್ವ ಕಪ್ ಅರ್ಹತಾ ಸುತ್ತಿನ ಪಂದ್ಯ

ವೃತ್ತಿಜೀವನದ ಅಂಕಿಅಂಶಗಳು[ಬದಲಾಯಿಸಿ]

ಕ್ಲಬ್‌ ಕ್ರೀಡಾಋತು ಲೀಗ್‌‌ ಕಪ್ ಲೀಗ್ ಕಪ್ ಯುರೋಪ್‌ ಇತರರು[೩೭] ಒಟ್ಟು
ಆಡಿರುವ ಪಂದ್ಯಗಳು ಗೋಲುಗಳು ಆಡಿರುವ ಪಂದ್ಯಗಳು ಗೋಲುಗಳು ಆಡಿರುವ ಪಂದ್ಯಗಳು ಗೋಲುಗಳು ಆಡಿರುವ ಪಂದ್ಯಗಳು ಗೋಲುಗಳು ಆಡಿದ ಪಂದ್ಯಗಳು ಗೋಲುಗಳು ಆಡಿದ ಪಂದ್ಯಗಳು ಗೋಲುಗಳು
ವೆಸ್ಟ್ ಹ್ಯಾಮ್ ಯುನೈಟೆಡ್ 1995–96 1 0 0 0 0 0 0 0 0 0 1 0
1996–97 15 2 1 0 1 0 0 0 0 0 17 2
ಬೋರ್ನ್‌ಮೌತ್ (ಎರವಲು) 1996–97 10 0 0 0 0 0 0 0 1 0 11 0
ವೆಸ್ಟ್ ಹ್ಯಾಮ್ ಯುನೈಟೆಡ್ 1997–98 35 0 6 0 5 0 0 0 0 0 46 0
1998–99 31 0 1 0 1 0 0 0 0 0 33 0
1999–2000 33 0 1 0 3 0 3 0 6 0 46 0
2000–01 12 0 0 0 2 0 0 0 0 0 14 0
ಒಟ್ಟು 127 2 9 0 12 0 3 0 6 0 157 2
ಲೀಡ್ಸ್ ಯುನೈಟೆಡ್ 2000–01 23 2 2 0 0 0 7 1 0 0 32 ವಿಐಪಿ 3
2001–02 31 0 1 0 2 0 7 0 0 0 41 0
ಒಟ್ಟು 54 2 ವಿಐಪಿ 3 0 2 0 14 1 0 0 73 ವಿಐಪಿ 3
ಮ್ಯಾಂಚೆಸ್ಟರ್ ಯುನೈಟೆಡ್ 2002–03 28 0 ವಿಐಪಿ 3 0 4 0 ೧೧ 0 0 0 46 0
2003–04 20 0 0 0 0 0 6 0 1 0 27 0
2004–05 31 0 5 0 1 0 5 0 0 0 42 0
2005–06 37 ವಿಐಪಿ 3 2 0 5 0 8 0 0 0 52 ವಿಐಪಿ 3
2006–07 33 1 7 0 0 0 9 0 0 0 49 1
2007 – 6ನೇಯ 35 2 4 0 0 0 ೧೧ 1 1 0 51 ವಿಐಪಿ 3
2008–09 24 0 ವಿಐಪಿ 3 0 1 0 ೧೧ 0 4 0 43 0
2009–10 13 0 0 0 1 0 6 0 1 0 21 0
2010–11 ವಿಐಪಿ 3 0 0 0 1 0 2 0 0 0 5 0
ಒಟ್ಟು 224 6 24 0 13 0 69 1 7 0 337 7
ವೃತ್ತಿ ಜೀವನದ ಸಂಪೂರ್ಣ 414 10 36 0 27 0 86 2 14 0 578 12

2010 ಅಕ್ಬೋಬರ್ 24ರಂದು ಆಡಿದ ಪಂದ್ಯದವರೆಗೆ ನಿಖರ ಅಂಕಿಅಂಶ [೩೮]

[೩೯] ಟೆಂಪ್ಲೇಟು:Football player national team statistics |- |1997||1||0 |- |1998||4||0 |- |1999||3||0 |- |2000||2||0 |- |2001||9||0 |- |2002||9||1 |- $26.5 ಶತಕೋಟಿ |- |2004||3||0 |- $29.8 ಶತಕೋಟಿ |- 2006/2007:[159] |- $29.8 ಶತಕೋಟಿ |- $29.8 ಶತಕೋಟಿ |- |2009||4||0 |- |2010||2||0 |- !Total||78||3 |}

ಪ್ರಶಸ್ತಿಗಳು[ಬದಲಾಯಿಸಿ]

ಕ್ಲಬ್‌[ಬದಲಾಯಿಸಿ]

ಮ್ಯಾಂಚೆಸ್ಟರ್ ಯುನೈಟೆಡ್

ವೈಯಕ್ತಿಕ ಸಾಧನೆ[ಬದಲಾಯಿಸಿ]

 • PFA ಪ್ರೀಮಿಯರ್ ಲೀಗ್ ವರ್ಷದ ತಂಡ: 2001–02 (ಲೀಡ್ಸ್), 2004–05, 2006–07, 2007–08, 2008–09 (ಮ್ಯಾಂಚೆಸ್ಟರ್ ಯುನೈಟೆಡ್)
 • ಪ್ರೀಮಿಯರ್ ಲೀಗ್ ತಿಂಗಳ ಆಟಗಾರ (1): ಅಕ್ಟೋಬರ್ 2001
 • FIFPro ವಿಶ್ವ XI: 2007–08

ಫುಟ್ಬಾಲ್ ಕ್ರೀಡಾಕ್ಷೇತ್ರದ ಹೊರಗೆ[ಬದಲಾಯಿಸಿ]

ವೈಯಕ್ತಿಕ ಜೀವನ[ಬದಲಾಯಿಸಿ]

ಫರ್ಡಿನ್ಯಾಂಡ್ 2004ರಲ್ಲಿ

ಫರ್ಡಿನ್ಯಾಂಡ್ ಫ್ರಯಾರಿ ಮಂಡಲಿ ಮನೆಗಳಾದಪೆಕ್ಯಾಮ್‌ನಲ್ಲಿ ಬೆಳೆದ.[೬] ಅವನಿಗೆ ಅನೇಕ ಮಂದಿ ಸಹೋದರರು ಮತ್ತು ಸಹೋದರಿಯರು ಇದ್ದಾರೆ. ಅವನ ತಂದೆಯ ಕಡೆಯಿಂದ ಒಬ್ಬ ಸಹೋದರ ಮತ್ತು ಮೂವರು ಸಹೋದರಿಯರು ಮತ್ತು ತಾಯಿಯ ಮರುವಿವಾಹದಿಂದ ಒಬ್ಬ ಸಹೋದರ ಮತ್ತು ಸಹೋದರಿ ಇದ್ದಾರೆ.[೩] ಅವನ ಸಹೋದರ ಆಂಟನ್ ಫರ್ಡಿನ್ಯಾಂಡ್ ಸಂಡರ್‌ಲೆಂಡ್ ರಕ್ಷಣೆ ಆಟಗಾರನಾಗಿದ್ದು, ಮಾಜಿ ಇಂಗ್ಲೆಂಡ್ ಸ್ಟ್ರೈಕರ್ ಲೆಸ್ ಫರ್ಡಿನ್ಯಾಂಡ್ ಅವನ ಸೋದರ ಸಂಬಂಧಿ.[೬] 2008 ಮಾರ್ಚ್ 15ರಂದು ರಿಯೊ ಮಲಸಹೋದರ ಜೆರೆಮಿಯ ಯುನೈಟೆಡ್‌ನ ಪ್ರಥಮ ತಂಡದೊಂದಿಗೆ ಅಲೆಕ್ಸ್ ಫರ್ಗ್ಯುಸನ್ ಮೇಲ್ವಿಚಾರಣೆಯಲ್ಲಿ ತರಬೇತಿ ಪಡೆಯುತ್ತಿದ್ದಾನೆಂದು ವರದಿಯಾಯಿತು.[೪೦] 2006 ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ, ಫರ್ಡಿನ್ಯಾಂಡ್' ಗೆಳತಿ ರೆಬೆಕಾ ಎಲ್ಲಿಸನ್ ಅವರ ಪುತ್ರ ಲೊರಂಜ್‌ಗೆ ಜನ್ಮನೀಡಿದಳು.[೪೧] ಫರ್ಡಿನ್ಯಾಂಡ್ ಲಾಸ್ ವೆಗಾಸ್‌ನಲ್ಲಿ 2007 ಜುಲೈನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾಗ, ಎಲ್ಲಿಸನ್ ಜತೆ ವಿವಾಹವಾಗುವ ಪ್ರಸ್ತಾಪ ಮಂಡಿಸಿದಾಗ ಆಕೆ ಒಪ್ಪಿಕೊಂಡಳು.[೪೨] ದಂಪತಿಗೆ 2008 ಆಗಸ್ಟ್‌ನಲ್ಲಿ ಎರಡನೇ ಪುತ್ರ ಟೇಟ್ ಜನನವಾಯಿತು. ದಂಪತಿಯ ಮೆಚ್ಚಿನ ನಟರಾದ ಲಾರೆಂಜ್ ಟೇಟ್ ಹೆಸರಿನಿಂದ ಅವರ ಮಕ್ಕಳ ಹೆಸರು ಹುಟ್ಟಿಕೊಂಡಿದೆ.[೪೩]

ಫರ್ಡಿನ್ಯಾಂಡ್ ತನ್ನ ಪೋಷಣೆ ಮತ್ತು ಜೀವನದೃಷ್ಟಿಯನ್ನು 2007ರ ಪುಸ್ತಕ, ರಿಯೊ: ಮೈ ಸ್ಟೋರಿ ಯಲ್ಲಿ ವಿವರಿಸಿದ್ದಾನೆ[೪೪] ಫರ್ಡಿನ್ಯಾಂಡ್ ಆತ್ಮಚರಿತ್ರೆಯೊಂದಕ್ಕೆ £1 ದಶಲಕ್ಷ ಹಣವನ್ನು ಮುಂಗಡವನ್ನು ಪಡೆದ ಕ್ರೀಡಾಪಟುಗಳ ಸಣ್ಣ ಗುಂಪಿನಲ್ಲಿ ಸೇರಿದ್ದಾನೆ.[೪೫] ಪೆಕ್ಹಾಮ್‌ನಲ್ಲಿ ಬೆಳೆದ ಫರ್ಡಿನ್ಯಾಂಡ್ ಅನುಭವಗಳು 2009ರ ಡಿಸೆಂಬರ್‌ನಲ್ಲಿ ರಿಯೊ ಫರ್ಡಿನ್ಯಾಂಡ್ ಲೈವ್ ಡ್ರೀಮ್ ಫೌಂಡೇಶನ್ ಸ್ಥಾಪಿಸಲು ಸ್ಫೂರ್ತಿ ನೀಡಿತು. ಇದು ಕ್ರೀಡೆಗಳು ಮತ್ತು ಮನರಂಜನೆಯಲ್ಲಿ ವೃತ್ತಿಜೀವನವನ್ನು ಅರಸುವ ವಂಚಿತ ಸಮುದಾಯಗಳಿಂದ ಯುವಜನರನ್ನು ಪೋಷಿಸಿ, ಬೆಳೆಸುವುದಾಗಿದೆ. ಪ್ರತಿಷ್ಠಾನವು UK ಸರ್ಕಾರ ಮತ್ತು ಉದ್ಯಮದಿಂದ ಬೆಂಬಲ ಗಳಿಸಿತು.[೪೬]

ದೂರದರ್ಶನ, ಚಲನಚಿತ್ರ ಮತ್ತು ಸಂಗೀತ[ಬದಲಾಯಿಸಿ]

2005ರಲ್ಲಿ ಫರ್ಡಿನ್ಯಾಂಡ್, ಹಳೆಯ ಶಾಲಾ ಸ್ನೇಹಿತನೊಂದಿಗೆ, ಧ್ವನಿಮುದ್ರಣ ಕಂಪನಿ ವೈಟ್ ಚಾಕ್ ಮ್ಯುಸಿಕ್ ಸ್ಥಾಪಿಸಿದ.[೪೭] ಈ ದಿನಗಳವರೆಗೆ, ಕಂಪನಿಗೆ ಇಬ್ಬರು ಕಲಾವಿದರಾದ ಮೆಲೋಡಿ ಜಾನ್‌ಸ್ಟನ್ ಮತ್ತು ನಿಯಾ ಜೈ ಸಹಿ ಹಾಕಿದ್ದರು. ನಿಯಾ ಜೈ 2010 ಅಕ್ಟೋಬರ್ 6ರಂದು ಆಲ್ಬಂ ಬಿಡುಗಡೆ ಮಾಡಬೇಕಿತ್ತು ಹಾಗು ಅದರಲ್ಲಿ ಫರ್ಡಿನ್ಯಾಂಡ್ ರ‌್ಯಾಪ್ ಸಂಗೀತ (rapping )ನುಡಿಸಿದ್ದಾನೆ.[೪೮]

2006ಜೂನ್‌ನಲ್ಲಿ ಪೆರುಗ್ವೆ ವಿರುದ್ಧ ಇಂಗ್ಲೆಂಡ್ ರಾಷ್ಟ್ರೀಯ ತಂಡದ ಆರಂಭದ ವಿಶ್ವಕಪ್ ಗ್ರೂಪ್ ಪಂದ್ಯದಲ್ಲಿ, ಫರ್ಡಿನ್ಯಾಂಡ್ ಟೆಲಿವಿಷನ್ ನಿರೂಪಕನಾಗಿ ಪ್ರಥಮ ಬಾರಿಗೆ ಕಾಣಿಸಿಕೊಂಡ. ರಿಯೊ`ಸ್ ವರ್ಲ್ಡ್ ಕಪ್ ವೈಂಡ್-ಅಪ್ಸ್ ಆಯೋಜಿಸಿದ ಇಂಗ್ಲೆಂಡ್ ರಕ್ಷಣೆ ಆಟಗಾರ ,ಸ್ವತಃ ಜೆರೆಮಿ-ಬೀಡಲ್‌ ಶೈಲಿಯ ಪಾತ್ರದಲ್ಲಿ ಕಾಣಿಸಿಕೊಂಡು, ವಾಯ್ನೆ ರೂನಿ, ಡೇವಿಡ್ ಬೆಕಾಮ್ ಹಾಗು ಗ್ಯಾರಿ ನೆವಿಲ್ಲೆ ಸೇರಿದಂತೆ ತನ್ನ ಸಹ ವಿಶ್ವಕಪ್ ತಂಡದ ಸದಸ್ಯರಿಗೆ ಕುಚೇಷ್ಟೆಗಳನ್ನು ಮಾಡಿದ.[೪೯] ನಂತರದ ಸರಣಿ 'ರಿಯೊ`ಸ್ ಆಲ್-ಸ್ಟಾರ್ ವೈಂಡ್-ಅಪ್ಸ್'ಹೆಸರಿನಲ್ಲಿ ನಿರ್ಮಾಣದಲ್ಲಿ ತೊಡಗಿತು. ಆದಾಗ್ಯೂ,ಕೆಲವು ಚಿತ್ರೀಕರಣದ ಸಮಸ್ಯೆಗಳಿಂದಾಗಿ ಇದು ರದ್ದಾಯಿತು.[೫೦]

2008ರ ಕೊನೆಯಲ್ಲಿ ಸಿನೇಮಾ ಪ್ರಪಂಚಕ್ಕೆ ಅವನು ಚೊಚ್ಚಲ ಪ್ರವೇಶ ಮಾಡಿದ ಹಾಗು ಅಲೆಕ್ಸ್ ಡೆ ರಾಕೋಫ್ ಚಲನಚಿತ್ರ ಡೆಡ್ ಮ್ಯಾನ್ ರನ್ನಿಂಗ್‌ ಗೆ ಆರ್ಥಿಕ ನೆರವು ನೀಡಿ, ಕಾರ್ಯನಿರ್ವಾಹಕ ನಿರ್ಮಾಪಕನಾದ. ಈ ಚಿತ್ರವು ಪಾತಕಿ ವಿಷಯದ ಕಥಾವಸ್ತುವಿನಿಂದ ಕೂಡಿದ್ದು ಡ್ಯಾನಿ ಡೈಯರ್ ಮತ್ತು 50 ಸೆಂಟ್ ಅವರನ್ನು ಒಳಗೊಂಡಿದೆ. ಫರ್ಡಿನ್ಯಾಂಡ್ ಇಂಗ್ಲೆಂಡ್ ತಂಡದ ಸಹಆಟಗಾರ ಆಶ್ಲಿ ಕೋಲ್ ಜತೆ ನಿರ್ಮಾಣ ಮನ್ನಣೆಗಳನ್ನು ಹಂಚಿಕೊಂಡ.[೫೧]

ಫರ್ಡಿನ್ಯಾಂಡ್ ಪ್ರಸಕ್ತ ಪೆಕ್ಹಾಮ್ ಕುರಿತು ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸುತ್ತಿದ್ದು, ಅಪರಾಧದ ಜೀವನದಿಂದ ದೂರಸರಿಯುವಂತೆ ಯುವಕರನ್ನು ಮನವೊಲಿಸುವ ಗುರಿಯನ್ನು ಇದು ಹೊಂದಿತ್ತು.[೫೨]

2009ರ ಜನವರಿ 15ರಂದು, ಅವನು ಸ್ವತಃ ಡಿಜಿಟಲ್ ನಿಯತಕಾಲಿಕೆ ರಿಯೊ ವನ್ನು ಪ್ರಕಟಿಸುತ್ತಾನೆಂದು ತಿಳಿಸಲಾಯಿತು. ಅದಕ್ಕಾಗಿ ಡಿಜಿಟಲ್ ಪ್ರಕಟಣೆ ಕಂಪನಿ ಮೇಡ್ ಅಪ್ ಮೀಡಿಯ ಲಿ.ಜತೆಗೂಡಿ ಕೆಲಸ ಮಾಡುತ್ತಾನೆಂದು ಹೇಳಲಾಯಿತು.[೫೩] ಇದರ ಸಂಯೋಗದೊಂದಿಗೆ, ಫರ್ಡಿನ್ಯಾಂಡ್ ಅಬ್ಸರ್ವರ್ ಪೋಸ್ಟ್ ಮಂಥ್ಲಿ ಯ ಫೆಬ್ರವರಿ 2009ನೇ ಆವೃತ್ತಿಗೆ ಅತಿಥಿ ಸಂಪಾದಕನಾಗಿದ್ದ ಹಾಗೂ ಗೋರ್ಡನ್ ಬ್ರೌನ್‌ನಿಂದ ಹಿಡಿದು ಉಸೇನ್ ಬೋಲ್ಟ್‌ ಮುಂತಾದ ಜನರ ಸಂದರ್ಶನಗಳನ್ನು ಕೈಗೊಂಡ.[೫೪]

ವಿವಾದ[ಬದಲಾಯಿಸಿ]

1997ರ ಸೆಪ್ಟೆಂಬರ್‌ನಲ್ಲಿ ಫರ್ಡಿನ್ಯಾಂಡ್‌ನನ್ನು ಕುಡಿದು ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಒಂದು ವರ್ಷ ಚಾಲನೆಯಿಂದ ನಿಷೇಧಿಸಲಾಯಿತು. ರಾತ್ರಿ ಹೊರಗೆ ಕಳೆದ ನಂತರ ಬೆಳಿಗ್ಗೆ ವಾಹನ ಚಾಲನೆ ಮಾಡುವಾಗ ಅವನ ರಕ್ತದ ಆಲ್ಕೊಹಾಲ್ ಪ್ರಮಾಣ ಪರೀಕ್ಷಿಸಲಾಯಿತು ಹಾಗು ಮಿತಿಗಿಂತ ಒಂದು ಪಾಯಿಂಟ್ ಹೆಚ್ಚಿಗೆ ಇರುವುದು ಕಂಡುಬಂತು.[೫೫] ಈ ಅಪರಾಧ ನಿರ್ಣಯವು ಇಂಗ್ಲೆಂಡ್ ಮ್ಯಾನೇಜರ್ ಗ್ಲೆನ್ ಹಾಡಲ್, ಸೆಪ್ಟೆಂಬರ್ 10ರಂದು ವಿಶ್ವ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಾಲ್ಡೋವಾ ವಿರುದ್ಧ ಆಡುವ ತಂಡದಲ್ಲಿ ಅವನನ್ನು ಕೈಬಿಡಲು ಕಾರಣವಾಯಿತು. ಇದರಿಂದಾಗಿ ಡಂಕಾನ್ ಎಡ್ವಾರ್ಡ್ಸ್ ಅವರನ್ನು ಮೀರಿಸಿ, 18 ವರ್ಷಗಳು 10ತಿಂಗಳ ವಯಸ್ಸಿನಲ್ಲೇ ಅತೀ ಕಿರಿಯ ಇಂಗ್ಲೆಂಡ್ ಇಂಟರ್‌ನ್ಯಾಷನಲ್ ಎನಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡ.[೫೫][೫೬]

2000ದಲ್ಲಿ ಫರ್ಡಿನ್ಯಾಂಡ್ ಸೈಪ್ರಸ್‌ನ ಆಯಿಯ ನಾಪಾ ವಿಹಾರಧಾಮದಲ್ಲಿ ಸಹ ಇಂಗ್ಲೀಷ್ ಫುಟ್ಬಾಲ್ ಆಟಗಾರ ಕೀರೋನ್ ಡೈಯರ್ ಮತ್ತು ಫ್ರಾಂಕ್ ಲ್ಯಾಂಪಾರ್ಡ್ ಜತೆ ಚಿತ್ರೀಕರಿಸಿದ ಲೈಂಗಿಕವಾಗಿ ಮುಚ್ಚುಮರೆಯಿಲ್ಲದ ವಿಡಿಯೊದಲ್ಲಿ ಕಾಣಿಸಿಕೊಂಡ. ಈ ದೃಶ್ಯದ ಸಂಕ್ಷಿಪ್ತ ತುಣುಕುಗಳನ್ನು ಚಾನೆಲ್ 4 ಅದರ 2004ರ ಸಾಕ್ಷ್ಯಚಿತ್ರ ಸೆಕ್ಸ್, ಫುಟ್ಬಾಲರ್ಸ್ ಆಂಡ್ ವೀಡಿಯೊಟೇಪ್‌ ನ ಭಾಗವಾಗಿ ಪ್ರಕಟಿಸಿತು. "ಈ ಸಾಕ್ಷ್ಯಚಿತ್ರವು ನೈಜ ಜೀವನವನ್ನು ಆಧರಿಸಿದೆ; ಎಂಬುದನ್ನು ವೀಕ್ಷಕನಿಗೆ ಜ್ಞಾಪಿಸುವ" ಸಲುವಾಗಿ ಅದನ್ನು ಬಳಸಿಕೊಳ್ಳಲಾಗಿದೆ, ಎಂದು ನಿರೂಪಿಸಿದೆ.[೫೭]

2005 ಮೇನಲ್ಲಿ, ವಾಹನಚಾಲನೆಯಿಂದ ನಾಲ್ಕನೇ ಬಾರಿ ನಿಷೇಧ ಹಾಗೂ £1,500ದಂಡನೆ ನಂತರ, ಮ್ಯಾಜಿಸ್ಟ್ರೇಟ್ ಅವರಿಂದ ಟೀಕೆಗೆ ಗುರಿಯಾದ. M6 ಮೋಟರ್‌ವೇ‌ನಲ್ಲಿ ಸುಮಾರು 2 ಮೈಲುಗಳ ದೂರದವರೆಗೆ 105.9 mph (170.4 km/h)ಸರಾಸರಿ ವೇಗದಲ್ಲಿ ಪ್ರಯಾಣಿಸುತ್ತಿದ್ದಾಗ, ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. "ಫರ್ಡಿನ್ಯಾಂಡ್ ಸಮಾಜದ ಯುವಜನರಿಗೆ ಸಕಾರಾತ್ಮಕ ಆದರ್ಶ ವ್ಯಕ್ತಿಯಾಗಿರಬೇಕಿತ್ತು. ಆದರೆ ಈ ರೀತಿಯ ವರ್ತನೆ ಸರಿಯಾದ ಸಂದೇಶವನ್ನು ಮುಟ್ಟಿಸುವುದಿಲ್ಲ" ಎಂದು ದಂಡನೆ ನೀಡುವಾಗ ಮ್ಯಾಜಿಸ್ಟ್ರೇಟ್ ಉದ್ಗರಿಸಿದರು. 2002 ಮತ್ತು 2003ರಲ್ಲಿ ವೇಗವಾಗಿ ವಾಹನ ಚಲಾಯಿಸಿದ ಕಾರಣಕ್ಕೆ ಈ ಮುಂಚೆ ಎರಡು ಬಾರಿ ನಿಷೇಧಿಸಲಾಗಿತ್ತು.[೫೮]

2006 ಅಕ್ಟೋಬರ್‌ನಲ್ಲಿ ಕ್ರಿಸ್ ಮೊಯ್ಲೆಸ್ ಶೋ ಕುರಿತು ರೇಡಿಯೊ ಸಂದರ್ಶನದ ಸಂದರ್ಭದಲ್ಲಿ,ಫರ್ಡಿನ್ಯಾಂಡ್ ಇಬ್ಬರು ಶೋರ್ತೃಗಳಿಂದ ದೂರುಗಳು ಮತ್ತು ಸಲಿಂಗ ಕಾಮಿಗಳ ಹಕ್ಕುಗಳ ಪ್ರಚಾರಕ ಪೀಟರ್ ತ್ಯಾಚೆಲ್ ಅವರಿಂದ ಟೀಕೆಗೆ ಗುರಿಯಾದರು. ಫರ್ಡಿನ್ಯಾಂಡ್ ಮೊಯ್ಲೇಸ್ ಅವರನ್ನು ಪುರುಷ ಸಲಿಂಗಕಾಮಿ(ಫ್ಯಾಗಾಟ್) ಎಂದು ಕರೆದು ಹಿಂದೆಯೇ ತಪ್ಪಾಯಿತು, ತಪ್ಪಾಯಿತು, ನಾನು ಸಲಿಂಗಿಗಳ ಬಗ್ಗೆ ತಾರತಮ್ಯ ಹೊಂದಿಲ್ಲ ಎಂದು ಹೇಳಿದರು. ತಾವು ಸಲಿಂಗಕಾಮಿ ಎಂದು ಮೊಯ್ಲೇಸ್ ತಮಾಷೆಯಾಗಿ ಹೇಳಿದಾಗ ಫರ್ಡಿನ್ಯಾಂಡ್ ಮೇಲಿನಂತೆ ಪ್ರತಿಕ್ರಿಯಿಸಿದ್ದ. BBC ರೇಡಿಯೊ 1ನಂತರ ಈ ಮಾತಿನವಿನಿಮಯವನ್ನು ಪರಿಹಾಸ್ಯವೆಂದು ತಳ್ಳಿಹಾಕಿತು. ಅವನು ಪ್ರಾಮಾಣಿಕತೆಯಿಂದ ಕ್ಷಮೆಕೇಳಿದ್ದರಿಂದ, ಅವನ ವಿಷಾದವನ್ನು ಸ್ವೀಕರಿಸಿ, ಆ ವಿಷಯವನ್ನು ಅಲ್ಲಿಗೇ ಬಿಟ್ಟುಬಿಡಲು ಸಂತೋಷವಾಗುತ್ತದೆ ಎಂದು ತ್ಯಾಚಲ್ ಹೇಳಿದರು.[೫೯]

ಇವನ್ನೂ ನೋಡಿ[ಬದಲಾಯಿಸಿ]

 • ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಶಿಕ್ಷೆಗೊಳಗಾದ ಕ್ರೀಡಾಪಟುಗಳ ಪಟ್ಟಿ.

ಉಲ್ಲೇಖಗಳು[ಬದಲಾಯಿಸಿ]

 1. David Pleat (2009-05-09). "Chelsea ban scandal: The secrets of the sting". London: Mail Online. Retrieved 2010-04-19.
 2. Rio Ferdinand (1997-11-15). "Rio Ferdinand Profile, Statistics, News, Game Log". ESPN Soccernet. Archived from the original on 2010-04-06. Retrieved 2010-04-19.
 3. ೩.೦ ೩.೧ ೩.೨ ೩.೩ ೩.೪ ೩.೫ Jackson, Jamie (12 August 2007). "His name is Rio". London: The Observer. Retrieved 5 November 2008.
 4. Parker, Helen (29 March 2008). "Caribbean property: Rio Ferdinand is ahead of the game". London: The Daily Telegraph. Archived from the original on 26 ಮೇ 2013. Retrieved 5 November 2008.
 5. ೫.೦೦ ೫.೦೧ ೫.೦೨ ೫.೦೩ ೫.೦೪ ೫.೦೫ ೫.೦೬ ೫.೦೭ ೫.೦೮ ೫.೦೯ ೫.೧೦ ೫.೧೧ Llewellyn Smith, Caspar (1 June 2008). "A united front". London: The Observer. Retrieved 6 November 2008.
 6. ೬.೦ ೬.೧ ೬.೨ ೬.೩ Jones, Chris (21 June 2002). "Rio Ferdinand: The silver lining". BBC Sport. Retrieved 6 November 2008.
 7. "The Best Possible Life Chances". Southwark Council. Archived from the original on 5 ಡಿಸೆಂಬರ್ 2008. Retrieved 6 November 2008.
 8. Hytner, David (19 May 2008). "Old boys' reunion will not prevent Cole from taking care of business". London: The Guardian. Retrieved 6 November 2008.
 9. "West Ham 1(0) – 1(0) Sheff Wed". Soccerbase. Archived from the original on 21 ಮೇ 2005. Retrieved 22 April 2008.
 10. "Hammer of the Year". West Ham United Supporters Club E&OE. Archived from the original on 13 ಮಾರ್ಚ್ 2009. Retrieved 22 April 2008.
 11. "Spaniards humbled by Leeds". BBC. 4 April 2001. Retrieved 4 November 2009.
 12. "Leeds shock Liverpool". BBC. 13 April 2001. Retrieved 4 November 2009.
 13. "Leeds see off hapless Hammers". BBC. 21 April 2001. Retrieved 4 November 2009.
 14. "ಆರ್ಕೈವ್ ನಕಲು" (PDF). Archived from the original (PDF) on 2007-06-14. Retrieved 2010-11-02.
 15. "Ferdinand banned for eight months". BBC Sport. 19 December 2003. Retrieved 26 August 2008.
 16. Harris, Nick (18 December 2003). "Motive is always considered in deciding guilt". London: The Independent. Retrieved 26 August 2008.[ಶಾಶ್ವತವಾಗಿ ಮಡಿದ ಕೊಂಡಿ]
 17. "Ferdinand ban upheld". BBC Sport. 18 March 2004. Retrieved 26 August 2008.
 18. "Ronaldo secures PFA award double". BBC Sport. 22 April 2007. Retrieved 26 June 2008.
 19. "Man Utd 0–1 Portsmouth". BBC Sport. 8 March 2008. Retrieved 26 June 2008.
 20. "Manchester United 1–0 AS Roma Result". Premiership Latest. 9 April 2008. Archived from the original on 13 ಏಪ್ರಿಲ್ 2008. Retrieved 26 June 2008.
 21. Ian McGarry (28 April 2008). "How United lost the plot". The Sun. Archived from the original on 6 ಜೂನ್ 2011. Retrieved 20 August 2008.
 22. Ian McGarry (30 April 2008). "This is what Rio did to my leg". The Sun. Archived from the original on 6 ಜೂನ್ 2011. Retrieved 17 March 2009.
 23. "Ferdinand signs new Man Utd deal". BBC Sport. 15 May 2008. Retrieved 15 May 2008.
 24. Gemma Thompson (21 May 2008). "Report: MU 1 (6) Chelsea 1 (5)". ManUtd.com. Retrieved 26 June 2008.
 25. "Ferdinand condemns Fifa on racism". BBC Sport. 8 October 2008. Retrieved 8 October 2008.
 26. "Ferdinand gets four-match ban for violent conduct". The Times of India. 2010-01-28. Retrieved 2010-04-19.
 27. "New skipper Ferdinand has scandals of his own". Express.co.uk. 2010-02-06. Retrieved 2010-04-19.
 28. http://www.skysports.com/ಫುಟ್ಬಾಲ್/ವಿಶ್ವ-ಕಪ್-2010/ಕಥೆ/0,27032,12098_6180424,00.html[ಶಾಶ್ವತವಾಗಿ ಮಡಿದ ಕೊಂಡಿ]]]
 29. "Gattuso wonder goal sinks England". BBC News. 15 November 2000.
 30. ಸೋರ್ಸ್: ದಿ ಕಂಪ್ಲೀಟ್ ಬುಕ್ ಆಫ್ ದಿ ವರ್ಲ್ಡ್ ಕಪ್ 2006 , ಕ್ರಿಸ್ ಫ್ರೆಡ್ಡಿ
 31. "England squad finalised". The FA. 22 March 2008. Archived from the original on 24 ಮಾರ್ಚ್ 2008. Retrieved 22 April 2008.
 32. BBC ಸ್ಪೋರ್ಟ್ – ಫರ್ಡಿನ್ಯಾಂಡ್ ಮಸ್ಟ್ ಶಾರ್ಪನ್ ಅಪ್
 33. BBC ಸ್ಪೋರ್ಟ್- ಜಾನ್ ಟೆರಿ ಸ್ಟ್ರಿಪ್ಡ್ ಆಫ್ ಇಂಗ್ಲೆಂಡ್ ಕ್ಯಾಪ್ಟೆನ್ಸಿ ಬೈ ಕೆಪೇಲೊ
 34. Smith, Rory (4 June 2010). "Rio Ferdinand: England defender and captain at World Cup 2010". The Daily Telegraph. London. Archived from the original on 25 ಫೆಬ್ರವರಿ 2010. Retrieved 2 ನವೆಂಬರ್ 2010.
 35. "England's Most Capped Black Players". England football online. November 2009. Retrieved 2010-06-04.
 36. "Rio Ferdinand out of England World Cup squad". BBC Sport. 4 June 2010. Retrieved 2010-06-04.
 37. ಇತರ ಸ್ಪರ್ಧಾತ್ಮಕ ಪೈಪೋಟಿಗಳು,ಅಂದರೆ FA ಕಮ್ಯುನಿಟಿ ಶೀಲ್ಡ್, UEFA ಸೂಪರ್ ಕಪ್, ಇಂಟರ್ ಕಾಂಟಿನೆಂಟಲ್ ಕಪ್, FIFA ಕ್ಲಬ್ ವರ್ಲ್ಡ್ ಕಪ್ ಒಳಗೊಂಡಿವೆ.
 38. "Rio Ferdinand". StretfordEnd.co.uk. Retrieved 24 October 2010.
 39. http://www.national-football-teams.com/v2/player.php?id=2210
 40. "Rio's bro checked by Fergie". The Sun. 15 March 2008. Archived from the original on 6 ಜೂನ್ 2011. Retrieved 24 March 2008.
 41. Ferdinand, Rio (2007). Rio: My Story. Headline Book Publishing. ISBN 0755315332. {{cite book}}: Unknown parameter |coauthors= ignored (|author= suggested) (help)
 42. Box, Greig (20 July 2007). "Rio Ring Surprise". The Daily Mirror. Retrieved 6 November 2008.[ಶಾಶ್ವತವಾಗಿ ಮಡಿದ ಕೊಂಡಿ]
 43. "Rio Ferdinand names his kids after actor Larenz Tate". The Daily Mirror. 14 August 2008. Retrieved 6 November 2008.
 44. http://www.thesun.co.uk/sol/homepage/news/63835/Rio-My-shock-at-race-jibe.html[ಶಾಶ್ವತವಾಗಿ ಮಡಿದ ಕೊಂಡಿ]
 45. http://www.thefreelibrary.com/Why+Faria+Alam+is+a+not-so-sweet+FA.-a0137244187[ಶಾಶ್ವತವಾಗಿ ಮಡಿದ ಕೊಂಡಿ]
 46. McGrath, Mike (9 October 2009). "Ferdinand plans showbiz charity bash". The Independent. London. Retrieved 22 May 2010.
 47. "The record doctor: Rio Ferdinand". London: The Observer. 19 June 2005. Archived from the original on 16 ಮೇ 2008. Retrieved 26 August 2008.
 48. "Rio Ferdinand makes his rapping debut". 7 August 2008. Retrieved 26 August 2008.
 49. Kelso, Paul (18 May 2006). "Rio plays for laughs on TV". London: The Guardian. Retrieved 1 December 2008.
 50. Smart, Gordon (21 June 2007). "Rio's wind-ups get the red card". The Sun. Archived from the original on 10 ಅಕ್ಟೋಬರ್ 2007. Retrieved 1 December 2008.
 51. "Ferdinand & Cole to produce film". BBC Sport. 21 November 2008. Retrieved 1 December 2008.
 52. Brennan, Stuart (17 October 2008). "Rio's a changed man". Manchester Evening News. Retrieved 1 December 2008.
 53. ದಿ ಸನ್ ನ್ಯೂಸ್‌ಪೇಪರ್, 15 ಜನವರಿ 2009
 54. ಫರ್ಡಿನ್ಯಾಂಡ್, ರಿಯೊ (2008-02-01). ದಿ ರಿಯೊ ಫರ್ಡಿನ್ಯಾಂಡ್ ಇಶ್ಯೂ. ದಿ ಅಬ್ಸರ್ವರ್ 2009-02-03ರಂದು ಮರುಸಂಪಾದಿಸಲಾಯಿತು.
 55. ೫೫.೦ ೫೫.೧ Davies, Christopher (24 November 2000). "From Del Boy land to Del Piero's equal". London: Telegraph. Archived from the original on 15 ಜೂನ್ 2010. Retrieved 29 January 2010.
 56. Moore, Glenn (3 September 1997). "Ferdinand taught lesson by England". London: Independent. Retrieved 29 January 2010.
 57. Stephen Naysmith (15 August 2004). "Channel 4 to show alleged Premiership sex video". CBS Interactive Inc. Retrieved 10 May 2010.
 58. "Rio Ferdinand banned for speeding". BBC News. 25 May 2005. Retrieved 26 August 2008.
 59. "Ferdinand brands DJ 'a faggot' on air". London: The Guardian. 2 October 2006. Retrieved 26 August 2008.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
Sporting positions
ಪೂರ್ವಾಧಿಕಾರಿ
Lucas Radebe
Leeds United captain
2001–2002
ಉತ್ತರಾಧಿಕಾರಿ
Dominic Matteo
ಪೂರ್ವಾಧಿಕಾರಿ
John Terry
England national football team captain
2010
ಉತ್ತರಾಧಿಕಾರಿ
Steven Gerrard