ರಿತು ಕರಿಧಾಲ್

ವಿಕಿಪೀಡಿಯ ಇಂದ
Jump to navigation Jump to search
ರಿತು ಕರಿಧಾಲ್
Ritu Karidal at ISRO.jpg
ಜನ್ಮನಾಮ
ವೃತ್ತಿವಿಜ್ಞಾನಿ
ಸಕ್ರಿಯ ವರ್ಷಗಳು೧೯೯೭-ಇಂದಿನವರೆಗೆ
Works
ಮಾರ್ಸ್ ಆರ್ಬಿಟರ್ ಮಿಷನ್, ಚಂದ್ರಯಾನ-೨
ಪುರಸ್ಕಾರಗಳುಇಸ್ರೋ ಯಂಗ್ ಸೈಂಟಿಸ್ಟ್ ಪ್ರಶಸ್ತಿ

ರಿತು ಕರಿಧಾಲ್ ರವರು ಒಬ್ಬ ಭಾರತೀಯ ವಿಜ್ಞಾನಿ. ಪ್ರಸ್ತುತ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ಇಸ್ರೋ) ಜೊತೆ ಕೆಲಸ ಮಾಡುತ್ತಿದ್ದಾರೆ. ಇವರು ಭಾರತದ ಮಾರ್ಸ್ ಆರ್ಬಿಟರ್ ಮಿಷನ್, ಮಂಗಳಯಾನದ ಉಪ ಕಾರ್ಯಾಚರಣೆ ನಿರ್ದೇಶಕರಾಗಿದ್ದರು. ಏರೋಸ್ಪೇಸ್ ಎಂಜಿನಿಯರ್ ಆಗಿರುವ ಇವರು ಭಾರತದ "ರಾಕೆಟ್ ವುಮನ್" ಎಂದು ಖ್ಯಾತರಾಗಿದ್ದಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ರಿತು ಕರಿಧಾಲ್ ರವರು ಉತ್ತರ ಪ್ರದೇಶದ ಲಕ್ನೋದಲ್ಲಿ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೂ ಬಾಹ್ಯಾಕಾಶ ವಿಜ್ಞಾನದ ಮೇಲೆ ಬಹಳ ಆಸಕ್ತಿ ಹೊಂದಿದ್ದರು. ಗಂಟೆಗಳ ಕಾಲ ಆಕಾಶವನ್ನು ನೋಡುತ್ತ ಬಾಹ್ಯಾಕಾಶದ ಕುರಿತು ಯೋಚಿಸುತ್ತಿದ್ದರು. ಚಂದ್ರನು ತನ್ನ ಆಕಾರ ಮತ್ತು ಗಾತ್ರವನ್ನು ಹೇಗೆ ಬದಲಾಯಿಸುತ್ತದೆ ಎಂಬುದರ ಬಗ್ಗೆ ಆಶ್ಚರ್ಯ ಪಡುತ್ತಿದ್ದರು. ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡಿದರು ಹಾಗೂ ಕತ್ತಲೆ ಜಗತ್ತಿನ ಹಿಂದೆ ಏನಿದೆ ಎಂದು ತಿಳಿಯಲು ಬಯಸಿದ್ದರು.[೨][೩]

ವಿದ್ಯಾಭ್ಯಾಸ[ಬದಲಾಯಿಸಿ]

ಕರಿಧಾಲ್ ರವರು ಲಕ್ನೋ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಎಂಜಿನಿಯರಿಂಗ್ ನಲ್ಲಿ ಪದವಿ ಯೋಗ್ಯತಾ ಪರೀಕ್ಷೆ(ಗೇಟ್)ಯಲ್ಲಿ ಉತ್ತೀರ್ಣರಾದರು. ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತರ ಪದವಿಯನ್ನು ಮುಂದುವರಿಸಲು ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರಿಕೊಂಡರು.[೪]

ವೃತ್ತಿಜೀವನ[ಬದಲಾಯಿಸಿ]

ಕರಿಧಾಲ್ ೧೯೯೭ರಿಂದ ಇಸ್ರೋಗಾಗಿ ಕೆಲಸ ಮಾಡಿದ್ದಾರೆ. ಭಾರತದ ಮಾರ್ಸ್ ಆರ್ಬಿಟರ್ ಮಿಷನ್, ಮಂಗಳಯಾನದ ಅಭಿವೃದ್ಧಿಗೆ ಹಾಗೂ ಕ್ರಾಫ್ಟ್ನ ಸ್ವಾಯತ್ತತೆ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇವರು ಮಂಗಳಯಾನದ ಉಪ ಕಾರ್ಯಾಚರಣೆ ನಿರ್ದೇಶಕರಾಗಿದ್ದರು. ಮಂಗಳಯಾನ ಭಾರತದ ಒಂದು ಸಾಧನೆಯಾಗಿದೆ. ಭಾರತವು ವಿಶ್ವದಲ್ಲೇ ಮಂಗಳ ಗ್ರಹವನ್ನು ತಲುಪಿದ ದೇಶಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕರಿಧಾರ್ ರವರು ಪ್ರಸ್ತುತ ಚಂದ್ರಯಾನ-೨ ಮಿಷನ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.[೫][೬]

ಪ್ರಶಸ್ತಿ[ಬದಲಾಯಿಸಿ]

ಕರಿಧಾಲ್ ರವರು ೨೦೦೭ರಲ್ಲಿ ಇಸ್ರೋ ಯಂಗ್ ಸೈಂಟಿಸ್ಟ್ ಪ್ರಶಸ್ತಿಯನ್ನು ಎ.ಪಿ.ಜೆ.ಅಬ್ದುಲ್ ಕಲಾಂರವರಿಂದ ಸ್ವೀಕರಿದರು.[೭] ಮಾರ್ಸ್ ಆರ್ಬಿಟರ್ ಮಿಷನ್‌ನ ಯಶಸ್ಸನ್ನು ವಿವರಿಸುವ ಟಿಇಡಿ ಮತ್ತು ಟಿಇಡಿಎಕ್ಸ್ ಕಾರ್ಯಕ್ರಮಗಳಲ್ಲಿ ಕರಿಧಾಲ್ ಪ್ರಸ್ತುತಪಡಿಸಿದ್ದಾರೆ. ಕರಿಧಾಲ್ ಅವರಿಗೆ ಲಕ್ನೋ ವಿಶ್ವವಿದ್ಯಾಲಯ ಗೌರವ ಗೌರವ ಡಾಕ್ಟರೇಟ್ ನೀಡಿತು. ಇದನ್ನು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ಪ್ರದಾನ ಮಾಡಿದರು.

ಉಲ್ಲೇಖಗಳು[ಬದಲಾಯಿಸಿ]

  1. https://www.idiva.com/news-work-life/meet-ritu-karidhal-the-woman-behind-mangalyaan/15120277
  2. http://www.femina.in/achievers/people/ritu-karidhal-in-indias-leading-space-programme-7128.html
  3. https://upclosed.com/people/ritu-karidhal/
  4. https://www.tedxgateway.com/portfolio/ritu-karidhal-2/
  5. https://timesofindia.indiatimes.com/city/aurangabad/MOM-has-completed-a-revolution-around-Mars-ISRO-scientist-says/articleshow/55641825.cms
  6. http://corporatecitizen.in/v2-issue21/women-power-moms-of-mars-mission.html
  7. https://www.wef.org.in/ritu-karidhal/