ರಾಮ್ ಕುಮಾರ್ (ಬ್ಯಾಸ್ಕೆಟ್‌ಬಾಲ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಮ್ ಕುಮಾರ್ (೧೯೬೪ ಫೆಬ್ರವರಿ ೪ರಂದು ಜನನ) ಮಾಜಿ ಭಾರತದ ಬ್ಯಾಸ್ಕೆಟ್‌ಬಾಲ್‌ ಆಟಗಾರ ಮತ್ತು ಪ್ರಸಕ್ತ ಭಾರತದ ಕಿರಿಯರ ತಂಡದ ಕೋಚ್(ತರಬೇತುದಾರ).[೧] ಅವರು ೧೯೮೫ ಮತ್ತು ೧೯೯೬ರ ಅವಧಿಯಲ್ಲಿ ಭಾರತದ ಪರ ಆಡಿದರು ಮತ್ತು ಅನೇಕ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತದ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ತಂಡವನ್ನು ಪ್ರತಿನಿಧಿಸಿದರು. ಅವರು ೧೯೯೧ರಿಂದ ೧೯೯೫ರ ಅವಧಿಯಲ್ಲಿ ಭಾರತದ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ತಂಡದ ನಾಯಕರಾಗಿ ಕೂಡ ಸೇವೆ ಸಲ್ಲಿಸಿದರು. ಅವರು ಶೂಟಿಂಗ್ ಗಾರ್ಡ್(ಚೆಂಡು ಎಸೆತದ ರಕ್ಷಕ ಅಥವಾ ಸ್ಕೋರ್ ಮಾಡುವುದು)ಸ್ಥಾನದಲ್ಲಿ ಆಡಿದರು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ರಾಮ್ ಕುಮಾರ್ ಭಾರತೀಯ ರೈಲ್ವೆಯನ್ನು ಪ್ರತಿನಿಧಿಸಿದ್ದರು. ಅವರು ಆಡಿದ ದಿನಗಳಲ್ಲಿ ಭಾರತೀಯ ರೈಲ್ವೇಸ್ ೮ ಚಿನ್ನದ ಪದಕಗಳು, ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದಿತ್ತು. ರಾಮ್ ಕುಮಾರ್ ಮಾಜಿ ಬ್ಯಾಸ್ಕೆಟ್‌ಬಾಲ್ ಆಟಗಾರ, ಅರ್ಜುನ ಪ್ರಶಸ್ತಿ ಪುರಸ್ಕೃತ ಖುಷಿ ರಾಮ್ ಅವರ ಪುತ್ರ. ಅವರು ಭಾರತದ ಬ್ಯಾಸ್ಕೆಟ್‌ಬಾಲ್‌ ಆಟದಲ್ಲಿ ಜೀವಮಾನದ ಸಾಧನೆಗಾಗಿ ೨೦೦೩ರಲ್ಲಿ ಧ್ಯಾನ್ ಚಂದ್ ಪ್ರಶಸ್ತಿಗೆ ಪುರಸ್ಕೃತರಾದರು.[೨]

ವೃತ್ತಿಜೀವನ[ಬದಲಾಯಿಸಿ]

ಅವರು ೧೯೮೩ರಲ್ಲಿ ಕಲ್ಲಿಕೋಟೆಯಲ್ಲಿ ತಮ್ಮ ಪ್ರಥಮ ರಾಷ್ಟ್ರೀಯ ಚಾಂಪಿಯನ್‌ಷಿಪ್ ಆಡುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ರಾಮ್ ಕುಮಾರ್ ಮೊದಲಿಗೆ ಜೈಪುರದ ಆದಾಯತೆರಿಗೆ ಇಲಾಖೆ ಉದ್ಯೋಗಕ್ಕೆ ಸೇರಿದರು. ನಂತರ ೧೯೮೭ರ ವರ್ಷದಲ್ಲಿ ಅವರು ಪಶ್ಚಿಮ ರೈಲ್ವೆಗೆ ನೇಮಕವಾದರು. ರೈಲ್ವೆಯ ಸುದೀರ್ಘ ಸೇವೆಯ ಅನುಭವಿ ನೌಕರ ಎಂದೂ ಹೆಸರಾಗಿದ್ದ ಅವರು ತಮ್ಮ ತಂದೆ ಖುಷಿ ರಾಮ್ ಹೆಜ್ಜೆಗಳನ್ನು ಅನುಸರಿಸಿ, ಬ್ಯಾಸ್ಕೆಟ್‌ಬಾಲ್ ಆಟಗಾರರಾಗಿ ರೂಪುಗೊಂಡರು,. ೨೦೦೩ನೇ ವರ್ಷದಲ್ಲಿ ಅವರಿಗೆ ಪ್ರತಿಷ್ಠಿತ ಧ್ಯಾನ್ ಚಂದ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಮತ್ತು ರಾಜಸ್ಥಾನದ ಅತ್ಯುತ್ತಮ ಕ್ರೀಡಾಪಟುವೆಂದು ೧೯೮೯ರ ವರ್ಷದಲ್ಲಿ ಮಹಾರಾಣಾ ಪ್ರತಾಪ್ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು. ಮಾಜಿ ಒಲಿಂಪಿಯನ್ ಅಜ್ಮೆರ್ ಸಿಂಗ್ ಅವರು ರಾಮ್ ಕುಮಾರ್ ಸಮಕಾಲೀನರಾಗಿದ್ದು, ಅವರು ಕೋರ್ಟ್‌(ಕ್ರೀಡಾಂಗಣ)ನಲ್ಲಿ ಆಡುವಾಗ ಉತ್ತಮ ಜೋಡಿಯಾಗಿದ್ದರು. ಕುಮಾರ್ ಭಾರತದ ಪರ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಅಗ್ರ ಸ್ಕೋರುಗಳನ್ನು ಗಳಿಸಿದ್ದಾರೆ. ಅವರ ಕಿರಿಯ ಸಹೋದರ ಅಶೋಕ್ ಕುಮಾರ್ ಕೂಡ ಮಾಜಿ ಅಂತಾರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಆಟಗಾರರಾಗಿದ್ದು, ಭಾರತದ ಮಾಜಿ ನಾಯಕ ಕೂಡ ಆಗಿದ್ದಾರೆ. ರಾಮ್‌ಕುಮಾರ್ ಇದುವರೆಗೆ ಭಾರತ ತಯಾರಿಸಿದ ಅತ್ಯುತ್ತಮ ಶೂಟರ್(ಚೆಂಡನ್ನು ಬ್ಯಾಸ್ಕೆಟ್‌ನಲ್ಲಿ ಹಾಕುವುದು)ಗಳಲ್ಲಿ ಒಬ್ಬರಾಗಿದ್ದಾರೆ.

ಕುಮಾರ್ ೨೦೦೩ರಲ್ಲಿ ಅವರ ನಿವೃತ್ತಿ ನಂತರ, "ಭಾರತದ ರೈಲ್ವೆಯ ಬ್ಯಾಸ್ಕೆಟ್‌ಬಾಲ್ ತಂಡ"ದ ಕೋಚ್‌(ತರಬೇತುದಾರ) ಆಗಿ ಸೇವೆ ಸಲ್ಲಿಸಿದರು. ಅವರು ೨೦೦೩ ಮತ್ತು ೨೦೦೪ರಲ್ಲಿ ಭಾರತದ ಕಿರಿಯರ ಬ್ಯಾಸ್ಕೆಟ್‌ಬಾಲ್ ತಂಡಕ್ಕೆ ಕೋಚ್ ಆಗಿದ್ದರು. ಈ ತಂಡವು ಕುವೈಟ್ ಮತ್ತು ಬಾಂಗ್ಲಾದೇಶಗಳಲ್ಲಿ ಆಡಿದ್ದು, ಅಲ್ಲಿ ಅದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ. ಪ್ರಸಕ್ತ ಅವರು ಕಪೂರ್ತಲಾದ ರೈಲ್ವೆ ಬೋಗಿ ತಯಾರಿಕೆ ಕಾರ್ಖಾನೆಯಲ್ಲಿ ಕ್ರೀಡಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ೨೦೧೦ರಲ್ಲಿ ಅವರು ಯೆಮನ್‌ನಲ್ಲಿ ನಡೆದ ೨೧ನೇ FIBAಏಷ್ಯಾ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಏಷ್ಯಾ ವಲಯದ ಅರ್ಹತಾ ಸುತ್ತಿನಲ್ಲಿ ಜಯಗಳಿಸಿದ ಭಾರತೀಯ ತಂಡಕ್ಕೆ ಕೋಚ್ ಆಗಿದ್ದರು[೩]

ಅಂತಾರಾಷ್ಟ್ರೀಯ ಕ್ಷೇತ್ರಗಳಲ್ಲಿ ಸಾಧನೆ
  • ೧೯೮೭ರಲ್ಲಿ ನವದೆಹಲಿಯ ವಿಶ್ವ ರೈಲ್ವೆ ಕ್ರೀಡಾಕೂಟದಲ್ಲಿ ಪಂದ್ಯಾವಳಿಯ ಅಗ್ರ ಸ್ಕೋರರ್ ಎನಿಸಿದರು.
  • ೧೯೯೧ರಂದು COLOMBOದ S.A.F GAMESನಲ್ಲಿ ಅತ್ಯುತ್ತಮ ಆಟಗಾರ.
  • ೧೯೯೫ರ ಸಿಯೋಲ್ ಏಷ್ಯನ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದಿಂದ ಅಗ್ರ ಸ್ಕೋರರ್.
  • ೧೯೮೭ರಂದು ಬ್ಯಾಂಕಾಕ್‌ನ ಏಷ್ಯನ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಏಷ್ಯಾದ ೩ನೇ ಬಿರುಸಿನ ಸ್ಕೋರು ಗಳಿಸುವವರು(ಶೂಟರ್) ಎಂದು ಘೋಷಿಸಲಾಯಿತು.
  • BEST SCORER FROM INDIA AT S.A.F GAMES IN CHENNAI IN ೧೯೯೫
  • ೨೦೦೩ರಲ್ಲಿ ರಷ್ಯಾದಲ್ಲಿ ವಿಶ್ವ ರೈಲ್ವೆ ಕ್ರೀಡಾಕೂಟದಲ್ಲಿ ಅಗ್ರ ಶೂಟರ್(ಸ್ಕೋರ್ ಗಳಿಸುವುದು)ಆಗಿದ್ದರು.
  • ೧೯೯೩ರಲ್ಲಿ ಇಂಡೋನೇಶಿಯದ ANGSAPURA ಆಹ್ವಾನಿತ ಪಂದ್ಯಾವಳಿಯ ಅತ್ಯುತ್ತಮ ೩ ಪಾಯಿಂಟ್ ಶೂಟರ್(ಮೂರು ಪಾಯಿಂಟ್ ಗೆರೆಯಾಚೆಯಿಂದ ಚೆಂಡು ಎಸೆಯುವುದು) ಆಗಿದ್ದರು.
  • ೧೯೯೨ರಲ್ಲಿ NEW YORKನಲ್ಲಿ U.S.Aವಿರುದ್ಧ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತ್ಯುತ್ತಮ ಶೂಟರ್ ಎನಿಸಿದರು.
  • TEHRAN (IRAN)ನಲ್ಲಿ IRAN ವಿರುದ್ಧ ೧೯೮೮ರಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಅತ್ಯುತ್ತಮ ಶೂಟಿಂಗ್ ಗಾರ್ಡ್ ಆಗಿದ್ದರು.ಅಲ್ಲಿ ಅವರು ಪ್ರತಿ ಪಂದ್ಯದಲ್ಲಿ ಸರಾಸರಿ ೩೫-೩೬ಪಾಯಿಂಟ್‌ಗಳನ್ನು ಗಳಿಸಿದರು.

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

  • ಧ್ಯಾನ್ ಚಂದ್ ಪ್ರಶಸ್ತಿ (೨೦೦೩)
  • ಮಹಾರಾಣಾ ಪ್ರತಾಪ್ ಪ್ರಶಸ್ತಿ (೧೯೮೯)
  • ರೈಲ್ವೆ ಸಚಿವ ಪ್ರಶಸ್ತಿ (೧೯೯೪)

ಉಲ್ಲೇಖಗಳು[ಬದಲಾಯಿಸಿ]

  1. "33 sportspersons honoured". The Tribune. 29 August 2003. Retrieved ೧೦ September ೨೦೧೦. {{cite news}}: Check date values in: |accessdate= (help)
  2. "More Arjun award winners list- many are proud jats". 22 August 2003. Retrieved 10 September 2010.
  3. "India triumphs in Asia zone qualifier". ದಿ ಹಿಂದೂ. 15 August 2010. Retrieved ೧೦ September ೨೦೧೦. {{cite news}}: Check date values in: |accessdate= (help)