ರಾಬರ್ಟ್‌ ಪ್ಯಾಟಿನ್ಸನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಬರ್ಟ್‌ ಪ್ಯಾಟಿನ್ಸನ್
Robert Pattinson Cropped.jpg
Pattinson in November 2009
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1986-05-13) ೧೩ ಮೇ ೧೯೮೬(ವಯಸ್ಸು ೩೦)
ಲಂಡನ್, ಇಂಗ್ಲೆಂಡ್
ಬೇರೆ ಹೆಸರುಗಳು RPattz,[೧] Spunk Ransom[೨] (nicknames)
ವೃತ್ತಿ Actor, model, musician
ವರ್ಷಗಳು ಸಕ್ರಿಯ 2004–present

ರಾಬರ್ಟ್‌ ಥಾಮಸ್ ಪ್ಯಾಟಿನ್ಸನ್ [೩]{ಜನನ 13 ಮೇ 1986){2/} ಒಬ್ಬ ಆಂಗ್ಲ ನಟ,ರೂಪದರ್ಶಿ ಮತ್ತು ಸಂಗೀತಕಾರ.[೪] ಅವರು ಸ್ಟೆಫೆನೀ ಮೇಯರ್ ಎಂಬ ಲೇಖಕನ ಕಾದಂಬರಿ ಟ್ವಿಲೈಟ್ ನ ಆಧಾರಿತವಾಗಿ ನಿರ್ಮಿಸಿದ ಟ್ವಿಲೈಟ್ ಎಂಬ ಚಿತ್ರದ ಎಡ್ವರ್ಡ್ ಕಲ್ಲೆನ್ ಎಂಬ ಪಾತ್ರಕ್ಕಾಗಿ, ಮತ್ತು ಹ್ಯಾರಿ ಪಾಟರ್ ಅಂಡ್ ದ ಗಾಬ್ಲೆಟ್ ಆಫ್ ಫೈರ್ ಚಿತ್ರದ ಸೆರ್ಡಿಕ್ ಡಿಗ್ಗೊರಿ ಎಂಬ ಪಾತ್ರಕ್ಕಾಗಿ ಸಹ ಅತ್ಯಂತ ಪ್ರಸಿದ್ಧರಾಗಿದ್ದಾರೆ.[೫][೬][೭]


ಆರಂಭಿಕ ಜೀವನ[ಬದಲಾಯಿಸಿ]

ಪ್ಯಾಟಿನ್ಸನ್ ಅವರು ಲಂಡನ್‌ನಲ್ಲಿ ಹುಟ್ಟಿದರು. ಅವರ ತಾಯಿ ಕ್ಲೇರ್ ಒಂದು ರೂಪದರ್ಶಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು, ಹಾಗೂ ಅವರ ತಂದೆ, ರಿಚರ್ಡ್, ಹಳೆಯ ಕಾಲದ ಅತ್ಯುತ್ತಮ ಕಾರುಗಳನ್ನು ಅಮೇರಿಕ ಸಂಯುಕ್ತ ಸಂಸ್ಥಾನದಿಂದ ಆಮದು ಮಾಡುವ ಕೆಲಸ ನಿರ್ವಹಿಸುತ್ತಿದ್ದರು.[೮] ಪ್ಯಾಟಿನ್ಸನ್ ಅವರು ಟವರ್ ಹೌಸ್ ಸ್ಕೂಲ್ ಮತ್ತು ಹೆರೋಡಿಯನ್ ಸ್ಕೂಲ್ ನಲ್ಲಿ ಓದಿದರು.[೯] ಅವರು ಬಾರ್ನ್ಸ್ ಥಿಯೇಟರ್ ಕಂಪನಿಯ ಮೂಲಕ ಹವ್ಯಾಸಿ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ರಂಗಸ್ಥಳದ ಹಿನ್ನೆಲೆಯ ಕೆಲಸದಲ್ಲಿ ಸ್ವಲ್ಪ ಕಾಲ ಅನುಭವ ಹೊಂದಿದ ನಂತರ ಅವರು ನಟನೆಯನ್ನು ಪ್ರಾರಂಭಿಸಿದರು. ಟೆಸ್ಸ್ ಆಫ್ ದ ಡಿ'ಅರ್ಬೆರ್ವಿಲ್ಲೆಸ್ ಚಿತ್ರದ ನಿರ್ಮಾಣದ ಸಂದರ್ಭದಲ್ಲಿ ಇವರು ಒಬ್ಬ ನಟನಾ ಮಧ್ಯವರ್ತಿಯ ಗಮನ ಸೆಳೆದರು ಮತ್ತು ಆನಂತರದಲ್ಲಿ ವೃತ್ತಿಪರ ಪಾತ್ರಗಳಿಗಾಗಿ ನೋಡಲು ಪ್ರಾರಂಭಿಸಿದರು. ಪ್ಯಾಟಿನ್ಸನ್ ಇಬ್ಬರು ಅಕ್ಕಂದಿರನ್ನು ಹೊಂದಿದ್ದು, ಅವರಲ್ಲಿ ಒಬ್ಬರಾದ ಲಿಜ್ಜಿ ಪ್ಯಾಟರ್ಸನ್ ಒಬ್ಬ ಹಾಡುಗಾರ್ತಿಯಾಗಿದ್ದಾರೆ.[೧೦][೧೧]


ವೃತ್ತಿ[ಬದಲಾಯಿಸಿ]

ಮಾಡೆಲಿಂಗ್[ಬದಲಾಯಿಸಿ]

ಪ್ಯಾಟಿನ್ಸನ್ 12 ವರ್ಷದವರಿರುವಾಗಲೇ ರೂಪದರ್ಶಿಯಾಗಿ ಕೆಲಸ ಪ್ರಾರಂಭಿಸಿದರು, ಆದರೆ ಅವರು ನಾಲ್ಕು ವರ್ಷಗಳಲ್ಲಿಯೇ ವೃತ್ತಿಯಲ್ಲಿ ಇಳಿಮುಖ ಕಂಡರು. ಆ ವೃತ್ತಿಯಲ್ಲಿ ಅವರಿಗೆ ಕೆಲಸ ಕಡಿಮೆಯಾಗುವುದಕ್ಕೆ ಕಾರಣ ತಮ್ಮ ರೂಪದಲ್ಲಿ ಹೆಚ್ಚಿನ ಪುರುಷತೆಯು ವ್ಯಕ್ತವಾಗಿ ಕಾಣುವುದು ಕಾರಣ ಎಂದು ಆರೋಪಿಸಿಕೊಂಡಿದ್ದಾರೆ. ಪ್ಯಾಟಿನ್ಸನ್ ಅವರು ಡಿಸೆಂಬರ್ 2008 ರಲ್ಲಿ "ನಾನು ಮೊದಲು ಈ ವೃತ್ತಿಯನ್ನು ಪ್ರಾರಂಭಿಸಿದಾಗ ಸ್ವಲ್ಪ ಉದ್ದವಾಗಿ ಹುಡುಗಿಯಂತೆ ಕಾಣುತ್ತಿದ್ದೆ. ಆದ್ದರಿಂಗ ಬಹಳಷ್ಟು ಕೆಲಸಗಳು ದೊರಕಿದವು. ಏಕೆಂದರೆ ಆ ಸಮಯದಲ್ಲಿ ಉಭಯಲಿಂಗಿಗಳಾಗಿ ಕಾಣಿಸಿಕೊಳ್ಳುವುದಕ್ಕೆ ಒಳ್ಳೆಯ ಬೇಡಿಕೆ ಇತ್ತು. ಆನಂತರ, ನನಗನ್ನಿಸುತ್ತದೆ, ನನ್ನಲ್ಲಿ ಪುರುಷರೂಪ ಹೆಚ್ಚಿನದಾಗಿ ವ್ಯಕ್ತವಾಗತೊಡಗಿತು, ಆದ್ದರಿಂದ ನನಗೆ ಮತ್ತೆ ಯಾವುದೇ ಕೆಲಸ ದೊರಕಲಿಲ್ಲ. ಆ ಸಮಯದಲ್ಲಿ ನಾನು ಬಹಳ ವಿಫಲವಾದ ರೂಪದರ್ಶಿ ವೃತ್ತಿಜೀವನವನ್ನು ನಡೆಸಬೇಕಾಯಿತು" ಎಂದು ವಿವರಣೆ ನೀಡಿದ್ದಾರೆ.[೧೨] ಪ್ಯಾಟಿನ್ಸನ್ ಅವರು ನಂತರ ಹಾಕೆಟ್‌ನ ಆಟಮ್ 2007 ಸಂಗ್ರಹದ ಪ್ರಚಾರದ ಜಾಹೀರಾತಿನಲ್ಲಿ ಕಾಣಿಸಿಕೊಂಡರು.[೧೩]


ನಟನಾವೃತ್ತಿ[ಬದಲಾಯಿಸಿ]

2008ರಲ್ಲಿ ಟ್ವಿಲೈಟ್ ಚಿತ್ರದ ಮೊದಲ ಪ್ರದರ್ಶನದಲ್ಲಿ ಪ್ಯಾಟಿನ್ಸನ್.

2004 ರಲ್ಲಿ ದೂರದರ್ಶನದ ಪ್ರಸಾರಕ್ಕಾಗಿ ತಯಾರಿಸಿದ ರಿಂಗ್ ಆಫ್ ದ ನೀಬೆಲಂಗ್ಸ್ ಚಲನಚಿತ್ರದಲ್ಲಿ ಪ್ಯಾಟರ್ಸನ್ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು ಹಾಗೂ ನಿರ್ದೇಶಕಿ ಮೀರಾ ನಾಯರ್ ಅವರ ವ್ಯಾನಿಟಿ ಫೇರ್ ಚಿತ್ರದಲ್ಲಿ ನಟಿಸಿದರೂ ಸಹ ಇವರು ನಟಿಸಿದ ದೃಶ್ಯಗಳನ್ನು ಅಳಿಸಿಹಾಕಲಾಯಿತು ಮತ್ತು ಇವರ ಪಾತ್ರ ಡಿವಿಡಿ ರೂಪದಲ್ಲಿ ಮಾತ್ರ ಉಳಿಯಿತು.[೧೪] ಮೇ 2005 ರಲ್ಲಿ, ಯುಕೆ ಯ ರಾಯಲ್ ಕೋರ್ಟ್ ಚಿತ್ರಮಂದಿರದಲ್ಲಿ ನಡೆದ ದ ವುಮನ್ ಬಿಫೋರ್ ನ ಪ್ರಾರಂಭಿಕ ಪ್ರದರ್ಶನದಲ್ಲಿ ಭಾಗವಹಿಸಲು ಇವರು ಆಯ್ಕೆಯಾದರು ಆದರೆ ಶೀಘ್ರದಲ್ಲೇ ಪ್ರಾರಂಭಿಕ ಪ್ರದರ್ಶನದ ರಾತ್ರಿಯ ಮುನ್ನ ಇವರನ್ನು ಅಲ್ಲಿಂದ ಹೊರಹಾಕಲಾಯಿತು ಮತ್ತು ಟೋಮ್ ರಿಲೇ ಎಂಬ ವ್ಯಕ್ತಿಯನ್ನು ಆಯ್ಕೆಮಾಡಲಾಯಿತು.[೧೫] ಆ ವರ್ಷದ ಕೊನೆಯಲ್ಲಿ ಅವರು ಹ್ಯಾರಿ ಪಾಟರ್ ಅಂಡ್ ದ ಗಾಬ್ಲೆಟ್ ಆಫ್ ಫೈರ್ ಚಿತ್ರದ ಸೆರ್ಡಿಕ್ ಡಿಗ್ಗೊರಿ ಪಾತ್ರದಲ್ಲಿ ನಟಿಸಿದರು.

ಈ ನಟನೆಗಾಗಿ ದ ಟೈಮ್ಸ್ ಪತ್ರಿಕೆಯು ಅವರಿಗೆ ಆ ವರ್ಷದ ಭವಿಷ್ಯದ ಬ್ರಿಟಿಷ್ ತಾರೆ (ಬ್ರಿಟಿಶ್ ಸ್ಟಾರ್ ಆಫ್ ಟುಮಾರೋ) ಎಂದು ಬಿರುದು ನೀಡಿತು.[೧೬] ಇವರನ್ನು ಮತ್ತೊಬ್ಬ ಜೂಡ್ ಲಾ ಎಂಬುದಾಗಿ ಅನೇಕ ಬಾರಿ ಹೊಗಳಲಾಯಿತು.[೯][೧೭][೧೮]


ಪ್ಯಾಟಿನ್ಸನ್ ಅವರು ಸ್ಟೆಫೆನಿ ಮೇಯರ್ ಎಂಬ ಲೇಖಕನ ಟ್ವಿಲೈಟ್‌ ಎಂಬ ಕಾದಂಬರಿ ಆಧಾರಿತ ಟ್ವಿಲೈಟ್‌ ಎಂಬ ಹೆಸರಿನದೇ ಚಿತ್ರದಲ್ಲಿ ಎಡ್ವರ್ಡ್ ಕಲ್ಲೆನ್ ಎಂಬ ಪಾತ್ರದಲ್ಲಿ ನಟಿಸಿದರು ಹಾಗೂ ಆ ಕಾದಂಬರಿ 21 ನವಂಬರ್ 2008 ರಲ್ಲಿ ಬಿಡುಗಡೆಯಾಯಿತು ಮತ್ತು ಬಹಳ ಬೇಡಿಕೆಯೊಂದಿಗೆ ಮಾರಾಟವಾಯಿತು. ಟಿವಿ ಗೈಡ್ ಪ್ರಕಾರ, ಎಡ್ವರ್ಡ್ ಕಲ್ಲೆನ್ ಪಾತ್ರಕಾಗಿ ಇವರ ನಟನಾ ಪರೀಕ್ಷೆ ಮಾಡುವ ಸಂದರ್ಭದಲ್ಲಿ, ಇವರು ಆ ಪಾತ್ರಕ್ಕೆ ತಾನು ಸಂಪೂರ್ಣವಾಗಿ ನ್ಯಾಯ ಒದಗಿಸಲಾರೆನೇನೋ, ತನ್ನಿಂದ ಆ ಪಾತ್ರ ಬಯಸುವ ಪರಿಪೂರ್ಣತೆಯನ್ನು ಒದಗಿಸಲು ಸಾಧ್ಯವಿಲ್ಲವೇನೋ ಎಂಬ ಭಯ ಹೊಂದಿದ್ದರು.[೧೯] ಆದರೆ ಟ್ವಿಲೈಟ್‌ ಚಿತ್ರದ ಮುಂದುವರೆದ ಭಾಗಗಳಲ್ಲೂ'The Twilight Saga: New Moon ಸಹ ಎಡ್ವರ್ಡ್ ಕಲ್ಲೆನ್ ಪಾತ್ರವನ್ನು ಮಾಡಿದರು ಮತ್ತು ಮುಂದಿನ ಎಕ್ಲಿಪ್ಸ್ ಎಂಬ ಚಿತ್ರದ ಚಿತ್ರೀಕರಣ ಅಗಸ್ಟ್ 2009 ರಲ್ಲಿ ಪ್ರಾರಂಭವಾಗಿ ಜೂನ್ 30, 2010 ರಲ್ಲಿ ಬಿಡುಗಡೆಯಾದ ಚಿತ್ರದಲ್ಲೂ ಅವರು ನಟಿಸಿದರು.[೨೦]


ಪ್ಯಾಟಿನ್ಸನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ ಚಲನಚಿತ್ರಗಳೆಂದರೆ ಲಿಟಲ್ ಆ‍ಯ್‌ಶಸ್ (ಇದರಲ್ಲಿ ಅವರು ಸಾಲ್ವಡೋರ್ ಡಾಲಿ ಎಂಬ ಪಾತ್ರ ನಿರ್ವಹಿಸಿದರು), ಹೌ ಟು ಬಿ (ಬ್ರಿಟಿಷ್ ಹಾಸ್ಯಚಿತ್ರ) ಮತ್ತು ಕಿರುಚಿತ್ರ ದ ಸಮ್ಮರ್ ಹೌಸ್ .

2009 ರಲ್ಲಿ ಪ್ಯಾಟಿನ್ಸನ್ ಅವರು 81 ನೆಯ ಅಕಾಡಮಿ ಪುರಸ್ಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದರು.[೨೧] ನವಂಬರ್ 10 ರಂದು ರೆವೊಲ್ವರ್ ಎಂಟರ್ಟೈನ್ಮೆಂಟ್ ಅವರು ರೊಬ್ಸೆಸ್ಸಡ್ ಎಂಬ ಸಾಕ್ಷ್ಯಚಿತ್ರದ ಡಿವಿಡಿಯನ್ನು ಬಿಡುಗಡೆಮಾಡಿದರು, ಇದು ಪ್ಯಾಟಿನ್ಸನ್ ಅವರ ಜೀವನ ಮತ್ತು ಜನಪ್ರಿಯತೆಯ ಬಗ್ಗೆ ವಿವರವನ್ನು ಒಳಗೊಂಡಿದೆ.[೨೨] ರೇಡಿಯೋ ಮಾಹಿತಿ ಫಲಕದ ಪ್ರಕಾರ 10 ಜನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಪ್ಯಾಟಿನ್ಸನ್ ಅವರು $10 ಮಿಲಿಯನ್ ಮತ್ತು ಟ್ವಿಲೈಟ್‌ ಚಿತ್ರದಿಂದ ($16 ಮಿಲಿಯನ್) ಸಂಭಾವನೆ ಪಡೆದು 10 ನೆಯ ಸ್ಥಾನದಲ್ಲಿದ್ದರು.

2010 ರಲ್ಲಿ ಪ್ಯಾಟಿನ್ಸನ್ ಅವರು 1885 ರ ಕಾದಂಬರಿ ಬೆಲ್ ಆಮಿ ಆಧಾರಿತ ಚಿತ್ರದಲ್ಲಿ ಜಾರ್ಜ್ ಡ್ಯುರೋಯ್ ಪಾತ್ರದಲ್ಲಿ ಮಿಂಚಲಿದ್ದಾರೆ.[೨೩] ಅವರು ಡೇವಿಡ್ ಪುಹ್ ನಿರ್ದೇಶನದ ರಂಗಭೂಮಿ ನಿರ್ಮಾಣದಲ್ಲೂ ಸಹ ಕಾಣಿಸಿಕೊಳ್ಳಲಿದ್ದಾರೆ.[೨೪] ಪ್ಯಾಟಿನ್ಸನ್ ಅವರು ಮಾರ್ಚ್ 12,2010[೨೫] ರಂದು ಬಿಡುಗಡೆಯಾಗುವ ರಿಮೆಂಬರ್ ಮಿ ಎಂಬ ಚಿತ್ರದಲ್ಲೂ ಸಹ ಮಿಂಚಲಿದ್ದಾರೆ ಮತ್ತು ಸದ್ಯ ಸಾರಾ ಗ್ರುಯೆನ್ ಅವರ ವಾಟರ್ ಫಾರ್ ಎಲಿಫಂಟ್ಸ್ ಎಂಬ ಕಾದಂಬರಿ ಆಧಾರಿತ ಚಿತ್ರದಲ್ಲಿ ಸಿಯಾನ್ ಪೆನ್ ಮತ್ತು ರೀಸ್ ವಿದರ್ಸ್ಪೂನ್ ಅವರೊಂದಿಗೆ ನಟಿಸಲು ಮಾತುಕತೆ ನಡೆಸುತ್ತಿದ್ದಾರೆ.[೨೬]


ಪ್ಯಾಟಿನ್ಸನ್ ಅವರು ತಮ್ಮ ಸಹ ನಟಿ ಎಮಿಲಿ ದಿ ರಾವಿನ್ ಅವರೊಂದಿಗೆ ಮಾರ್ಚ್ 2,2010 ರಂದು ದ ವ್ಯೂ ದಲ್ಲಿ ಕಾಣಿಸಿಕೊಳ್ಳಲು ಕಾರ್ಯಕ್ರಮ ನಿಗದಿತವಾಗಿದೆ.[೨೭]


ಸಂಗೀತ[ಬದಲಾಯಿಸಿ]

ಪ್ಯಾಟಿನ್ಸನ್ ಅವರು ಗಿಟಾರ್ ಮತ್ತು ಪಿಯಾನೋ ನುಡಿಸುತ್ತಾರೆ ಮತ್ತು ತಮ್ಮದೇ ಸಂಗೀತ ರಚನೆ ಮಾಡುತ್ತಾರೆ. ಅವರು ಟ್ವಿಲೈಟ್‌ ಚಿತ್ರದ ಸಂಗೀತದಲ್ಲಿ ಎರಡು ಹಾಡುಗಳನ್ನು ಹಾಡಿದ್ದಾರೆ. ಒಂದು ಸ್ಯಾಮ್ ಬ್ರಾಡ್ಲೆ[೨೮] ಅವರೊಂದಿಗೆ ಹಾಡಿನ ರಚನೆ ಮಾಡಿ "ನೆವರ್ ಥಿಂಕ್" ಎಂಬ ಹಾಡನ್ನು ಸ್ವತಃ ಹಾಡಿದ್ದಾರೆ ಹಾಗೂ ಮಾರ್ಕಸ್ ಫಾಸ್ಟರ್ ಮತ್ತು ಬಾಬಿ ಲಾಂಗ್ ಅವರು ಬರೆದ "ಲೆಟ್ ಮಿ ಸೈನ್" ಎಂಬ ಹಾಡನ್ನು ಸಹ ಹಾಡಿದ್ದಾರೆ.[೨೯] ಪ್ಯಾಟಿನ್ಸನ್ ಅವರಿಗೆ ಗೊತ್ತಿಲ್ಲದೇ ಚಿತ್ರದ ನಿರ್ದೇಶಕ ಕ್ಯಾಥರೀನ್ ಹಾರ್ಡ್ವಿಕ್ ಅವರು ಈ ಹಾಡುಗಳನ್ನು ಚಿತ್ರದಲ್ಲಿ ಸೇರಿಸಿದರು ಮತ್ತು, "ಅದರಲ್ಲಿ ವಿಶೇಷವಾಗಿ ಒಂದು ಹಾಡು ಚಿತ್ರದ ದೃಶ್ಯವನ್ನು ಮತ್ತಷ್ಟು ಉತ್ತಮಗೊಳಿಸಿದೆ. ಇದು ಆ ದೃಶ್ಯದಲ್ಲಿ ಇರಲೇಬೇಕಾದ ಹಾಡಿನಂತೆ ಇತ್ತು",[೪] ಎಂದು ಅವರು ಒಪ್ಪಿಕೊಂಡಿದ್ದಾರೆ. ಹೌ ಟು ಬಿ ಚಿತ್ರದ ಧ್ವನಿ ಸುರುಳಿಗಾಗಿ ಪ್ಯಾಟಿನ್ಸನ್[೩೦] ಅವರು ಮೂರು ಹಾಡುಗಳನ್ನು ಹಾಡಿದ್ದಾರೆ ಹಾಗೂ ಸಂಗೀತ ನಿರ್ದೇಶಕ ಜೋ ಹೇಸ್ಟಿಂಗ್ಸ್ ಅವರು ಹಾಡುಗಳನ್ನು ಬರೆದಿದ್ದಾರೆ.[೩೧]

ಧ್ವನಿ ಸುರುಳಿಗಳ ಹೊರತಾಗಿ ಪ್ಯಾಟಿನ್ಸನ್ ಅವರು ಹೇಳುತ್ತಾರೆ, "ನಾನು ಎಂದಿಗೂ ನಿಜವಾಗಿ ಧ್ವನಿಮುದ್ರಣಕ್ಕಾಗಿ ಹಾಡಲಿಲ್ಲ, ಪಬ್‌ಗಳು ಮತ್ತು ಅಂತಹ ಇತರ ಜಾಗಗಳಲ್ಲಿ ಸಂಗೀತ ನುಡಿಸಿದ್ದೇನೆ", ಮತ್ತು ಸಂಗೀತವನ್ನು ಮುಖ್ಯವೃತ್ತಿಯನ್ನಾಗಿ ಸ್ವೀಕರಿಸುವ ಬಗ್ಗೆ ಅವರ ಅಭಿಪ್ರಾಯ ಕೇಳಿದಾಗ "ನಟನೆಯಲ್ಲಿ ನಾನು ವಿಫಲನಾದಲ್ಲಿ ಸಂಗೀತವು ನನ್ನ ಬೆಂಬಲಿಸುವ ವೃತ್ತಿ" ಎಂದು ಉತ್ತರಿಸಿದರು.[೪] 2008 ರಲ್ಲಿ ಅವರು ಮೊದಲ ಬಾರಿಗೆ ತಮ್ಮ ಮೊದಲ ಪ್ರೇಯಸಿಯ ಹಾಲಿ ಪ್ರಿಯತಮನ ಬ್ಯಾಡ್‌ ಗರ್ಲ್ಸ್ ಎಂಬ ಬ್ಯಾಂಡ್‌ನಲ್ಲಿ ಪಾಲ್ಗೊಂಡು ಪ್ರದರ್ಶನ ನೀಡಿದರು.[೩೨]


ವೈಯಕ್ತಿಕ ಜೀವನ[ಬದಲಾಯಿಸಿ]

2008 ಮತ್ತು 2009 ರಲ್ಲಿ ಪೀಪಲ್ ನಿಯತಕಾಲಿಕವು ಪ್ಯಾಟಿನ್ಸನ್ ಅವರಿಗೆ ಸದ್ಯ ಜೀವಿಸುತ್ತಿರುವ ಅತ್ಯಂತ ಆಕರ್ಷಕ ಪುರುಷರಲ್ಲಿ ಒಬ್ಬರು ("ಸೆಕ್ಸಿಯೆಸ್ಟ್ ಮೆನ್ ಅಲೈವ್") ಎಂದು ಬಿರುದು ನೀಡಿತು.[೩೩][೩೪] 2009 ರಲ್ಲಿ ಗ್ಲಾಮರ್ ಪತ್ರಿಕೆಯು ಮತದಾನವನ್ನು ಏರ್ಪಡಿಸಿ ಆ ಮೂಲಕ ಪ್ಯಾಟಿನ್ಸನ್ "ಜೀವಿಸುತ್ತಿರುವ ಅತ್ಯಂತ ಆಕರ್ಷಕ ಪುರುಷ" (ಸೆಕ್ಸಿಯೆಸ್ಟ್ ಮ್ಯಾನ್ ಅಲೈವ್) ಎಂದು ಬಿರುದು ನೀಡಿತು.[೩೫] GQ ಪತ್ರಿಕೆಯು, ಪ್ಯಾಟಿನ್ಸನ್ ಅವರಿಗೆ 2010 ರ ಬ್ರಿಟನ್ನಿನ "ಬೆಸ್ಟ್ ಡ್ರೆಸ್ಡ್ ಮ್ಯಾನ್" ಎಂದು ಬಿರುದು ನೀಡಿ, "ಅತ್ಯಂತ ಮನೋಹರವಾದ ಮತ್ತು ಸ್ಫೂರ್ತಿ ನೀಡುವ, ಸಮಕಾಲೀನ ಪುರುಷರ ನಿಜವಾದ ಅಭಿವ್ಯಕ್ತಿ ಇವರು", ಎಂದು ಬರೆಯಿತು.[೩೬] ವ್ಯಾನಿಟಿ ಫೇರ್ ಪತ್ರಿಕೆಯು ಇವರಿಗೆ "2009ರಲ್ಲಿ ಹಾಲಿವುಡ್‌ನಲ್ಲಿ ಅತಿಹೆಚ್ಚು ಗಳಿಸಿದವರ ಪಟ್ಟಿ" ಯಲ್ಲಿ ಇವರ ಹೆಸರು ಸೇರಿಸಿತು. ಆ ವರ್ಷದಲ್ಲಿ ಅವರ ದುಡಿಮೆ $18 ಮಿಲಿಯನ್ ಆಗಿತ್ತು.[೩೭]


ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ಟಿಪ್ಪಣಿಗಳು
2004 ವ್ಯಾನಿಟಿ ಫೇರ್ ರಾಡಿ ಕ್ರಾಲೇ ಡಿವಿಡಿ ಬಿಡುಗಡೆಯಲ್ಲಿ ಮಾತ್ರ ಲಭ್ಯವಿದೆ.
ರಿಂಗ್ ಆಫ್ ದ ನೀಬೆಲಂಗ್ಸ್ ಗಿಸೆಲ್ಹರ್ ಕಿರುತೆರೆ ಚಿತ್ರ
2005 ಹ್ಯಾರಿ ಪಾಟರ್ ಆ‍ಯ್೦ಡ್ ದಿ ಗೋಬ್ಲೆಟ್ ಆಫ್ ಫೈರ್ ಸೆಡ್ರಿಕ್ ಡಿಗೊರಿ
2006 ದ ಹಾಂಟೆಡ್ ಏರ್‌ಮ್ಯಾನ್ ಟಾಬಿ ಜಗ್ ಕಿರುತೆರೆ ಚಿತ್ರ
2007 ದ ಬ್ಯಾಡ್ ಮದರ್ಸ್ ಹ್ಯಾಂಡ್‌ಬುಕ್ ಡೇನಿಯಲ್ ಗೇಲ್ ಕಿರುತೆರೆ ಚಿತ್ರ
ಹ್ಯಾರಿ ಪಾಟರ್ ಆ‍ಯ್೦ಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್‌ ಸೆಡ್ರಿಕ್ ಡಿಗೊರಿ ಕಿರುಪಾತ್ರ
2008 ಹೌ ಟು ಬಿ ಕಲೆ ಅತ್ಯುತ್ತಮ ನಟನಿಗಾಗಿ ಸ್ಟ್ರಾಸ್‌ಬರ್ಗ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್[೩೮]
ಟ್ವಿಲೈಟ್ ಎಡ್ವರ್ಡ್ ಕಲ್ಲೆನ್‌ ಎಂಟಿವಿ ಮೂವೀ ಅವಾರ್ಡ್ ಫಾರ್ ಬ್ರೇಕ್‌ಥ್ರೂ ಪರ್ಫಾರ್ಮೆನ್ಸ್ ಮೇಲ್
ಎಂಟಿವಿ ಮೂವೀ ಅವಾರ್ಡ್ ಫಾರ್ ಬೆಸ್ಟ್ ಕಿಸ್ (ಕ್ರಿಸ್ಟೆನ್ ಸ್ಟೆವಾರ್ಟ್‌ರೊಂದಿಗೆ)
ಎಂಟಿವಿ ಮೂವೀ ಅವಾರ್ಡ್ ಫಾರ್ ಬೆಸ್ಟ್ ಫೈಟ್ (ಕ್ಯಾಮ್ ಗಿಗಂಡೆಟ್‌ರೊಂದಿಗೆ)
ಹಾಲಿವುಡ್‌ ಫಿಲ್ಮ್ ಅವಾರ್ಡ್ ಫಾರ್ ನ್ಯೂ ಹಾಲಿವುಡ್
ಟೀನ್‌ ಚಾಯ್ಸ್ ಅವಾರ್ಡ್ ಫಾರ್ ಚಾಯ್ಸ್ ಮೂವೀ ಆ‍ಯ್‌ಕ್ಟರ್ ಡ್ರಾಮಾ
ಲಿಪ್‌ಲಾಕ್ ಚಿತ್ರಕ್ಕಾಗಿ ಟೀನ್‌ ಚಾಯ್ಸ್ ಅವಾರ್ಡ್ (ಕ್ರಿಸ್ಟೆನ್ ಸ್ಟೆವಾರ್ಟ್‌ ಜೊತೆಗೆ)
ಚಾಯ್ಸ್ ಮೂವೀ ರಂಬಲ್‌ಗಾಗಿ ಟೀನ್ ಚಾಯ್ಸ್‌ ಅವಾರ್ಡ್ (ಕ್ಯಾಮ್ ಗಿಗಂಡೆಟ್‌ರೊಂದಿಗೆ)
ಚಾಯ್ಸ್ ಹಾಟಿಗಾಗಿನ ಟೀನ್ ಚಾಯ್ಸ್‌ ಅವಾರ್ಡ್
ಬೆಸ್ಟ್ ಫ್ಯಾಂಟಸಿ ಆ‍ಯ್‌ಕ್ಟರ್ ಗಾಗಿನ ಸ್ಕ್ರೀಮ್ ಅವಾರ್ಡ್‌
ಫೇವರಿಟ್ ಆನ್-ಸ್ಕ್ರೀನ್-ಟೀಮ್‌ಗಾಗಿನ ಪೀಪಲ್ಸ್ ಚಾಯ್ಸ್ ಅವಾರ್ಡ್ (ಇವರೊಂದಿಗೆ ಹಂಚಿಕೊಂಡಿದ್ದು: ಟೇಲರ್ ಮತ್ತು ಕ್ರಿಸ್ಟೆನ್ ಸ್ಟೆವಾರ್ಟ್)
ನಾಮನಿರ್ದೇಶಿತ- ಬೆಸ್ಟ್ ಎನ್ಸೆಂಬಲ್ ಕಾಸ್ಟ್ ಗಾಗಿ ಸ್ಕ್ರೀಮ್‌ ಅವಾರ್ಡ್
ನಾಮನಿರ್ದೇಶಿತ - ಅತ್ಯಂತ ಜನಪ್ರಿಯ ನಟನಿಗಾಗಿನ ಪೀಪಲ್ಸ್ ಚಾಯ್ಸ್ ಅವಾರ್ಡ್
2009 ಲಿಟ್ಲ್ ಆ‍ಯ್‌ಶಸ್ ಸಾಲ್ವಡಾರ್ ಡಾಲಿ
The Twilight Saga: New Moon ಎಡ್ವರ್ಡ್ ಕಲ್ಲೆನ್‌
2010 ರಿಮೆಂಬರ್ ಮಿ ಟೈಲರ್ ರೊಥ್ ಮಾರ್ಚ್ 12 ಬಿಡುಗಡೆಯಾಗಿತ್ತು
The Twilight Saga: Eclipse ಎಡ್ವರ್ಡ್ ಕಲ್ಲೆನ್‌ ನಿರ್ಮಾಣ-ನಂತರದ ಹಂತ
ಅನ್‌ಬೌಂಡ್ ಕ್ಯಾಪ್ಟಿವ್ಸ್ ನಿರ್ಮಾಣ-ಮುಂಚಿನ ಹಂತ
2011 ಬೆಲ್ ಆ‍ಯ್‌ಮಿ ಜಾರ್ಜ್ಸ್ ಡುರಾಯ್ ಚಿತ್ರೀಕರಣ


ಆಕರಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. ೪.೦ ೪.೧ ೪.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Sona Charaipotra (2008-11-14). "A Night Out With - Robert Pattinson". New York Times.  Text " accessdate-2009-02-11 " ignored (help)
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. ರಾಬರ್ಟ್ ಪ್ಯಾಟಿನ್ಸನ್
 9. ೯.೦ ೯.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. "Why Robert Pattinson's Modeling". New York Magazine. 
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. "Robert Pattinson Sings Three Songs in Indie Flick How to Be". Us Magazine. 2009-03-11.  Text " accessdate-2009-03-31 " ignored (help)
 31. "Songs composed by Joe Hastings in Indie Flick How to Be". How To Be. 2009-03-09.  Text " accessdate-2009-03-31 " ignored (help)
 32. Katrina-Kasey Wheeler (2009-01-10). "Music: Robert Pattinson's back up plan". Pop Media Examiner.  Text " accessdate-2009-01-30 " ignored (help)
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. "GQ Magazine Names Robert Pattinson 'Best Dressed Man' For 2010". Insider. February 2010. 
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. ಸ್ಟ್ರಾಸ್‌ಬರ್ಗ್ ಅಂತರರಾಷ್ತ್ರೀಯ ಚಿತ್ರ ಸಮ್ಮೇಳನ: 2008ರ ಪ್ರಶಸ್ತಿಗಳು


ಹೊರಗಿನ ಕೊಂಡಿಗಳು[ಬದಲಾಯಿಸಿ]