ರಬ್ಬರಿನಮರ
ಮಳೆ ಹೆಚ್ಚಾಗಿದ್ದು ಆರ್ದ್ರತೆಯಿಂದ ಕೂಡಿದ ಉಷ್ಣವಾದ ಹವೆಯಲ್ಲಿ ಬೆಳೆಯುವ ಹೆಮ್ಮರ. ಅಸ್ಸಾಂ, ಕೇರಳ ಮತ್ತು ಕರ್ನಾಟಕರಾಜ್ಯಗಳಲ್ಲಿ ಇದರ ತೋಟಗಳಿವೆ. 20 ವರ್ಷಕ್ಕೂ ಮಿಕ್ಕಿ ಬೆಳೆದ ಬೊಡ್ಡೆಗಳ ಮೇಲೆ v ಆಕೃತಿಯ ಕಚ್ಚು ಹಾಕಿ ಒಸರುವ ಹಾಲನ್ನು ನೆಲದಮೇಲೆ ಹರವಿದ ಚಾಪೆಗಳ ಮೇಲೆ ಕೂಡಿಸಿ ಹದಮಾಡಿದ ರಬ್ಬರನ್ನು ಉತ್ಪಾದಿಸುತ್ತಾರೆ. ಸೌದೆಯಾಗಿಯೂ ಈ ಮರ ಉಪಯೋಗವಿದೆ.