ರತ್ನಮಾಲ ಪ್ರಕಾಶ್
ರತ್ನಮಾಲಾ ಪ್ರಕಾಶ್ | |
---|---|
Born | ರತ್ನಮಾಲಾ ೧೯ ಆಗಸ್ಟ್ ೧೯೫೨[೧] ಬೆಂಗಳೂರು, ಕರ್ನಾಟಕ |
Occupation | ಹಿನ್ನೆಲೆ ಗಾಯಕಿ |
Years active | ೧೯೮೦ - ಈವರೆಗೂ |
Parent(s) |
|
ರತ್ನಮಾಲಾ ಪ್ರಕಾಶ್(19 August 1952), ಕನ್ನಡದ ಖ್ಯಾತ ಗಾಯಕಿಯರಲ್ಲಿ ಒಬ್ಬರು. ಸುಗಮ ಸಂಗೀತ ಕ್ಷೇತ್ರದಲ್ಲಿ ಅವರ ಸಾಧನೆ ಗಮನಾರ್ಹ. ಸುಗಮ ಸಂಗೀತ ಮಾತ್ರವೇ ಅಲ್ಲ ಭಕ್ತಿಗೀತೆ, ಶಾಸ್ತ್ರೀಯ ಸಂಗೀತ, ಜನಪದ ಗೀತೆ ಹಾಗೂ ಚಲನಚಿತ್ರ ಹಿನ್ನೆಲೆಗಾಯನದಲ್ಲಿಯೂ ರತ್ನಮಾಲಾ ದೊಡ್ಡ ಹೆಸರು ಗಳಿಸಿದ್ದಾರೆ.
ವೈಯಕ್ತಿಕ ಜೀವನ[ಬದಲಾಯಿಸಿ]
ಹೆಸರಾಂತ ಶಾಸ್ತ್ರೀಯ ಸಂಗೀತಗಾರರಾದ ಆರ್. ಕೆ. ಶ್ರೀಕಂಠನ್ ಮತ್ತು ಮೈತ್ರೇಯಿ ದಂಪತಿಗಳ ಮಗಳಾಗಿ ೧೯೫೨ರ ಆಗಸ್ಟ್ ೧೯ರಂದು ಹುಟ್ಟಿದ ರತ್ನಮಾಲ, ಬೆಳೆದದ್ದು ಸಂಗೀತಮಯ ಪರಿಸರದಲ್ಲಿಯೇ. ಬಾಲ್ಯದಿಂದಲೂ ಸಂಗೀತವನ್ನು ಆಸ್ಥೆಯಿಂದ ಕಲಿತ ರತ್ನಮಾಲ ಸುಗಮ ಸಂಗೀತ ಕ್ಷೇತ್ರದಲ್ಲಿ ಮುಂದುವರೆದರು.
ಸುಗಮ ಸಂಗೀತ[ಬದಲಾಯಿಸಿ]
ಕೆ.ಎಸ್.ನರಸಿಂಹಸ್ವಾಮಿ ಅವರಿಂದ ಕರ್ನಾಟಕದ ಪರ್ವೀನ್ ಸುಲ್ತಾನಾ ಎಂದು ಮೆಚ್ಚುಗೆ ಗಳಿಸಿದ ರತ್ನಮಾಲ, ಮಾಧುರ್ಯ ಮತ್ತು ಭಾವಗಳೆರಡನ್ನೂ ಸಮ್ಮಿಳಿತಗೊಳಿಸಿ ಹಾಡುವುದಕ್ಕೆ ಹೆಸರಾದವರು. ಮಹಾಕವಿ ಕುವೆಂಪು ಅವರಿಂದ ಹಿಡಿದು ಎಚ್.ಎಸ್.ವೆಂಕಟೇಶಮೂರ್ತಿ ಅವರ ತನಕ ಎಲ್ಲಾ ತಲೆಮಾರಿನ ಕವಿಗಳ ಹಾಡುಗಳನ್ನು ಎಂದೂ ಮರೆಯಲಾಗದ ಭಾವಗೀತೆಗಳನ್ನಾಗಿಸಿದ್ದಾರೆ.
ಮೈಸೂರು ಅನಂತಸ್ವಾಮಿ, ಎಚ್. ಕೆ. ನಾರಾಯಣ್, ಸಿ. ಅಶ್ವತ್ಥ್ ಮುಂತಾದ ದಿಗ್ಗಜರ ಸಂಯೋಜನೆಯಲ್ಲಿ ಹಾಡಿದ ಹಾಡುಗಳು, ಗಳಿಸಿದ ಮೆಚ್ಚುಗೆ ಅಪಾರ. ಇಲ್ಲಿಯವರೆಗೆ ಮುದ್ರಿತಗೊಂಡಿರುವ ರತ್ನಮಾಲಾ ಅವರ ಧ್ವನಿಸುರುಳಿಗಳೇ ೫೦೦ಕ್ಕಿಂತಲೂ ಹೆಚ್ಚು.
ಕೆಲವು ಜನಪ್ರಿಯ ಹಾಡುಗಳು:
ಭಾವಗೀತೆಗಳು
- "ತೌರ ಸುಖದೊಳಗೆನ್ನ"
- "ನನ್ನ ಇನಿಯನ ನೆಲೆಯ ಬಲ್ಲೆಯೇನೆ"
- "ಹೂವುಗಳು ಹೊರಳುವವು"
- "ನೀನು ಮುಗಿಲು ನಾನು ನೆಲ"
- "ಮತ್ತದೇ ಬೇಸರ ಅದೇ ಸಂಜೆ"
- "ಯಾವ ಮೋಹನ ಮುರಳಿ ಕರೆಯಿತೋ"
ಚಿತ್ರಗೀತೆಗಳು[ಬದಲಾಯಿಸಿ]
ರತ್ನಮಾಲ ಹಾಡಿರುವ ಚಿತ್ರಗೀತೆಗಳು[೨].
ಹಾಡು |
ಚಿತ್ರ |
ವರ್ಷ |
ಸಂಗೀತ |
ಸಾಹಿತ್ಯ |
ಸಹ ಗಾಯನ |
ನಟಿ |
---|---|---|---|---|---|---|
ಶೃಂಗಾರದ ಕಾವ್ಯವೋ | ಯಾರೇ ನೀ ಅಭಿಮಾನಿ | 2000 | ಹಂಸಲೇಖ | ಹಂಸಲೇಖ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ರಮ್ಯ ಕೃಷ್ಣ |
ಬಾರೆ ಬಾರೆ ರುಕ್ಕಮ್ಮ | ಗಡಿಬಿಡಿ ಕೃಷ್ಣ | 1998 | ಹಂಸಲೇಖ | ಹಂಸಲೇಖ | ರಾಜೇಶ್ ಕೃಷ್ಣನ್ | ರವಳಿ, ಚಾತುಲತಾ |
ಹುಡುಗಿ ಹೂ ಹುಡುಗಿ, ಗೆದಿಯಬೇಕು ಮಗಳ, ಮಾಯಾದ ಮನದ ಭಾರ |
ನಾಗಮಂಡಲ | 1997 | ಸಿ. ಅಶ್ವತ್ಥ್ | ಗೋಪಾಲ್ ಯಾಗ್ನಿಕ್ | - - ತಂಡ |
ವಿಜಯಲಕ್ಷ್ಮಿ, ಬಿ.ಜಯಶ್ರೀ |
ಗ ಗ ರಿ ರಿ ಗ(ಆಲಾಪ) | ನಮ್ಮೂರ ಮಂದಾರ ಹೂವೆ | 1996 | ಇಳಯರಾಜ | - | ಪ್ರೇಮಾ | |
ತೇರು ಹೋಯ್ತಯ್ತವ್ವಾ | ಕೊಟ್ರೇಶಿ ಕನಸು | 1995 | ಸಿ. ಅಶ್ವತ್ಥ್ | ಎಚ್. ಎಸ್. ವೆಂಕಟೇಶಮೂರ್ತಿ | ಮಂಜುಳಾ ಗುರುರಾಜ್, ಮಾಸ್ಟರ್ ಶರ್ಮ | |
ರಾಯರು ಬಂದರು | ಮೈಸೂರು ಮಲ್ಲಿಗೆ | 1992 | ಸಿ. ಅಶ್ವತ್ಥ್ | ಕೆ. ಎಸ್. ನರಸಿಂಹಸ್ವಾಮಿ |